Home
Apps

ಇಂಟರ್ನೆಟ್ ಇಲ್ಲದೇ ಇದ್ದರೂ ಡಿವೈಸ್ ಪತ್ತೆ ಮಾಡುವುದು ಹೇಗೆ?

ಗೂಗಲ್ ಹೊರತಂದಿರುವ ಅಪ್ಲಿಕೇಶನ್ ನಿಮ್ಮ ಡಿವೈಸ್ ಆಫ್‌ಲೈನ್‌ನಲ್ಲಿದ್ದರೂ ಕೂಡ ಹತ್ತಿರದ ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಂಡು ಅದನ್ನು ಪತ್ತೆಹಚ್ಚಲಿದೆ.

By Shwetha Ps

ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಹತ್ತಿರದ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ನೀವು ಅಂದುಕೊಂಡಿದ್ದಲ್ಲಿ ಆ ಆಸೆ ನೆರವೇರುವುದು ಖಂಡಿತವಾಗಲಿದೆ. ಗೂಗಲ್ ಆಂಡ್ರಾಯ್ಡ್ ಡೆವಲಪರ್ಸ್‌ಗೆ ಹತ್ತಿರ ಸಂಪರ್ಕ ಟೂಲ್‌ಕಿಟ್ ವ್ಯವಸ್ಥೆಯನ್ನು ಇದೀಗ ಜಾರಿಗೆ ತಂದಿದೆ.

ಇಂಟರ್ನೆಟ್ ಇಲ್ಲದೇ ಇದ್ದರೂ ಡಿವೈಸ್ ಪತ್ತೆ ಮಾಡುವುದು ಹೇಗೆ?

ಇದರ ಅಪ್‌ಡೇಟ್ ಮಾಡಲಾದ ಫ್ರೇಮ್‌ವರ್ಕ್ ಬ್ಲೂಟೂತ್ ಮತ್ತು ವೈಫೈ ಸಂಪರ್ಕದ ಮೂಲಕ ಹತ್ತಿರದ ಸಾಧನಗಳನ್ನು ಹುಡುಕಿಕೊಂಡು ಅವುಗಳನ್ನು ಕನೆಕ್ಟ್ ಮಾಡಿಕೊಂಡು ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಕಾರ್ಯನಿರ್ವಹಿಸಲಿದೆ. ನಿಮ್ಮ ಹೋಟೆಲ್‌ನ ತಾಪಮಾನವನ್ನು ನೀವು ನಡೆದಾಡುತ್ತಿರುವಾಗಲೇ ಹೊಂದಿಸಬಹುದಾಗಿದೆ, ಅಂತೆಯೇ ನೀವು ನಿಮ್ಮ ವೈಯಕ್ತಿಕ ಕೆಲಸದಲ್ಲಿ ನಿರತರಾಗಿದ್ದಾಗ ನಿಮ್ಮ ಫೋನ್ ಸಂಪರ್ಕಗಳನ್ನು ಮರ್ಜ್ ಮಾಡುವುದು ಮೊದಲಾದ ಕೆಲಸಗಳನ್ನು ಮಾಡಲಿದೆ.

ಈ ಕಿಟ್ ಮೆಶ್ ನೆಟ್‌ವರ್ಕ್‌ಗಳಿಗೆ ಬೆಂಬಲವನ್ನು ನೀಡುತ್ತಿದ್ದು, ಡಿವೈಸ್ ಸ್ವತಂತ್ರ ನೆಟ್‌ವರ್ಕ್ ಅನ್ನು ಹೊಂದಿದ್ದರೂ ಇದು ಕೆಲಸ ಮಾಡುತ್ತದೆ. ಇದು ಸೆಂಟ್ರಲೈಸ್ಡ್ ಕನೆಕ್ಶನ್‌ನಲ್ಲಿ ಕೂಡ ಕಾರ್ಯನಿರ್ವಹಿಸಲಿದೆ. ಇಂತಹ ವ್ಯವಸ್ಥೆಯು ನಿರ್ದಿಷ್ಟವಾಗಿ ತರಗತಿಗಳಲ್ಲಿ ಹೆಚ್ಚು ಸಹಕಾರಿ ಎಂದೆನಿಸಲಿದೆ.

ನೀವು ಬಳಸುತ್ತಿರುವ ಅಪ್ಲಿಕೇಶನ್‌ಗಳು ಸಮೀಪದ ಸಂಪರ್ಕಗಳನ್ನು ಪಡೆದುಕೊಳ್ಳುವುದು ಶೀಘ್ರದಲ್ಲಿ ಅಸಾಧ್ಯವಾಗಿದ್ದರೂ ಕೆಲವೊಂದು ಕಂಪನಿಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಕಡಿಮೆ ಇಂಟರ್ನೆಟ್ ದೊರೆಯುವ ಸ್ಥಳದಲ್ಲಿ ಹವಾಮಾನ ಮುನ್ಸೂಚನೆಗಳನ್ನು ಈ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಆ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಬಹುದಾಗಿದೆ.

ಹಾಟ್‌ಸ್ಟಾರ್‌ನಂತಹ ಸೌಲಭ್ಯಗಳು ಆಫ್‌ಲೈನ್ ಮೀಡಿಯಾ ಶೇರಿಂಗ್ ಅನ್ನು ಒದಗಿಸುತ್ತಿದ್ದು ಆಫ್‌ಲೈನ್‌ನಲ್ಲಿರುವ ಜನರನ್ನು ಹುಡುಕಲು ಇದು ಸಹಕಾರಿಯಾಗಿದೆ. ಇನ್ನು ಗೂಗಲ್ ಕೂಡ ತನ್ನದೇ ಆದ ಆಂಡ್ರಾಯ್ಡ್ ಟಿವಿ ರಿಮೋಟ್ ಅಪ್ಲಿಕೇಶನ್ ಅನ್ನು ಹೊರತರಲಿದ್ದು ನೀವು ಶೋಗಳನ್ನು ನೋಡುತ್ತಿರುವಾಗಲೇ ಇದು ಹತ್ತಿರದ ಸಂಪರ್ಕಗಳನ್ನು ಬಳಸುವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Now a days internet is a part of our life, think about if you have smartphone but no internet connectivity. But if you have this app on your smartphone then no need to worry about internet bec you can use near by device app without internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+