Subscribe to Gizbot

ವಿಂಡೋಸ್ 10 ಸುಕ್ಷತೆಗೆ ಬಂದಿದೆ ಹೊಸ ಅಂಟಿ ವೈರಸ್..!

Posted By: Precilla Dias

ಇಂದಿನ ಡಿಜಿಟಲ್ ಯುಗದಲ್ಲಿ ನಿಮ್ಮ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ತೀರಾ ಅಗತ್ಯ. ಮಾಲ್ವೇರ್ ಗಳಿಂದ ಮತ್ತು ಹಾನಿಕಾರ ವೈರಸ್ ಗಳಿಂದ ಕಂಪ್ಯೂಟರ್ ಗಳನ್ನು ಸೇಫ್ ಆಗಿ ಇಟ್ಟುಕೊಳ್ಳುವ ಸಲುವಾಗಿ ಉತ್ತಮ ಅಂಟಿ ವೈರಸ್ ಗಳ ಅಗತ್ಯತೆ ಇದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಬಂದಿರುವ ಬಿಟ್ ಡಿಫೆಂಡರ್ ಆಂಟಿ ವೈರಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.

ವಿಂಡೋಸ್ 10 ಸುಕ್ಷತೆಗೆ ಬಂದಿದೆ ಹೊಸ ಅಂಟಿ ವೈರಸ್..!

ಬಿಟ್ ಡಿಫೆಂಡರ್ ನಿಮ್ಮ ಕಂಪ್ಯೂಟರ್ ಗೆ ರಿಯಲ್ ಟೈಮ್ ಪ್ರೋಟೆಕ್ಷನ್ ನೀಡಲಿದ್ದು, ಹೆಚ್ಚು ಸುರಕ್ಷತೆಯನ್ನು ನೀಡಲಿದೆ. ಅಲ್ಲದೇ ಡಿವೈಸ್ ಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ವಿಂಡೋಸ್ 10 ನಲ್ಲಿ ಹೆಚ್ಚಿನ ಬಳಕೆ ಮಾಡಿಕೊಳ್ಳಬಹುದಾದ ಈ ಬಿಟ್ ಡಿಫೆಂಡರ್ ಅಂಟಿ ವೈರಸ್ ಬಗ್ಗೆ ಮಾಹಿತಿ ಮುಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸೈನ್-ಫೀಚರ್:

ಡಿಸೈನ್-ಫೀಚರ್:

ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿರುವ ಬಿಟ್ ಡಿಫೆಂಡರ್ ಬಳಕೆಯು ಸುಲಭವಾಗಿದೆ. ಅಲ್ಲದೇ ನ್ಯಾವಿಗೇಷನ್ ಸಹ ಇದರಲ್ಲಿ ಲಭ್ಯವಿದೆ. ಅಲ್ಲದೇ ವಿಂಡೋಸ್ ಆಪ್ ಗಳನ್ನು ಸರಿಯಾಗಿ ಸ್ಕ್ಯಾನ್ ಮಾಡಲಿದೆ ಎನ್ನಲಾಗಿದೆ.

ಹೆಚ್ಚಿನ ಪ್ರೋಟೆಕ್ಷನ್:

ಹೆಚ್ಚಿನ ಪ್ರೋಟೆಕ್ಷನ್:

ಇದು ಮಾಲ್ವೇರ್ ಮತ್ತು ಅಂಟಿ ವೈರಸ್ ಗಳಿಂದ ನಿಮ್ಮ ಕಂಪ್ಯೂಟರ್ ಗೆ ಹೆಚ್ಚಿನ ಭದ್ರತೆಯನ್ನು ನೀಡುವುದಲ್ಲದೇ, ಇಂಟರ್ನೆಟ್ ನಿಂದ ದಾಳಿ ಮಾಡುವ ವೈರಸ್ ನಿಂದಲೂ ಸುರಕ್ಷತೆಯನ್ನು ನೀಡಲಿದೆ. ಅಲ್ಲದೇ ಮಾಲ್ವೇರ್ ಗಲನ್ನು ತಡೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚಿನ ಆಯ್ಕೆಗಳು:

ಹೆಚ್ಚಿನ ಆಯ್ಕೆಗಳು:

ಹಾಟ್ ಸ್ಪಾಟ್ ಗಳಲ್ಲಿ ಯಾವುದಾರು ತೊಂದರೆ ಎದುರಾದರೆ ವಾರ್ನಿಂಗ್ ತೋರಿಸಲಿದೆ. ಅಲ್ಲದೇ ನೆಟವರ್ಕ್ ಸೆಕ್ಯುರ್ ಆಗಿದೆಯೇ ಎಂಬುದನ್ನು ನೋಡಬಹುದು. ರಾಮಾನ್ಸ್ ವೇರ್ ನಿಂದಲೂ ರಕ್ಷಣೆ ನೀಡಲಿದೆ. ಅಲ್ಲದೇ ಪಾಸ್ ವರ್ಡ್ ಮ್ಯಾನೇಜರ್ ಅನ್ನು ಒಳಗೊಂಡಿದೆ.

ಪೇಟಿಎಂ ಪೆಮೆಂಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಪಡೆಯುವುದು ಹೇಗೆ?

ಬೆಲೆ:

ಬೆಲೆ:

ಬಿಟ್ ಡಿಫೆಂಡರ್ ಅಂಟಿ ವೈರಸ್ ಒಂದು ವರ್ಷದ ಅವಧಿಗೆ ರೂ.2499ಕ್ಕೆ ದೊರೆಯುತ್ತಿದೆ. ಅಲ್ಲದೇ ಇದು ಕೇಲವು ಡಿವೈಸ್ ಗಳಲ್ಲಿ ಬಳಕೆ ಮಾಡಿಕೊಳ್ಳಬುದಾಗಿದೆ. ಅಲ್ಲದೇ ಇದನ್ನು ಖರೀದಿಸುವ ಮುನ್ನ ಕೇಲವು ದಿನಗಳ ಕಾಲ ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Providing traditional protection against virus and malware can make an antivirus good, but it takes much more than that to label an antivirus as the ‘best antivirus.’
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot