iOS 11 ನಲ್ಲಿ ಈ ಏಆರ್ ಆಪ್ಗಳನ್ನು ನೀವು ಪ್ರಯತ್ನಿಸಲೇಬೇಕು!

By: Tejaswini P G

ನೂತನ iOS 11 ನೊಂದಿಗೆ ಆಪಲ್ ಆಗ್ಮೆಂಟೆಡ್ ರಿಯಾಲಿಟಿಯ ಜಗತ್ತಿಗೆ ಕಾಲಿರಿಸಿದ್ದು , ಐಫೋನ್ ಮತ್ತು ಐಪ್ಯಾಡ್ ನಂತಹ ಹಲವಾರು ಪ್ಲ್ಯಾಟ್ಫಾರ್ಮ್ ಗಳಿಗೆ ಹೊಸ ಫೀಚರ್ಗಳನ್ನು ತಂದಿದೆ. ಈ ಆಪ್ಗಳು ನಮ್ಮ ಸುತ್ತ ಇರುವ ನಿಜ ಜಗತ್ತಿನ ಮೇಲೆ ಕಾಲ್ಪನಿಕ ವಸ್ತುಗಳನ್ನಿಡುವ ಮೂಲಕ ರೋಮಾಂಚಕಾರಿ ಅನುಭವ ನೀಡುತ್ತದೆ.

iOS 11 ನಲ್ಲಿ ಈ ಏಆರ್ ಆಪ್ಗಳನ್ನು ನೀವು ಪ್ರಯತ್ನಿಸಲೇಬೇಕು!

ಅಷ್ಟೇ ಅಲ್ಲದೆ, ಆಪಲ್ ಕಂಪೆನಿಯು iOS 11 ಡೆವೆಲಪರ್ಗಳಿಗಾಗಿ AR ಕಿಟ್ ಅನ್ನು ಬಿಡುಗಡೆ ಮಾಡಿದ್ದು ಇನ್ನೂ ಹೆಚ್ಚಿನ ಆಪ್ಗಳ ನಿರೀಕ್ಷೆಯಲ್ಲಿದೆ. ಈ AR ಕಿಟ್ ಈ ಕೆಳಗಿನ ಸಾಧನಗಳಲ್ಲಿ ಕೆಲಸ ಮಾಡಲಿದೆ.

  • ಐಫೋನ್ 7
  • ಐಫೋನ್ 7 ಪ್ಲಸ್
  • ಐಫೋನ್ 6s
  • ಐಫೋನ್ 6s ಪ್ಲಸ್
  • ಐಫೋನ್ SE
  • 12.9 ಇಂಚ್ ಐಪ್ಯಾಡ್ ಪ್ರೋ (2017)
  • 12.9 ಇಂಚ್ ಐಪ್ಯಾಡ್ ಪ್ರೋ (2016)
  • 10.5 ಇಂಚ್ ಐಪ್ಯಾಡ್ ಪ್ರೋ
  • 9.7 ಇಂಚ್ ಐಪ್ಯಾಡ್ ಪ್ರೋ
  • ಐಪ್ಯಾಡ್ (2017)

ಈ ಲೇಖನದಲ್ಲಿ ನೀವು ಈ ಮೇಲೆ ಹೇಳಿರುವ ಸಾಧನಗಳಲ್ಲಿ ಇನ್ಸ್ಟಾಲ್ ಮಾಡಬಹುದಾದ AR ಆಪ್ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಲ್ಡ್ ಬ್ರಶ್

ವರ್ಲ್ಡ್ ಬ್ರಶ್

ಈ ಆಪ್ ಬಳಸಿ ನೀವು ಬ್ರಶ್ ಮೂಲಕ ಚಿತ್ರ ಬಿಡಿಸಬಹುದು ಮತ್ತು ಬಣ್ಣ ಹಚ್ಚಬಹುದು ನಿಮ್ಮ ಸುತ್ತಮುತ್ತಿನ ಜಗತ್ತಿಗೆ. ನಿಮ್ಮ ಪೇಂಟಿಂಗ್ ನೀವು ಅದನ್ನು ಸೃಷ್ಟಿಸಿದ ಜಾಗದ GPS ಲೊಕೇಶನ್ ನಲ್ಲಿ ಸೇವ್ ಆಗುತ್ತದೆ. ಅಲ್ಲದೆ ಈ ಪೇಂಟಿಂಗ್ ಅನ್ನು ಇತರ ಬಳಕೆದಾರರು ನೋಡಬಹುದಲ್ಲದೆ ಅದನ್ನು ಲೈಕ್, ಡಿಸ್ಲೈಕ್ ಅಥವಾ ರಿಪೋರ್ಟ್ ಮಾಡಬಹುದು. ಈ ಆಪ್ ಅನ್ನು ಐಫೋನ್ ಮತ್ತು ಐಪ್ಯಾಡ್ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಮ್ಯಾಜಿಕ್ ಪ್ಲ್ಯಾನ್

