ಕ್ಲೌಡ್‌ನಲ್ಲಿ ಫೋಟೋ ಸೇವ್‌ ಮಾಡಿ..! ಬೇಕೆಂದಾಗ ಎಲ್ಲಾದರೂ ಬಳಸಿ..!

|

ಈಗಂತೂ ಎಲ್ಲರ ಮೊಬೈಲ್‌ನಲ್ಲೂ ಸಾವಿರಗಟ್ಟಲೇ ಫೋಟೋಗಳು ಇರುತ್ತವೆ. ಸಾವಿರ ಇಲ್ಲ ಎಂದರೂ ವೈಯುಕ್ತಿಕವಾದ ನೂರಿನ್ನೂರು ಫೋಟೋಗಳಂತು ಮೊಬೈಲ್‌ ಸ್ಮರಣೆಯನ್ನು ಆಕ್ರಮಿಸಿಕೊಂಡಿರುತ್ತವೆ. ಆದರೆ, ಎಲ್ಲೋ ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್ ಕಳೆದು ಹೋಗುತ್ತದೆ. ತಂತ್ರಜ್ಞಾನ ಮುಂದುವರೆದಿರುವುದರಿಂದ ಪಾಸ್‌ವರ್ಡ್‌ ಬ್ರೇಕ್‌ ಮಾಡುವುದು ದೊಡ್ಡ ಶ್ರಮವಲ್ಲ. ಒಂದೇ ಕ್ಷಣದಲ್ಲಿ ನಿಮ್ಮ ಫೋಟೋಗಳೆಲ್ಲ ಅವರ ಕೈ ವಶವಾಗಿ, ದುರ್ಬಳಕೆಯಾಗಬಹುದು. ಆದ್ದರಿಂದ ಈ ಸಮಸ್ಯೆಗೆ ಏನು ಪರಿಹಾರ ಇಲ್ಲವಾ..? ಎಂದರೆ ನಮ್ಮ ಉತ್ತರ ಇದೇ ಎಂಬುದೇ ಆಗಿರುತ್ತದೆ.

ಕ್ಲೌಡ್‌ನಲ್ಲಿ ಫೋಟೋ ಸೇವ್‌ ಮಾಡಿ..! ಬೇಕೆಂದಾಗ ಎಲ್ಲಾದರೂ ಬಳಸಿ..!

ಸಿಡಿ, ಡಿವಿಡಿ, ಪೆನ್‌ಡ್ರೈವ್‌ನಲ್ಲಿ ಎಲ್ಲಾ ಡಾಕ್ಯುಮೆಂಟ್‌ ಸೇವ್‌ ಮಾಡಿಡ್ತಿನಿ ಎಂದರೆ ನಮ್ಮಂತ ದಡ್ಡರೂ ಯಾರು ಇಲ್ಲ. ಏಕೆಂದರೆ ಅಳಿವಿನಂಚಿನಲ್ಲಿರುವ ತಂತ್ರಜ್ಞಾನಗಳನ್ನು ಬಳಸುತ್ತೇವೆಂದರೆ ನಾವಾದ್ರೂ ಏನು ಹೇಳಬೇಕು. ಮೇಲಿನ ಸಮಸ್ಯೆಗೆ ಕ್ಲೌಡ್‌ ಸ್ಟೋರೆಜ್ ಉತ್ತಮ ಆಯ್ಕೆಯಾಗಿದೆ. ನಿಮ್ಮ ಯಾವುದೇ ಡಾಕ್ಯುಮೆಂಟ್‌, ಫೋಟೋ, ವಿಡಿಯೋಗಳನ್ನು ಇಲ್ಲಿ ಶೇಖರಿಸಿಟ್ಟುಕೊಂಡು ಬೇಕಾದಾಗ ಬಳಸಿಕೊಳ್ಳಬಹುದು. ಇಲ್ಲಿ ನಿಮಗೆ ಮೊಬೈಲ್‌ ಸ್ಟೋರೇಜ್‌ ಸಮಸ್ಯೆಯೂ ಕೂಡ ಪರಿಹಾರವಾಗುತ್ತದೆ. ಯಾವುದೇ ಭಯವಿಲ್ಲದೇ ನಿಮ್ಮ ಮೊಬೈಲ್‌ನ್ನು ಯಾರಿಗಾದರೂ ಕೊಡಬಹುದು. ಆಗಿದ್ರೇ ಕ್ಲೌಡ್ ಸ್ಟೋರೆಜ್‌ ಬಗ್ಗೆ ಒಂದಿಷ್ಟು ಮಾಹಿತಿ ನೋಡ್ಕೊಂಡು ಬಂದ್ಬೀಡಿ..

