ಆರೋಗ್ಯಕರ ಊಟ, ನೆಮ್ಮದಿಯ ನಿದ್ರೆಗಾಗಿ ಸ್ಮಾರ್ಟ್‌ಫೋನಿನಲ್ಲಿ ಇರಬೇಕಾದ ಆಪ್‌ಗಳು...!

|

ದಿನ ಕಳೆದಂತ ನಮ್ಮ ಜೀವನ ಶೈಲಿಯೂ ಬದಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವ ಸಲುವಾಗಿ ಹಲವು ಆಪ್‌ಗಳು ಲಭ್ಯವಿದ್ದು, ಇವು ನಮ್ಮ ಆರೋಗ್ಯವನ್ನು ಉತ್ತಮಪಡಿಸಲು, ಫಿಟ್‌ ಆಗಿರುವ ಸಹಾಯ ಮಾಡಲಿವೆ. ಸ್ಮಾರ್ಟ್‌ಫೋನಿನಲ್ಲಿ ಇರುವ ಆಪ್‌ಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಉತ್ತಮವಾಗಿ ತಿಳಿಸಲಿವೆ.

 ಆರೋಗ್ಯಕರ ಊಟ, ನೆಮ್ಮದಿಯ ನಿದ್ರೆಗಾಗಿ ಸ್ಮಾರ್ಟ್‌ಫೋನಿನಲ್ಲಿ ಇರಬೇಕಾದ ಆಪ್‌ಗಳು..

ಮಾರುಕಟ್ಟೆಯಲ್ಲಿರುವ ಆಪ್‌ಗಳು ನಾವು ತಿನ್ನುವ ಆಹಾರ ಪದಾರ್ಥಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದಲ್ಲದೇ, ಎಷ್ಟು ವಾಕ್ ಮಾಡಿದ್ದೀರಾ ಸೇರಿದಂತೆ ಹಲವು ಮಾಹಿತಿಗಳನ್ನು ಒದಗಿಸಲಿವೆ. ಈ ಹಿನ್ನಲೆಯಲ್ಲಿ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಬೆಸ್ಟ್ ಆಪ್‌ಗಳ ಬಗ್ಗೆ ಮಾಹಿತಿಯೂ ಈ ಮುಂದಿನಂತೆ ಇದೆ. ಆರೋಗ್ಯಕರ ನಿದ್ರೆ, ಊಟ, ನೆಮ್ಮದಿಗಾಗಿ ಸ್ಮಾರ್ಟ್‌ಫೋನಿನಲ್ಲಿ ಇರಬೇಕಾದ ಆಪ್‌ಗಳು ಇವಾಗಿವೆ.

ಡಯಟ್‌ಗಾಗಿ ಇರುವ ಆಪ್‌ 'ಯಮ್ಲೀ' :

ಡಯಟ್‌ಗಾಗಿ ಇರುವ ಆಪ್‌ 'ಯಮ್ಲೀ' :

ಡಯೆಟ್‌ಗೆ ಸಂಬಂಧಿಸಿದಂತೆ ನಿಮಗೆ ಯಮ್ಲೀ (Yummly) ಆಪ್ ಸಹಾಯ ಮಾಡಲಿದೆ. ಆರೋಗ್ಯಕರ ತಿನಿಸುಗಳ ರೆಸಿಪಿಗಳು ಈ ಆಪ್‌ನಲ್ಲಿ ದೊರೆಯಲಿದೆ. ನಮ್ಮ ದೇಹಕ್ಕೆ ಪೌಷ್ಟಿಕಾಂಶ ಎಷ್ಟು ಪ್ರಮಾಣದಲ್ಲಿ ಬೇಕು, ಅವು ಯಾವ ಆಹಾರ ಪದಾರ್ಥಗಳಲ್ಲಿರುತ್ತೆ, ಆ ಪದಾರ್ಥಗಳನ್ನು ಬಳಸಿಕೊಂಡು ಯಾವೆಲ್ಲ ರೆಸಿಪಿ ತಯಾರಿಸಬಹುದು ಅನ್ನೋ ವಿವರಗಳನ್ನೆಲ್ಲ ಈ ಆಪ್‌ನಲ್ಲಿ ಕಾಣಬಹುದಾಗಿದೆ.

