Home
Apps

ಪ್ರವಾಸ ಹೊರಡುವ ಮುನ್ನ ಜೊತೆಯಲ್ಲಿರಲಿ ಈ ಆಪ್ಸ್ ಮತ್ತು ಗ್ಯಾಜೆಟ್ಸ್!

ಪ್ರವಾಸವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಬೇಕೆಂದರೆ ನಾವು ಹೋಗುವ ಪ್ರವಾಸಿ ಸ್ಥಳಗಳಲ್ಲಿ ಯಾವುದೇ ಅಡೆತಡೆಗಳು ಇರಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾಗಿಯೇ, ಪ್ರವಾಸಿಗರು ಪ್ರವಾಸಕ್ಕೆ ಹೊರಡುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ. ಈಗ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಅವರ ಪ್ರವಾಸ ಮತ್ತಷ್ಟು ಸರಳವಾಗಿದೆ.

ಪ್ರವಾಸ ಹೊರಡುವ ಮುನ್ನ ಜೊತೆಯಲ್ಲಿರಲಿ ಈ ಆಪ್ಸ್ ಮತ್ತು ಗ್ಯಾಜೆಟ್ಸ್!

ಹೌದು, ದೂರದ ದೇಶದ ಯಾವುದೇ ಭಾಷೆ ತಿಳಿಯಲು, ವಿಮಾನಯಾನದ ಮಾಹಿತಿ ಸೇರಿದಂತೆ, ಟಿಕೆಟ್ ಕಾಯ್ದಿರಿಸುವಿಕೆ, ವಿಮಾನ ಸಂಚಾರ ದಟ್ಟಣೆವರೆಗೂ ಮಾಹಿತಿ ನೀಡುವ ಮೊಬೈಲ್ ಆಪ್‌ಗಳು ಎಲ್ಲರ ಪ್ರವಾಸವನ್ನು ಸುಲಭಗೊಳಿಸಿವೆ. ಇಂತಹ ಆಪ್‌ಗಳ ಜೊತೆಗೆ ಕೆಲವೊಂದು ಅತ್ಯುತ್ತಮ ಗ್ಯಾಜೆಟ್ಸ್ ಪ್ರವಾಸವನ್ನು ಸಾಕಷ್ಟು ಸುಗಮಗೊಳಿಸುತ್ತದೆ ಎಂದರೆ ಆಶ್ಚರ್ಯವೇನಿಲ್ಲ.

ಹಾಗಾಗಿ, ಇಂದಿನ ಲೇಖನದಲ್ಲಿ ಪ್ರವಾಸ ಹೋಗುವವರಿಗೆ ಸಹಾಯಮಾಡಲು ಹುಟ್ಟಿಕೊಂಡಿರುವ ಕೆಲವು ಅತ್ಯುತ್ತಮ ಅಪ್ಸ್ ಮತ್ತು ಗ್ಯಾಜೆಟ್ಸ್ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಇವೆಲ್ಲವೂ ನಿಮ್ಮ ಪ್ರವಾಸವನ್ನು ಸುಗಮಗೊಳಿಸುತ್ತವೆ ಎಂದು ಆಶಿಸುತ್ತೇವೆ. ಹಾಗಾದರೆ, ಪ್ರವಾಸಿಗರಿಗೆ ಬೇಕಾದ ಪ್ರಮುಖ 10 ಆಪ್ಸ್ ಮತ್ತು ಗ್ಯಾಜೆಟ್ಸ್‌ಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

ಗೂಗಲ್‌ ಟ್ರಿಪ್ಸ್(Google Trips)

ಗೂಗಲ್‌ ಟ್ರಿಪ್ಸ್(Google Trips)

ಕಾಯ್ದಿರಿಸಿದ ಟಿಕೆಟ್, ಸಾಗುವ ಹಾದಿ, ಭೇಟಿ ನೀಡಲಿರುವ ಸ್ಥಳ, ಹೋಟೆಲ್ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಜಿಮೇಲ್‌ನಿಂದ ಪಡೆದು ಸಮಯ ಹಾಗೂ ದಿನಾಂಕದ ಅನ್ವಯ ಪಟ್ಟಿ ಸಿದ್ಧಪಡಿಸುವ ಗೂಗಲ್ ಟ್ರಿಪ್ಸ್ ಆಪ್ ಇಲ್ಲದೆ ಪ್ರವಾಸಕ್ಕೆ ಹೊರಡುವುದಾದರೂ ಹೇಗೆ? ಎಲ್ಲ ಹುಟುಕಾಟವನ್ನೂ ಗೂಗಲ್‌ನಲ್ಲಿಯೇ ನಡೆಸುವುದರಿಂದ ಗೂಗಲ್‌ ಟ್ರಿಪ್ಸ್ ನಮ್ಮ ಪ್ರವಾಸದಲ್ಲಿ ಸಮಯ ಯೋಜನೆಯಲ್ಲಿ ಸಹಕಾರಿಯಾಗಿದೆ. ಈ ಆಪ್ ಪ್ರಯಾಣಕ್ಕೂ ಹಿಂದಿನ ದಿನದಿಂದಲೇ ಸೂಚನೆ ನೀಡುತ್ತಿರುತ್ತದೆ.

