ಶಿಲೆಗಳು ಸಂಗೀತವ ಹಾಡಿವೆ ಅಲ್ಲ.. ಆಪ್‌ಗಳು ಹಾಡುತ್ತಿವೆ..! ಕೇಳಿ ಆನಂದಿಸಿ..!

  By Avinash
  |

  ನೂರು ಜನ್ಮಕೂ ನೂರಾರು ಜನ್ಮಕೂ, ತೂಗು ಮಂಚದಲ್ಲಿ ಕೂತು ಈ ಎಲ್ಲಾ ಹಾಡುಗಳನ್ನು ಮರೆಯಲು ಸಾಧ್ಯವೇ. ಒಂಟಿತನ ಕಾಡಿದಾಗ ನಮಗೆ ಸಾಂತ್ವನಕ್ಕಾಗಿ ಇರುವ ಅದ್ಭುತ ಅಸ್ತ್ರವೇಂದರೆ ಸಂಗೀತ. ಒಂಟಿತನ, ದುಃಖ, ಸಂತೋಷ ಎಲ್ಲದರಲ್ಲೂ ಭಾಗಿಯಾಗುವುದು ಸಂಗೀತ. ಭಾರತದಲ್ಲಿ ಸಂಗೀತದಿಂದಲೆ ಮಳೆಯನ್ನು ತರಿಸಿರುವುದು, ದೀಪಗಳನ್ನು ಬೆಳಗಿಸಿರುವ ಕಥೆಗಳಿವೆ. ಸಂಗೀತದಲ್ಲಿ ಹಲವು ವಿಧಗಳಿದ್ದು, ಕರ್ನಾಟಿಕ್, ಹಿಂದುಸ್ಥಾನಿ, ಪಾಪ್, ಜಾಜ್ಗಳೆಂದು ವಿಂಗಡಿಸಿದ್ದಾರೆ.

  90ರ ದಶಕದ ಕಡೆ ಹಿಂತಿರುಗಿ ನೋಡಿದರೆ ಸಂಗೀತದ ಆಸ್ವಾದ ಸವಿಯಲು ಗ್ರಾಮೋಪೋನ್ ಅವಶ್ಯಕತೆಯಿತ್ತು. ಆದರೆ, ಈಗ ಎಲ್ಲರ ಕೈಯಲ್ಲೂ ಮೊಬೈಲ್‌ ಇರುವುದರಿಂದ ಎಲ್ಲ ಮೊಬೈಲ್‌ಗಳು ಗ್ರಾಮೋಫೋನ್‌ಗಳಾಗಿವೆ. ಸಂಗೀತಕ್ಕೂ ತಂತ್ರಜ್ಞಾನಕ್ಕೂ ಬಹಳ ಅವಿನಾಭಾವ ಸಂಬಂಧವಿದೆ.

  ಶಿಲೆಗಳು ಸಂಗೀತವ ಹಾಡಿವೆ ಅಲ್ಲ.. ಆಪ್‌ಗಳು ಹಾಡುತ್ತಿವೆ..! ಕೇಳಿ ಆನಂದಿಸಿ..!

  ಸದ್ಯದಲ್ಲಿ ಇಂಟರ್‌ನೆಟ್ ದರ ಅಗ್ಗವಾಗಿದ್ದು, ಡಾಟಾ ಬಳಕೆ ಹೆಚ್ಚುತ್ತಿದೆ. ಸಂಗೀತ ಆಸ್ವಾದಿಸಲು ಇದ್ದ ಅಡೆತಡೆಗಳೆಲ್ಲ ಹೋಗಿ, ಮೆಮೊರಿ ಕಾರ್ಡ್‌ನಲ್ಲಿ ತುಂಬಿಸಿರುತ್ತಿದ್ದ ಹಾಡುಗಳು ಇಂದು ನೇರವಾಗಿ ಆಪ್ಸ್ ಮೂಲಕ ಆನ್‌ಲೈನ್ ನಿಂದ ಸ್ಟ್ರೀಮ್ ಆಗ್ತಿವೆ. ನಿಮ್ಮ ಸಂಗೀತ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಲು ಬಂದಿರುವ ಮ್ಯೂಸಿಕ್ ಆಪ್‌ಗಳಲ್ಲಿ ಯಾವುದು ಬೆಸ್ಟ್ ಎಂದು ತಿಳಿದುಕೊಳ್ಳಲು ಮುಂದೆ ಓದಿ. ಟಾಪ್ ಮ್ಯೂಸಿಕ್‌ ಆಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನ ಪಟ್ಟಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್ ಪ್ಲೇ ಮ್ಯೂಸಿಕ್ Google Play Music