ಕ್ಲೌಡ್‌ ಸ್ಟೋರೆಜ್‌ ಎಂದರೇನು ಗೊತ್ತಾ..?

ಕ್ಲೌಡ್‌ ಸ್ಟೋರೆಜ್‌ ಎಂದರೇನು ಗೊತ್ತಾ..?

ಕ್ಲೌಡ್‌ ಸ್ಟೋರೆಜ್‌ ಒಂದು ಆನ್‌ಲೈನ್‌ ಸಂಗ್ರಹಣೆಯ ಟೆಕ್‌ ಪರಿಭಾಷೆಯಾಗಿದೆ. ಇಲ್ಲಿ ನೀವು 1GB ಯಿಂದ 1TB ಗಾತ್ರದ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸ್ಟೋರ್ ಮಾಡಬಹುದಾಗಿದ್ದು, ಎಲ್ಲಿ ಬೇಕಾದರಲ್ಲಿ ಬಳಸಬಹುದಾಗಿದೆ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಸ್ಟೋರ್‌ ಮಾಡಲು ಯಾವುದೇ ಡಿವೈಸ್‌ ಬೇಕಾಗಿಯೂ ಇಲ್ಲ. ನಿಮಗಾಗಿ ಹಲವು ಟೆಕ್‌ ಕಂಪನಿಗಳು ಕ್ಲೌಡ್‌ ಸ್ಟೋರೆಜ್‌ ಆಯ್ಕೆಯನ್ನು ನೀಡುತ್ತಿವೆ.

ಕ್ಲೌಡ್‌ ಬಳಕೆ ಹೇಗೆ..?

ಕ್ಲೌಡ್‌ ಬಳಕೆ ಹೇಗೆ..?

ಇಂಟರ್‌ನೆಟ್‌ ಸಂಪರ್ಕವಿದ್ದರೆ ಕ್ಲೌಡ್‌ ಸ್ಟೋರೆಜ್‌ ಫೀಚರ್ ಬಳಸಬಹುದಾಗಿದೆ. ಇಲ್ಲಿ ನಿಮಗೆ ಹಾರ್ಡ್‌ಡಿಸ್ಕ್‌, ಹಾರ್ಡ್‌ಡ್ರೈವ್‌ನ ತೊಂದರೆಯೇ ಇರುವುದಿಲ್ಲ. ನಿಮ್ಮ ಡಾಕ್ಯುಮೆಂಟ್‌ಗಳಿಗೆ ಹೆಚ್ಚಿನ ಭದ್ರತೆಯನ್ನು ಇಲ್ಲಿ ನಿರೀಕ್ಷಿಸಬಹುದಾಗಿದೆ. ಕ್ಲೌಡ್‌ ಸ್ಟೋರೆಜ್‌ನಲ್ಲಿ ನಿಮ್ಮದೇ ಆದ ಅಕೌಂಟ್‌ ತೆರೆಯಬೇಕಾಗಿದ್ದು, ಪಾಸ್‌ವರ್ಡ್‌ ಭದ್ರತೆ ಇದ್ದೇ ಇರುತ್ತದೆ. ಪಾಸ್‌ವರ್ಡ್‌ ಇದ್ದರೆ ಮಾತ್ರ ಪ್ರವೇಶ ಸಾಧ್ಯ. ಅದಲ್ಲದೇ ಖಾಸಗಿ ವೆಬ್‌ ಲಿಂಕ್‌ ಸೃಷ್ಟಿಸಿಕೊಂಡು ಬೇಕಾದವರಿಗೆ ಮಾತ್ರ ಅಕ್ಸೆಸ್ ನೀಡುವ ಆಯ್ಕೆಯನ್ನು ಕ್ಲೌಡ್‌ ಸ್ಟೋರೆಜ್ ಹೊಂದಿದ್ದು, ಜನರ ಸ್ನೇಹಿತನಾಗಿ ಬದಲಾಗುತ್ತಿದೆ.

