Home
Apps

ರೈತನಿಗೆ ಆಧುನಿಕ ಕೃಷಿಯಲ್ಲಿ ದಾರಿ ದೀಪವಾಗಲಿವೆ ಈ ಆಪ್‌ಗಳು..!

By Avinash

ಭಾರತದಂತಹ ಗ್ರಾಮೀಣ ದೇಶದಲ್ಲಿ ಕೃಷಿಯೇ ಎಲ್ಲಾ... ಭಾರತದ ಬೆನ್ನೆಲುಬು ರೈತ ಅಂತ ನಾವೆಲ್ಲಾ ಪುಸ್ತಕದಲ್ಲಿಯೇ ಓದಿದ್ದೇವೆ. ಆದರೆ, ಭಾರತೀಯ ಕೃಷಿ ಪದ್ಧತಿಯು ಇನ್ನು ಸಾಂಪ್ರದಾಯಿಕವಾಗಿಯೇ ಇದೆ. ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಲ್ಲಿ ಸಾಂಪ್ರದಾಯಿಕ ರೈತರು ಎಡವುತ್ತಿದ್ದಾರೆ. ಈ ಕಾರಣದಿಂದಲೂ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದಕ್ಕಾಗಿಯೇ ರೈತರಿಗೆ ಸಹಾಯವಾಗಲಿ ಎಂದು ಸರ್ಕಾರ ಮತ್ತಿತರ ಕೃಷಿ ಸಂಸ್ಥೆಗಳು ಆಪ್‌ಗಳನ್ನು ಬಿಡುಗಡೆ ಮಾಡಿವೆ.

ರೈತನಿಗೆ ಆಧುನಿಕ ಕೃಷಿಯಲ್ಲಿ ದಾರಿ ದೀಪವಾಗಲಿವೆ ಈ ಆಪ್‌ಗಳು..!

ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಕೃಷಿಗೆ ಇತ್ತೀಚಿನ ಬಹುದೊಡ್ಡ ಸಮಸ್ಯೆ ಎಂದರೆ ಮಾನವ ಸಂಪನ್ಮೂಲ ಕೊರತೆ. ಇದಲ್ಲದೇ ಭಾರತದ ವ್ಯವಸಾಯ ಪದ್ಧತಿ ಮಾನ್ಸೂನ್ ಜತೆ ಆಡುವ ಚೆಲ್ಲಾಟ ಎಂಬುದು ಗೊತ್ತಿದೆ. ಇಂತಹ ಸಮಸ್ಯೆಗಳಿಂದ ಹೊರ ಬರಲು ಮತ್ತು ರೈತರಿಗೆ ಕೃಷಿಯನ್ನು ಸರಳವಾಗಿಸುವಲ್ಲಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾಗಿದೆ. ಕೃಷಿಯಲ್ಲಿ ರೈತನಿಗೆ ಸಹಾಯ ಮಾಡಲಿರುವ ತಂತ್ರಜ್ಞಾನದ ಒಂದು ಭಾಗವಾಗಿರುವ ಕೃಷಿ ಆಪ್‌ಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ.

1.ಕಿಸಾನ್ ಸುವಿಧಾ Kisan Suvidha

1.ಕಿಸಾನ್ ಸುವಿಧಾ Kisan Suvidha

ಕಿಸಾನ್‌ ಸುವಿಧಾ ಆಪ್‌ ಭಾರತ ಸರ್ಕಾರದಿಂದ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೈತರಿಗೆ ಪ್ರಸ್ತುತ ಮತ್ತು ಮುಂದಿನ 5 ದಿನಗಳ ಹವಾಮಾನದ ಮಾಹಿತಿಯನ್ನು ನೀಡಲಾಗುತ್ತದೆ. ಸ್ಥಳೀಯ ಡೀಲರ್‌ಗಳು, ಮಾರುಕಟ್ಟೆ, ಕೃಷಿ ಸಲಹೆಗಾರರ ಬಗ್ಗೆ, ಕೃಷಿ ರಕ್ಷಣೆ, ಐಪಿಎಮ್‌ ಪ್ರಯೋಗಗಳನ್ನು ರೈತರಿಗೆ ನೇರವಾಗಿ ನೀಡುತ್ತದೆ.

