2019 ರ ಪ್ರಸಿದ್ಧ ಆಪಲ್ ವಾಚ್ ಆಪ್ಸ್ ಗಳು
ಮಾರುಕಟ್ಟೆಯಲ್ಲಿರುವ ಬಹಳ ಪ್ರಸಿದ್ಧ ಸ್ಮಾರ್ಟ್ ವಾಚ್ ಎಂದರೆ ಅದು ಆಪಲ್ ವಾಚ್ ಗಳು ಮತ್ತು ಇದರಲ್ಲಿ ಬಹಳ ಆಪ್ಸ್ ಗಳ ಸಂಗ್ರಹ ಕೂಡ ಇದೆ. ಹೆಚ್ಚಿನ ಬಳಕೆದಾರರಿಗೆ ಬಹಳಷ್ಟು ಆಪ್ ಗಳು ಬಳಕೆಗೆ ಬರುವುದಿಲ್ಲ ಆದರೆ ಕೆಲವು ಆಪ್ ಗಳು ಆಪಲ್ ವಾಚ್ ನಲ್ಲಿ ಅತ್ಯಧಿಕವಾಗಿ ಬಳಕೆ ಮಾಡಲಾಗುತ್ತದೆ. ಆಪಲ್ ವಾಚ್ ನಲ್ಲಿ ಡೌನ್ ಮಾಡಿ ಬಳಕೆ ಮಾಡಲು ಪ್ರಸಿದ್ಧವಾಗಿರುವ ಕೆಲವು ಆಪ್ಸ್ ಗಳ ಲಿಸ್ಟ್ ಇಲ್ಲಿದೆ ನೋಡಿ.
ಫಿಟ್ನೆಸ್ ಆಪ್

ಸ್ಟಾರ್ವ್(Strave)
ಆಪಲ್ ವಾಚ್ ನಲ್ಲಿರುವ ಅತ್ಯಂತ ಪ್ರಸಿದ್ಧ ಫಿಟ್ನೆಸ್ ಆಪ್ ಇದು ಮತ್ತು ಇದೀಗ ನೀವು ನಿಮ್ಮ ನಿರಂತರ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವುದಕ್ಕೆ ಫೋನಿನ ಅಗತ್ಯವಿರುವುದಿಲ್ಲ.ಈ ಆಪ್ ಮೇಲ್ಬಾಗದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಸ್ವಚ್ಛವಾಗಿ ಆಫರ್ ಮಾಡುತ್ತದೆ.ಈ ಆಪ್ ನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ಹೆಚ್ಚುವರಿ ಫಂಕ್ಷನಾಲಿಟಿಗಳು ಉದಾಹರಣೆಗೆ ಫೋಸ್ಟ್-ಎಕ್ಸಸೈಜ್ ಅನಾಲಿಸಿಸ್, ಲೈವ್ ಫೀಡ್ ಬ್ಯಾಕ್ ಅಥವಾ ಪರ್ಸನಲೈಜ್ ಕೋಚ್ ಇತ್ಯಾದಿಗಳ ಅಗತ್ಯವಿದ್ದಲ್ಲಿ ನೀವು ಪಾವತಿ ಮಾಡಿ ಖರೀದಿಸಬೇಕಾಗುತ್ತದೆ.

ನೈಕ್ ರನ್ ಕ್ಲಬ್
ಮೊದಲ ಆಪಲ್ ವಾಚ್ ಬಿಡುಗಡೆಗೊಂಡಾಗಿನಿಂದಲೂ ನೈಕ್ ಮತ್ತು ಆಪಲ್ ಎರಡೂ ಸಂಸ್ಥೆಗಳೆರಡೂ ಕೂಡ ಒಟ್ಟಿಗೆ ಇವೆ. ನೈಕ್ ರನ್ ಕ್ಲಬ್ ಆಪ್ ಮತ್ತೊಂದು ಫಿಟ್ನೆಸ್ ಆಪ್ ಆಗಿದ್ದು ಇದು ಕೂಡ ಉತ್ತಮ ಟ್ರ್ಯಾಕಿಂಗ್ ಫೀಚರ್ ಗಳನ್ನು ನೀಡುತ್ತದೆ. ನೂತನ ಅಪ್ ಡೇಟ್ ನಲ್ಲಿ ಆಪ್ ಸಿರಿ ಇಂಟಿಗ್ರೇಷನ್ ಜೊತೆಗೆ ವಾಚ್ ಫೇಸ್ ಮತ್ತು ಅಗತ್ಯವಾದ ಎಲ್ಲಾ ಮಾಹಿತಿಗಳನ್ನು ಒಳಗೊಂಡಿದೆ. ಆಪ್ ಸ್ಟೋರ್ ನಲ್ಲಿ ಈ ಆಪ್ ಉಚಿತವಾಗಿ ಲಭ್ಯವಿದೆ.

ಸ್ಲೀಪ್ ಟ್ರ್ಯಾಕಿಂಗ್ ಆಪ್
- ಸ್ಲೀಪ್ ಸೈಕಲ್ ಅಲಾರಾಂ ಕ್ಲಾಕ್
ಇದು ಸ್ಲೀಪ್ ಸೈಕಲ್ ಮ್ಯಾನೇಜ್ ಮೆಂಟ್ ಗೆ ಆಫರ್ ಮಾಡುವ ಆಪ್ ಆಗಿದೆ ಮತ್ತು ನಿಮ್ಮ ನಿದ್ದೆಯ ಸೈಕಲ್ ನಲ್ಲಿ ಸರಿಯಾದ ಸಮಯಕ್ಕೆ ನಿಮ್ಮನ್ನ ಎಬ್ಬಿಸುವುದಕ್ಕೆ ನೆರವು ನೀಡುವ ಆಪ್ ಇದಾಗಿದೆ.

ಮ್ಯೂಸಿಕ್ ಮತ್ತು ಪಾಡ್ ಕಾಸ್ಟ್ ಆಪ್ಸ್
- ಆಡಿಯೇಬಲ್ (Audible)
ಅಮೇಜಾನ್ ಮಾಲೀಕತ್ವದ ಆಡಿಯೋ ಬುಕ್ ಇದಾಗಿದೆ. ಈ ಆಪ್ ಬಳಕೆದಾರರಿಗೆ ಐಫೋನ್ ಇಲ್ಲದೆ ಇ-ಬುಕ್ ಮೂಲಕ ಮ್ಯೂಸಿಕ್ ಕೇಳುವುದಕ್ಕೆ ಅನುವು ಮಾಡಿಕೊಡುತ್ತದೆ. ಐಫೋನ್ ಮೂಲಕ ನೀವು ನಿಮ್ಮ ಬುಕ್ ನ್ನು ಸಿನ್ಕ್ರನೈಜ್ ಮಾಡಬೇಕಾಗುತ್ತದೆ.

ಫೋಟೋ ಮತ್ತು ವೀಡಿಯೋ ಆಪ್
ಗೋ ಪ್ರೋ
ಗೋ ಪ್ರೋ ಕ್ಯಾಮರಾಕ್ಕೆ ಇದು ಕಂಪ್ಯಾನಿಯನ್ ಆಪ್ ಆಗಿದೆ. ಗೋ ಪ್ರೋ ಆಪ್ ಸರ್ವರ್ ವ್ಯೂಫೈಂಡರ್ ಮತ್ತು ರಿಮೋಟ್ ಕಂಟ್ರೋಲ್ ಆಪ್ ಆಗಿದೆ.

VLC ರಿಮೋಟ್
ಹೆಸರೇ ಸೂಚಿಸುವಂತೆ ಈ ಆಪ್ ವಿಎಲ್ ಸಿ ಮೀಡಿಯಾ ಪ್ಲೇಯರ್ ಗೆ ರಿಮೋಟ್ ಆಪ್ ಆಗಿದೆ.

ಇಮೇಲ್, ಚಾಟ್ ಮತ್ತು ಮೆಸೇಜಿಂಗ್ ಆಪ್ಸ್
ಟ್ವೀಟರ್ ಗೆ ಚಿಪ್ (Chrip for Twitter)
ಇದು ನಿಮಗೆ ಎಲ್ಲಾ ಟ್ವೀಟರ್ ಫೀಚರ್ ಗಳನ್ನು ನೀಡುತ್ತದೆ ಉದಾಹರಣೆಗೆ ಟ್ವೀಟ್ ನೋಡುವುದು, ರೀಟ್ವೀಟ್ ಮಾಡುವುದು ಮತ್ತು ಲೈಕ್ ಮಾಡುವುದು ಇತ್ಯಾದಿ. ಆಪಲ್ ವಾಚ್ ಗಾಗಿ ಇದನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ ಮತ್ತು ಇದು ವೇಗವಾಗಿರುತ್ತದೆ. ಆಪಲ್ ವಾಚ್ ಮೂಲಕ ನೇರವಾಗಿ ಮೆಸೇಜ್ ಕಳುಹಿಸುವುದಕ್ಕೂ ಕೂಡ ಈ ಆಪ್ ನೆರವು ನೀಡುತ್ತದೆ.

ಫೇಸ್ ಬುಕ್ ಮೆಸೇಂಜರ್
ಇದು ಆಪಲ್ ವಾಚ್ ಗೆ ಇರುವ ಅಧಿಕೃತವಾಗಿರುವ ಫೇಸ್ ಬುಕ್ ಮೆಸೇಂಜರ್ ಆಪ್ ಆಗಿದೆ. ಬಳಕೆದಾರರಿಗೆ ಇದು ಮೆಸೇಜ್ ಗಳನ್ನು ಓದುವುದಕ್ಕೆ ಮತ್ತು ರಿಪ್ಲೈ ಮಾಡುವುದಕ್ಕೆ ಸಹಕಾರಿಯಾಗಿದೆ. ಐಫೋನ್ ಸಹಾಯವಿಲ್ಲದೆ ನಿಮ್ಮ ಸ್ನೇಹಿತರಿಗೆ ಮತ್ತು ಫ್ಯಾಮಿಲಿಗೆ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಇದು ನಿಮಗೆ ನೆರವು ನೀಡುತ್ತದೆ.
- ಔಟ್ ಲುಕ್
ಔಟ್ ಲುಕ್ ವಾಚ್ ಗೆ ಒಂದು ಇಮೇಲ್ ಆಪ್ ಮತ್ತು ಇಮೇಲ್ ಕ್ಲೈಂಟ್ ಗೆ ಇರುವ ಎಲ್ಲಾ ಫೀಚರ್ ಗಳನ್ನು ಇದು ಆಫರ್ ಮಾಡುತ್ತದೆ. ಆಪ್ ಫೀಚರ್ ನಲ್ಲಿ ಹೊಸ ಕುತೂಹಲಕಾರಿ ಡಿಸೈನ್ ಇರುತ್ತದೆ ಮತ್ತು ವಾಚ್ ಇಂಟರ್ಫೇಸ್ ಗಾಗಿ ಉತ್ತಮ ರೀತಿಯಲ್ಲಿ ಆಪ್ಟಿಮೈಸ್ ಮಾಡಲಾಗಿದೆ.


Click it and Unblock the Notifications