ಈ ಅತ್ಯುತ್ತಮ 5 ಆಪ್‌ಗಳು ಫೋನಿನಲ್ಲಿದ್ದರೆ ನೀವೆ ಆರೋಗ್ಯ ಶ್ರೀಮಂತರು!!
ಈ ಆಧುನಿಕ ಯಾಂತ್ರಿಕ ಯುಗದಲ್ಲಿ ಮನುಷ್ಯನು ಹಣದ ಹಿಂದೆ ಬಿದ್ದು ಈ ಎರಡೂ ಪ್ರಮುಖ ಅಂಶಗಳನ್ನು ಮರೆತು ಜೀವನ ಸಾಗಿಸುತ್ತಿದ್ದಾನೆ. ಇದರಿಂದ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ ಎಂದು ಹೇಳಬಹುದು.!!
ಮಾನವನಿಗೆ ಹಣಕ್ಕಿಂತ ಹೆಚ್ಚು ಮುಖ್ಯವಾಗಿ ಬೇಕಿರುವುದು ಆರೋಗ್ಯ ಮತ್ತು ಉತ್ತಮ ಗುಣಮಟ್ಟದ ಆಹಾರ.! ಆದರೆ, ಈ ಆಧುನಿಕ ಯಾಂತ್ರಿಕ ಯುಗದಲ್ಲಿ ಮನುಷ್ಯನು ಹಣದ ಹಿಂದೆ ಬಿದ್ದು ಈ ಎರಡೂ ಪ್ರಮುಖ ಅಂಶಗಳನ್ನು ಮರೆತು ಜೀವನ ಸಾಗಿಸುತ್ತಿದ್ದಾನೆ. ಇದರಿಂದ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ ಎಂದು ಹೇಳಬಹುದು.!!
ಹೌದು, ಈ ಯಾಂತ್ರಿಕ ಯುಗದಲ್ಲಿ ಆಹಾರ, ಆರೋಗ್ಯದ ಕಾಳಜಿ ಬಗ್ಗೆ ಸಮಯ ನೀಡಲು ಸಾಧ್ಯವಾಗದಿರಬಹುದು. ಆದರೆ, ಖಂಡಿತವಾಗಿ ನೀವು ಈ ಬಗ್ಗೆ ಎಚ್ಚರವಾಗಿರಲೇಬೇಕು.! ಈ ಆಧುನಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನಗಳನ್ನೇ ಬಳಸಿಕೊಂಡು ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.!

ಇದಕ್ಕಾಗಿಯೇ ನಿಮ್ಮ ಆಹಾರ, ಆರೋಗ್ಯದ ಕಾಳಜಿ ಬಗ್ಗೆ ನೀವು ಮರೆತದರೂ ನಿಮ್ಮನ್ನು ಎಚ್ಚರಿಸಲು ಇರುವ ಅಪ್ಲಿಕೇಷನ್‌ಗಳು ನಿಮಗೆ ಸಹಾಯಕವಾಗಬಹುದು. ಆರೋಗ್ಯ, ಫಿಟ್‌ನೆಸ್ ಎಲ್ಲದಕ್ಕೂ ನಿಮ್ಮನ್ನು ತಯಾರುಗೊಳಿಸುವಲ್ಲಿ ಈ ಆಪ್‌ಗಳ ಕಾರ್ಯ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯಮ್ಲೀ (YUMMLY) ಆಪ್!!
ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶ ಬೇಕು, ಯಾವ ಯಾವ ಆಹಾರ ಪದಾರ್ಥಗಳಲ್ಲಿ ಹೆಚ್ಚು ಪೌಷ್ಟಿಕಾಂಶರುತ್ತೆ, ಆ ಪದಾರ್ಥಗಳನ್ನು ಬಳಸಿಕೊಂಡು ಯಾವೆಲ್ಲ ರೆಸಿಪಿ ತಯಾರಿಸಬಹುದು ಅನ್ನೋ ವಿವರಗಳನ್ನೆಲ್ಲ ಈ ಆಪ್ ನೀಡುತ್ತದೆ. ಡಯೆಟ್‌ಗೆ ಸಂಬಂಧಿಸಿದ ಅತ್ಯುತ್ತಮ ಆಪ್ ಇದಾಗಿದೆ ಎನ್ನಬಹುದು.!!

