ಬೈಕ್ ಸವಾರರೇ ಎಚ್ಚರ: ಟಾಫಿಕ್ ಪೊಲೀಸ್ ಕೈ ಸೇರಿದ ಸ್ಮಾರ್ಟ್ ಅಸ್ತ್ರ, ತಪ್ಪಿಸಿಕೊಂಡ್ರೆ ಮುಗಿತು ಕಥೆ..!

  |

  ಇಷ್ಟು ದಿನ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಹಿಡಿಯಕ್ಕೆ ಬಂದ್ರೆ ತಪ್ಪಿಸಿಕೊಂಡು ಓಡಿ ಹೋಗ್ತಿದ್ರಿ. ಆದರೆ ಇನ್ನು ಮುಂದೆ ಅದು ಆಗುವುದಿಲ್ಲ. ಕಾರಣ ತಂತ್ರಜ್ಞಾನವನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸದೊಂದು ಹೈ ಯಂಡ್ ಸ್ಮಾರ್ಟ್‌ಫೋನ್‌ ಮತ್ತು ಆಪ್‌ವೊಂದನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಆಪ್ ಸಹಾಯದಿಂದ ಒಂದೇ ಒಂದು ಪೋಟೋ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಜಾತಕ ಅವರ ಕೈ ಸೇರುತ್ತದೆ.

  ಟಾಫಿಕ್ ಪೊಲೀಸ್ ಕೈ ಸೇರಿದ ಸ್ಮಾರ್ಟ್ ಅಸ್ತ್ರ: ತಪ್ಪಿಸಿಕೊಂಡ್ರೆ ಮುಗಿತು ಕಥೆ..!

  ಹೈಲ್ಮೆಟ್ ಇಲ್ಲದೇ ಗಾಡಿ ಓಡಿಸ ಬೇಕಾದರೆ, DL ಇಲ್ಲದೇ, ಮೂರು ಜನ ಸವಾರಿ ಮಾಡಬೇಕಾದರೆ ರಸ್ತೆಯಲ್ಲಿ ಅಡ್ಡ ಹಾಕುವ ಪೊಲೀಸರನ್ನು ಯಾಮಾರಿಸಿ ವೇಗವಾಗಿ, ಇಲ್ಲವೇ ಕಳ್ಳದಾರಿಯಲ್ಲಿ ಹೋಗುವವರ ಸಂಖ್ಯೆ ಕಡಿಮೆ ಏನಿಲ್ಲ. ಈ ಹಿನ್ನಲೆಯಲ್ಲಿ ಅವರುಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಬೆಂಗಳೂರ ಟ್ರಾಫಿಕ್ ಪೊಲೀಸರು ಫುಲ್ ಆಟೋ ಮೆಟಿಕ್ ಆಗಿ ಕಾರ್ಯನಿರ್ವಹಿಸುವ ಆಪ್ ವೊಂದನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಕಿಕೊಂಡಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಇದಕ್ಕಾಗಿ ಹೊಸ ಸ್ಮಾರ್ಟ್‌ಫೋನ್:

  ಈ ಹೈಟೆಕ್ ಆಪ್‌ ಅನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರು ನಗರ ಪೊಲೀಸರಿಗೆ ಹೈಟೆಕ್ ಸ್ಮಾರ್ಟ್‌ಫೋನ್ ಅನ್ನು ನೀಡಲಾಗಿದೆ. ಇದರಲ್ಲಿ ಪವರ್ ಫುಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಂದು ಫೋಟೋವನ್ನು ಕ್ಲಿಕ್ ಮಾಡಿದರೆ ಸಾಕು ಅದರಲ್ಲಿ ನಿಮ್ಮ ವಾಹನದ ಸಂಫೂರ್ಣ ಮಾಹಿತಿಯನ್ನು ಅವರು ಪಡೆದುಕೊಳ್ಳಲಿದ್ದಾರೆ.

