Home
Apps

ನಿಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ಅದ್ಬುತ ಚಿತ್ರಗಳನ್ನು ಸೆರೆಹಿಡಿಯುವ 'ಅಪ್‌'ಗಳಿವು!!

By Bhaskar N J

ದುಬಾರಿ ಬೆಲೆ ತೆತ್ತು ಕ್ಯಾಮರಾ ಕೊಂಡುಕೊಳ್ಳುವ ಕಾಲ ಮುಗಿದು ದುಬಾರಿ ಬೆಲೆಯ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಸಮಯ ಬಂದಿದೆ. ದುಬಾರಿ ಬೆಲೆಯ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಖರಿದಿಸುವುದು ನಿಮ್ಮ ಫೋಟೋಗ್ರಫಿ ಇಷ್ಟಗಳನ್ನು ಪೂರೈಸುವುದು ಸಾಧ್ಯವಾದರೂ ಸಹ ಅವುಗಳನ್ನು ಖರೀದಿಸುವುದು ಅಷ್ಟೇನು ಉತ್ತಮವಲ್ಲ ಎನ್ನಬಹುದು.

ಹೌದು, ಫೋಟೋಗ್ರಫಿಗಾಗಿಯೇ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದನ್ನು ಇನ್ಮುಂದೆ ಬಿಟ್ಟುಬಿಡಿ. ಏಕೆಂದರೆ, ನೀವು ಈಗ ಬಳಸುತ್ತಿರುವ ಸ್ಮಾರ್ಟ್‌ಫೋನಿನಲ್ಲಿಯೇ ಅತ್ಯದ್ಬುತ ಚಿತ್ರಗಳನ್ನು ಸೆರೆಹಿಡಿಯುವಂತಹ ಮೊಬೈಲ್‌ ಅಪ್ಲಿಕೇಷನ್‌ಗಳು ಲಭ್ಯವಿವೆ. ಈ ಎಲ್ಲಾ ಮೊಬೈಲ್ ಆಪ್‌ಗಳು ನಿಮ್ಮ ಫೋಟೋಗ್ರಫಿ ಹವ್ಯಾಸವನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ಅದ್ಬುತ ಚಿತ್ರಗಳನ್ನು ಸೆರೆಹಿಡಿಯುವ 'ಅಪ್‌'ಗಳಿವು!

ಇಂದು ಪ್ಲೇಸ್ಟೋರ್‌ನಲ್ಲಿ ಸಾಕಷ್ಟು ಫೋಟೋಗ್ರಫಿ ಅಪ್ಲಿಕೇಶನ್ ಲಭ್ಯವಿದ್ದು, ಇವುಗಳು ಹೆಚ್ಚು ಕಡಿಮೆ ಉಚಿತವಾಗಿರುತ್ತವೆ. ಇಂತಹ ಒಂದು ಅಪ್ಲಿಕೇಶನ್ ಅನ್ನು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಫೋಟೋಗ್ರಫಿ ಕಲೆಯನ್ನು ಇನ್ನಷ್ಟು ವೈಭವೀಕರಿಸಿಕೊಳ್ಳಿ. ಇಂದಿಲ್ಲಿ ಟಾಪ್ 20 ಕ್ಯಾಮರಾ ಅಪ್ಲಿಕೇಶನ್‌ಗಳನ್ನು ನಾವು ನಿಮಗಾಗಿ ಕಲೆಹಾಕಿದ್ದೇವೆ.

1 ಗೂಗಲ್ ಕ್ಯಾಮರಾ

1 ಗೂಗಲ್ ಕ್ಯಾಮರಾ

ಅಟೊ ಎಚ್‌ಡಿಆರ್+ ಫೀಚರ್ ಅನ್ನು ಈ ಅಪ್ಲಿಕೇಶನ್ ಪಡೆದುಕೊಂಡಿದ್ದು ಇದು ನಿಮ್ಮ ಫೋಟೋವನ್ನು ಅದ್ಭುತಗೊಳಿಸಲಿವೆ. ಇದು ಬಳಸಲು ಸರಳವಾಗಿದ್ದು ಬೇರೆ ಬೇರೆ ಜಾಹೀರಾತುಗಳ ಕಿರಿಕಿರಿಯನ್ನು ಹೊಂದಿಲ್ಲ. ನೀವು ವೀಡಿಯೊ ಮತ್ತು ಫೋಟೋ ನಡುವೆ ಬದಲಾವಣೆ ಮಾಡಿಕೊಳ್ಳಲು ಅಟೊ ಸ್ವಿಚ್ ಮೋಡ್ ಅನ್ನು ಬಳಸಿಕೊಳ್ಳಬಹುದಾಗಿದೆ. ಗೂಗಲ್ ಕ್ಯಾಮಾದಲ್ಲಿ ವೀಡಿಯೊಗಳನ್ನು ನಿಮಗೆ ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.