2. ಪುಸ ಕೃಷಿ Pusa Krishi

2. ಪುಸ ಕೃಷಿ Pusa Krishi

2016ರಲ್ಲಿ ಭಾರತ ಸರ್ಕಾರದಿಂದ ಬಿಡುಗಡೆಯಾದ ಪುಸ ಕೃಷಿ ಆಪ್ ವಿವಿಧ ರೀತಿಯ ಬೆಳೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ. ಇದು ಸಹ ಹವಾಮಾನ ವರದಿಯನ್ನು ನೀಡುತ್ತದೆ. ವಾತಾವರಣಕ್ಕೆ ತಕ್ಕಂತೆ ಬೆಳೆ ಆರೈಕೆ ಮಾಡುವ ಸಲಹೆಗಳನ್ನು ನೀಡುತ್ತದೆ.

3. ಎಂಕಿಸಾನ್ ಆಪ್‌ MKisan Application

3. ಎಂಕಿಸಾನ್ ಆಪ್‌ MKisan Application

ಈ ಆಪ್‌ನಿಂದ ಬಳಕೆದಾರರು ಎಂ ಕಿಸಾನ್ ಪೋರ್ಟಾಲ್‌ಗೆ ನೋಂದಣಿಯಾಗದೆ ತಜ್ಞರು, ವಿವಿಧ ಸರ್ಕಾರಿ ಅಧಿಕಾರಿಗಳಿಂದ ಕೃಷಿ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಭಾರತದಲ್ಲಿ ಎಂ ಕಿಸಾನ್‌ ಪೋರ್ಟಾಲ್ ಕೃಷಿ ಬಗೆಗಿನ ಅನೇಕ ಮಾಹಿತಿಯನ್ನು ನೀಡುತ್ತದೆ. ಈ ಆಪ್‌ನ್ನು ಕೃಷಿ ಮಂತ್ರಾಲಯದ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ಯೋಜನೆ (NeGP-A) ಅಭಿವದ್ಧಿಪಡಿಸಿದೆ.

4. ಕೃಷಿ ಮಿತ್ರ KrishiMitra

4. ಕೃಷಿ ಮಿತ್ರ KrishiMitra

ಕನ್ನಡದಲ್ಲಿಯೇ ಲಭ್ಯವಿರುವ ಆಪ್ ಇದಾಗಿದೆ. ವಿವಿಧ ಪತ್ರಿಕೆಗಳಲ್ಲಿ ಬರುವ ಕೃಷಿ ಸಂಬಂಧಿತ ವರದಿಗಳನ್ನು ನೀಡುತ್ತದೆ. ನಿಮ್ಮ ಪಹಣಿಯನ್ನು ಹುಡುಕುವ ಆಯ್ಕೆ ನಿಡಲಾಗಿದೆ. ಹವಾಮಾನ ವರದಿಯನ್ನು ಸಹ ಈ ಆಪ್ ನೀಡುತ್ತಿದ್ದು, ಪ್ರಸ್ತುತ ಮಾರುಕಟ್ಟೆ ದರವನ್ನು ರೈತರಿಗೆ ನೀಡುತ್ತದೆ. ಅದಲ್ಲದೇ ಕೃಷಿ ಇಲಾಖೆಯ ಪ್ರಮುಖ ಕಚೇರಿಗಳ ಹಾಗೂ ಎಪಿಎಂಸಿಗಳ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿದ್ದು, ರೈತರಿಗೆ ನೆರವಾಗುತ್ತದೆ.