  ಹೇಗೆ ಕಾರ್ಯನಿರ್ವಹಿಸುವುದು:

  ಈ ಆಪ್ ನಿಮ್ಮ ವಾಹನದ ಬಣ್ಣ, ನಂಬರ್ ಪ್ಲೇಟ್ ಅನ್ನು ಸೆರೆಹಿಡಿಯುವದಲ್ಲದೇ. ಯಾವ ಪ್ರದೇಶದಲ್ಲಿ ಇದ್ದೀರಾ ಎಂಬುದನ್ನು ಕಂಡು ಹಿಡಿದು, ಈ ಎಲ್ಲಾ ಮಾಹಿತಿಯನ್ನು ಟ್ರಾಫಿಕ್ ಮ್ಯಾನೆಜ್ ಮೆಂಟ್ ಸಿಸ್ಟಮ್ ಗೆ ವರ್ಗಾಹಿಸಿಲಿದೆ. ಇಲ್ಲಿಂದ ನೇರವಾಗಿ ನಿಮ್ಮ ಮನೆಗೆ ನೋಟಿಸ್ ಬರಲಿದೆ.

  ಪೊಲೀಸರೊಂದಿಗೆ ಗುದ್ದಾಟ ಬೇಡ:

  ದಾರಿಯಲ್ಲಿ ಅಡ್ಡ ಹಾಕುವ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವರಿಂದ ತಪ್ಪಿಸಿಕೊಂಡು ಹೋಗುವ ಕಾರ್ಯಕ್ಕೆ ಮುಂದಾಗ ಬೇಡಿ. ಇದರಿಂದ ದೊಡ್ಡ ಮಟ್ಟದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಪೊಲೀಸರು ತಡೆದ ಸಂದರ್ಭದಲ್ಲಿ ದಂಡ ಕಟ್ಟಿ ಇಲ್ಲವಾದರೆ ಸರಿಯಾದ ದಾಖಲಾತಿಗಳನ್ನು ತೋರಿಸಿ ಮುಂದುವರೆಯಿರಿ.

  ಹೆಚ್ಚಾಗುತ್ತಿದೆ ಪ್ರಕರಣ:

  ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಮಾದರಿಯಲ್ಲಿಯೇ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇವುಗಳನ್ನು ತಡೆಯುವ ಸಲುವಾಗಿಯೇ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ.

  ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

  ಈಗಿನ ದಿನದಲ್ಲಿ ಪ್ರತಿಯೊಂದು ವಿಷಯವೂ ಆನ್‌ಲೈನ್ ವಯವಾಗಿದ್ದು, ಇದೆ ಮಾದರಿಯಲ್ಲಿ ನೀವಿನ್ನು ನಿಮ್ಮ ಚಾಲನ ಪರವಾನಗಿಯನ್ನು ಪಡೆದಕೊಳ್ಳಲು ಆನ್‌ಲೈನ್ ವ್ಯವಸ್ಥೆಯ ಸಹಾಯವನ್ನು ಪಡೆಯಬಹುದಾಗಿದೆ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುವುದಲ್ಲದೇ ದಳ್ಳಾಳಿಗಳಿಗೆ ಹೆಚ್ಚಿನ ಹಣವನ್ನು ನೀಡುವ ಅಗತ್ಯವು ಇರುವುದಿಲ್ಲ.

  ಈ ಹಿನ್ನಲೆಯಲ್ಲಿ ತ್ವರಿತಗತಿಯಲ್ಲಿ, ಅದುವೇ ಕಡಿಮೆ ಖರ್ಚಿನಲ್ಲಿ ಡಿಎಲ್ ನೀಡುವ ಸಲುವಾಗಿ ಕೇಂದ್ರ ಸಾರಿಗೆ ಇಲಾಖೆಯೂ ಅರ್ಜಿ ಸಲ್ಲಿಸುವ ಬಗೆಯನ್ನು ತೀರಾ ಸುಲಭಗೊಳಿಸಿದೆ. ಈ ಹಿನ್ನಲೆಯಲ್ಲಿ ಹೇಗೆ ಡಿಎಲ್ ಪಡೆದುಕೊಳ್ಳಬೇಕು, ನೀವು ಎಷ್ಟು ಬಾರಿ ಆರ್‌ಟಿಓ ಕ‍ಚೇರಿಗೆ ಹೋಗಬೇಕು ಎಂಬಿತ್ಯಾದಿ ಮಾಹಿತಿಗಳನ್ನು ನೀಡುವ ಸಲುವಾಗಿಯೇ ಈ ಲೇಖನ.

  ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

  ನೀವು ಡಿಎಲ್ ಪಡೆಯಬೇಕಾದರೆ ಮೊದಲಿಗೆ ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕಾಗಿ ನೀವುhttp://www.rto.kar.nic.in ವೆಬ್ ಸೈಟಿಗೆ ಭೇಟಿ ನೀಡಬೇಕಾಗಿದೆ. ಇಲ್ಲಿ ನಿಮಗೆ ಲೈಸೆನ್ಸ್ ಮಾಡಿಸಲು ಕನ್ನಡದಲ್ಲಿಯೇ ಮಾಹಿತಿ ದೊರೆಯಲಿದೆ.

  ಮೊದಲು ಎಲ್ ಎಲ್ ಗೆ ಅರ್ಜಿ ಹಾಕಿ:

  ಡಿಎಲ್ ಪಡೆಯುವ ಮೊದಲು ಚಾಲನಾ ಕಲಿಕೆ ಪತ್ರವನ್ನು ಪಡೆಯುವುದು ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಮೊದಲು ಎಲ್ ಎಲ್ ಗೆ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕೆ ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟಿನಲ್ಲಿ (http://www.rto.kar.nic.in) 'ಕಲಿಕಾ/ ಚಾಲನಾ ಅನುಜ್ಞಾಪತ್ರ/ವಾಹನದ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

  ಅರ್ಜಿ ಸಲ್ಲಿಸುವುದು ಹೇಗೆ..?

  'ಕಲಿಕಾ/ ಚಾಲನಾ ಅನುಜ್ಞಾಪತ್ರ/ವಾಹನದ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ಹೊಸ ಪುಟವೊಂದು ತೆರೆದುಕೊಳ್ಳಲಿದ್ದು, ಅದರಲ್ಲಿ 'ಕಲಿಕಾ ಚಾಲನಾ ಅನುಜ್ಞಾಪತ್ರ' ಆಯ್ಕೆಯನ್ನು ಕ್ಲಿಕ್ ಮಾಡಿ.

  ನಂತರದ ಪುಟದಲ್ಲಿ:

  ನಂತರದ ಪುಟದಲ್ಲಿ ಕೆಳಗೆ ಸಾರಥಿ- 4 ಆನ್‌ಲೈನ್ ಸೇವೆಗಳು ಎಂಬ ಆಯ್ಕೆ ದೊರೆಯಲಿದ್ದು, ಅಲ್ಲಿ 'ಹೊಸ ಕಲಿಕಾ / ಚಾಲನಾ ಲೈಸೆನ್ಸ್ ಸಾರಥಿ - 4 ಮೂಲಕ (ಬೆಂಗಳೂರಿನ ಅಯ್ದ ಕಛೇರಿಗಳಲ್ಲಿ ಮಾತ್ರ)' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗಿದೆ. ನಂತರದಲ್ಲಿ ನಿಮ್ಮ ಆರ್‌ಟಿಓ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

  ಅನಂತರ ಅರ್ಜಿ ತುಂಬಿರಿ:

  ನಿಮ್ಮ ಆರ್‌ಟಿಓ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಕೇಂದ್ರ ಸರಕಾರದ 'ಮಿನಿಸ್ಟರಿ ಆಫ್ ರೋಡ್ ಟ್ರಾನ್‌ಸಫರ್ ಅಂಡ್ ಹೈವೆ' ವೆಬ್ ತಾಣ ತೆರೆದುಕೊಳ್ಳಲಿದ್ದು, ಅಲ್ಲಿ ಆಪ್ಲೆ ಆನ್‌ಲೈನ್ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.

  ಎಲ್ ಎಲ್/ ಡಿಲ್‌ಗಾಗಿ ಅರ್ಜಿ:

  ನೀವು ಹೊಸದಾಗಿ ಎಲ್ ಎಲ್ ಬೇಕಾದ ಸಂದರ್ಭದಲ್ಲಿ 'New Learner's Licence' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅದೇ ಮಾದರಿಯಲ್ಲಿ ಡಿಎಲ್ ಮಾಡಿಸಬೇಕಾದಲ್ಲಿ 'New Driving Licence' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

  ನಂತರ 5 ಅಂಶಗಳ ಪುಟ ತೆರೆಯಲಿದೆ:

  ನಂತರ ನೀವು 5 ಹಂತದಲ್ಲಿ ಅರ್ಜಿ ಭರ್ತಿ ಮಾಡಬೇಕಾಗಿದೆ. ಹಾಗಾಗಿ ಅಲ್ಲಿ ತೆರೆಯುವ ಮುಂದಿನ ಪುಟದಲ್ಲಿ ಕಂಟಿನ್ಯೂ ಆಯ್ಕೆಯನ್ನು ನೀಡಿರಿ.

  ನಂತರ ಮಾಹಿತಿ ಭರ್ತಿ ಮಾಡಿ:

  ಅನಂತರದ ಪುಟದಲ್ಲಿ ಕೇಲವು ಮಾಹಿತಿಗಳನ್ನು ನೀಡಬೇಕಾಗಿದ್ದು, ನಿಮ್ಮ ಆಧಾರ್ ಕಾರ್ಡ್ ನಂಬರ್, ನಿಮ್ಮ ಹೆಸರು, ರಾಜ್ಯ, ಯಾವ ಆರ್‌ಟಿಓ, ಮೊಬೈಲ್ ನಂ. ಸೇರಿಂದಂತೆ ಹಲವು ಮಾಹಿತಿಗಳನ್ನು ತುಂಬಲು ಅಲ್ಲಿ ಖಾಲಿ ಜಾಗವನ್ನು ಬಿಟ್ಟಿರಲಾಗುತ್ತದೆ. ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿದೆ.

  ಇದಾದ ನಂತರ ನಿಮ್ಮ ವಿಳಾಸ ನೀಡಿರಿ:

  ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿದ ನಂತರ ಮುಂದಿನ ಹಂತದಲ್ಲಿ ನಿಮ್ಮ ವಿಳಾಸವನ್ನು ತುಂಬ ಬೇಕಾಗಿದೆ. ಇಲ್ಲಿ ನೀವು ನೀಡುವ ವಿಳಾಸವೇ ಡಿಎಲ್‌ನಲ್ಲಿಯೂ ಬರಲಿದೆ.

  ನಂತರ ಯಾವ ವಾಹನ ಎಂಬುದನ್ನು ಸೆಲೆಕ್ಟ್ ಮಾಡಿರಿ;

  ನೀವು ಯಾವ ವಾಹನವನ್ನು ಚಲಾಯಿಸ ಬಯಸುತ್ತಿರಾ ಎಂಬ ಆಯ್ಕೆಯೂ ಮುಂದಿನ ಪುಟದಲ್ಲಿ ಇರಲಿದ್ದು, ಅಲ್ಲಿ ನಿಮ್ಮಗೆ ಬೇಕಾದ ವಾಹನದ ಆಯ್ಕೆಯನ್ನು ಮಾಡಿಕೊಳ್ಳಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ.

  ನಂತರ ದಾಖಲಾತಿಗಳನ್ನು ಆಪ್‌ಲೋಡ್ ಮಾಡಿ:

  ನೀವು ಡಿಎಲ್ ಪಡೆಯಲು ಬೇಕಾದಂತಹ ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ, ನಂತರ ಅವುಗಳನ್ನು ಅಲ್ಲಿ ಕೇಳುವ ಸೈಜ್‌ಗೆ ಸೇವ್ ಮಾಡಿಕೊಳ್ಳಿರಿ. ಅಲ್ಲಿ ಅವುಗಳನ್ನು ಆಪ್‌ ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

  ಬೇಕಾದ ದಾಖಲಾತಿಗಳು:

  ಡಿಎಲ್ ಪಡೆಯುವ ಸಲುವಾಗಿ ನೀವು ವಯಸ್ಸಿನ ದಾಖಲಾತಿ, ಖಾಯಂ ವಿಳಾಸದ ದಾಖಲಾತಿ, ಸ್ಥಳೀಯ ವಿಳಾಸದ ದಾಖಲಾತಿಗಳು ಬೇಕಾಗಿದೆ.

