TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್‌ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬಹುಬೇಗ ಇಂಗ್ಲೀಷ್ ಮಾತನಾಡಲು ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿ!..ಏಕೆ ಗೊತ್ತಾ?
ಇಂದಿನ ಯುವಜನತೆಯು ಮೊಬೈಲ್ ಆಧಾರಿತ ಕಲಿಕೆಗೆ ಮುಂದಾಗಿರುವುದರಿಂದ ಸಾವಿರಾರು ಆಪ್‌ಗಳು ಪ್ಲೇಸ್ಟೋರ್‌ನಲ್ಲಿ ಬೀಡುಬಿಟ್ಟಿವೆ. ಕೆಲವು ಶೈಕ್ಷಣಿಕ ಸಂಸ್ಥೆಗಳು ಶಾಲಾ ಕಾಲೇಜುಗಳ ಶೈಕ್ಷಣಿಕ ಕಲಿಕೆಗೆ ಪೂರಕ ಮಾಹಿತಿ ಮತ್ತು ಶಿಕ್ಷಣ ನೀಡುವ ಸದುದ್ದೇಶದಿಂದ ಹಲವು ಶೈಕ್ಷಣಿಕ ಆಪ್‌ಗಳನ್ನು ಉಚಿತವಾಗಿ ಸಿದ್ಧಪಡಿಸಿ ಸಹಾಯ ಮಾಡುತ್ತಿದ್ದರೆ, ಇನ್ನು ಕೆಲವು ಆಪ್‌ಗಳು ಜನರಿಗೆ ಮಾಹಿತಿ ಜೊತೆಗೆ ಇಂಗ್ಲೀಷ್ ಶಿಕ್ಷಣವನ್ನು ನೀಡುತ್ತಿವೆ.
ಇಂಗ್ಲೀಷ್ ಕಲಿಯುವ ಸಲುವಾಗಿ ಬಹುತೇಕರು ಇಂಗ್ಲೀಸ್ ಕಲಿಸಿಕೊಡುವ ಆಪ್‌ಗಳ ಮೊರೆಹೋಗುತ್ತಾರೆ. ಆದರೆ, ಇಂತಹ ಆಪ್‌ಗಳು ಅಷ್ಟು ಪ್ರಯೋಜನಕಾರಿಯಾಗಿರುವುದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಮಾಹಿತಿ ಕಲಿಕೆ ಸೇರಿದಂತೆ ವೈವಿಧ್ಯಮಯವಾಗಿ ಕಲಿಯುವ, ಅಭ್ಯಾಸ ಮತ್ತು ಅಧ್ಯಯನ ಮಾಡುವ ಸಾಧ್ಯತೆಗಳನ್ನು ನೀಡುವ ಕೆಲವು ಆಪ್‌ಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ. ಇವು ಗುಣಮಟ್ಟದ ಶೈಕ್ಷಣಿಕ ಆಪ್‌ಗಳು ಮಾತ್ರವಲ್ಲದೇ ಉತ್ತಮ ಇಂಗ್ಲೀಷ್ ಕಲಿಕಾ ಆಪ್‌ಗಳು ಸಹ ಆಗಿವೆ.
ಮೆಮ್‌ರೈಸ್(Memrise)
ನಿಮ್ಮ ಮಕ್ಕಳಿಗೆ ಸುಲಭವಾಗಿ ಭಾಷೆ ಕಲಿಸುವ ಆಪ್ ಇದಾಗಿದೆ. ಇದೊಂದು ಭಾಷಾ ಕಲಿಕೆಯ ಅಪ್ಲಿಕೇಶನ್ ಆಗಿದ್ದು, ಕಲಿಕೆಯನ್ನು ಪ್ರೋತ್ಸಾಹಿಸುವ ಆಟಗಳು ಇಲ್ಲಿವೆ. ಇದರ ವಿಶೇಷ ಎಂದರೆ ನೀವು ಕಲಿಯಬಹುದಾದ 100ಕ್ಕಿಂತ ಹೆಚ್ಚಿನ ಭಾಷಾ ಕೌಶಲಗಳನ್ನು ಕಲಿಸುತ್ತದೆ. ಇಂಗ್ಲೀಷ್‌ನಲ್ಲಿ ಸುಲಭವಾಗಿ ವಿವರಣೆ ನೀಡುವ ಈ ಆಪ್ ಪ್ರಾಥಮಿಕ ಕಲಿಕೆಗೆ ಚಂದಾದಾರಿಕೆ ಉಚಿತವಾಗಿದ್ದು, ಉನ್ನತ ಕಲಿಕೆಗೆ ಹಣವನ್ನು ನೀಡಬೇಕು.
