ನಿಮ್ಮ ಮನೆಯಲ್ಲಿ ಕರೆಂಟ್ ಕಟ್ ಆಗುವ ಮೊದಲೇ ಎಚ್ಚರಿಸುತ್ತದೆ 'ಬೆಸ್ಕಾಂ' ಆಪ್!!
ಆಪ್ ಮೂಲಕ ಜನರಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಯಾವಾಗ ವಿದ್ಯುತ್ ಕಡಿತಗೊಳ್ಳುತ್ತದೆ, ಮತ್ತೆ ಯಾವಾಗ ವಿದ್ಯುತ್ ಬರುತ್ತದೆ ಎಂಬೆಲ್ಲಾ ಮಾಹಿತಿಗಳ ಕುರಿತು ಮಾಹಿತಿ ನೀಡಲು ಬೆಸ್ಕಾಂ ಅಧಿಕಾರಿಗಳು ಬೆಸ್ಕಾಂ ಮಿತ್ರ ಆಪ್ ಬಿಡುಗಡೆ ಮಾಡಿದ್ದಾರೆ. ಇದರಿಂದ ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆದಾಗ ಬೆಸ್ಕಾಂ ಸಿಬ್ಬಂದಿಗಳನ್ನು ಬಯ್ದುಕೊಳ್ಳುವುದು ತಪ್ಪುತ್ತಿದೆ.
ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವ ಬೆಸ್ಕಾಂ, ಕರೆಂಟ್ ಯಾವಾಗ ಹೋಗುತ್ತದೆ, ಅನಿಯಮಿತ ವಿದ್ಯುತ್ ಕಡಿತ ಸೇರಿದಂದೆ ಇತರೆ ಮಾಹಿತಿಗಳನ್ನು ಜನರಿಗೆ ಮುಂಚಿತವಾಗಿಯೇ ನೀಡಲು (ಬೆಸ್ಕಾಂ) ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿ ನಿರ್ಧರಿಸಿದೆ. ಹಾಗಾಗಿ, ಗ್ರಾಹಕರಿಗಾಗಿ ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಬೆಸ್ಕಾಂ ಮಿತ್ರ ಆಪ್ ಬಿಡುಗಡೆ ಮಾಡಿದ್ದಾರೆ.

ಈ ಆಪ್ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದೇ ಆದರೆ, ಸಮಸ್ಯೆಗಳನ್ನು ಹೇಳಿಕೊಂಡು ಬೆಸ್ಕಾಂಗೆ ಕರೆ ಮಾಡುವ ಜನರ ಸಂಖ್ಯೆ ಕೂಡ ಕಡಿಮೆಯಾಗಲಿದೆ. ಆಪ್ ಮೂಲಕ ಜನರಿಗೆ ವಿದ್ಯುತ್ ಯಾವಾಗ ಕಡಿತಗೊಳ್ಳುತ್ತದೆ, ಮತ್ತೆ ಯಾವಾಗ ಬರುತ್ತದೆ ಎಂಬ ಮಾಹಿತಿ ನೀಡಲಾಗುತ್ತದೆ. ಇದರಿಂದ ಜನರು ಕರೆ ಮಾಡುವ ಅಗತ್ಯಗಳು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ಆಪ್ ಬಳಕೆ ಹೆಚ್ಚಿಸುವ ಸಲುವಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಬೆಸ್ಕಾಂ ಆಪ್ ಅನ್ನು ಡೌನ್ ಲೋಡ್ ಮಾಡುವವರಿಗೆ ಪ್ರೋತ್ಸಾಹಗಳನ್ನು ನೀಡಲು ನಿರ್ಧರಿಸಲಾಗಿದೆ. ಜನರಿಗೆ ಯಾವ ರೀತಿಯ ಪ್ರೋತ್ಸಾಹ ನೀಡಬಹುದು ಎಂಬುದರ ಕುರಿತಂತೆ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಬಹುತೇಕ ಜನರು ಬಿಲ್ ಪಾವತಿಸಲು ಹಾಗೂ ದೂರು ದಾಖಲಿಸುವ ಸಲುವಾಗಿ ಬೆಸ್ಕಾಂ ಮಿತ್ರ ಬಳಕೆ ಮಾಡುತ್ತಿದ್ದಾರೆಂದು ಬೆಸ್ಕಾಂ ವಕ್ತಾರರು ಹೇಳಿದ್ದಾರೆ. ಇನ್ನು ಬೆಸ್ಕಾಂ ಸಿಬ್ಬಂದಿಗಳಿಗೆ ಆಪ್ ಬಗ್ಗೆ ತರಬೇತಿಗಳ್ನು ನೀಡಲಾಗುತ್ತಿದ್ದು, ಮಾಹಿತಿಗಳನ್ನು ಹೇಗೆ ಆಪ್ ಗಳಿಗೆ ಹಾಕಬೇಕೆಂಬುದನ್ನು ಹೇಳಿಕೊಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Click it and Unblock the Notifications