  ನಂತರ ಮಾಡುವುದೇನು..?

  ಹೀಗೆ ಭರ್ಜಿ ಮಾಡಿದ ಅರ್ಜಿಯನ್ನು ಪಡೆದು ನಿಮ್ಮ ಆರ್‌ಟಿಓ ಕಛೇರಿಗೆ ಭೇಟಿ ನೀಡಿ, ಅಲ್ಲಿ ನಿಗದಿತ ಪ್ರಮಾಣದ ಶುಲ್ಕವನ್ನು ಪಾವತಿ ಮಾಡಿ, ಪರೀಕ್ಷೆಯನ್ನು ಎದುರಿಸಬೇಕಾಗಿದೆ. ಎಲ್‌ಎಲ್‌ಗೆ ಮೌಖಿಕ ಪರೀಕ್ಷೆ ಇರಲಿದ್ದು, ಡಿಎಲ್‌ ಗೆ ವಾಹನ ಚಲಾಯಿಸುವ ಪರೀಕ್ಷೆಯು ಇದರಲಿದೆ. ನೀವು ಇಲ್ಲಿ ತೇರ್ಗಡೆಯಾದರೆ ನಿಮ್ಮ ಎಲ್‌ಎಲ್‌ ಮತ್ತು ಡಿಲ್‌ಗಳು ನಿಮ್ಮ ಕೈಸೆರಲಿದೆ.

  ಶೀಘ್ರದಲ್ಲಿಯೇ ಬ್ಯಾನ್ ಆಗಬಹುದಾದ ವಾಟ್ಸ್‌ಆಪ್‌ ಬಗ್ಗೆ ನಿಮಗೆಷ್ಟು ಗೊತ್ತು..?

  ವಾಟ್ಸ್‌ಆಪ್‌ ಎಲ್ಲರ ಮೊಬೈಲಲ್ಲೂ ಇದೆ. ಭಾರತದಲ್ಲಿ ಇದೀಗ ಬಹಳ ಸುದ್ದಿಯಲ್ಲಿದೆ. ಕೇಂದ್ರ ಸರ್ಕಾರ ಮತ್ತು ವಾಟ್ಸ್‌ಆಪ್‌ ನಡುವಿನ ಕಿತ್ತಾಟ ಎಲ್ಲರಿಗೂ ಕಾಣುತ್ತಿದೆ. ಇದರಿಂದ ದೇಶದಲ್ಲಿ ವಾಟ್ಸ್‌ಆಪ್ ನಿಷೇಧವಾಗುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ನ ಅಂಕಿ-ಸಂಖ್ಯೆಗಳನ್ನು ಕೇಳಿದರೆ ನಿಮಗೂ ಅಚ್ಚರಿಯಾಗುತ್ತದೆ.

  ಹೌದು, ವಾಟ್ಸ್‌ಆಪ್‌ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಗತ್ತಿನ ಅತಿ ಜನಪ್ರಿಯ ಇನ್‌ಸ್ಟಾಂಟ್ ಮೆಸೆಂಜರ್ ಆಗಿರುವ ವಾಟ್ಸ್‌ಆಪ್‌ ಸದ್ಯ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಥಾನ ಪಡೆದಿದೆ. ಕೇವಲ ಸ್ಮಾರ್ಟ್‌ಫೋನ್‌ ಅಷ್ಟೇ ಅಲ್ಲದೇ, ಫೀಚರ್‌ ಫೋನ್‌ಗಳಲ್ಲೂ ವಾಟ್ಸ್‌ಆಪ್‌ ಬಂದು ಬಿಟ್ಟಿದೆ. ಸದ್ಯ ಎಷ್ಟು ಬಳಕೆದಾರರಿದ್ದಾರೆ, ದಿನಕ್ಕೆ ಎಷ್ಟು ಮೆಸೇಜ್‌ಗಳು ರವಾನೆಯಾಗುತ್ತವೆ. ಫೈಲ್‌ಗಳೆಷ್ಟು ವರ್ಗಾವಣೆಯಾಗುತ್ತವೆ ಎಂಬುದು ಯಾರಿಗಾದರೂ ಗೊತ್ತಾ..? ಆಗಿದ್ರೆ ವಾಟ್ಸ್‌ಆಪ್‌ನ ಒಂದಿಷ್ಟು ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿದ್ದೇವೆ.

  1.5 ಬಿಲಿಯನ್ ಗ್ರಾಹಕರು

  ವಾಟ್ಸ್‌ಆಪ್‌ನಲ್ಲಿ ಸದ್ಯ ತಿಂಗಳಿಗೆ 1.5 ಬಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ಸಕ್ರಿಯರಾಗಿರುತ್ತಾರೆ. ಈ ಪ್ರಮಾಣ ಬೇರೆ ಎಲ್ಲ ಮೇಸೆಂಜರ್‌ಗಳಿಗಿಂತ ಹೆಚ್ಚಿದ್ದು, ವಾಟ್ಸ್‌ಆಪ್‌ ಹೆಚ್ಚು ಪ್ರಸಿದ್ಧಿ ಪಡೆದಿದೆ.

  85 ಬಿಲಿಯನ್ ಗಂಟೆಗಳು

  ಆಪ್‌ಟೋಪಿಯಾ ಬಿಡುಗಡೆ ಮಾಡಿರುವ ವರದಿಯಂತೆ ಜಾಗತಿಕವಾಗಿ ವಾಟ್ಸ್‌ಆಪ್‌ನ್ನು ಕಳೆದ ಮೂರು ತಿಂಗಳಲ್ಲಿ 85 ಬಿಲಿಯನ್‌ ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ ಗ್ರಾಹಕರು ಬಳಸಿದ್ದಾರೆ ಎಂದಿದೆ. ವಾಟ್ಸ್‌ಆಪ್‌ ಸದ್ಯ ವಿಶ್ವದಾದ್ಯಂತ 1.5 ಬಿಲಿಯನ್‌ ಬಳಕೆದಾರರನ್ನು ಹೊಂದಿದೆ. ಪ್ರತಿ ಮನುಷ್ಯ ವಾಟ್ಸ್‌ಆಪ್‌ನಲ್ಲಿ ಕಳೆದ ಮೂರು ತಿಂಗಳಲ್ಲಿ 11,425 ಗಂಟೆ ಕಾಲ ಕಳೆದಿರುವುದು ಗೊತ್ತಾಗಿದ್ದು, ಎಲ್ಲರೂ ಇಷ್ಟೊಂದು ಕಾಲವನ್ನು ವಾಟ್ಸ್‌ಆಪ್‌ನಲ್ಲಿ ಕಳೆಯುತ್ತಿವಾ ಎನ್ನುವುದು ನಿಜ.

  100 ಕೋಟಿಗೂ ಹೆಚ್ಚು ಡೌನ್‌ಲೋಡ್‌

  ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ವಾಟ್ಸ್‌ಆಪ್‌ ಡೌನ್‌ಲೋಡ್‌ ಆಗಿರುವ ಪ್ರಮಾಣ ಕೇಳಿದರೆ ನೀವು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿರಿ. ಹೌದು ವಾಟ್ಸ್‌ಆಪ್‌ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿರುವವರ ಸಂಖ್ಯೆ ಬರೋಬ್ಬರಿ 100 ಕೋಟಿಯನ್ನು ದಾಟುತ್ತದೆ.

  ದಿನಕ್ಕೆಷ್ಟು ಮೆಸೇಜ್‌..?

  ವಾಟ್ಸ್‌ಆಪ್‌ನಲ್ಲಿ ದಿನಕ್ಕೆ ಎಷ್ಟು ಮೆಸೇಜ್ ಮಾಡುತ್ತಿರಿ ಯೋಚಿಸಿ..! ಹೌದು, ನೀವೊಬ್ರೆ ಅಷ್ಟೊಂದು ಸಂದೇಶಗಳನ್ನು ಕಳುಹಿಸಿದ್ದಿರಿ ಎಂದರೆ, ಜಾಗತಿಕವಾಗಿ ಎಷ್ಟು ಮೆಸೇಜ್‌ ರವಾನೆಯಾಗಿರುತ್ತವೆ ಲೆಕ್ಕ ಹಾಕ್ತಿರಾ..? ವಾಟ್ಸ್‌ಆಪ್‌ನಲ್ಲಿ ದಿನಕ್ಕೆ 60 ಬಿಲಿಯನ್ ಮೆಸೇಜ್‌ಗಳು ರವಾನೆಯಾಗುತ್ತವೆ. 60 ಬಿಲಿಯನ್‌ ಎಂದರೆ ನಿಮಗೆ ಗೊತ್ತೆ ಇರುತ್ತೆ.