ಏನೇನು ಫೀಚರ್‌..?

ಏನೇನು ಫೀಚರ್‌..?

ಕ್ಲೌಡ್‌ ಸ್ಟೋರೆಜ್‌ನಲ್ಲಿ ಫ್ಲಿಕರ್‌ನಂತಹ ವೆಬ್‌ಸೈಟ್‌ಗಳು ಫೋಟೋ ಹಂಚಿಕೊಳ್ಳುವ ಆಯ್ಕೆಯನ್ನು ನೀಡುತ್ತವೆ. ಇಲ್ಲಿಂದ ಜಗತ್ತಿನ ಎದುರು ಆಯ್ದ ಫೋಟೋಗಳನ್ನು ತೆರೆದಿಡುವ ಆಯ್ಕೆ ನಿಮ್ಮದಾಗಿರುತ್ತದೆ. ಅದಲ್ಲದೇ ಕಮೇಂಟ್ ಮಾಡುವ ಅವಕಾಶವು ಇಲ್ಲಿದೆ. ಬೇರೆ ಬೇರೆ ವೆಬ್‌ ತಾಣಗಳಲ್ಲೂ ಫೋಟೋ ಶೇರ್ ಮಾಡುವ ಮತ್ತೀತರ ಫೀಚರ್‌ಗಳು ಲಭ್ಯವಿವೆ.

ಎಲ್ಲಿ ಲಭ್ಯ..?

ಎಲ್ಲಿ ಲಭ್ಯ..?

ಕ್ಲೌಡ್‌ ಸ್ಟೋರೆಜ್‌ ಆಯ್ಕೆಯನ್ನು ಇಂಟರ್‌ನೆಟ್‌ ಬಳಕೆದಾರರಿಗೆ ಹಲವು ವೆಬ್‌ ತಾಣಗಳು ನೀಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಡ್ರಾಪ್‌ ಬಾಕ್ಸ್‌, ಗೂಗಲ್‌ ಡ್ರೈವ್‌, ಮೈಕ್ರೋಸಾಫ್ಟ್‌ ಒನ್‌ಡ್ರೈವ್‌, ಫ್ಲಿಕ್ಕರ್, ಅಡೋಬ್ ಕ್ರಿಯೆಟಿವ್ ಕ್ಲೌಡ್, ಕೆನಾನ್ ಇರಿಸ್ಟಾದಂತಹ ತಾಣಗಳು ಉತ್ತಮ ಸೇವೆಯನ್ನು ನೀಡುತ್ತಿವೆ. ಈ ಪ್ರಮುಖ ಕ್ಲೌಡ್‌ ಸ್ಟೋರೆಜ್‌ ಸೈಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ನೋಡಿ.

1. ಡ್ರಾಪ್‌ಬಾಕ್ಸ್‌

1. ಡ್ರಾಪ್‌ಬಾಕ್ಸ್‌

ಇಂಟರ್‌ನೆಟ್‌ನಲ್ಲಿ ಹೆಚ್ಚು ಕಾಲ ಕಳೆಯುವವರಿಗೆ ಡ್ರಾಪ್‌ಬಾಕ್ಸ್‌ ಹೆಸರು ಪರಿಚಿತವಾಗಿರುತ್ತದೆ. ಯಾವುದೇ ಮಾದರಿಯ ಡಿಜಿಟಲ್ ಫೈಲ್‌ಗಳನ್ನು ಡ್ರಾಪ್‌ಬಾಕ್ಸ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ. ಅತ್ಯುತ್ತಮ ಫೋಲ್ಡರ್‌ ವ್ಯವಸ್ಥೆ ಲಭ್ಯವಿದ್ದು, ಬಳಕೆದಾರ ಸ್ನೇಹಿಯಾಗಿದೆ. ಆಂಡ್ರಾಯ್ಡ್ ಮತ್ತು iOSನಲ್ಲಿ ಆಪ್‌ ಬಳಸಿಕೊಂಡು ನಿಮ್ಮ ಫೈಲ್‌ಗಳನ್ನು ಅಕ್ಸೆಸ್‌ ಮಾಡಬಹುದು.

2GB ವರೆಗಿನ ಸಂಗ್ರಹಣೆ ಬೇಸಿಕ್‌ ಖಾತೆಯಲ್ಲಿ ಉಚಿತವಾಗಿದೆ. (ಸ್ನೇಹಿತರಿಗೆ 16GB ವರೆಗೆ ಬಳಸಲು ರೆಫರ್ ಮಾಡಿ ಹೆಚ್ಚುವರಿ 500MB ಮೆಮೊರಿಯನ್ನು ಪಡೆಯಬಹುದು) ಡ್ರಾಪ್‌ಬಾಕ್ಸ್‌ ಪ್ಲಸ್‌ ಅಕೌಂಟ್‌ 1TB ವರೆಗೂ ಮೆಮೊರಿ ಸಾಮರ್ಥ್ಯವನ್ನು ನೀಡುತ್ತಿದ್ದು, ಬೆಲೆ ತಿಂಗಳಿಗೆ 9.99 ಡಾಲರ್ ಅಥವಾ ವರ್ಷಕ್ಕೆ 99 ಡಾಲರ್ ಆಗಿದೆ. ಅದಲ್ಲದೇ ಪ್ರತಿ ರೆಫರ್‌ಗೆ ಹೆಚ್ಚುವರಿ 1GB ಮೆಮೊರಿಯನ್ನು (32GB ವರೆಗೆ) ಪಡೆಯಬಹುದು.

2. ಗೂಗಲ್‌ ಡ್ರೈವ್‌

2. ಗೂಗಲ್‌ ಡ್ರೈವ್‌

ಗೂಗಲ್‌ ಡ್ರೈವ್ ಕೇವಲ ಕ್ಲೌಡ್ ಸ್ಟೋರೆಜ್‌ ತಾಣವಾಗಿಲ್ಲ. ಬದಲಿಗೆ ಹಲವು ಆಫೀಸ್ ಆಪ್‌ಗಳಿಗೆ ನೆಲೆಯಾಗಿದೆ. ಭಾಗಶಃ ಎಲ್ಲಾ ಕಚೇರಿಗಳಲ್ಲೂ ಗೂಗಲ್‌ ಡ್ರೈವ್‌ ಬಳಸುತ್ತಾರೆ. ಡ್ರಾಪ್‌ಬಾಕ್ಸ್‌ನಂತೆ ಇಲ್ಲಿಯೂ ಫೈಲ್‌ಗಳನ್ನು ಹಲವು ಬಳಕೆದಾರರೊಂದಿಗೆ ಹಂಚಿಕೊಳ್ಳಬಹುದು, ಮಾರ್ಪಡಿಸಬಹುದಾಗಿದೆ. ಇಲ್ಲಿ ಫೋಟೋಗಳನ್ನು ಸಂಗ್ರಹಿಸಬಹುದು, ಆದರೆ, ಇದು ಹೆಚ್ಚು ಫೋಟೋಗ್ರಾಫಿ ಕೇಂದ್ರಿತ ಕ್ಲೌಡ್ ಸ್ಟೋರೆಜ್ ತಾಣಗಳಂತೆ ಆಕರ್ಷಕವಾಗಿಲ್ಲ ಎನ್ನುವುದು ಸಮಸ್ಯೆ. ಆದ್ದರಿಂದ 16MP ಹೈ ರೆಸಲೂಷನ್‌ ಫೋಟೋಗಳನ್ನು ಸಂಗ್ರಹಿಸಿಡಬಹುದಾದ ಗೂಗಲ್‌ ಫೋಟೋಸ್ ಬಳಸಿ, ಇದು ಅನ್‌ಲಿಮಿಟೆಟಡ್ ಸ್ಟೋರೆಜ್‌ ನೀಡುತ್ತದೆ.

ಗೂಗಲ್‌ ಡ್ರೈವ್‌ನಲ್ಲಿ 15GBವರೆಗೆ ಉಚಿತ ಸಂಗ್ರಹಣೆ ಇದೆ. ಈ ಸ್ಟೋರೆಜ್‌ Gmailನಂತಹ ಇತರ Google ಆಪ್‌ಗಳೊಂದಿಗೆ ಹಂಚಿಕೆಯಾಗಿ ಮೆಮೊರಿ ಕುಂಠಿತಗೊಳ್ಳುತ್ತದೆ. ಫೋಟೋಗಳನ್ನು ಹುಡುಕಲು ಸುಲಭವಾಗುವಂತೆ ಗೂಗಲ್ AI ಬಳಕೆಯ ಆಯ್ಕೆಯನ್ನು ನೀಡಲಾಗಿದೆ. ಗೂಗಲ್‌ ಡ್ರೈವ್‌ನ ಮೆಮೊರಿಯನ್ನು 100GB ವರೆಗೆ ತಿಂಗಳಿಗೆ 1.99 ಡಾಲರ್, 200GB ವರೆಗೆ ತಿಂಗಳಿಗೆ 2.99 ಡಾಲರ್, 2TB ವರೆಗೆ ತಿಂಗಳಿಗೆ 9.99 ಡಾಲರ್, 10TB ವರೆಗೆ ತಿಂಗಳಿಗೆ 99.99 ಡಾಲರ್‌ನ್ನು ನೀಡಿ ವಿಸ್ತರಿಸಿಕೊಳ್ಳಬಹುದು.

3. ಮೈಕ್ರೋಸಾಫ್ಟ್‌ ಒನ್‌ಡ್ರೈವ್‌

3. ಮೈಕ್ರೋಸಾಫ್ಟ್‌ ಒನ್‌ಡ್ರೈವ್‌

ಮೈಕ್ರೋಸಾಫ್ಟ್‌ ಒನ್‌ಡ್ರೈವ್‌ ತನ್ನ ಪ್ರತಿಸ್ಪರ್ಧಿ ಗೂಗಲ್ ಡ್ರೈವ್‌ನಂತೆ ವಿನ್ಯಾಸವನ್ನು ಹೊಂದಿದೆ. ಒನ್‌ಡ್ರೈವ್‌ ವಿಂಡೋಸ್ 10 ಲುಕ್ ಹೊಂದಿದ್ದು, ಬಳಕೆದಾರರಿಗೆ ಅದೇ ಅನುಭವವನ್ನು ನೀಡಲಿದೆ. ಆದ್ದರಿಂದ ನ್ಯಾವಿಗೇಟ್ ಮಾಡುವುದು ಸುಲಭ. ಆದರೂ, ಇದು ಫೋಟೋಗ್ರಾಫರ್‌ಗಳ ಅಭಿರುಚಿಗೆ ತಕ್ಕಂತೆ ವಿನ್ಯಾಸ ಹೊಂದಿಲ್ಲ. ಇಲ್ಲಿ 5GB ವರೆಗೂ ಉಚಿತ ಸ್ಟೋರೆಜ್ ಲಭ್ಯವಿದೆ. ಹೆಚ್ಚುವರಿ 50GB ಮೆಮೊರಿ ಪಡೆಯಲು ತಿಂಗಳಿಗೆ 1.99 ಡಾಲರ್ ವ್ಯಯಿಸಬೇಕು.

1TB ಆಯ್ಕೆ ತಿಂಗಳಿಗೆ 6.99 ಡಾಲರ್ ಅಥವಾ ವಾರ್ಷಿಕ 69.99 ಡಾಲರ್ ಮೌಲ್ಯ ಹೊಂದಿದೆ. ಈ ಪ್ಲಾನ್ ಆಫೀಸ್ 365 ಪ್ಯಾಕೇಜ್ ಒಳಗೊಂಡಿದೆ. ಅದಲ್ಲದೇ ನೀವು 3 ಡಾಲರ್‌ನ್ನು ತಿಂಗಳಿಗೆ ಹೆಚ್ಚುವರಿಯಾಗಿ ಸೇರಿಸಿದರೆ ನಿಮ್ಮ ಆಫೀಸ್ ಲೈಸೆನ್ಸ್‌ 5 ರಿಂದ 10 ಡಿವೈಸ್‌ಗಳಿಗೆ ವಿಸ್ತರಿಸಿಕೊಳ್ಳಬಹುದು ಮತ್ತು ಒಂದು ಗಂಟೆ ಸ್ಕೈಪ್‌ ಉಚಿತದಂತಹ ಅನೇಕ ಆಫರ್‌ಗಳನ್ನು ಪಡೆಯಬಹುದು.

4. ಫ್ಲಿಕ್ಕರ್‌

4. ಫ್ಲಿಕ್ಕರ್‌

ಹೆಚ್ಚಿನ ಕ್ಲೌಡ್ ಸ್ಟೋರೆಜ್‌ ತಾಣಗಳು ಕನಿಷ್ಟ ಉಚಿತ ಮೆಮೊರಿ ಆಯ್ಕೆಗಳನ್ನು ನೀಡುತ್ತಿವೆ. ಆದರೆ, ವೆರಿಝೋನ್‌ ಒಡೆತನದಲ್ಲಿರುವ ಫ್ಲಿಕರ್ ಉಚಿತವಾಗಿ 1TB ಮೆಮೊರಿ ಆಯ್ಕೆಯನ್ನು ನೀಡುತ್ತಿದೆ. ನಿಮಗೆ ಜಾಹೀರಾತು ಮುಕ್ತ ವೇದಿಕೆ ಬೇಕು ಎಂದರೆ ಫ್ಲಿಕ್ಕರ್ ಪ್ರೋ +ಗೆ ಬದಲಾಗಬೇಕು. ಇದಕ್ಕೆ ಮಾಸಿಕ 6 ಡಾಲರ್ ಅಥವಾ ವಾರ್ಷಿಕ 50 ಡಾಲರ್ ವ್ಯಯಿಸಬೇಕು. ಅಲ್ಲದೇ 45 ದಿನಗಳ ಉಚಿತ ಟ್ರಯಲ್‌ ಕೂಡ ನೀವು ಪ್ರಯತ್ನಿಸಬಹುದು.