  ಪ್ರಮುಖ ಸರ್ಚ್ ಇಂಜಿನ್ ಗೂಗಲ್ ಭಾರತೀಯ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಭಾಗವಾಗಲು ಪ್ರಯತ್ನಿಸುತ್ತಿದೆ. ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಗೂಗಲ್ ಪ್ಲೇ ಮ್ಯೂಸಿಕ್ ಆಪ್ ಪ್ರೀಲೋಡೆಡ್ ಆಗಿರುವುದರಿಂದ ಯಾರಾದರೂ ಬಳಸಬಹುದಾಗಿದೆ. ಇದು ಉಚಿತ ಮತ್ತು ಪ್ರಿಮಿಯಮ್ ಆಯ್ಕೆಗಳನ್ನು ಹೊಂದಿದ್ದು, ಪ್ರಾದೇಶಿಕ ಭಾಷೆಯ ಹಾಡುಗಳ ಜೊತೆ ಅಂತಾರಾಷ್ಟ್ರೀಯ ಹಾಡುಗಳನ್ನು ಆನಂದಿಸಬಹುದಾಗಿದೆ.

  ವಿಂಕ್ Wynk

  ಭಾರತದ ಅತಿದೊಡ್ಡ ನೆಟ್ ವರ್ಕ್ ಪೂರೈಕೆದಾರ ಆಗಿರುವ ಏರ್ ಟೇಲ್ ವಿಂಕ್ ಮ್ಯೂಸಿಕ್ ಆಪ್ ಅಭಿವೃದ್ಧಿಪಡಿಸಿದ್ದು, ಎಲ್ಲಾ ಬಳಕೆದಾರರಿಗೂ ಲಭ್ಯವಿದೆ. ಭಾರತ ಮತ್ತು ಅಂತಾರಾಷ್ಟ್ರೀಯ ಸಂಗೀತದ 2.6 ಮಿಲಿಯನ್ ಹಾಡುಗಳನ್ನು ಹೊಂದಿರುವ ವಿಂಕ್, ಉತ್ತಮ ಗುಣಮಟ್ಟದ ಮ್ಯೂಸಿಕ್ ಸ್ಟ್ರೀಮಿಂಗ್ ಸೌಲಭ್ಯ ನೀಡುತ್ತಿದೆ. ಬಾಲಿವುಡ್, ಪಾಪ್, ರಾಕ್, ಮೆಟಲ್, ಭಾಂಗ್ರಾ, ರೋಮ್ಯಾಂಟಿಕ್, ಡೇವೋಷಿನಲ್, ಪಾರ್ಟಿ ಸಾಂಗ್ ಗಳನ್ನು ಹೊಂದಿದೆ.

  ಸಾವನ್ Saavn

  2007ರಲ್ಲಿಯೇ ಭಾರತದಲ್ಲಿ ಸ್ಮಾರ್ಟ್ ಪೋನ್ ಗ್ರಾಹಕರಿಗೆ ಸಂಗೀತ ತಲುಪಿಸುವ ಉದ್ದೇಶದೊಂದಿಗೆ ಪ್ರಾರಂಭವಾಗಿದ್ದು ಸಾವನ್ ಆಪ್. ಈ ಆಪ್ ನಿಂದ ಬಳಕೆದಾರರು ಅನ್ ಲಿಮಿಟೆಡ್ ಆಗಿ ಯಾವುದೇ ಪ್ರಾದೇಶಿಕ ಭಾಷೆಯ ಅಥವಾ ಯಾವುದೇ ವಿಧದ ಹಾಡುಗಳನ್ನು ಆಲಿಸಬಹುದಾಗಿದೆ. 30 ಮಿಲಿಯನ್ ಹಾಡುಗಳು ಸಾವನ್ ಆಪ್ ನಲ್ಲಿದ್ದು, ಲೇಟೆಸ್ಟ್ ಮ್ಯೂಸಿಕ್ ಮತ್ತು ಎಕ್ಸ್ ಕ್ಲೂಸಿವ್ ಕಂಟೆಂಟ್ ಗಳನ್ನು ಆಪ್ ನೀಡುತ್ತಿದೆ. ಈ ಆಪ್ ನಲ್ಲಿ ಸಂಗೀತ ವಿಧದ, ಕಲಾವಿದನ ಅಥವಾ ನಮ್ಮ ಮೂಡ್ ಗೆ ತಕ್ಕಂತೆ ಪ್ಲೇ ಲಿಸ್ಟ್ ಮಾಡ್ಕೊಳ್ಳಬಹುದು.
  ಸಂಗೀತವಷ್ಟೇ ಅಲ್ಲದೇ ಬೃಹತ್ ಪ್ರಮಾಣದಲ್ಲಿ ಪೋಡ್ ಕಾಸ್ಟ್ಸ್, ಡ್ರಾಮಾ, ಮಿಸ್ಟರಿ, ಕಾಮಿಡಿ, ಸ್ಪೋರ್ಟ್ಸ್ ಗೆ ಸಂಬಂಧಿಸಿದ ರೇಡಿಯೋ ಚಾನೆಲ್ಸ್ ಅನ್ನು ಆಪ್ ಒಳಗೊಂಡಿದೆ. ನೀವು 64Kbps ನಿಂದ 128 Kbpsವರೆಗಿನ ಗುಣಮಟ್ಟದಲ್ಲಿ ಹಾಡುಗಳನ್ನು ಆಲಿಸಬಹುದು. 320 Kbps ಗುಣಮಟ್ಟದ ಹಾಡುಗಳನ್ನು ಕೇಳಲು ನೀವು ಪೇಡ್ ಸೇವೆಗಳಿಗೆ ಸಬ್ ಸ್ಕ್ರೈಬ್ ಆಗಬೇಕಾಗುತ್ತದೆ. ಅದಲ್ಲದೇ ಪೋನ್ ನಲ್ಲಿರುವ ಹಾಡುಗಳನ್ನು ಕೇಳಲು ಆನ್ ಮೈ ಪೋನ್ ಆಯ್ಕೆ ಕ್ಲಿಕ್ಕಿಸಿದರೆ ಸಾಕು.

  ಆಪಲ್ ಮ್ಯೂಸಿಕ್ Apple Music

  ಗೂಗಲ್ ನಂತೆ ಆಪಲ್ ಕೂಡ ತನ್ನದೇ ಮ್ಯೂಸಿಕ್ ಸ್ಟ್ರೀಮ್ ಆಪ್ ಹೊಂದಿದ್ದು, ಆಪಲ್ ಡಿವೈಸ್ ಗಳಲ್ಲಿ ಲಭ್ಯವಿರಲಿದೆ. 45 ಮಿಲಿಯನ್ ಹಾಡುಗಳೊಂದಿಗೆ ಆಪಲ್ ಮ್ಯೂಸಿಕ್ ಸಮೃದ್ಧಿಯಾಗಿದೆ. ಹಿಂದಿ ಸೇರಿ ಭಾರತದ ಎಲ್ಲಾ ಭಾಷೆಗಳ ಹಾಡುಗಳು ಲಭ್ಯವಿವೆ. ಉತ್ತಮ ಶಬ್ಧ ಮತ್ತು ನಾನ್ ಬ್ರೇಕಿಂಗ್ ಲೈವ್ ಸ್ಟ್ರೀಮ್ ಆಪ್ ಅನ್ನು ಉತ್ತಮವಾಗಿಸಿವೆ. ಇಂಟರ್ ನೆಟ್ ರೇಡಿಯೋ ಸ್ಟೇಷನ್ ಗಳು ಲಭ್ಯವಿವೆ. 24 ಗಂಟೆ ಆಪಲ್ ರೇಡಿಯೋ Beats1 ನ್ನು ಯಾವಾಗ ಬೇಕಾದರು ಆಲಿಸಬಹುದಾಗಿದೆ.

  ಅಮೆಜಾನ್ ಪ್ರೈಮ್ ಮ್ಯೂಸಿಕ್ Amazon Prime Music

  ಪ್ರಮುಖ ಇ-ಕಾಮರ್ಸ್ ತಾಣ ಅಮೆಜಾನ್ ಮ್ಯೂಸಿಕ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದು, 30 ಮಿಲಿಯನ್ ಗೂ ಹೆಚ್ಚಿನ ಸಂಖ್ಯೆಯ ಹಾಡುಗಳನ್ನು ಹೊಂದಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಸಂಗೀತ ಸೇವೇಯನ್ನು ನೀಡುತ್ತಿರುವ ಅಮೆಜಾನ್ ಪ್ರೈಮ್ ಮ್ಯೂಸಿಕ್ ಆಪ್ ಪ್ರಿಮಿಯಮ್ ಸೇವೆಯಾಗಿದೆ.

  ಗಾನಾ Gaana

  ಮ್ಯೂಸಿಕ್ ಕ್ರೇಜ್ ಹೆಚ್ಚಿಸುವ ಮತ್ತೊಂದು ಆಪ್ ಎಂದರೆ ಗಾನಾ. ಪ್ರಮುಖ ಫೀಚರ್ ಏನೆಂದರೆ ಉತ್ತಮವಾದ ಪ್ಲೇ ಲಿಸ್ಟ್ ಅನ್ನು ತಜ್ಞರಿಂದ ಮತ್ತು ಬಳಕೆದಾರರಿಂದ ತಯಾರಿಸುವುದು. ಬಾಲಿವುಡ್, ಹಾಲಿವುಡ್, ಅಂತರಾಷ್ಟ್ರೀಯ ಸಂಗೀತ ಮತ್ತು ಪ್ರಾದೇಶಿಕ ಭಾಷೆಗಳಾದ ಮರಾಠಿ, ಬೆಂಗಾಲಿ, ರಾಜಸ್ಥಾನಿ, ಬೋಜ್ ಪುರಿ, ಮಲಯಾಳಂ, ತಮಿಳು, ತೆಲುಗು, ಕನ್ನಡದ ಬಹಳಷ್ಟು ಹಾಡುಗಳನ್ನು ಹೊಂದಿದೆ. 10 ಮಿಲಿಯನ್ ಗೂ ಹೆಚ್ಚು ಹಾಡುಗಳನ್ನು ಹೊಂದಿದ್ದು, ಯಾವುದೇ ಅಡಚಣೆಯಿಲ್ಲದೇ ಹಾಡಿನ ಇಂಪು ಸವಿಯಬಹುದು.
  ಇದಲ್ಲದೇ ನೀವು ಗಾನಾದಲ್ಲಿ ರೇಡಿಯೋ ಮಿರ್ಚಿ 98.3 FMನ 10 ರೇಡಿಯೋ ಮಿರ್ಚಿ ಸ್ಟೇಷನ್ ಗಳಿಂದ ನಾನ್ ಸ್ಟಾಪ್ ರೇಡಿಯೋ ಕೇಳಬಹುದು. ಟೈಮ್ಸ್ ನೌ ನ್ಯೂಸ್ ಚಾನೆಲ್ ನಿಂದ ಲೆಟೆಸ್ಟ್ ನ್ಯೂಸ್ ಅಪಡೇಟ್ ಆಗುವುದು ಗಾನಾದ ಮತ್ತೊಂದು ವಿಶೇಷ.

  ಹಂಗಾಮಾ Hungama

  ಭಾರತೀಯ ಮ್ಯೂಸಿಕ್ ಲವರ್ಸ್ ಗಾಗಿ ಇರುವ ಮತ್ತೊಂದು ಮ್ಯೂಸಿಕ್ ಆಪ್ ಎಂದರೆ ಹಂಗಾಮಾ. 3.5 ಮಿಲಿಯನ್ ಹಾಡುಗಳನ್ನು ಹೊಂದಿರುವ ಹಂಗಾಮಾ, ವಿಡೀಯೋ ಸ್ಟ್ರೀಮಿಂಗ್ ಸಹ ನೀಡುತ್ತಿದೆ. ಬಾಲಿವುಡ್, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಹಾಡುಗಳನ್ನು ಒಳಗೊಂಡಿದೆ. ಸ್ಲೋ ನೆಟ್ ವರ್ಕ್ ನಲ್ಲೂ ಬಫರಿಂಗ್ ಇರಲಾರದೇ ಸಂಗೀತವನ್ನು ನೀಡುತ್ತದೆ. ರೇಡಿಯೋ ಚಾನೆಲ್ ಗಳನ್ನು ಸಹ ಕೇಳಬಹುದು. ನೀವು ಸಂಗೀತದ ವಿಡೀಯೋಗಳನ್ನು ನೋಡಬಹುದು ಮತ್ತು ಹಾಡಿನ ಲಿರಿಕ್ಸ್ ಸೆಟ್ಅಪ್ ಮಾಡಿ ಮಿನಿ ಕರೋಕೆ ಅನುಭವ ಪಡೆಯಬಹುದಾಗಿದೆ.

  ಸ್ಪೂಟಿಫೈ Spootify

  ಸ್ಪೂಟಿಫೈ ಆಪ್‌ ಅತ್ಯಂತ ಜನಪ್ರಿಯ ಮ್ಯೂಸಿಕ್ ಆಪ್ ಆಗಿದ್ದು, ಅನೇಕ ವಿಧದ ಮ್ಯೂಸಿಕ್ ಲೈಬ್ರರಿಯನ್ನು ಹೊಂದಿದೆ. ಅನೇಕ ಸ್ಟೇಷನ್‌ಗಳು, ಪ್ಲೇಲಿಸ್ಟ್‌ಗಳು ಇವೆ. ಮತ್ತು ನಿಮಗೆ ಬೇಕಾದ ಸ್ಟೇಷನ್ ಮತ್ತು ಪ್ಲೇ ಲಿಸ್ಟ್‌ಗಳನ್ನು ಸೃಷ್ಟಿಸಬಹುದಾಗಿದೆ. ಸ್ಪೂಟಿಫೈ ಉಚಿತವಲ್ಲ. ಆದರೂ ಉಚಿತ ಆವೃತ್ತಿಯಲ್ಲಿ ಸಾಕಾಗುವಷ್ಟು ನಿಮಗೆ ಫೀಚರ್ ಸಿಗುತ್ತಿದ್ದು, ಉಪಯೋಗಿಸಬಹುದಾಗಿದೆ. ಮಟೇರಿಯಲ್‌ ಡಿಸೈನ್ ಹೊಂದಿದ್ದು, ಕ್ರೋಮ್‌ಕಾಸ್ಟ್‌ ಬೆಂಬಲಿತವಾಗಿದೆ. ಟ್ಯಾಬ್ಲೆಟ್ ಆವೃತ್ತಿಗಿಂತ ಮೊಬೈಲ್ ಆವೃತ್ತಿ ಉತ್ತಮವಾಗಿದ್ದು, ಅನೇಕ ಫೀಚರ್‌ಗಳನ್ನು ಹೊಂದಿದೆ.

