ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿರಬೇಕಾದ 5 ಬೆಸ್ಟ್ 'ಕ್ರಾಫ್ಟ್ ಆಪ್ಸ್'!
ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಎಷ್ಟು ಆಪ್‌ಗಳನ್ನು ನೀವು ಡೌನ್‌ಲೋಡ್ ಮಾಡಿದ್ದೀರಾ ಎಂಬುದು ಮುಖ್ಯವಲ್ಲ. ಬದಲಾಗಿ ಆ ಆಪ್‌ಗಳಿಂದ ನೀವು ಎಷ್ಟು ಪ್ರಯೋಜನ ಪಡೆಯುತ್ತಿದ್ದೀರಾ ಎಂಬುದು ಮುಖ್ಯವಾಗುತ್ತದೆ. ಇಂತಹ ಪ್ರಯೋಜನ ಆಪ್‌ಗಳಿಗೆ ಮತ್ತೊಂದು ಉದಾಹರಣೆ ಎಂದರೆ, ಕರಕುಶಲ ವಸ್ತುಗಳ ತಯಾರಿಯಲ್ಲಿ ತೊಡಗಿಸಿಕೊಳ್ಳಲು ಇರುವ ಮೊಬೈಲ್ ಆಪ್‌ಗಳು.!
ಹೌದು, ಹೊಲಿಗೆ, ತೋಟಗಾರಿಕೆ, ಚಿತ್ರಕಲೆ, ಶಿಲ್ಪಕಲೆ, ಪೇಪರ್ ಕಟಿಂಗ್, ಸಂಗೀತ, ನೃತ್ಯ, ನಾಟಕ, ಕೃಷಿ, ಕುಂಬಾರಿಕೆ, ಚಮ್ಮಾರಿಕೆ, ಕಸೂತಿ ಮತ್ತು ಇನ್ನಿತರ ಕಲೆಗಳನ್ನು ಕಲಿಯುವ ಹಂಬಲ ಹಲವರಿಗೆ ಇರುತ್ತದೆ. ಆದರೆ, ಈಗ ಇವನ್ನು ಕಲಿಸುವವರು ಯಾರು ಎಂಬ ಪ್ರಶ್ನೆ ಹುಟ್ಟಿದ್ದಾಗ ಸಿಗುವ ಉತ್ತರವೇ ಮೊಬೈಲ್ ಆಪ್‌ಗಳು ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.

ಕ್ರಾಫ್ಟ್ ಶಿಕ್ಷಣ ಕಲಿಕಾ ಕೈಪಿಡಿಯಾಗಿ ಅಥವಾ ಆರಂಭಿಕ ಕಲಿಕೆಗಾಗಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಕೆಲವುಆಪ್‌ಗಳು ಸಿಗುತ್ತವೆ. ಸೃಜನಾತ್ಮಕವಾಗಿ ಪೇಪರ್ ಕತ್ತರಿಸುವ ವಿಧಾನದಿಂದ ಹಿಡಿದು ಚಿತ್ರಕಲೆ, ಶುಭಾಶಯ ಪತ್ರ, ಗಿಫ್ಟ್ ಬಾಕ್ಸ್, ನ್ಯೂಸ್ ಪೇಪರ್ ಕ್ರಾಫ್ಟ್ ಹೇಳಿಕೊಡುವ ಆಪ್‌ಗಳು ಸಹ ಇವೆ. ಇಂತಹುಗಳನ್ನು ಪರಿಚಯಿಸುವ ಸಲುವಾಗಿಯೇ ನಮ್ಮ ಇಂದಿನ ಲೇಖನ.

ಆರ್ಟ್ಸ್ ಅಂಡ್ ಕ್ರಾಫ್ಟ್ಸ್ | Arts and Crafts
ಈ ಆಪ್ ಅನ್ನು Freeware Software ಎಂಬ ಶೈಕ್ಷಣಿಕ ಸಂಸ್ಥೆ ಅಭಿವೃದ್ದಿಪಡಿಸಿದೆ. ಸೃಜನಾತ್ಮಕವಾದ ಕೆಲವು ಕಲೆಗಳನ್ನು ಮತ್ತು ಕ್ರಾಫ್ಟ್‌ಗಳನ್ನು ಈ ಆಪ್ ಕಲಿಸುತ್ತದೆ. ಕ್ರಾಫ್ಟ್ ಟ್ಯುಟೋರಿಯಲ್ಸ್‌ಗಳು ಪೇಪರ್ ಕತ್ತರಿಸುವ ವಿಧಾನವನ್ನು, ಪೇಪರ್ ಬಳಸಿಕೊಂಡು ವಿವಿಧ ಆಕಾರಗಳನ್ನು ಮಾಡುವ ಕಲೆಗಳನ್ನು ಮತ್ತು ಇತರೆ ಕಲೆಗಳನ್ನು ಕಲಿಸುತ್ತವೆ.

ಕ್ರಾಫ್ಟ್ಸ್ ಫಾರ್ ಕಿಡ್ಸ್ | Craft For Kids
ಮಕ್ಕಳಿಗೆ ಖುಷಿಕೊಡುವ ಮತ್ತು ಸುಲಭವಾಗಿ ಮಾಡುವ ಕರಕುಶಲ ಕಲೆಗಳನ್ನು ಕಲಿಸುವ ಆಪ್ ಇದಾಗಿದೆ. ನಮ್ಮ ಸುತ್ತಲು ಇರುವ ವಸ್ತುಗಳನ್ನು ಹಣ ಕೊಟ್ಟು ಖರೀದಿಸಬೇಕಾದ ಅನಿವಾರ್ಯತೆಯನ್ನು ಈ ಆಪ್ ಮರೆಮಾಡಲಿದೆ. ಪೆನ್ಸಿಲ್ ಕ್ರಾಫ್ಟ್ , ಪೇಪರ್ ಕ್ರಾಫ್ಟ್, ಪೇಟಿಂಗ್, ಒರಿಗಾಮಿ ಮತ್ತು ಗೊಂಬೆಗಳನ್ನು ತಯಾರಿಸುವ ವಿಧಾನವನ್ನು ಆಪ್‌ನಲ್ಲಿ ನೋಡಬಹುದು.

ಕ್ರಾಫ್ಟಿ | Craftsy
ಹೊಲಿಗೆ, ಕಸೂತಿ, ಕೇಕ್ ಅಲಂಕಾರ, ಚಿತ್ರಕಲೆ, ಪೇಪರ್ ಕಟಿಂಗ್, ತೋಟಗಾರಿಕೆ, ಅಡುಗೆ ಮತ್ತು ಮುಂತಾದ ಕಲಾ ವಿಷಯಗಳನ್ನು ಕುರಿತು ಕಲಿಯಬಹುದಾದ ಆಪ್ ಇದಾಗಿದೆ. ಕ್ರಾಫ್ಟ್‌ಗಳ ಕಲಿಕೆಗೆ ಅನೇಕ ವಿಡಿಯೋ ಹಾಗೂ ಚಿತ್ರಗಳನ್ನು ಹೊಂದಿರುವ ಈ ಆಪ್ ಅನ್ನು ಕಂಟೆಂಟ್ ರೂಪಿಸುವುದರಲ್ಲಿ ಪ್ರಮುಖ ಸ್ಥಾನದಲ್ಲಿ Craftsy ಎಂಬ ಕಂಪೆನಿ ರೂಪಿಸಿದೆ.

ಕ್ರಾಫ್ಟ್ ಸ್ಮಾರ್ಟ್ | CraftSmart
ಒಂದು ಸಾವಿರಕ್ಕೂ ಅಧಿಕ ಹೊಸದಾದ, ಆಸಕ್ತಿದಾಯಕ ಮತ್ತು ಸುಲಭವಾಗಿ ಮಾಡುವ ಕೆಲವು ಕ್ರಾಫ್ಟ್‌ಗಳನ್ನು ಕಲಿಸುವ ಆಪ್ ಇದಾಗಿದೆ. ಫ್ಯೂಚರ್ ಟುಡೆ ಇಂಕ್ ಎಂಬ ಕಂಪೆನಿ ರಚಿಸಿರುವ ಈ ಆಪ್‌ನಲ್ಲಿ ಚಿತ್ರಕಲೆ, ಪೇಪರ್ ಕಟಿಂಗ್, ಶೈಕ್ಷಣಿಕ ವಿಷಯಗಳನ್ನೊಳಗೊಂಡ ಕ್ರಾಫ್ಟ್‌ಗಳು ಹಾಗೂ ಆಲಂಕಾರಿಕ ಕಲೆ ಮುಂತಾದ ಕ್ರಾಫ್ಟ್‌ಗಳನ್ನು ಕಲಿಯಬಹುದಾಗಿದೆ.

ಇಸಿ ರಿಸೈಕಲ್ ಕ್ರಾಫ್ಟ್ | Easy Recycled Craft
ಬಳಸಿದ ವಸ್ತುಗಳನ್ನು ಮರುಬಳಕೆ ಮಾಡಿಕೊಂಡು ಆಲಂಕಾರಿಕ ವಸ್ತಗಳನ್ನು ತಯಾರಿಸುವುದನ್ನು ಈ ಇಸಿ ರಿಸೈಕಲ್ ಕ್ರಾಫ್ಟ್ ಆಪ್ ಕಲಿಸಿಕೊಡುತ್ತದೆ. ಈ ಆಪ್‌ನಲ್ಲಿ .ನೋಡುತ್ತ ಕೇಳುತ್ತಲೇ ಹಲವಾರು ಕರಕುಶಲ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದು. ಮನೆಯ ಆಲಂಕಾರಿಕ ವಸ್ತುಗಳನ್ನು ತಯಾರಿಸುವದನ್ನು ಸಹ ಈ ಆಪ್ ಮೂಲಕ ಕಲಿಯಬಹುದು.


Click it and Unblock the Notifications








