Home
Apps

2025 Google Play Awards India: ಟಾಪ್ ಆ್ಯಪ್ & ಗೇಮ್‌ಗಳ ಘೋಷಣೆ!

ಮೌಂಟೇನ್ ವ್ಯೂ ಮೂಲದ ಟೆಕ್ ದೈತ್ಯ Google ಕಂಪೆನಿಯು 2025 ರಲ್ಲಿ ಭಾರತದ ಪ್ಲೇ ಸ್ಟೋರ್‌ನಲ್ಲಿನ ಅತ್ಯುತ್ತಮ ಆ್ಯಪ್‌ಗಳು ಮತ್ತು ಗೇಮ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಜೊಮಾಟೊ ಒಡೆತನದ ಟಿಕೆಟಿಂಗ್ ಪ್ಲಾಟ್‌ಫಾರ್ಮ್, ಡಿಸ್ಟ್ರಿಕ್ಟ್: ಮೂವೀಸ್ ಈವೆಂಟ್ಸ್ ಡೈನಿಂಗ್(District: Movies Events Dining)2025 ರಲ್ಲಿ ಭಾರತದಲ್ಲಿ ಅತ್ಯುತ್ತಮ ಅಪ್ಲಿಕೇಶನ್(Best App) ಪ್ರಶಸ್ತಿಯನ್ನು ಪಡೆದಿದೆ. ಸಿನಿಮಾ ಟಿಕೆಟ್ ಬುಕ್ಕಿಂಗ್‌ನಿಂದ ಈವೆಂಟ್ ಮಾಹಿತಿ ಮತ್ತು ಊಟದ ಆಯ್ಕೆಗಳವರೆಗೆ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ನೀಡುವ ಕಾರಣ ಈ ಆ್ಯಪ್ ಹೆಚ್ಚು ಮೆಚ್ಚುಗೆ ಪಡೆದಿದೆ.

2025 ರಲ್ಲಿ ಭಾರತದಲ್ಲಿ ವರ್ಷದ ಅತ್ಯುತ್ತಮ ಹಿಡನ್ ಜೆಮ್ ಅಪ್ಲಿಕೇಶನ್ ಆಗಿ ಟೂನ್‌ಸುತ್ರ(Toonsutra) ಹೊರಹೊಮ್ಮಿದ್ದು, ಇದು ವೆಬ್‌ಟೂನ್ ಮತ್ತು ಮಂಗಾ ಅಪ್ಲಿಕೇಶನ್ ಆಗಿದೆ. ಜರ್ನಲಿಂಗ್ ಪ್ಲಾಟ್‌ಫಾರ್ಮ್ ಡೈಲಿ ಪ್ಲಾನರ್ (Daily Planner) ಅತ್ಯುತ್ತಮ ಎವೆರಿಡೇ ಎಸೆನ್ಷಿಯಲ್ ಆ್ಯಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಯುವಜನರನ್ನು ಆಕರ್ಷಿಸಿದ್ದ Edits (Instagram ಆಧಾರಿತ ಕ್ರಿಯೇಟಿವ್ ಎಡಿಟಿಂಗ್) ಫನ್‌ಗಾಗಿ ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದರೆ, AI ಮೂಲಕ ವಿಡಿಯೋ ತಯಾರಿಸುವ invideo AI ಆ್ಯಪ್ ಬೆಸ್ಟ್ ಪರ್ಸನಲ್ ಗ್ರೋತ್ ಪ್ರಶಸ್ತಿಗೆ ಭಾಜನವಾಗಿದೆ.

2025 Google Play Awards India: ಟಾಪ್ ಆ್ಯಪ್ & ಗೇಮ್‌ಗಳ ಘೋಷಣೆ!
Photo credit: blog.google

ಮತ್ತೊಂದೆಡೆ, ಶಾಪಿಂಗ್ ವಿಭಾಗದಲ್ಲಿ ಇತ್ತೀಚಿಗೆ ಭಾರೀ ಸದ್ಧು ಮಾಡುತ್ತಿರುವ ಇನ್‌ಸ್ಟಾಮಾರ್ಟ್ (Instamart) ಟಾಪ್ ಟ್ರೆಂಡಿಂಗ್ ಅಪ್ಲಿಕೇಶನ್ ಆಗಿ ಹೊರಹೊಮ್ಮಿದ್ದರೆ, ಶಿಕ್ಷಣ ವಿಭಾಗದಲ್ಲಿ Seekho ಆ್ಯಪ್ ಗುರಿತಿಸಿಕೊಂಡಿದೆ. ಕಲೆ ಮತ್ತು ವಿನ್ಯಾಸ ವಿಭಾಗದಲ್ಲಿ Adobe Firefly: AI Generator ಆ್ಯಪ್‌ಗಳು ಮೊದಲ ಸ್ಥಾನ ಪಡೆದಿವೆ. Google ತಿಳಿಸಿರುವಂತೆ, ಭಾರತದಲ್ಲಿ 69% ಬಳಕೆದಾರರು AI ಅನ್ನು ಮೊದಲ ಬಾರಿಗೆ Android ಆ್ಯಪ್‌ಗಳ ಮೂಲಕ ಅನುಭವಿಸಿದ್ದಾರೆ, ಇದು ದೇಶದಲ್ಲಿ AI ಬಳಕೆಯ ವೇಗವಾಗಿ ವೃದ್ಧಿಯುತ್ತಿರುವುದನ್ನು ತೋರಿಸಿದೆ.

