ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸುವವರೇ ಹುಷಾರ್..!!!

Written By:

ಬೆಂಗಳೂರು ನಗರ ಸಂಚಾರಿ ಪೊಲೀಸರು ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ತಂತ್ರಜ್ಞಾನದ ಮೊರೆ ಹೋಗಿದ್ದು, ಸಾರ್ವಜನಿಕರನ್ನು ತಮ್ಮ ಕಾರ್ಯದಲ್ಲಿ ಭಾಗಿಯಾಗಿಸಿಕೊಳ್ಳಲು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಸದ್ಯ ಆಪ್‌ಡೇಟ್ ಹಂತದಲ್ಲಿರುವ ಸಿಟಿ ಟ್ರಾಫಿಕ್ ಪೊಲೀಸರು ಆಪ್ ಮೂಲಕ ಪಬ್ಲಿಕ್ ಅನ್ನು ತಮ್ಮ ಕಾರ್ಯಕ್ಕೆ ಬಳಸಿಕೊಳ್ಳುವ ಹೊಸ ಆಲೋಚನೆಯನ್ನು ಮಾಡಿದ್ದಾರೆ.

ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸುವವರೇ ಹುಷಾರ್..!!!

ಸದ್ಯ ಬಳಕೆಯಲ್ಲಿ ಹೆಚ್ಚಾಗುತ್ತಿರುವ ಸ್ಮಾರ್ಟ್‌ಫೋನಿನ ಸಹಾಯ ಪಡೆಯಲು ಮುಂದಾಗಿರುವ ಪೊಲೀಸರು ಐಚೇಂಜ್ ಸಿಟಿ ಸಹಯೋಗದೊಂದಿಗೆ 'ಪಬ್ಲಿಕ್‌ ಐ' ಎಂಬ ಆಂಡ್ರಾಯ್ಡ್ ಆಪ್ ವೊಂದನ್ನು ನಿರ್ಮಾಣ ಮಾಡಿದ್ದಾರೆ. ರಸ್ತೆಯಲ್ಲಿ ಕಾಣುವ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಕುರಿತು ಆಪ್ ನಲ್ಲಿ ದೂರು ದಾಖಲಿಸುವ ಮೂಲಕ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ನೆರವಾಗಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾರ್ವಜನಿಕರು ಪೊಲೀಸರಾಗುವುದು ಹೇಗೆ..?

ಸಾರ್ವಜನಿಕರು ಪೊಲೀಸರಾಗುವುದು ಹೇಗೆ..?

'ಪಬ್ಲಿಕ್‌ ಐ' ಆಂಡ್ರಾಯ್ಡ್ ಆಪ್‌ ಅನ್ನು ನಿಮ್ಮ ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಪ್ಲೇ ಸ್ಟೋರಿನಲ್ಲಿ 'ಪಬ್ಲಿಕ್‌ ಐ' ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಂಡ ನಂತರದಲ್ಲಿ ನಿಮ್ಮ ಇಮೇಲ್ ಇಲ್ಲವೇ ಫೇಸ್‌ಬುಕ್ ಮೂಲಕ ಲಾಗ್ ಇನ್ ಆಗಬೇಕಾಗಿದೆ.

ನಂತರ ಮಾಡುದೇನು..?

ನಂತರ ಮಾಡುದೇನು..?

'ಪಬ್ಲಿಕ್‌ ಐ' ಆಂಡ್ರಾಯ್ಡ್ ಆಪ್‌ ಹಾಕಿಕೊಂಡು ಲಾಗ್ ಆದ ನಂತರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಆಪ್‌ ನಲ್ಲಿ ಲೋಡ್ ಮಾಡಬೇಕಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸಂಖ್ಯೆ, ಸಂಚಾರ ಉಲ್ಲಂಘನೆಯ ಮಾದರಿ, ದಿನಾಂಕ, ಸಮಯ, ಸ್ಥಳವನ್ನು ನಮೂದಿಸಿ ತೆಗೆದ ಫೋಟೋವನ್ನು ಹಾಕಬೇಕಾಗಿದೆ. ಇದೆಲ್ಲವನ್ನು ನೀವು ಬರೆಯುವ ಅಗತ್ಯವಿಲ್ಲ. ಅಲ್ಲಿಯೇ ಆಯ್ಕೆಗಳಿರಲಿದ್ದು, ಅವುಗಳನ್ನು ತುಂಬಿದರೆ ಸಾಕು.