‘ಫ್ಲೈಟ್ ಟ್ರ್ಯಾಕರ್’

‘ಫ್ಲೈಟ್ ಟ್ರ್ಯಾಕರ್’

ವಿಮಾನದ ವೇಳಾಪಟ್ಟಿಯನ್ನು ಕ್ಷಣ ಕ್ಷಣದ ಅಪ್‌ಡೇಟ್ ಮಾಹಿತಿ ನೀಡುವ ಅಪ್ಲಿಕೇಷನ್ ಇದಾಗಿದೆ. ವಿಮಾನ ಬರುವ ವೇಳೆ, ಹೊರಡುವ ಸಮಯದ ಜೊತೆಗೆ ಆ ವಿಮಾನ ಯಾವ ಗೇಟ್‌ಗೆ ಬಂದು ನಿಲ್ಲುತ್ತದೆ, ಸಮಯದಲ್ಲಿ ಏನಾದರೂ ವ್ಯತ್ಯಾಸವಾದರೆ, ಇಂಥ ಎಲ್ಲ ಮಾಹಿತಿಯನ್ನು ಅಪ್ಲಿಕೇಷನ್ ಮೂಲಕ ತಿಳಿಯಬಹುದು. ಅಲ್ಲದೆ, ನಿಮ್ಮ ಪ್ರಿತಿಪಾತ್ರರು ಹೊರಟಿರುವ ವಿಮಾನ ಯಾವುದು ಎನ್ನುವುದನ್ನೂ ಇದರಿಂದ ಪತ್ತೆ ಹಚ್ಚಬಹುದು.

ಕೌಚ್ ಸರ್ಫಿಂಗ್(CouchSurfing)!

ಕೌಚ್ ಸರ್ಫಿಂಗ್(CouchSurfing)!

ಕೌಚ್ ಸರ್ಫಿಂಗ್ ಎಂಬ ಆಪ್‌ ಬಗ್ಗೆ ತಿಳಿದುಕೊಳ್ಳದಿದ್ದರೆ ಇಂದು ಈ ಆಪ್‌ ಬಗ್ಗೆ ನೀವು ತಿಳೀದುಕೊಳ್ಳಲೇಬೇಕು. ಉಚಿತವಾಗಿ ಊಟ, ವಾಸ್ತವ್ಯಕ್ಕೆ ನೆರವಾಗುತ್ತಾರೆ ಎಂದು ಹೇಳಿದೆನಲ್ಲ. ಅದಕ್ಕೆ ಇರುವ ಆಪ್ ಇದು. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಕೌಚ್ ಸರ್ಫಿಂಗ್ ಸಮೂಹದ ಸದಸ್ಯ ಸಿಗಬಹುದು. ನೋಂದಾಯಿಸಿಕೊಂಡಿರುವ 4 ಲಕ್ಷ ಮಂದಿ, 40 ಲಕ್ಷ ಮಂದಿ ಪಯಣಿಗರು ಈ ಸಮೂಹದಲ್ಲಿದ್ದಾರೆ.

ಆಡಿಯೊ ಕಾಂಪಾಸ್ (AudioCompass)

ಆಡಿಯೊ ಕಾಂಪಾಸ್ (AudioCompass)

ಭಾರತ ಪ್ರವಾಸೋದ್ಯಮ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 'ಆಡಿಯೊ ಕಾಂಪಾಸ್' ಆಪ್‌ ಅನ್ನು ಹೊರತಂದಿದೆ. ಈ ಆಪ್‌ನಿಂದ ಯಾವುದೇ ಮಾಹಿತಿ ಉಚಿತವಾಗಿಯೇ ಸಿಗುತ್ತಿದ್ದು, ಎಲ್ಲ ಜಾಗಗಳ ಆಡಿಯೊ ವಿವರಣೆ ಕೇಳಲು ಕೇವಲ 49ರೂ. ನೀಡಿ ನೋಂದಾಯಿಸಿಕೊಳ್ಳಬಹುದು ಗೈಡ್‌ನಂತೆ ದೇಶ, ವಿದೇಶಗಳ ಪ್ರಮುಖ ಸ್ಥಳಗಳ ಮಾಹಿತಿಯನ್ನು ಸ್ಪಷ್ಟವಾಗಿ ಪಡೆಯಬಹುದು.

