Home
Apps

ಐನಾತಿ ಚಾಲಕ! ನಕಲಿ ಆಪ್ ಬಳಸಿ ಪ್ರಯಾಣಿಕನಿಗೆ ವಂಚನೆ; ಬಿಲ್ ಮುಂದಿನ ತಿಂಗಳು ಕೊಡ್ತೀನಿ ಎಂದ ಭೂಪ!

ಪ್ರಯಾಣಿಕರೇ ಹುಷಾರ್..! ಕ್ಯಾಬ್‌ ಬುಕ್‌ ಮಾಡುವ ಮುನ್ನ ಇರಲಿ ಎಚ್ಚರ. ನೀವು, ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣಕ್ಕೆ ಹೋಗಲು ಕ್ಯಾಬ್‌ ಬುಕ್ ಮಾಡ್ತೀರಾ? ಹಾಗಿದ್ರೆ ಈ ಸುದ್ದಿ ಓದಲೇಬೇಕು! ಹೌದು, ಐನಾತಿ ಚಾಲಕನೊಬ್ಬ ನಕಲಿ ಉಬರ್ (Uber) ಆಪ್‌ ಬಳಕೆ ಮಾಡಿ, ಗ್ರಾಹಕನಿಗೆ ಪಂಗನಾಮ ಹಾಕಿದ್ದಾನೆ. ವಿಮಾನ ನಿಲ್ದಾಣದಲ್ಲಿ ನಡೆದ ಚಾಲಕನ ಕೈ ಚಳಕದ ಬಗ್ಗೆ ಸ್ವತಃ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ, ಆ ಚಾಲಕ ಯಾರು? ಈ ಘಟನೆ ನಡೆದಿದ್ದು ಎಲ್ಲಿ? ಎನ್ನುವುದನ್ನು ತಿಳಿಯೋಣ.

ದೇಶದಲ್ಲಿ ಸರ್ಕಾರಿ ಸಾರಿಗೆ ಜೊತೆಗೆ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಿದೆ. ವಿಶೇಷವಾಗಿ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಲ್ಲಿ ಆಟೋ ಮತ್ತು ಕ್ಯಾಬ್ ಸೇವೆಗಳು ಲಭ್ಯವಿದೆ. ಬಹುತೇಕರು ಕ್ಯಾಬ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಇದಕ್ಕೆ ವಿವಿಧ ಆಪ್‌ಗಳನ್ನು ಬಳಸುತ್ತಾರೆ. ಆದರೆ, ಹಲವೆಡೆ ಕ್ಯಾಬ್ ಚಾಲಕರು ನಕಲಿ ಆಪ್‌ಗಳನ್ನು ಬಳಸಿ ಪ್ರಯಾಣಿಕರಿಗೆ ಮೋಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಅದು ಕೂಡ ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಪ್ರಯಾಣಿಕರೊಬ್ಬರು ಬೆಂಗಳೂರಿನಲ್ಲಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ನಕಲಿ ಆಪ್ ಬಳಸಿ ಪ್ರಯಾಣಿಕನಿಗೆ ವಂಚನೆ; ಬಿಲ್ ಮುಂದಿನ ತಿಂಗಳು ಕೊಡ್ತೀನಿ ಎಂದ ಭೂಪ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕನೊಬ್ಬ ನಕಲಿ ಉಬರ್ ಆಪ್‌ ಮೂಲಕ ವಂಚನೆ ಮಾಡಿದ್ದಾನೆ. ಈ ಘಟನೆ ಡಿಸೆಂಬರ್ 16 ರಂದು ನಡೆದಿದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವಿವರಿಸಿದ್ದಾರೆ. ಬೆಂಗಳೂರಿನ ಟೆಕ್ಕಿ ಮಹೇಶ್ ಸುತಾರ್ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಅವುರ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಉಬರ್ ಅನ್ನು ಹೋಲುವ ನಕಲಿ ಆಪ್ ಕಂಡುಬಂದಿದೆ.

ಕ್ಯಾಬ್‌ನಿಂದ ಕೆಳಗಿಳಿಯುವಾಗ ಸಾಫ್ಟ್‌ವೇರ್ ಉದ್ಯೋಗಿ 1,000 ರೂ. ಬಿಲ್ ಗಮನಿಸಿದ್ದಾರೆ. ಬೆಲೆ ಜಾಸ್ತಿ ಆಗಿದ್ದು ಏಕೆ? ನೀವು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದೀರಿ ಎಂದು ಕ್ಯಾಬ್ ಚಾಲಕನನ್ನು ಪ್ರಶ್ನಿಸಿದ್ದಾರೆ. ಆಗ ಚಾಲಕ, ಇದಕ್ಕೆ ಜಿಎಸ್‌ಟಿಯೇ ಕಾರಣ ಎಂದು ಉತ್ತರಿಸಿದ್ದಾನೆ. ಇದಲ್ಲದೆ, ಚಾಲಕ ಬಿಲ್ ನೀಡಲು ನಿರಾಕರಿಸಿದ್ದಾನೆ.

ಬ್ಲೂಮೀಟರ್ ಆಪ್‌ನಿಂದ ವಂಚನೆ!

ಟೆಕ್ಕಿ ಮಹೇಶ್ ಸುತಾರ್ ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆಗಲೇ ಕ್ಯಾಬ್ ಚಾಲಕ ನಕಲಿ ಆಪ್ ಮೂಲಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕ್ಯಾಬ್ ದರಗಳಲ್ಲಿನ ಬದಲಾವಣೆಗಳನ್ನು ಬ್ಲೂಮೀಟರ್ ಆಪ್‌ ಮೂಲಕ ಕಂಡುಹಿಡಿಯಲಾಗಿದೆ. ಈ ಕುರಿತ ವಿವರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಬಿಲ್ ಕೇಳಿದ್ದಕ್ಕೆ ಕ್ಯಾಬ್ ಚಾಲಕ ನೀಡಿದ ಪ್ರತಿಕ್ರಿಯೆ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.

ಮುಂದಿನ ತಿಂಗಳು ಬಿಲ್ ಕಳುಹಿಸುತ್ತೇನೆ ಎಂದ ಚಾಲಕ

ಸದ್ಯ ನನ್ನ ಬಳಿ ಬಿಲ್ಲಿಂಗ್ ವ್ಯವಸ್ಥೆ ಇಲ್ಲ. ಮುಂದಿನ ತಿಂಗಳು ಇಮೇಲ್ ಮೂಲಕ ಕಳುಹಿಸುವುದಾಗಿ ಕ್ಯಾಬ್‌ ಚಾಲಕ ಹೇಳಿದ್ದಾನೆ. ಆದರೆ, ಚಾಲಕನು ಪ್ರಯಾಣದ ವೇಳೆ ಎಲ್ಲಿಯೂ ಇಮೇಲ್ ಐಡಿ ಅಥವಾ ಫೋನ್ ನಂಬರ್ ಕೇಳಲಿಲ್ಲ. ಬಿಲ್ ಕಳುಹಿಸುವುದು ಹೇಗೆ? ಇಂತಹ ಘಟನೆಗಳ ಬಗ್ಗೆ ಪ್ರಯಾಣಿಕರು ಎಚ್ಚರದಿಂದ ಇರಬೇಕು ಎಂದು ಸಾಫ್ಟ್‌ವೇರ್ ಉದ್ಯೋಗಿ ಸಲಹೆ ನೀಡಿದ್ದಾರೆ.

ಪ್ರಯಾಣಿಕರು ಎಚ್ಚರದಿಂದಿರಬೇಕು

ಪ್ರಯಾಣಿಕರು ಇಂತಹ ಸಂದರ್ಭಗಳು ಎದುರಾದರೆ ಎಚ್ಚರದಿಂದಿರಬೇಕು. ಊಬರ್ ಮತ್ತು ಓಲಾ ನಂತಹ ಆಪ್‌ಗಳ ಮೂಲಕ ಕ್ಯಾಬ್‌ಗಳು ಮತ್ತು ಇತರ ಸೇವೆಗಳನ್ನು ಬುಕ್ ಮಾಡುವ ಸಮಯದಲ್ಲಿ, ನೀವು ಆಪ್‌ನಲ್ಲಿನ ದರವನ್ನು ಪರಿಶೀಲಿಸಬೇಕು. ಯಾವುದೇ ಹೆಚ್ಚುವರಿ ಶುಲ್ಕಗಳು ಇದ್ದಲ್ಲಿ ಚಾಲಕನನ್ನು ಪ್ರಶ್ನೆ ಮಾಡಬೇಕು.

ಅಧಿಕಾರಿಗಳಿಗೆ ದೂರು ನೀಡಿ

ವಿಮಾನ ನಿಲ್ದಾಣ, ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಇಂತಹ ವಂಚನೆ ನಡೆಯುವ ಸಾಧ್ಯತೆಯಿದೆ. ಆಗ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು. ಯಾವುದೇ ಪ್ರಯಾಣದ ಸಮಯದಲ್ಲಿ ನಕಲಿ ಆ್ಯಪ್‌ಗಳು ಪತ್ತೆಯಾದರೆ, ಸಾರಿಗೆ ಅಧಿಕಾರಿಗಳಿಗೆ ತಿಳಿಸಬೇಕು. ಈ ಬಗ್ಗೆ ದೂರು ನೀಡಬೇಕು.

Best Mobiles in India

English summary
Bengaluru tech professional shared his experience with fake uber app scam; He shares tips on how not to be fooled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+