ಯಾವ ವಿಷಯಗಳ ಕುರಿತು ದೂರು ದಾಖಲಿಸಬಹುದು..?

ಯಾವ ವಿಷಯಗಳ ಕುರಿತು ದೂರು ದಾಖಲಿಸಬಹುದು..?

 • ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದ್ದರೆ
 • ಒನ್ ವೇ/ ನೋ ಎಂಟ್ರಿಯಲ್ಲಿ ವಾಹನ ಓಡಿಸುತ್ತಿದ್ದರೆ
 • ಫುಟ್ ಪಾತ್ ಮೇಲೆ ವಾಹನ ಪಾರ್ಕಿಂಗ್ ಮಾಡಿದ್ದರೆ
 • ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದರೆ
 • ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದರೆ
 • ಹಾಳಾಗಿರುವ ನಂಬರ್ ಪ್ಲೇಟ್ ಹೊಂದಿದ್ದರೆ
 • ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೆ
ಇವುಗಳ ಕುರಿತು ದೂರು ದಾಖಲಿಸಬಹುದು:

ಇವುಗಳ ಕುರಿತು ದೂರು ದಾಖಲಿಸಬಹುದು:

 • TRF ದೀಪದ ಬಳಿ ಅಥವಾ ಜೀಬ್ರಾ ಕ್ರಾಸಿಂಗ್ ನಿಯಮ ಉಲ್ಲಂಘನೆ ಮಾಡಿದರೆ
 • ಯೂ ಟರ್ನ್ ಇಲ್ಲದ ಕಡೆ ಯೂ ಟರ್ನ್ ತೆಗೆದುಕೊಂಡರೆ
 • ತ್ರಿಬ್ಬಲ್ ರೈಡಿಂಗ್, ವ್ಹೀಲಿಂಗ್ ಮಾಡುತ್ತಿದ್ದರೆ
 • ಮೊಬೈಲ್ ಫೋನ್ ಬಳಸಿಕೊಂಡು ವಾಹನ ಚಾಲನೆ ಮಾಡುತ್ತಿದ್ದರೆ
 • ಲೇನ್ ನಿಯಮ ಉಲ್ಲಂಘನೆ ಮಾಡಿದರೆ
 • ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದರೆ
 • ಕಾರಿನ ಗಾಜಿನ ಕಪ್ಪು ಹೊದಿಕೆ ಹಾಕಿಸಿಕೊಂಡಿದ್ದರೆ
ನೀವು ನೀಡಿದ ದೂರಿನ ಕುರಿತು ಪರಿಶೀಲನೆ ನಡೆಸಬಹುದು:

ನೀವು ನೀಡಿದ ದೂರಿನ ಕುರಿತು ಪರಿಶೀಲನೆ ನಡೆಸಬಹುದು:

ಪಬ್ಲಿಕ್ ಐ ಮೂಲಕ ದೂರು ಸಲ್ಲಿಸಿದ ನಂತರದಲ್ಲಿ ಸಂಚಾರಿ ಪೊಲೀಸರು ಆ ದೂರಿನ ಕುರಿತು ಯಾವ ರೀತಿಯಲ್ಲಿ ಕ್ರಮವನ್ನು ಕೈಗೊಂಡರು ಎಂಬುದನ್ನು ನೀವು ಪರಿಶೀಲನೆ ನಡೆಸಬಹುದಾಗಿದೆ. ಐಚೇಂಜ್ ಸಿಟಿ.ಕಾಂ ಮೂಲಕ ದೂರಿನ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Bangalore Traffic Police launches Public Eye! Spotted a traffic violation? Take a picture/video of the erring vehicle along with its number plate and post it on Public Eye. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot