ಉಚಿತವಾಗಿ ಅಂತರಾಷ್ಟ್ರೀಯ ಕರೆ ಮಾಡಲು ಇರುವ ಟಾಪ್ 5 ಬೆಸ್ಟ್ ಆಂಡ್ರಾಯ್ಡ್ ಆಪ್ಸ್!!
ಮೊದಲೆಲ್ಲಾ ಒಂದು ಅಂತರಾಷ್ಟ್ರೀಯ ಮೊಬೈಲ್ ಕರೆ ಮಾಡಲು 50 ರಿಂದ 100 ರೂಪಾಯಿಗಳು ಖರ್ಚಾಗುತ್ತಿದ್ದವು. ಆದರೆ ಇಂದು ನೀವು ಜಗತ್ತಿನಲ್ಲಿ ಎಲ್ಲಿಯೇ ಇದ್ದರೂ ಉಚಿತ ಕರೆಗಳನ್ನು ಮಾಡಲು ಅನುಮತಿಸುವ ಹಲವು ಅಪ್ಲಿಕೇಶನ್‌ಗಳಿವೆ.
ಮೊದಲೆಲ್ಲಾ ಒಂದು ಅಂತರಾಷ್ಟ್ರೀಯ ಮೊಬೈಲ್ ಕರೆ ಮಾಡಲು 50 ರಿಂದ 100 ರೂಪಾಯಿಗಳು ಖರ್ಚಾಗುತ್ತಿದ್ದವು. ಆದರೆ ಇಂದು ನೀವು ಜಗತ್ತಿನಲ್ಲಿ ಎಲ್ಲಿಯೇ ಇದ್ದರೂ ಉಚಿತ ಕರೆಗಳನ್ನು ಮಾಡಲು ಅನುಮತಿಸುವ ಹಲವು ಅಪ್ಲಿಕೇಶನ್‌ಗಳಿವೆ. ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ನಿಮ್ಮ ಒಡನಾಡಿಯಾಗಲಿವೆ.
ಯಾವುದೇ ರೋಮಿಂಗ್ ಚಾರ್ಜ್ ಅಥವಾ ಹೆಚ್ಚುವರಿ ಶುಲ್ಕಗಳು ಇಲ್ಲದೇ, ಕೇವಲ ನಿಮ್ಮ ಮೊಬೈಲ್‌ನಲ್ಲಿರುವ WiFi , 3G ಮತ್ತು 4G ಡೇಟಾದಲ್ಲಿಯೇ ದೇಶ ವಿದೇಶಗಳಿಗೂ ಸಂಪರ್ಕ ಸಾಧಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದಾದಂತಹ ಪರ್ಯಾಯವಾದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಇಂದು ಹತ್ತಾರು ಹುಟ್ಟಿಕೊಂಡಿವೆ.

ಹಾಗಾಗಿ, ಸ್ಮಾರ್ಟ್‌ಫೋನಿನಲ್ಲಿ ಇವುಗಳನ್ನು ದೈನಂದಿನ ಜೀವನದ ಭಾಗಗಳಳಾಗಿ ಎಲ್ಲರೂ ಬಳಸುತ್ತಿದ್ದಾರೆ. ಹಾಗಾದರೆ, ನೀವು ಜಗತ್ತಿನಲ್ಲಿ ಎಲ್ಲಿಯೇ ಇದ್ದರೂ ಉಚಿತ (ವಿಡಿಯೊ ಅಥವಾ ಆಡಿಯೊ) ಕರೆಗಳನ್ನು ಮಾಡಲು ಅನುಮತಿಸುವ ಟಾಪ್ 5 ಆಂಡ್ರಾಯ್ಡ್ ಆಪ್‌ಗಳು ಯಾವುವು? ಈ 5 ಆಂಡ್ರಾಯ್ಡ್ ಆಪ್‌ಗಳ ವಿಶೇಷತೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಗೂಗಲ್ ಹ್ಯಾಂಗೌಟ್ಸ್!
ಗೂಗಲ್ ಹ್ಯಾಂಗೌಟ್ಸ್‌ನಲ್ಲಿನ ಗೂಗಲ್ ಹ್ಯಾಂಗೌಟ್ಸ್ ಡೈಲರ್ ಮೂಲಕ ನಿಮ್ಮ ಸ್ಮಾರ್ಟ್‌ಫೋನಿನಿಂದ ಜಗತ್ತಿನಲ್ಲಿ ಎಲ್ಲಿಗಾದರೂ ಉಚಿತ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರಿಗಾಗಿ ಉಚಿತ ಆನ್ಲೈನ್ ಇಂಟರ್ನ್ಯಾಷನಲ್ ಕರೆ ಮಾಡುವ ನಂಬರ್ ಒನ್ ಉಚಿತ ಅಪ್ಲಿಕೇಶನ್ ಇದು ಎಂದು ಹೇಳಬಹುದು.