ಟ್ರಾವೆಲ್ ಖಾನಾ(travelkhana)

ಟ್ರಾವೆಲ್ ಖಾನಾ(travelkhana)

ರೈಲು ಪ್ರಯಾಣದ ವೇಳೆ ಬಿಸಿಯಾದ ಹಾಗೂ ರುಚಿಕರವಾದ ಊಟ ತಿಂಡಿ ತಿನ್ನಬೇಕು ಎಂದರೆ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ದಿನದ 24 ಗಂಟೆಯೂ ಕಾರ್ಯಾಚರಿಸುವ ಆಪ್ ಇದಾಗಿದ್ದು, ನಾವು ಪ್ರಯಾಣಿಸುತ್ತಿರುವ ಮಾರ್ಗದಲ್ಲಿಯೇ ಆಹಾರ ಪೂರೈಕೆ ಮಾಡುತ್ತಾರೆ. ಪಿಎನ್‌ಆರ್‌ ಸಂಖ್ಯೆ ಹಾಗೂ ರೈಲ್ವೆ ನಿಲ್ದಾಣದ ಮಾಹಿತಿ, ನಿಗದಿತ ಬೆಲೆ ನೀಡಿದರೆ ಗುಣಮಟ್ಟದ ಊಟ ನಿಮಗೆ ಸಿಗಲಿದೆ.

ಸ್ಪ್ಲಿಟ್‌ವೈಸ್ (Splitwise)

ಸ್ಪ್ಲಿಟ್‌ವೈಸ್ (Splitwise)

ಈಗೆಲ್ಲಾ ಬೈಕುಗಳಲ್ಲಿ ಹತ್ತಾರು ಜನ ಒಟ್ಟಿಗೆ ಪ್ರವಾಸ ಹೋಗುವುದು ಕಾಮನ್. ಅಂತಹ ಸಮಯದಲ್ಲಿ ಹಣವನ್ನು ಗುಂಪಾಗಿ ಖರ್ಚು ಮಾಡಿದರೂ ಅದರ ಲೆಕ್ಕವನ್ನು ಪಕ್ಕವಾಗಿಡಲು ಈ ಆಪ್ ಸಹಾಯಕ. ಪ್ರಯಾಣದಲ್ಲಿರುವ ಎಲ್ಲರೂ ಈ ಆಪ್‌ ಹೊಂದಿರಬೇಕು ಹಾಗೂ ಮಾಡುವ ಖರ್ಚಿನ ಲೆಕ್ಕವನ್ನು ನಮೂದಿಸುತ್ತ ಹೋದರೆ ಸಾಕು. ಅಂತಿಮವಾಗಿ ಆಗಿರುವ ಒಟ್ಟು ಖರ್ಚು, ತಲಾ ಖರ್ಚಿನ ಮೊತ್ತ ಹಾಗೂ ಪ್ರತ್ಯೇಕವಾಗಿ ಬಾಕಿಯಿರುವ ಹಣ ಎಲ್ಲವೂ ಕ್ಷಣದಲ್ಲಿ ಲೆಕ್ಕ ಮಾಡಿ ತೋರಿಸುತ್ತದೆ.

ರೀಚಾರ್ಜಬಲ್ ಹೀಟೆಡ್ ಇನ್ಸೋಲ್ಸ್

ರೀಚಾರ್ಜಬಲ್ ಹೀಟೆಡ್ ಇನ್ಸೋಲ್ಸ್

ಪ್ರಯಾಣವೆಂದ ಮೇಲೆ ಓಡಾಟ, ನಡೆದಾಟದಿಂದ ಕಾಲುಗಳಿಗೆ ದಣಿವಾಗುವುದು ಸಹಜ. ಅದರಲ್ಲೂ ಗಂಟೆಗಟ್ಟಲೆ ಕಾಲ ವಿಮಾನ ಪ್ರಯಾಣ ಮಾಡಿದಾಗ ಇದು ಅನಿವಾರ್ಯ ಕರ್ಮ; ಚಳಿಗಾಲದ ದಿನಗಳಾದರೆ ನೋವು ವಿಪರೀತ. ಇಂತಹ ಸಮಯದಲ್ಲಿ ನಿಮ್ಮೊಂದಿಗೆ ಚಾರ್ಜ್ ಮಾಡಬಹುದಾದ ಹೀಟೆಡ್ ಇನ್ಸೋಲ್ಸ್ ಇದ್ದರೆ ಅದರಿಂದ ನಿಮಗೆ ಸಿಗುವ ಆರಾಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ.

ಕರೆನ್ಸಿ ಕನ್ವರ್ಟರ್

ಕರೆನ್ಸಿ ಕನ್ವರ್ಟರ್

ವಿದೇಶಗಳಲ್ಲಿ ಸುತ್ತಾಡುತ್ತಿರುವಾಗ ಆಯಾ ದೇಶದ ಕರೆನ್ಸಿಗಳ ಸ್ವರೂಪ ಮತ್ತು ಮೌಲ್ಯವೇ ಬೇರೆಬೇರೆ ಆಗಿರುತ್ತವೆ. ಅದರಲ್ಲೂ ಶಾಪಿಂಗ್ ಮಾಡಲು ಹೋದಾಗ ಈ ಸಮಸ್ಯೆ ಹೆಚ್ಚು! ಹೀಗಾಗಿ ಕರೆನ್ಸಿ ಕನ್ವರ್ಟರ್ ಇದ್ದರೆ, ಅದು ಚಕಚಕನೆ ನಿಮಗೆ ಸರಿಯಾದ ಲೆಕ್ಕವನ್ನು ಕೊಡುತ್ತದೆ. ಇದರಿಂದ ನಿಮ್ಮ ಹಣಕ್ಕೆ ಅಲ್ಲಿನ ಬೆಲೆ ಏನು?, ಅಲ್ಲಿ ನೀವು ಎಷ್ಟು ಖರೀದಿ ಅಥವಾ ವೆಚ್ಚ ಮಾಡಬಹುದು ಎಂಬುದನ್ನು ನೀವು ಕ್ಷಣಮಾತ್ರದಲ್ಲಿ ತಿಳಿಯಬಹುದು.

ಭಾಷೆಯ ತೊಡಕಿಗೆ ‘ಸ್ನ್ಯಾಪ್’

ಭಾಷೆಯ ತೊಡಕಿಗೆ ‘ಸ್ನ್ಯಾಪ್’

ಬೇರೆಬೇರೆ ದೇಶಗಳಿಗೆ ಹೋದಾಗ ಸಾಮಾನ್ಯವಾಗಿ ಭಾಷೆಯ ಸಮಸ್ಯೆ ಎದುರಾಗುತ್ತದೆ. ಆದರೆ, ಈಗ ಬಂದಿರುವ ‘ಸ್ನ್ಯಾಪ್' ಸೌಲಭ್ಯದ ಮೂಲಕ ನೀವು ಇದನ್ನು ನಿವಾರಿಸಿಕೊಳ್ಳಬಹುದು. ಅಂದರೆ, ನೀವು ಇದರ ಮೂಲಕ ಹೇಳಿದ್ದನ್ನು ಗೂಗಲ್ ಟ್ರಾನ್ಸ್‌ಲೇಟ್‌ ಪ್ರಪಂಚದ 103 ಭಾಷೆಗಳಿಗೆ ತಪ್ಪಿಲ್ಲದಂತೆ ಅನುವಾದಿಸುತ್ತದೆ. ನೀವು ಆಫ್‌ಲೈನ್‌ ಮೋಡ್‌ನಲ್ಲಿದ್ದಾಗ ಕೂಡ 59 ಭಾಷೆಗಳಲ್ಲಿ ಈ ಸೇವೆ ದೊರೆಯುತ್ತದೆ.

ಮೈಕ್ರೋ ಫೈಬರ್ ಟವೆಲ್

ಮೈಕ್ರೋ ಫೈಬರ್ ಟವೆಲ್

ಈಗ ನೀವು ಊಟ ಮಾಡಿದಾಗ ಕೈ-ಬಾಯಿ ಒರೆಸಿಕೊಳ್ಳಲು ತೀರಾ ಸಣ್ಣಗೆ ಮಡಚಿದ ನ್ಯಾಪ್‌ಕಿನ್ ಅನ್ನು ಬಳಸುತ್ತೀರಲ್ಲವೇ? ಇದನ್ನಿನ್ನು ಮರೆತು ಬಿಡಿ.! ಏಕೆಂದರೆ, ಈಗ ತುಂಬಾ ಅಡಕವಾದಂತಹ, ಮೈಕ್ರೋ ಫೈಬರ್ ಟವೆಲ್ಲುಗಳೇ ಬಂದಿವೆ. ಈ ನವನವೀನ ಟವೆಲ್ಲುಗಳು ನಿಮ್ಮ ಸೂಟ್‌ಕೇಸಿನಲ್ಲಿ ಅನಗತ್ಯವಾಗಿ ಜಾಗವನ್ನು ಆಕ್ರಮಿಸಿಕೊಳ್ಳುವುದಿಲ್ಲ. ಜತೆಗೆ, ಇವು ತೇವಾಂಶವನ್ನು ಕೂಡ ತುಂಬಾ ಚೆನ್ನಾಗಿ ಹೀರಿಕೊಳ್ಳುತ್ತವೆ; ಜತೆಗೆ ಅಷ್ಟೇ ಬೇಗ ಒಣಗುತ್ತವೆ.

Best Mobiles in India

English summary
Tech has managed to seep into all aspects of the travel experience, whether it’s booking a place to stay through Airbnb or downloading your plane tickets in an app. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+