ದೇಹದ ತೂಕ ಇಳಿಸಲು ಸ್ವಾರ್ಕಿಟ್  (Sworkit) ಆಪ್:

ದೇಹದ ತೂಕ ಇಳಿಸಲು ಸ್ವಾರ್ಕಿಟ್ (Sworkit) ಆಪ್:

ಇದು ಫಿಟ್‌ನೆಸ್‌ಗೆ ಸಂಬಂಧಿಸಿದ ಆಪ್ ಆಗಿದ್ದು, ತೂಕ ಇಳಿಸಿಕೊಳ್ಳೋದು ಸೇರಿದಂತೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಟಿಪ್ಸ್‌ ಗಳನ್ನು ನೀಡಲಿದೆ. ನಿಮ್ಮ ಅಗತ್ಯಕ್ಕೆ ತಕ್ಕಂಥ ವ್ಯಾಯಾಮಗಳ ತಿಳಿಸಿಕೊಡಲಿದೆ. ಮಾಡಿ ವ್ಯಾಯಮದ ಪರಿಣಾಮವನ್ನು ತಿಳಿಸಲಿದೆ.

ಉತ್ತಮ ನಿದ್ರೆಗಾಗಿ ಆಪ್

ಉತ್ತಮ ನಿದ್ರೆಗಾಗಿ ಆಪ್

ಗುಡ್ ಮಾರ್ನಿಂಗ್ ಅಲರಾಂ ಕ್ಲಾಕ್ ಎನ್ನುವ ಆಪ್ ಪ್ಲೇ ಸ್ಟೋರಿನಲ್ಲಿದ್ದು, ಇದು ನಿದ್ದೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಆಪ್ ಆಗಿದೆ. ಈ ಆಪ್ ನಿಮ್ಮ ನಿದ್ದೆಯ ಅವಧಿಯನ್ನು ಟ್ರ್ಯಾಕ್ ಮಾಡುತ್ತದೆ. ದೇಹಕ್ಕೆ ಉತ್ತಮವಾದ ನಿದ್ದೆ ಸಿಕ್ಕಿದೆಯಾ ಇಲ್ಲವಾ ಎನ್ನುವುದನ್ನು ಲೆಕ್ಕ ಹಾಕಲಿದೆ. ಮಲಗಿದ ಕೂಡಲೇ ಚೆನ್ನಾಗಿ ನಿದ್ದೆ ಮಾಡೋದು, ನಿದ್ರಾಚಕ್ರದ ಸಂಪೂರ್ಣ ಅವಧಿಯನ್ನು ಪೂರೈಸುವುದು ಸೇರಿದಂತೆ ಅತ್ಯುತ್ತಮ ನಿದ್ದೆಗೆ ಸಂಬಂಧಿಸಿದ ಟಿಪ್ಸ್‌ಗಳು ಇದರಲ್ಲಿ ದೊರೆಯಲಿದೆ.

ಮನಸ್ಸಿನ ರಿಲಾಕ್ಸ್‌ಗೆ:

ಮನಸ್ಸಿನ ರಿಲಾಕ್ಸ್‌ಗೆ:

ವೈಟ್ ನಾಯ್ಸ್ ಆಪ್ ಮನಸ್ಸಿಗೆ ರಿಲ್ಯಾಕ್ಸ್ ನೀಡುವ ಅಂಶಗಳನ್ನು ಹೊಂದಿದೆ. ಮನಸ್ಸಿಗೆ ಹಿತ ನೀಡುವ ಸಂಗೀತ ಸೇರಿದಂತೆ ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಅನೇಕ ಹಾಡುಗಳು, ಶಬ್ದಗಳು ಇದರಲ್ಲಿದೆ. ಮನಸ್ಸಿಗೆ ಆರಾಮ ನೀಡುವ ಶಬ್ದಗಳಿದ್ದು, ಪುಟ್ಟ ಮಕ್ಕಳನ್ನು ಮಲಗಿಸುವ ಸಂಗೀತವೂ ಲಭ್ಯವಿದೆ.

Best Mobiles in India

English summary
best health apps on play store. to know more visit kannada.guzbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X