ಸ್ಕೈಪ್ skype
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ಉಚಿತ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಸ್ಕೈಪ್ ಅಪ್ಲಿಕೇಶನ್ ಅತ್ಯುತ್ತಮವಾಗಿದೆ ಎನ್ನಬಹುದು. 3ಜಿ ಅಥವಾ ವೈ-ಫೈ ನಲ್ಲಿಯೂ ಕಾರ್ಯನಿರ್ವಹಿಸುವ ಈ ಆಪ್ ಮೂಲಕ ಕಂಪ್ಯೂಟರ್, ಮ್ಯಾಕ್ ಸಕ್ರಿಯಗೊಳಿಸಲಾದ ಟಿವಿಗಳಲ್ಲಿ ನಿಮ್ಮ ಸ್ನೇಹಿತರನ್ನು ನೀವು ಸಂಪರ್ಕಿಸಬಹುದು.

ವಾಟ್ಸ್ಆಪ್!!
ಜಗತ್ತಿನ ನಂಬರ್ ಒನ್ ಮೆಸೇಂಜಿಂಗ್ ಆಪ್ ಎಂಬ ಹೆಗ್ಗಳಿಕೆ ಹೊಂದಿರುವ ವಾಟ್ಸ್ಆಪ್ ಉಚಿತ ಅಂತರರಾಷ್ಟ್ರೀಯ ಕರೆಗಳನ್ನು ಮಾಡಲು ಇರುವ ಅತ್ಯುತ್ತಮ ಉಚಿತ ಅಪ್ಲಿಕೇಶನ್‌ಗಳಲ್ಲಿ ವಾಟ್ಸ್ಆಪ್ ಕೂಡ ಒಂದು. ಆಡಿಯೋ, ವಿಡಿಯೋ ಕರೆಗಳೆಲ್ಲವನ್ನು ಮಾಡಬಹುದಾದ ಈ ಆಪ್ ಬಳಕೆದಾರರಿಗೆ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿದೆ.

ಫೇಸ್‌ಬುಕ್ ಮೆಸೆಂಜರ್!
ನೀವು ಫೇಸ್‌ಬುಕ್ ಬಳಕೆದಾರರಾಗಿದ್ದರೆ ಫೆಸ್‌ಬುಕ್ ಮೆಸೆಂಜರ್ ಮೂಲಕ ಅತ್ಯುತ್ತಮ ಗುಣಮಟ್ಟದ ಉಚಿತ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಕಡಿಮೆ ಡೇಟಾ ಸ್ಪೀಡ್‌ನಲ್ಲಿಯೂ ಹೆಚ್ಚು ಗುಣಮಟ್ಟದ ಅಂತರರಾಷ್ಟ್ರೀಯ ಕರೆಗಳನ್ನು ಮಾಡಲು ಇರುವ ಈ ಆಪ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅತ್ಯುತ್ತಮ ಅಪ್ಲಿಕೇಶನ್ ಆಗಿದೆ.

ಟ್ಯಾಂಗೋ ವಿಡಿಯೋ ಕಾಲ್ಸ್!
ಟ್ಯಾಂಗೋ ಅಪ್ಲಿಕೇಶನ್ ನಿಮ್ಮನ್ನು ಉಚಿತ ವೀಡಿಯೊ ಕರೆಗಳು, ಫೋನ್ ಕರೆಗಳನ್ನು ಮಾಡಲು ಮತ್ತು ಟ್ಯಾಂಗೋ ಸದಸ್ಯರಿಗೆ ಉಚಿತ ವೀಡಿಯೊ ಸಂದೇಶಗಳನ್ನು ಕಳುಹಿಸಲು ಅನುಮತಿಸುತ್ತದೆ. ಇದು ಉಚಿತ ಗ್ರೂಪ್ ವಿಡಿಯೋ ಸಂದೇಶದ ಅತ್ಯುತ್ತಮ ವೈಶಿಷ್ಟ್ಯವನ್ನು ಅನುಮತಿಸುತ್ತದೆ. ನೀವು ಇದೀಗ ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಯಾರೊಬ್ಬರೊಂದಿಗೆ ವೈಯಕ್ತಿಕ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಹಂಚಿಕೊಳ್ಳಬಹುದು.


Click it and Unblock the Notifications