ಇನ್ನು ಗೇಮಿಂಗ್ ವಿಭಾಗದಲ್ಲಿ, ಈ ವರ್ಷ CookieRun India 2025ರ ಭಾರತದ Best Game ಪ್ರಶಸ್ತಿಯನ್ನು ಪಡೆದಿದೆ. ಭಾರತೀಯ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಪಾತ್ರಗಳು ಮತ್ತು ಸರಳ ಗೇಮ್‌ಪ್ಲೇ ಇದಕ್ಕೆ ಹೆಚ್ಚಿನ ಜನಪ್ರಿಯತೆ ತಂದಿವೆ ಎನ್ನಬಹುದು. ಇನ್ನು ಇತರೆ ವಿಭಾಗಗಳಲ್ಲಿ ವಿಜೇತ ಗೇಮ್‌ಗಳಲ್ಲಿ, Best Indie Game: Kamla, Best Pick Up and Play: CookieRun India, Best Made in India: Real Cricket Swipe, Best Multi-Device Game: Disney Speedstorm ಮತ್ತು Best Multiplayer: 8 Pool Fever ಸ್ಥಾನ ಪಡೆದಿವೆ.

2025 Google Play Awards India: ಟಾಪ್ ಆ್ಯಪ್ & ಗೇಮ್‌ಗಳ ಘೋಷಣೆ!
Photo credit: blog.google

Google Play Best of 2025 ವಿಶೇಷ ವಿಭಾಗಗಳಲ್ಲಿ Best Story: Prince of Persia: Lost Crown, Best Ongoing Game: Free Fire Max, Best on Play Pass: Dredge ಮತ್ತು Best for Google Play Games on PC: Whiteout Survival ಗೇಮ್‌ಗಳು ಪಟ್ಟಿಯಾಗಿವೆ. ಪ್ರತಿ ವರ್ಷಕ್ಕಿಂತ ಈ ವರ್ಷ ವಿಭಿನ್ನವಾಗಿ, Google ಈ ಬಾರಿ ಸ್ಥಳೀಯ ಸಂಸ್ಕೃತಿ ಮತ್ತು ಬಳಕೆದಾರರ ದಿನನಿತ್ಯದ ಅಗತ್ಯಗಳಿಗೆ ಹೊಂದುವ ಜೊತೆಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಒಳಗೊಂಡಿರುವ ಆ್ಯಪ್‌ಗಳು ಮತ್ತು ಗೇಮ್‌ಗಳನ್ನು ವಿಶೇಷವಾಗಿ ಶ್ಲಾಘಿಸಿದೆ.

Google ಪ್ರಕಾರ, Android ಮತ್ತು Google Play ಪರಿಸರವು ಭಾರತದಲ್ಲಿ ಸುಮಾರು 3.5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಿದ್ದು, ದೇಶದ ಆರ್ಥಿಕತೆಗೆ ₹4 ಲಕ್ಷ ಕೋಟಿ ಮೌಲ್ಯವನ್ನು ಸೇರಿಸಿದೆ. ಇದು ಭಾರತದಲ್ಲಿ ಆ್ಯಪ್ ಅಭಿವೃದ್ಧಿ ಮತ್ತು ಗೇಮಿಂಗ್ ಉದ್ಯಮದ ಬೆಳವಣಿಗೆಗೆ ಮಹತ್ವದ ಸೂಚಕವಾಗಿದೆ. ಇನ್ನು Google Play Best of 2025 ಪಟ್ಟಿಯು, ಭಾರತದಲ್ಲಿ ಆ್ಯಪ್ ಮತ್ತು ಗೇಮ್ ಡೆವಲಪರ್‌ಗಳ ಸೃಜನಶೀಲತೆ, AI ಬಳಕೆ ಮತ್ತು ಸ್ಥಳೀಯತೆಯ ಮಹತ್ವವನ್ನು ಮತ್ತೆ ಒತ್ತಿ ಹೇಳುತ್ತದೆ. ಈ ಮೂಲಕ ಮೂಲಕ ಭಾರತೀಯ ಡಿಜಿಟಲ್ ಪರಿಸರ ವೇಗವಾಗಿ ವಿಸ್ತರಿಸುತ್ತಿದೆ.

ಆಧಾರ

Best Mobiles in India

English summary
Zomato-owned ticketing platform District: Movies Events Dining has been awarded India’s Best App of 2025. The app earned widespread praise for bringing movie ticket bookings, event updates, and dining options together in one seamless platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+