ಬುಸು (Busuu)
ವಿಶ್ವದ 11 ಜನಪ್ರಿಯ ಭಾಷೆಗಳಲ್ಲಿ ಓದುವುದು, ಬರೆಯುವುದು, ಮಾತನಾಡುವುದನ್ನು ಕಲಿಸುವ ವಿಶಿಷ್ಟ ಆಪ್ ಎಂದರೆ ಬುಸು. ಇದರ ತಂತ್ರಗಾರಿಕೆ ಕೇವಲ ಒಣ ಪುಸ್ತಕಗಳನ್ನು ಓದುವುದಕ್ಕಿಂತ ಅರ್ಥಗರ್ಭಿತ ಹಾಗೂ ಪರಿಣಾಮಕಾರಿಯಾಗಿವೆ. ನೀವು ಈ ಆಪ್ ಮೂಲಕ 45 ದಶಲಕ್ಷಕ್ಕೂ ಹೆಚ್ಚು ಜನರೊಂದಿಗೆ ಸಂವಹನ ಮಾಡಬಹುದು. ಇಲ್ಲೂ ಕೂಡ ಸುಲಭವಾಗಿ ಇಂಗ್ಲೀಷ್ ಸಂವಹನವನ್ನು ನಡೆಸಲು ಅವಕಾಶ ನೀಡಲಾಗಿದೆ.
ಟೆಡ್ ಟಾಕ್ಸ್ (TED Talks)
ಯೂಟ್ಯೂಬ್‌ನಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಟೆಡ್ ಎಕ್ಸ್ ಸಂಸ್ಥೆಯ ಆಪ್ ಬಗ್ಗೆ ನಿಮಗೆ ತಿಳಿದಿರಬೇಕು. ಕೆಲವೊಮ್ಮೆ ನೇರ ಶಿಕ್ಷಣ ಪರಿಣಾಮಕಾರಿಯಾಗುವುದಿಲ್ಲ. ಇದಕ್ಕಾಗಿ ಒಂದಿಷ್ಟು ಪ್ರೇರಣಾತ್ಮಕ ಮಾತುಗಳು ಅಗತ್ಯವಿರುತ್ತದೆ. ಇದಕ್ಕೆ ಪ್ರಸಿದ್ಧವಾದ ಅಪ್ಲಿಕೇಶನ್ ಎಂದರೆ ಟೆಡ್ಟಾಕ್ಸ್. ಇಲ್ಲಿನ ಮಾತುಗಳು ಪ್ರಬುದ್ಧವಾಗಿದ್ದು ನಿಮ್ಮನ್ನು ನೀವೇ ಅರಿಯಲು ಸಾಧ್ಯವಾಗುತ್ತದೆ. ಪ್ರಮುಖ ವ್ಯಕ್ತಿಗಳ ಜೀವನ ಕಥೆಯೇ ಇಲ್ಲಿ ಪ್ರೇರಣೆಯಾಗಗುತ್ತಿದೆ.
ಇ.ಡಿ.ಎಕ್ಸ್.(EdX)
ಇ.ಡಿ.ಎಕ್ಸ್.(EdX) ಆಪ್ ಬಗ್ಗೆ ವೃತ್ತಿಪರ ಶಿಕ್ಷಣ ಪಡೆಯುವವರಿಗೆ ಬಹುತೇಕ ತಿಳಿವಳಿಕೆ ಇರುತ್ತದೆ. ಆನ್ಲೈನ್ ಮತ್ತು ಆಫ್ಲೈನ್ ವೀಡಿಯೋ ಉಪನ್ಯಾಸಗಳ ಮೂಲಕ ಕಂಪ್ಯೂಟರ್ ಪ್ರೋಗ್ರಾಮಿಂಗ್, ಇಂಜಿನಿಯರಿಂಗ್, ಇತಿಹಾಸ, ಮನಶಾಸ್ತ್ರ, ಆರೋಗ್ಯ ಮತ್ತಿತರ ನೂರಾರು ಶೈಕ್ಷಣಿಕ ವಿಷಯಗಳ ಬಗ್ಗೆ ತಿಳಿಯಬಹುದಾಗಿದೆ. ಇಲ್ಲಿ ಇಂಗ್ಲೀಷ್ ಕಲಿಯಲು ನೀವು ಕಷ್ಟವೇ ಪಡಬೇಕಿಲ್ಲ. ಏಕೆಂದರೆ, ಅದನ್ನು ನೋಡುತ್ತಲೇ ನಿಮಗೆ ಸುಲಭವಾಗಿ ಅರ್ಥವಾಗುತ್ತದೆ.
ಯುಡೆಮಿ (Udemy)
ಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಅಡುಗೆಮನೆ ಶಿಕ್ಷಣದಿಂದ ವಿದೇಶಿ ಭಾಷಾ ಕಲಿಕೆವರೆಗಿನ ವ್ಯಾಪ್ತಿಯ 32,000ಕ್ಕೂ ಹೆಚ್ಚಿನ ಕಲಿಕಾಂಶಗಳನ್ನು ಹೊಂದಿರುವ ಇದು ಮೊಬೈಲ್ ಮೂಲಕ ಶಿಕ್ಷಣ ನೀಡುವ ಮೊದಲ ಶೈಕ್ಷಣಿಕ ಆಪ್ ಆಗಿದೆ. ಇಲ್ಲಿ ಉದ್ಯಮಶೀಲತೆ, ವಿನ್ಯಾಸ, ಆರೋಗ್ಯ, ಸಂಗೀತ, ಫಿಟ್ನೆಸ್, ಛಾಯಾಗ್ರಹಣ ಕಲಿಕೆಗೆ ಬಹಳ ಯೋಗ್ಯವಾಗಿದೆ. ಮಾಹಿತಿ ಸಂಪೂರ್ಣವಾಗಿ ಇಂಗ್ಲೀಷ್‌ನಲ್ಲೇ ಸುಲಭವಾಗಿ ಅರ್ಥವಾಗುವಂತೆ ನೀಡಲಾಗುತ್ತದೆ.
ಕೋರ್ಸೆರಾ(Coursera)
ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಹಣಕಾಸು ಮತ್ತು ವ್ಯವಹಾರ, ವಿದೇಶಿ ಭಾಷೆಗಳನ್ನು ಒಳಗೊಂಡಂತೆ ಹಲವಾರು ಸ್ವದೇಶಿ ಭಾಷೆಗಳನ್ನು ಈ ಆಪ್ ಮೂಲಕ ಕಲಿಯಬಹುದಾಗಿದೆ. 20ಕ್ಕೂ ಹೆಚ್ಚಿನ ಕ್ಷೇತ್ರಗಳ ವಿಷಯಗಳಿದ್ದು 100ಕ್ಕೂ ಹೆಚ್ಚಿನ ಉನ್ನತ ವಿಶ್ವವಿದ್ಯಾನಿಲಯದೊಂದಿಗೆ ಪಾಲುದಾರಿಕೆ ಹೊಂದಿರುವ ಈ ಆಪ್‌ನಲ್ಲಿ ವೀಡಿಯೋ ಪಾಠಗಳು ಮತ್ತು ಟ್ಯುಟೋರಿಯಲ್ಗಳಿವೆ.
ಖಾನ್ ಅಕಾಡೆಮಿ (Khan Academy)
ಯುವಜನತೆಗೆ ಮತ್ತು ಮಕ್ಕಳಿಗೆ ವಿವಿಧ ಶಿಕ್ಷಣ ಮತ್ತು ತರಗತಿ ನೀಡುವ ಖಾನ್ ಅಕಾಡೆಮಿ 10,000ಕ್ಕೂ ಹೆಚ್ಚಿನ ವೀಡಿಯೋಗಳನ್ನು ಹೊಂದಿದೆ. ಇವೆಲ್ಲವೂ ಸಂಪೂರ್ಣ ಉಚಿತ. ಗಣಿತ, ಅರ್ಥಶಾಸ್ತ್ರ, ಇತಿಹಾಸ, ವಿಜ್ಞಾನ ಹೀಗೆ ಅನೇಕ ವಿಷಯಗಳ ಸಂಕೀರ್ಣ ಅಂಶಗಳನ್ನು ಸುಲಭವಾಗಿ ತಿಳಿಸುವ ಪ್ರಯತ್ನ ಕಾಣಿಸುತ್ತದೆ. ಇದು ಆಫ್ಲೈನ್ನಲ್ಲೂ ಕಾರ್ಯ ನಿರ್ವಹಿಸುತ್ತದೆ.