2 ಕ್ಯಾಂಡಿ ಕ್ಯಾಮರಾ

2 ಕ್ಯಾಂಡಿ ಕ್ಯಾಮರಾ

ನೀವು ಸೆಲ್ಫಿ ಪ್ರಿಯರು ಎಂದಾದಲ್ಲಿ ಈ ಕ್ಯಾಮರಾ ಅಪ್ಲಿಕೇಶನ್ ನಿಮಗೆ ಖಂಡಿತ ಸಹಾಯ ಮಾಡಲಿದೆ. ಸೈಲೆಂಟ್ ಮೋಡ್‌ನಲ್ಲಿ ಕೂಡ ಇದರಲ್ಲಿ ಸೆಲ್ಫಿ ಕ್ಕಿಕ್ಕಿಸಿಕೊಳ್ಳಬಹುದಾಗಿದೆ. ಇದರಲ್ಲಿರುವ ಕೊಲಾಜ್‌ನಿಂದ ಬೇರೆ ಬೇರೆ ವಿನ್ಯಾಸಗಳಲ್ಲಿ ನಿಮ್ಮ ಸೆಲ್ಫಿಯನ್ನು ಚಂದಗಾಣಿಸಬಹುದಾಗಿದೆ.

3 ರೆಟ್ರಿಕಾ

3 ರೆಟ್ರಿಕಾ

ಫೇಸ್‌ಬುಕ್ ಮೊದಲಾದ ಸಾಮಾಜಿಕ ತಾಣದಲ್ಲಿ ಈ ಕ್ಯಾಮೆರಾ ಅಪ್ಲಿಕೇಶನ್ ಬಳಸಿಕೊಂಡು ಉತ್ತಮ ಫೋಟೋಗಳನ್ನು ತೆಗೆದು ಶೇರ್ ಮಾಡಿಕೊಳ್ಳಬಹುದು. ಆದರೆ ನಿಮ್ಮ ಫೋಟೋದಲ್ಲಿ ಇದರ ವಾಟರ್‌ಮಾರ್ಕ್ ಗೋಚರಿಸುತ್ತದೆ ಎಂಬುದು ಇದರ ಋಣಾತ್ಮಕ ಅಂಶವಾಗಿದೆ. ಇದು ಲೈವ್ ಫಿಲ್ಟರ್‌ಗಳನ್ನು ಹೊಂದಿದ್ದು ಬೇರೆ ಕ್ಯಾಮರಾ ಅಪ್ಲಿಕೇಶನ್‌ಗಳಲ್ಲಿ ಈ ಆಪ್ಶನ್ ಲಭ್ಯವಿರುವುದಿಲ್ಲ.

4 ಆಫ್ಟರ್ ಫೋಕಸ್

4 ಆಫ್ಟರ್ ಫೋಕಸ್

ಆಫ್ಟರ್‌ಫೋಕಸ್ ಮೂಲಕ ನೀವು ಡಿಎಸ್‌ಎಲ್‌ಆರ್ ಮಾದರಿಯಲ್ಲಿ ಹಿನ್ನೆಲೆಯನ್ನು ಬ್ಲರ್ ಮಾಡಿಕೊಂಡು ಫೋಟೋವನ್ನು ತೆಗೆದುಕೊಳ್ಳಬಹುದು. ಹೆಚ್ಚು ವೃತ್ತಿಪರ ನೈಜ ಫೋಟೋಗಳನ್ನು ನೀವು ಈ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

5 ಫೋಟೋ ಲ್ಯಾಬ್ ಪಿಕ್ಚರ್ ಎಡಿಟರ್

5 ಫೋಟೋ ಲ್ಯಾಬ್ ಪಿಕ್ಚರ್ ಎಡಿಟರ್

ಇಲ್ಲಿ ನಿಮಗೆ ಹೆಚ್ಚಿನ ಮೋಜಿನ ಫೋಟೋ ಇಫೆಕ್ಟ್‌ಗಳು ದೊರೆಯುತ್ತವೆ. ಫೋಟೋ ಫ್ರೇಮ್‌ಗಳು, ಅನಿಮೇಟೆಡ್ ಇಫೆಕ್ಟ್‌ಗಳನ್ನು ಇಲ್ಲಿ ನಿಮ್ಮ ಫೋಟೋಗೆ ಹೊಂದಾಣಿಕೆಯಾಗುವಂತೆ ನಿಮಗೆ ಮಾಡಿಕೊಳ್ಳಬಹುದಾಗಿದೆ.

6 ಫೋಟೋ ಎಡಿಟರ್ ಪ್ರೊ

6 ಫೋಟೋ ಎಡಿಟರ್ ಪ್ರೊ

ಇದೊಂದು ಶಕ್ತಿಶಾಲಿ ಫೋಟೋ ಎಡಿಟರ್ ಆಗಿದ್ದು ಅದ್ಭುತ ಇಫೆಕ್ಟ್‌ಗಳನ್ನು ಇದು ಹೊಂದಿದೆ ಮತ್ತು ನಿಮ್ಮ ಫೋಟೋವನ್ನು ಇನ್ನಷ್ಟು ಅದ್ಭುತ ಪರಿಣಾಮಗಳ ಮೂಲಕ ವ್ಯಕ್ತಪಡಿಸಬಹುದಾಗಿದೆ.