  ಭಾರತದಲ್ಲಿ ಎಷ್ಟು ಗೊತ್ತಾ..?

  ಭಾರತದಲ್ಲಿ ತಿಂಗಳಿಗೆ ಸಕ್ರಿಯವಾಗಿ ವಾಟ್ಸ್‌ಆಪ್‌ ಬಳಸುವವರ ಸಂಖ್ಯೆ 200 ಮಿಲಿಯನ್‌ಗೂ ಹೆಚ್ಚಿದ್ದು, ಭಾರತದಲ್ಲಿ ಅತಿ ಹೆಚ್ಚು ಬಳಸುವ ಇನ್‌ಸ್ಟಾಂಟ್‌ ಮೆಸೇಂಜಿಂಗ್ ಆಪ್‌ ಇದಾಗಿದೆ. ಅನೇಕ ಸೇವೆಗಳು ಸಹ ವಾಟ್ಸ್‌ಆಪ್‌ನಲ್ಲಿ ಲಭ್ಯವಾಗುತ್ತಿವೆ.

  ಸ್ಟೇಟಸ್ ಎಷ್ಟು..?

  ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಲಭ್ಯವಿರುವ ಸ್ಟೇಟಸ್‌ ಬಳಕೆದಾರರ ಸಂಖ್ಯೆಯನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ದಿನಕ್ಕೆ 450 ಮಿಲಿಯನ್ ಬಳಕೆದಾರರು ಸ್ಟೋರಿ ಸೌಲಭ್ಯವನ್ನು ಬಳಸುತ್ತಿದ್ದಾರೆ. ಆದರೆ, ಸ್ಟೋರಿ ಫೀಚರ್ ಪರಿಚಯಿಸಿರುವ ಸ್ನಾಪ್‌ಚಾಟ್‌ನಲ್ಲಿ 178 ಮಿಲಿಯನ್‌ ಬಳಕೆದಾರರು ಬಳಸುತ್ತಾರೆ.

  ಕೇವಲ 25 ದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಣೆ

  ಜಾಗತಿಕವಾಗಿ ಜನಪ್ರಿಯ ಮೆಸೇಂಜಿಂಗ್ ಆಪ್ ಆಗಿ ವಾಟ್ಸ್‌ಆಪ್ ಹೊರಹೊಮ್ಮಿದ್ದರೂ, ವಾಟ್ಸ್‌ಆಪ್ ನಿಜವಾಗಿಯೂ ಕಾರ್ಯನಿರ್ವಹಿಸುತ್ತಿರುವುದು ಕೇವಲ 25 ದೇಶಗಳಲ್ಲಿ ಮಾತ್ರ ಎನ್ನುವುದನ್ನು ಮರೆಯುವಂತಿಲ್ಲ.

  ಚೀನಾದಲ್ಲಿ ವಾಟ್ಸ್‌ಆಪ್‌ ಇಲ್ಲ

  ನಿಮಗೆಲ್ಲಾ ಗೊತ್ತಿರುವಂತೆ ಚೀನಾದಲ್ಲಿ ಹಲವು ಆನ್‌ಲೈನ್‌ ನಿರ್ಬಂಧಗಳಿವೆ. ಅದರಂತೆ ಚೀನಾದಲ್ಲಿ ವಾಟ್ಸ್ಆಪ್‌ನ್ನು ನಿಷೇಧಿಸಲಾಗಿದೆ. ಚೀನಾದಲ್ಲಿ ಜನಪ್ರಿಯವಾಗಿರುವ ಆಪ್‌ ಎಂದರೆ ವೀಚಾಟ್‌ ಆಪ್‌ ಆಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Bengaluru traffic police to get tougher with new smartphone app. to know more visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more