ಮ್ಯಾಜಿಕ್ ಪ್ಲ್ಯಾನ್

ಈ ಆಪ್ ಬಳಸಿ ನೀವು ನಿಮ್ಮ ಕಟ್ಟಡದ ಫೋಟೋ ತೆಗೆಯುವ ಮೂಲಕ ಆ ಕಟ್ಟಡದ ಫ್ಲೋರ್ ಪ್ಲ್ಯಾನ್ ಅನ್ನು ವೃತ್ತಿಪರ ರೀತಿಯಲ್ಲಿ ಸೃಷ್ಟಿಸಬಹುದು. ಅಲ್ಲದೆ ಈ ಆಪ್ ಬಳಸಿ ನೀವು ಸಂಪೂರ್ಣ ಜಾಬ್ ಎಸ್ಟಿಮೇಟ್ ಗಳು, ನಿಮ್ಮ ಕಟ್ಟಡದ 3D ವ್ಯೂಗಳು, DIY ಪ್ರಾಜೆಕ್ಟ್ ಪ್ಲ್ಯಾನ್ ಅಥವಾ ಮನೆಯ ಫರ್ನಿಶಿಂಗ್ ಪ್ಲ್ಯಾನ್ ಮಾಡಬಹುದು. ನಿಮ್ಮ ಮನೆಯ ಫ್ಲೋರ್ ಪ್ಲ್ಯಾನ್ ಅನ್ನು ಇತರ ಮ್ಯಾಜಿಕ್ ಪ್ಲ್ಯಾನ್ ಬಳಕೆದಾರರೊಂದಿಗೆ ಹಂಚಿಕೊಳ್ಳಬಹುದಲ್ಲದೆ ಅದನ್ನು 3Dನಲ್ಲೂ ನೋಡಬಹುದು!

IKEA ಪ್ಲೇಸ್

IKEA ಪ್ಲೇಸ್

ಈ ಆಪ್ ಮೂಲಕ ನೀವು ನಿಮ್ಮ ಕಟ್ಟಡಗಳಲ್ಲಿ IKEA ಉತ್ಪನ್ನಗಳನ್ನು ವರ್ಚ್ಯುವಲ್ ಆಗಿ ಇರಿಸಬಹುದು. ಈ ಆಪ್ನಲ್ಲಿ ಸೋಫಾ, ಆರ್ಮ್ ಚೇರ್, ಫೂಟ್ ಸ್ಟೂಲ್ , ಕಾಫಿ ಟೇಬಲ್ ಇತ್ಯಾದಿ ಫರ್ನೀಚರ್ಗಳ ಬಹಳಷ್ಟು ಮಾಡೆಲ್ಗಳು ಲಭ್ಯವಿದೆ.

ಈ ಮೂಲಕ ನೀವು ನಿಮ್ಮ ಮನೆಗಳಲ್ಲಿ ನಿಮ್ಮ ಆಯ್ಕೆಯ ಫರ್ನೀಚರ್ಗಳನ್ನು ಎಲ್ಲಿ ಇರಿಸಬಹುದು, ಅದು ಮನೆಗೆ ಒಪ್ಪುತ್ತದೆಯೇ ಮುಂತಾದವುಗಳನ್ನು ಆಪ್ ಮೂಲಕವೇ ನಿರ್ಧರಿಸಬಹುದು. ಈ ಆಪ್ ಮೂಲಕ ನೀವು ನಿಮ್ಮ ಮನೆ ಸೆಟ್ ಮಾಡಿದ ನಂತರ ಅದರ ಫೋಟೋ ಅನ್ನು ವಾಟ್ಸಾಪ್ ಅಥವಾ ಇನ್ಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಆಪ್ಗಳ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದು.

3G ಮತ್ತು 2G ಗ್ರಾಹಕರಿಗೆ ಇದೀಗ ಹಬ್ಬ!.ಕೂಡಲೇ BSNL ಸಿಮ್ ಖರೀದಿಸಿ!!