ನಿಮ್ಮ ಫೋಟೋಗಳನ್ನು ಆಕರ್ಷಕ ಫೋಟೋಸ್ಟ್ರೀಮ್‌ಲ್ಲಿ ಪ್ರದರ್ಶಿಸುವ ಫೀಚರ್‌ ಇಲ್ಲಿದೆ. ಇತರ ಬಳಕೆದಾರರು ನಿಮ್ಮ ಆಕ್ಟಿವಿಟಿಯನ್ನು ಅನುಸರಿಸಬಹುದು ಮತ್ತು ನಿಮ್ಮ ಫೋಟೋಗಳಿಗೆ ಕಮೆಂಟ್ ಮಾಡಬಹುದು. ಅಥವಾ ನಿಮ್ಮ ಫೋಟೋಗಳನ್ನು ಖಾಸಗಿಯಾಗಿಯೂ ಇಡಬಹುದಾಗಿದೆ. ಇದರಿಂದ ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಗೆ ಒಂದು ಸಾಮಾಜಿಕ ನೆಟ್‌ವರ್ಕ್ ಸಿಗುತ್ತದೆ. ಫ್ಲಿಕ್ಕರ್‌ನ್ನು ಕೇವಲ ಶೇಖರಣೆಯ ಆಯ್ಕೆ ಮಾಡದೇ ನಿಮ್ಮ ಫೋಟೋಗಳನ್ನು ಆಕರ್ಷಕವಾಗಿ ಪ್ರದರ್ಶಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಇಲ್ಲಿ ಕೇವಲ JPEG, GIF ಮತ್ತು PNG ಚಿತ್ರಗಳನ್ನು ಅಪ್‌ಲೋಡ್ ಮಾಡಿ. RAW ಫೈಲ್‌ಗಳನ್ನು ಅಪ್‌ಲೋಡ್‌ ಮಾಡಲು ಬಯಸಿದರೆ ಡ್ರಾಪ್‌ಬಾಕ್ಸ್‌ ಉತ್ತಮ ಆಯ್ಕೆ.

5. ಅಡೋಬ್‌ ಕ್ರಿಯೆಟಿವ್ ಕ್ಲೌಡ್‌

5. ಅಡೋಬ್‌ ಕ್ರಿಯೆಟಿವ್ ಕ್ಲೌಡ್‌

ಅಡೋಬ್‌ ಕ್ರಿಯೆಟಿವ್ ಕ್ಲೌಡ್‌ ಅನೇಕ ಕ್ಲೌಡ್ ಆಧಾರಿತ ಸೇವೆಗಳನ್ನು ಫೋಟೋಗ್ರಾಫರ್‌ಗಳಿಗಾಗಿಯೇ ನೀಡುತ್ತಿದೆ. ಆಕರ್ಷಕ ಫೋಟೋ ಗ್ಯಾಲರಿಗಳೊಂದಿಗೆ ಛಾಯಾಗ್ರಹಣ-ಆಧಾರಿತ ಸಂಗ್ರಹವನ್ನು ಒದಗಿಸುತ್ತದೆ. ಗ್ರೂಪ್‌ ಲೈಬ್ರರಿ ಫೀಚರ್ ಲಭ್ಯವಿದ್ದು, ಶೇರ್ ಮಾಡಿದ ಫೋಲ್ಡರ್‌ಗೆ ಸ್ನೇಹಿತರು ಫೋಟೋಗಳನ್ನು ಸೇರಿಸಬಹುದು. ಮತ್ತು ಯಾವುದೇ ಫೋಟೋವನ್ನು ಖಾಸಗಿಯಾಗಿಯೂ ಮಾಡಬಹುದು. ಲೈಟ್‌ರೂಮ್ ಮತ್ತು ಎಲಿಮೆಂಟ್ಸ್‌ಗಳನ್ನು ಒಳಗೊಂಡಿದೆ. ಅಗತ್ಯವಿದ್ದಾಗ ಫೋಟೋಗಳನ್ನು ಎಡಿಟ್ ಮಾಡಬಹುದು.

ವಿಂಡೋಸ್, ಮ್ಯಾಕ್, iOS ಮತ್ತು ಆಂಡ್ರಾಯ್ಡ್‌ ಆಪ್‌ಗಳೊಂದಿಗೆ ಅಪ್‌ಲೋಡ್ ಮಾಡುವುದು ಸುಲಭವಾಗಿದೆ. RAW ಫೈಲ್‌ಗಳಿಗೂ ಬೆಂಬಲಿಸುತ್ತದೆ.