  ಸೌಂಡ್ ಕ್ಲೌಡ್ Soundcloud

  ಎಲ್ಲಾ ಆಡಿಯೋ ಸ್ಟ್ರೀಮಿಂಗ್ ಆಪ್ಸ್ ಗಳಿಗೆ ಬಿಗ್ ಡ್ಯಾಡಿಯಂತಿರುವ ಆಪ್ ಎಂದರೆ ಸೌಂಡ್ ಕ್ಲೌಡ್. 150 ಮಿಲಿಯನ್ ಗೂ ಹೆಚ್ಚು ಹಾಡುಗಳು ಸೌಂಡ್ ಕ್ಲೌಡ್ ನಲ್ಲಿವೆ. ಟ್ವಿಟರ್ ಇಂಟರ್ ಪೇಸ್ ಹೊಂದಿರುವ ಸೌಂಡ್ ಕ್ಲೌಡ್ ಆರ್ಟಿಸ್ಟ್ ಗಳನ್ನು ಮತ್ತು ಆಲ್ಬಮ್ ಗಳನ್ನು ಫಾಲೋ ಮಾಡುವ ಆಯ್ಕೆ ನೀಡುತ್ತದೆ. ಮತ್ತು ನೀವು ಲೈಕ್, ಕಮೆಂಟ್ ಮತ್ತು ಶೇರ್ ಮಾಡುವ ಆಯ್ಕೆಯು ಇಲ್ಲಿದೆ. ನಿಮ್ಮ ಲೈಕ್ ಮತ್ತು ಹವ್ಯಾಸಗಳಿಗೆ ತಕ್ಕಂತೆ ಮ್ಯೂಸಿಕ್ ಆನಂದಿಸಲು ಸೌಂಡ್ ಕ್ಲೌಡ್ ಸಲಹೆ ನೀಡುತ್ತದೆ. ಸೌಂಡ್ ಕ್ಲೌಡ್ ಉತ್ತಮ ಗುಣಮಟ್ಟದ ಶಬ್ಧ ಮತ್ತು ಅಡಾಪ್ಟಿವ್ ಬ್ಯಾಕ್ ಗ್ರೌಂಡ್ ಥೀಮ್ ನಿಂದ ಆಕರ್ಷಿಸುತ್ತದೆ.

  ಪಂಡೋರಾ Pandora

  ಪಂಡೋರಾ ರೇಡಿಯೋ ಸಹ ಜನಪ್ರಿಯ ಮ್ಯೂಸಿಕ್ ಆಪ್‌ ಆಗಿದ್ದು, ಬಳಕೆಗೆ ಸರಳವಾದ ಹಾಗೂ ಕ್ರಾಸ್‌ಪ್ಲಾಟ್‌ಫಾರ್ಮ್‌ ಬೆಂಬಲಿತವಾಗಿರುವುದರಿಂದ ನಿಮಗೆ ಇಷ್ಟವಾಗಬಹುದು. ಪಂಡೋರಾ ಲೈಬ್ರರಿ ವಿಸ್ತಾರವಾಗಿದ್ದು, ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ. ಪಂಡೋರಾದಲ್ಲಿ ಆನ್‌ ಡಿಮಾಂಡ್‌ ಸ್ಟ್ರೀಮಿಂಗ್ ಸೇವೆಯು ಇದ್ದು, ಬಳಸಬಹುದಾಗಿದೆ. ಸ್ಪೂಟಿಫೈಗಿಂತ ಬೆಸ್ಟ್‌ ಆಪ್‌ ಎಂದು ಆಪ್‌ ತಜ್ಞರು ಹೇಳುತ್ತಾರೆ. ಉಚಿತ ಆವೃತ್ತಿಯಲ್ಲಿ ಅನೇಕ ಫೀಚರ್‌ಗಳಿದ್ದು, ನಿಮಗೆ ಇಷ್ಟವಾಗುತ್ತದೆ.

  ಜಿಯೋ ಮ್ಯೂಸಿಕ್ Jio Music

  ಜಿಯೋ ಸಿನಿಮಾದಂತಿರುವ ಜಿಯೋ ಮ್ಯೂಸಿಕ್ ಆಪ್ ಜಿಯೋ ಮೊಬೈಲ್ ಪ್ಲಾನ್ ನಲ್ಲಿದೆ. ಯುಎಕ್ಸ್ ಡಿಸೈನ್ ಹೊಂದಿರುವ ಆಪ್ ಬೇರೆ ಆಪ್ ಗಳಿಗಿಂತ ಭಿನ್ನವಾಗಿದೆ. ಭಾರತದ ಬೆಸ್ಟ್ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ನಲ್ಲಿ ಇದು ಹೊಂದಾಗಿದ್ದು, ಭಾರತದ ಪ್ರಮುಖ ಭಾಷೆಗಳಲ್ಲಿ ಹಾಡುಗಳ ಇಂಪನ್ನು ಕೇಳುಗರಿಗೆ ನೀಡುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  best free music apps for Android. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more