ಕಿಂಗ್ಸ್ ಆಫ್ ಪೂಲ್

ಕಿಂಗ್ಸ್ ಆಫ್ ಪೂಲ್

ಈ ಆಪ್ ಇನ್ಸ್ಟಾಲ್ ಮಾಡಿ ಸಾಕು, ಪಡೆಯಿರಿ ಜಗತ್ತಿನಾದ್ಯಂತ ಇರುವ ನುರಿತ 8-ಬಾಲ್ ಪೂಲ್ ಆಟಗಾರರೊಂದಿಗೆ ಆಡುವ ಅವಕಾಶ! ಒಂದೊಂದೇ ಆಟ ಗೆಲ್ಲುತ್ತಾ ಹೋಗಿ ಮತ್ತು ಪಡೆಯಿರಿ ಅಧಿಕ ಮೊತ್ತದ ಬಹುಮಾನ ಹೊಂದಿರುವ ಟೇಬಲ್ಗಳಲ್ಲಿ ಆಡುವ ಅವಕಾಶ. ನಿಮ್ಮ ಕ್ಯಾಶ್ ಬ್ಯಾಲೆನ್ಸ್ ಹೆಚ್ಚಿಸಿ ಮತ್ತು ಶ್ರೀಮಂತ ಬಿಲಿಯರ್ಡ್ಸ್ ಆಟಗಾರರಾಗಿ!!

ಸ್ಟಾರ್ ವಾರ್ಸ್

ಸ್ಟಾರ್ ವಾರ್ಸ್

ನೀವು ಸ್ಟಾರ್ ವಾರ್ಸ್ ಆಭಿಮಾನಿಯಾಗಿದ್ದಲ್ಲಿ ಈ ಆಪ್ ಅನ್ನು ಖಂಡಿತ ಇನ್ಸ್ಟಾಲ್ ಮಾಡಲೇಬೇಕು.ಈ ಆಪ್ ನೀಡುತ್ತದೆ ಬ್ರೇಕಿಂಗ್ ಸುದ್ದಿಗಳನ್ನು ಮತ್ತು ವಿಶೇಷ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು. ಮೂವಿ ಸುದ್ದಿಗಳು, ಬಿಡುಗಡೆಯಾದ ಟ್ರೇಲರ್ಗಳು ಮತ್ತು ಇನ್ನಿತರ ಹೊಸ ಸುದ್ದಿಗಳು ಇವೆಲ್ಲವನ್ನೂ ನೋಡಬಹುದು ಈ ಆಪ್ನಲ್ಲಿ. ಅಷ್ಟೇ ಅಲ್ಲದೆ 3D ಸ್ಟಾರ್-ವಾರ್ಸ್ ಪಾತ್ರಗಳು, ಸ್ಪೇಸ್ ಶಿಪ್, ಮತ್ತು ವಿಶೇಷ ರಸಪ್ರಷ್ನೆಗಳನ್ನು ಅನ್ಲಾಕ್ ಮಾಡಿ. ಸ್ಟಾರ್-ವಾರ್ಸ್ ID ಗೆ ನೋಂದಾಯಿಸಿಕೊಳ್ಳಿ ಮತ್ತು ನಿರಂತರ ಬೆಳೆಯುತ್ತಿರುವ ಸ್ಟಾರ್-ವಾರ್ಸ್ ಕುಟುಂಬದ ಭಾಗವಾಗಿ!

AR ಡ್ರ್ಯಾಗನ್

AR ಡ್ರ್ಯಾಗನ್

ಇದೊಂದು ವರ್ಚ್ಯುವಲ್ ಪೆಟ್ ಸಿಮ್ಯುಲೇಟರ್ ಆಗಿದ್ದು , ನಿಮ್ಮದೇ ಸ್ವಂತ ಡ್ರ್ಯಾಗನ್ ಅನ್ನು ಸಾಕಿ ಸಲಹುವ ಅವಕಾಶ ನಿಮಗೆ ಸಿಗಲಿದೆ.ಈ ಆಪ್ ನಲ್ಲಿ ನೀವು ನಿಮ್ಮದೇ ಡ್ರ್ಯಾಗನ್ ಒಂದನ್ನು ಸಾಕಿ, ಅದರ ಊಟ ಮತ್ತು ಆಟಗಳ ಕಡೆ ಗಮನ ಹರಿಸಬೇಕು.ನಿಮ್ಮ ಡ್ರ್ಯಾಗನ್ ಅನ್ನು ಚಂದಗಾಣಿಸಲು 20ಕ್ಕೂ ಅಧಿಕ ವಿಶಿಷ್ಟ ಟೊಪ್ಪಿ ಮತ್ತು ಫ್ಯಾನ್ಸಿ ಸ್ಕಿನ್ ಗಳನ್ನು ಕಲೆಕ್ಟ್ ಮಾಡಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
With iOS 11, Apple stepped into the world of Augmented reality and also packs a variety of new features across various platforms including iPhones and iPads.Check out the best AR apps to experience on your phone
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot