ಬೇಸಿಗೆ ರಜೆಯಲ್ಲಿರುವ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಆ್ಯಪ್‌ಗಳು ಸೂಕ್ತ!
ಪಿಯುಸಿ ರಿಸಲ್ಟ್ ಬಂದಾಯ್ತು ಸಿಇಟಿಗಾಗಿ ಸಿದ್ಧತೆ ನಡೆಸ್ತಾ ಇದ್ದೀರಾ? ಎಸ್‌ಎಸ್‌ಎಲ್‌ಸಿ ಎಕ್ಸಾಂ ಬರೆದಾಯ್ತು ಮುಂದೇನು ಅಂತಾ ಯೋಚನೇ ಮಾಡ್ತಾ ಇದ್ದೀರಾ? ಈಗಿನ ಕಾಲಘಟ್ಟದಲ್ಲಿ ನೀವು ಚಿಂತಿಸಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಎಲ್ಲಾ ಮಾಹಿತಿಯನ್ನು ನೀಡುವ ಹಲವು ಎಜುಕೇಶನ್ ಆ್ಯಪ್‌ಗಳು ಪ್ರಸಿದ್ಧಿಯನ್ನು ಪಡೆದುಕೊಂಡಿವೆ.
ಹೌದು, ವಿದ್ಯಾರ್ಥಿಗಳ ಬದುಕಿಗೆ ಪೂರಕವಾಗುವ, ಅವರ ಶೈಕ್ಷಣಿಕ ವಿಷಯಗಳಿಗೆ ಬಲ ನೀಡುವ ಇ-ಲರ್ನಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟಿವೆ. ಕೊರೊನಾ ನಂತರ ಇ-ಲರ್ನಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿವೆ. ಈ ಆ್ಯಪ್‌ಗಳು ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ಹಾಗಾದ್ರೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಸೂಕ್ತವಾಗುವ ಬೆಸ್ಟ್ ಎಜುಕೇಶನ್ ಆಂಡ್ ಲರ್ನಿಂಗ್ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಿಡ್ಸ್‌ಲಿಪಿ
ಜನಪ್ರಿಯ ಎಜುಕೇಶನ್ ಅಪ್ಲಿಕೇಶನ್‌ಗಳಲ್ಲಿ ಕಿಡ್ಸ್‌ಲಿಪಿ ಕೂಡ ಒಂದಾಗಿದೆ. ಇದು ಹೆಸರೇ ಸೂಚಿಸುವಂತೆ ತನ್ನ ಪ್ಲಾಟ್‌ಪಾರ್ಮ್‌ನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದ ವರ್ಣಮಾಲಾ, ಗುಜರಾತಿ ಕಾಕ್ಕೊ, ಸಂಸ್ಕೃತ ವರ್ಣಮಾಲಾ, ತೆಲುಗು ವರ್ಣಮಾಲಾ ಸೇರಿದಂತೆ ಭಾರತೀಯ ಭಾಷೆಗಳ ವರ್ಣಮಾಲೆಯನ್ನು ಕಲಿಯುವುದಕ್ಕೆ ಸಹಾಯ ಮಾಡಲಿದೆ. ಇದರಲ್ಲಿ ಶಿಕ್ಷಕರು ಅಥವಾ ಶಾಲೆಗಳಿಗೆ ಡಿಜಿಟೈಸ್ ಮಾಡಲು ಹಲವು ಸುಲಭ ಮಾರ್ಗಗಳನ್ನು ಒದಗಿಲಿಸಲಿದೆ. ಈ ಅಪ್ಲಿಕೇಶನ್ iOS ಮತ್ತು Androidನಲ್ಲಿ ಉಚಿತ ಡೌನ್‌ಲೋಡ್‌ಗೆ ಲಭ್ಯವಿದೆ.
ಅನಾಕಡೆಮಿ (Unacademy)
ವಿದ್ಯಾರ್ಥಿಗಳಿಗೆ ಅತ್ಯುತ್ತಮ ಇ-ಲರ್ನಿಂಗ್‌ಗೆ ಅವಕಾಶ ನೀಡುವ ಆ್ಯಪ್‌ಗಳಲ್ಲಿ ಅನಾಕಾಡೆಮಿ ಕೂಡ ಒಂದಾಗಿದೆ. ಇದು ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವವರಿಗೆ ಸಹಾಯ ಮಾಡಲಿದೆ. ಇದರಲ್ಲಿ ಯುಎಸ್‌ಸಿಯಿಂದ ಜೆಐ, ನೀಟ್, ಎಸ್‌ಎಸ್‌ಸಿ, ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಸಹಾಯ ಮಾಡುವ ಹಲವು ಕೋರ್ಸ್‌ಗಳನ್ನು ಕಲಿಯಬಹುದಾಗಿದೆ. ಜೊತೆಗೆ ದೈನಂದಿನ ಲೈವ್ ತರಗತಿಗಳು, ಅಭ್ಯಾಸ ಮತ್ತು ಪರಿಷ್ಕರಣೆ ಮತ್ತು ಅಣಕು ಪರೀಕ್ಷೆಗಳೊಂದಿಗೆ ಸಂವಹನಗಳನ್ನು ನಡೆಸುವುದಕ್ಕೆ ಸಹಾಯಕವಾಗಿದೆ.

ವೇದಾಂತು (Vendantu)
ಆನ್‌ಲೈನ್ ಮೂಲಕ ಕಲಿಯುವುದಕ್ಕೆ ನೀವು ಆಯ್ಕೆ ಮಾಡಬಹುದಾದ ಆ್ಯಪ್ ಎಂದರೆ ಅದು ವೇದಾಂತು ಆ್ಯಪ್ ಆಗಿದೆ. ಇದು 1 ರಿಂದ 12 ನೇ ತರಗತಿಯ ಮಕ್ಕಳಿಗೆ ಬೇಕಾದ ಶೈಕ್ಷಣಿಕ ಕೋರ್ಸ್‌ಗಳು ಮತ್ತು ಕೋಡಿಂಗ್ ಅನ್ನು ಒಳಗೊಂಡಿದೆ. ಇದರಲ್ಲಿ ನೀವು ಲೈವ್ ಕ್ಲಾಸ್‌ಗಳು, ಜೆಐ, ನೀಟ್, ಮತ್ತು ಎನ್‌ಡಿಎ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದಾಗಿದೆ. ಎಲ್ಲಾ ಲೈವ್ ತರಗತಿಗಳಿಗೆ ಪ್ರವೇಶ ಉಚಿತವಿದೆ. ಆದರೆ ವೇದಾಂತು ವಿ ಪ್ರೊಕ್ ಆಯ್ಕೆಯಲ್ಲಿ ನೀವು ಹೆಚ್ಚಿನ ವಿಚಾರಗಳ ಬಗ್ಗೆ ಕಲಿಯುವುದಕ್ಕೆ ತಿಂಗಳಿಗೆ 4,000 ರೂ.ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಟಾಪರ್ (Toppr)
ಐಸಿಎಸ್‌ಐ, ಸಿಬಿಎಸ್‌ಇ ತರಗತಿಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಇದು ಸೂಕ್ತವಾದ ಆ್ಯಪ್ ಆಗಿದೆ. 8 ನೇ -12 ನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ತರಗತಿಗಳನ್ನು ಈ ಆ್ಯಪ್‌ನಲ್ಲಿ ಅಟೆಂಡ್ ಮಾಡಬಹುದು. ಅಲ್ಲದೆ ಪರೀಕ್ಷೆಗಳು ಮತ್ತು ಅನುಮಾನಗಳನ್ನು ಬಗೆ ಹರಿಸುವುದಕ್ಕೆ ಈ ಅಪ್ಲಿಕೇಶನ್‌ನಲ್ಲಿ ಅವಕಾಶವನ್ನು ನೀಡಲಾಗಿದೆ. ಇದರೊಂದಿಗೆ ಜೆಐ ಮೇನ್, ಜೆಐಐ ಅಡ್ವಾನ್ಸ್ಡ್, ಒಲಿಂಪಿಯಾಡ್, ಏಮ್ಸ್, ಎನ್‌ಡಿಎ, ಮತ್ತು ಸಿಎ ಫೌಂಡೇಶನ್‌ನಂತಹ ವಿವಿಧ ಪರೀಕ್ಷೆಗಳಿಗೆ ಆಕಾಂಕ್ಷಿಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಈ ಅಪ್ಲಿಕೇಶನ್ ಮಾಡಲಿದೆ. ಇದರ ಮೂಲ ಚಂದಾದಾರಿಕೆಯು 30,000 ರೂ. ಆಗಿದೆ.

ಡೌಟ್ನಟ್ (Doubtnut)
ಹೆಸರೇ ಸೂಚಿಸುವಂತೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗ್ತಿರುವವರ ಅನುಮಾನಗಳನ್ನು ನಿವಾರಿಸುವ ಕಾರ್ಯವನ್ನು ಇದು ಮಾಡಲಿದೆ. ಇದರಲ್ಲಿ ನೀವು ಯಾವುದೇ ಸಮಸ್ಯೆಯ ಚಿತ್ರವನ್ನು ಅಪ್ಲೋಡ್ ಮಾಡಿದರೆ ಕೂಡಲೇ ಉತ್ತರವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ 6 ರಿಂದ 12 ನೇ ತರಗತಿ ಮತ್ತು ಐಐಟಿ-ಜೆಇಐ ತಯಾರಿಕೆಯಲ್ಲಿ ಎನ್‌ಸಿಆರ್‌ಟಿ ಕೋರ್ಸ್‌ಗಳನ್ನು ಡೌಟ್‌ನಟ್ ಒಳಗೊಂಡಿದೆ. ಅಧ್ಯಯನ ಸಾಮಗ್ರಿಗಳು ಮತ್ತು ಕ್ರ್ಯಾಶ್ ಕೋರ್ಸ್‌ಗಳನ್ನು ಸಹ ನೀಡಲಿದೆ.
ಬೈಜುಸ್ (BYJU's)
BYJU's ಭಾರತದಲ್ಲಿ ಅತ್ಯಂತ ಜನಪ್ರಿಯ ಆನ್‌ಲೈನ್ ಲರ್ನಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಶಾಲಾ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕರಿಸಿದರೂ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಐ / ನೀಟ್, ಯುಪಿಎಸ್‌ಸಿ ಮತ್ತು ಬ್ಯಾಂಕ್ ಪಿಒಗಳ ಕೋರ್ಸ್‌ಗಳನ್ನು ಸಹ ನೀಡಲಿದೆ. ಆದರೆ ಈ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ನೀವು 3,500 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಬೈಜುಸ್ 4 ರಿಂದ 12 ನೇ ತರಗತಿಯ ಮಕ್ಕಳಿಗೆ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಹಲವು ಉಪಯುಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.


Click it and Unblock the Notifications