ಅಡೋಬ್‌ ಕ್ರಿಯೆಟಿವ್‌ ಕ್ಲೌಡ್‌ನಲ್ಲಿ 1TB ಸ್ಟೋರೆಜ್ ಪಡೆಯಲು ವರ್ಷಕ್ಕೆ 119.88 ಡಾಲರ್‌ ನೀಡಬೇಕು. ಇದರಲ್ಲಿ ನೀವು ಲೈಟ್‌ರೂಮ್‌ ಸಿಸಿಯನ್ನು ಪಡೆಯುತ್ತಿರಿ. ನೀವು ಕಡಿಮೆ ಸ್ಟೋರೆಜ್ ಸಾಮರ್ಥ್ಯ ಆಯ್ಕೆ ಮಾಡಿಕೊಂಡು (20GB)ಫೋಟೋಶಾಪ್ ಸಿಸಿಯನ್ನು ಉಚಿತವಾಗಿ ಪಡೆಯಬಹುದು.

6. ಕೆನಾನ್‌ ಐರಿಸ್ಟಾ

6. ಕೆನಾನ್‌ ಐರಿಸ್ಟಾ

ಫ್ಲಿಕ್ಕರ್ ಮತ್ತು ಅಡೋಬ್ ಕ್ರಿಯೆಟಿವ್ ಕ್ಲೌಡ್‌ಗೆ ಎದುರಾಳಿಯಾಗಿ ಐರಿಸ್ಟಾವನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಫೋಟೋಗಳನ್ನು ಪ್ರದರ್ಶಿಸಬೇಕಾದರೆ ನಿಮಗೆ ಗ್ಯಾಲರಿ ಚಾಲಿತ ಇಂಟರ್‌ಫೇಸ್ ನೀಡುತ್ತದೆ. JPEG ಮತ್ತು ಸಾಮಾನ್ಯ RAW ಫೈಲ್ ಫಾರ್ಮ್ಯಾಟ್‌ಗಳನ್ನು ಸ್ವೀಕರಿಸುತ್ತದೆ. ಕ್ಯಾಮೆರಾ, ಲೆನ್ಸ್‌, ವರ್ಷ, ಟ್ಯಾಗ್ಸ್‌, EXIF ಡಾಟಾದನ್ವಯ ನಿಮ್ಮ ಫೋಟೋಗಳನ್ನು ಫಿಲ್ಟರ್ ಮಾಡುವ ಆಯ್ಕೆ ಇದೆ.

ಸೋಷಿಯಲ್ ಮೀಡಿಯಾವನ್ನು ಅದ್ಭುತವಾಗಿ ಅನುಷ್ಟಾನಗೊಳಿಸಿದ್ದು, ಇದರಿಂದ ನೀವು ಫೇಸ್‌ಬುಕ್‌ ಅಥವಾ ಬೇರೆ ಸಾಮಾಜಿಕ ಮಾಧ್ಯಮಗಳಿಗೆ ಶೇರ್ ಮಾಡಿ, ಲೈಕ್ಸ್‌ ಮತ್ತು ಕಮೇಂಟ್‌ಗಳನ್ನು ಶೇರ್ ಮಾಡಬಹುದು. ಐರಿಸ್ಟಾದ ಉಚಿತ 15GB ಸಂಗ್ರಹವನ್ನು 100GB, 500GB, 1TB, 2TB, 5TB ಅಥವಾ 10TBಗೆ ವಿಸ್ತರಿಸಬಹುದಾಗಿದ್ದು, ತಿಂಗಳಿಗೆ 2.25 ಡಾಲರ್‌ನಿಂದ 129.99 ಡಾಲರ್ ಪಾವತಿಸಬೇಕಾಗುತ್ತದೆ.

Most Read Articles
Best Mobiles in India

English summary
Best cloud storage 2018: Top options to keep your photos safe. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more