ಸ್ವಾರ್ಕಿಟ್ (SWORKIT) ಆಪ್!!
ಫಿಟ್‌ನೆಸ್ ಕಾಪಾಡಿಕೊಳ್ಳಲು ನೆರವಾಗುವ ಆಪ್ ಸ್ವಾರ್ಕಿಟ್ ಆಪ್ ತೂಕ ಇಳಿಸಿಕೊಳ್ಳಲು, ಹೆಚ್ಚು ಸ್ಟ್ರಾಂಗ್ ಆಗಲು ದೇಹಕ್ಕೆ ಫ್ಲೆಕ್ಸಿಬಿಲಿಟಿ ತಂದುಕೊಡುವ ಹೊಣೆ ಹೊತ್ತುಕೊಳ್ಳಲಿದೆ. ನಿಮ್ಮ ಅವಶ್ಯಕತೆ ತಿಳಿಸಿದರೆ ಅದಕ್ಕೆ ತಕ್ಕಂಥ ವ್ಯಾಯಾಮಗಳನ್ನು ಹೇಳಿಕೊಡುತ್ತದೆ. ಪ್ರತಿಯೊಂದು ವ್ಯಾಯಾಮ ಮಾಡುವ ಬಗೆಯನ್ನೂ ಇದೇ ಕಲಿಸಿಕೊಡುತ್ತದೆ.!!

ವೈಟ್ ನಾಯ್ಸ್ ಆಪ್ !!
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ 'ವೈಟ್‌ನಾಯ್ಸ್' ಆಪ್ ಸಹಾಯ ಮಾಡುತ್ತದೆ.! ಹೆಚ್ಚು ಏರಿಳಿತಗಳಿಲ್ಲದ ಮನಸ್ಸಿಗೆ ಹಿತ ನೀಡುವ ಸಂಗೀತ, ರಂತರವಾಗಿ ಬೀಳುವ ಮಳೆ ಹನಿಯ ಶಬ್ದಗಳು ಎಂಥಾ ಟೆನ್ಶನ್‌ನಲ್ಲಿ ಇದ್ದರೂ ಮನಸ್ಸಿಗೆ ಆರಾಮ ನೀಡುತ್ತವೆ.!!

ಗುಡ್ ಮಾರ್ನಿಂಗ್ ಅಲರಾಂ ಕ್ಲಾಕ್!!
ನಿದ್ದೆಗೆ ಸಂಬಂಧಿಸಿದ ಆಪ್ ಇದಗಿದ್ದು, ನಿಮ್ಮ ನಿದ್ದೆಯ ಅವಧಿಯನ್ನು ಟ್ರ್ಯಾಕ್ ಮಾಡಿ ದೇಹಕ್ಕೆ ಚೆನ್ನಾಗಿ ನಿದ್ದೆ ಸಿಕ್ಕಿದೆಯಾ ಇಲ್ಲವಾ ಅನ್ನೋದನ್ನು ತಿಳಿಸುತ್ತೆ. ಮಲಗಿದ ಕೂಡಲೇ ಚೆನ್ನಾಗಿ ನಿದ್ದೆ ಮಾಡೋದು, ನಿದ್ರಾಚಕ್ರದ ಸಂಪೂರ್ಣ ಅವಧಿಯನ್ನು ಪೂರೈಸುವುದು ಸೇರಿದಂತೆ ಅತ್ಯುತ್ತಮ ನಿದ್ದೆ ಮಾಡುವುದು ಹೇಗೆ ಎಂಬುದನ್ನು ಆಪ್ ಹೇಳಿಕೊಡಲಿದೆ.!!

ಕ್ಲೂ ಪಿರಿಯಡ್ಸ್ ಟ್ರಾಕರ್!!
ಕ್ಲೂ ಪಿರಿಯಡ್ಸ್ ಟ್ರಾಕರ್ ಆಪ್ ಪೀರಿಯಡ್ಸ್ ಸಮಯದಲ್ಲಾಗುವ ಮಾನಸಿಕ ದೈಹಿಕ ಏರುಪೇರುಗಳ ಬಗ್ಗೆ ಉತ್ತಮ ಮಾಹಿತಿ ನೀಡಲಿದೆ. ಋತುಚಕ್ರಕ್ಕೆ ಸಂಬಂಧಿಸಿ ನಮ್ಮ ಆಹಾರ ಕ್ರಮ, ಚಟುವಟಿಕೆಗಳು ಯಾವ ರೀತಿ ಇರಬೇಕು ಅನ್ನೋದನ್ನು ನಿರ್ದೇಶನ ನೀಡಲಿದೆ. ಹಾಗೇಯೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಟಿಪ್ಸ್ ಇದರಲ್ಲಿದೆ.


Click it and Unblock the Notifications