5. ಆರ್‌ಎಮ್‌ಎಲ್‌ ಫಾರ್ಮರ್‌ RML farmer

5. ಆರ್‌ಎಮ್‌ಎಲ್‌ ಫಾರ್ಮರ್‌ RML farmer

ಆರ್‌ಎಮ್‌ಎಲ್‌ ಫಾರ್ಮರ್‌ ಆಪ್ ಭಾರತದ ಅತಿ ಜನಪ್ರಿಯ ಕೃಷಿ ಆಪ್‌ ಆಗಿದೆ. ಇದನ್ನು ಇಂಡಿಯನ್ ಅಗ್ರಿಕಲ್ಚರ್ ಕಮ್ಯೂನಿಟಿ ಅಭಿವೃದ್ಧಿಪಡಿಸಿದೆ. ಈ ಆಪ್‌ ಪ್ರಚಲಿತ ಮಾರುಕಟ್ಟೆ ದರಗಳನ್ನು, ಕೃಷಿ ಸಂಬಂಧಿ ಸುದ್ದಿಗಳನ್ನು, ಹವಾಮಾನ ವರದಿ, ಕೃಷಿ ಸಲಹೆ, ಸರ್ಕಾರದ ಅನೇಕ ಕೃಷಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಈ ಆಪ್ ನೀಡುತ್ತದೆ. 450ಕ್ಕೂ ಹೆಚ್ಚು ವಿವಿಧ ರೀತಿಯ ಬೆಳೆಗಳು, 1300 ಮಾರುಕಟ್ಟೆಗಳು, 3500 ಹವಾಮಾನ ಸ್ಥಳಗಳು, 50 ಸಾವಿರ ಹಳ್ಳಿಗಳು ಹಾಗೂ ಭಾರತದ 17 ರಾಜ್ಯಗಳನ್ನು ಈ ಆಪ್ ಒಳಗೊಂಡಿದೆ.

6. ಅಗ್ರಿ ಆಪ್ Agri App

6. ಅಗ್ರಿ ಆಪ್ Agri App

ಈ ಆಪ್ ನಿಮಗೆ ಬೆಳೆ ಉತ್ಪನ್ನ, ಬೆಳೆ ರಕ್ಷಣೆ ಮತ್ತು ಕೃಷಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ರೈತರಿಗೆ ನೀಡುತ್ತದೆ. ಇದರಲ್ಲಿ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆಯಬಹುದಾಗಿದೆ. ಹವಾಮಾನ ವರದಿ, ಮಾರುಕಟ್ಟೆ ದರಗಳನ್ನು ಈ ಆಪ್ ನೀಡಲಿದ್ದು, ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಕೃಷಿ ಸಂಬಂಧಿತ ಮಾಹಿತಿ ನೀಡುತ್ತದೆ.

7. ಅಗ್ರಿ ಮಾರ್ಕೆಟ್‌ AgriMarket

7. ಅಗ್ರಿ ಮಾರ್ಕೆಟ್‌ AgriMarket

ಈ ಆಪ್‌ನಿಂದ ಕೃಷಿ ಮಾರುಕಟ್ಟೆ ದರಗಳನ್ನು ತಿಳಿದುಕೊಳ್ಳಲು ರೈತರಿಗೆ ಸಹಾಯವಾಗುತ್ತದೆ. ಜಿಪಿಎಸ್ ಲೊಕೇಷನ್ ಸಹಾಯದಿಂದ 50 ಕಿ.ಮೀ ಸುತ್ತಲಿನ ಮಾರುಕಟ್ಟೆಯ ದರಗಳನ್ನು ಈ ಆಪ್ ನೀಡುತ್ತದೆ. ಇದಲ್ಲದೇ ಜಿಪಿಎಸ್ ಬಿಟ್ಟು ನಿಮಗೆ ಬೇಕಾದ ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಂಡು ಬೆಳೆ ದರ ನೋಡಬಹುದು.

Best Mobiles in India

English summary
best agriculture apps to know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+