7 ಕ್ಯಾಮರಾ ಎಮ್‌ಎಕ್ಸ್ ಲೈವ್ ಫೋಟೋ ಅಪ್ಲಿಕೇಶನ್

7 ಕ್ಯಾಮರಾ ಎಮ್‌ಎಕ್ಸ್ ಲೈವ್ ಫೋಟೋ ಅಪ್ಲಿಕೇಶನ್

ಇದೊಂದು ಉಚಿತ ಕ್ಯಾಮರಾ ಅಪ್ಲಿಕೇಶನ್ ಆಗಿದ್ದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಿಗೆ ಇದು ಲಭ್ಯವಾಗಲಿದೆ. ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲೈವ್ ಫೋಟೋಗಳನ್ನು ನಿಮಗೆ ಮಾಡಬಹುದು.

8 ಕ್ಯಾಮರಾ - ಫೋಟೋ ಬ್ಯೂಟಿ ಎಡಿಟರ್

8 ಕ್ಯಾಮರಾ - ಫೋಟೋ ಬ್ಯೂಟಿ ಎಡಿಟರ್

ಇದೊಂದು ಪವರ್‌ಫುಲ್ ಎಡಿಟರ್ ಆಗಿದ್ದು ಇಲ್ಲಿ ನೀವು ಬೇರೆಬೇರೆ ಸೆಲ್ಫಿ ಫಿಲ್ಟರ್‌ಗಳು ಮತ್ತು ಇಫೆಕ್ಟ್‌ಗಳನ್ನು ಕಂಡುಕೊಳ್ಳಬಹುದು. ನೀವು ಸುಲಭವಾಗಿ ಹಿನ್ನಲೆಯನ್ನು ಬ್ಲರ್ ಮಾಡಬಹುದು.

9 ಸ್ನ್ಯಾಪ್‌ಸ್ಪೀಡ್

9 ಸ್ನ್ಯಾಪ್‌ಸ್ಪೀಡ್

ಇದು ವೃತ್ತಿಪರ ನೋಟವನ್ನು ನಿಮ್ಮ ಫೋಟೋಗೆ ನೀಡುತ್ತದೆ. ಬರೇ ನಿಮ್ಮ ಬೆರಳನ್ನು ಬಳಸಿಕೊಂಡು ನೀವು ಮರುಸ್ಪರ್ಶಿಸಬಹುದು, ಮರುಎಡಿಟ್ ಮಾಡಬಹುದಾಗಿದೆ.

10 ಕ್ಯಾಮರಾ 360

10 ಕ್ಯಾಮರಾ 360

ಇದು ಹೆಚ್ಚು ಟ್ರೆಂಡಿಂಗ್ ಆಗಿರುವ ಅಪ್ಲಿಕೇಶನ್ ಆಗಿದ್ದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಿದೆ. ಇದರಲ್ಲಿ ಮೋಜಿನ ಸ್ಟಿಕ್ಕರ್, ಕಾರ್ಟೂನ್ ಇಫೆಕ್ಟ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದು.

11 ಕ್ಯಾಮರಾ ಎಫ್‌ವಿ - 5 ಲೈಟ್

11 ಕ್ಯಾಮರಾ ಎಫ್‌ವಿ - 5 ಲೈಟ್

ಇದೊಂದು ವೃತ್ತಿಪರ ಅಪ್ಲಿಕೇಶನ್ ಆಗಿದ್ದು ಮೊಬೈಲ್ ಸಾಧನಗಳಿಗೆ ಸೂಕ್ತವಾಗಿದೆ. ನಿಮ್ಮ ಬೆರಳುಗಳನ್ನು ಬಳಸಿಕೊಂಡೇ ಡಿಎಸ್‌ಎಲ್‌ಆರ್ ಮಾದರಿಯ ಮ್ಯಾನುವಲ್ ಕಂಟ್ರೋಲ್‌ಗಳನ್ನು ನೀವು ನಿರ್ವಹಿಸಬಹುದು.

12 ಡಿಎಸ್‌ಎಲ್‌ಆರ್ ಕ್ಯಾಮರಾ ಪ್ರೊ

12 ಡಿಎಸ್‌ಎಲ್‌ಆರ್ ಕ್ಯಾಮರಾ ಪ್ರೊ

ಇದೊಂದು ವೃತ್ತಿಪರ ಕ್ಯಾಮರಾ ಅಪ್ಲಿಕೇಶನ್ ಆಗಿದ್ದು ಮಿಮಿಕ್ ಡಿಎಸ್‌ಎಲ್‌ಆರ್ ಮಾದರಿಯ ಫೋಟೋ ಗುಣಮಟ್ಟವನ್ನು ಪಡೆದುಕೊಳ್ಳಬಹುದು.

13 ಮ್ಯಾನುವಲ್ ಕ್ಯಾಮರಾ

13 ಮ್ಯಾನುವಲ್ ಕ್ಯಾಮರಾ

ಸ್ಟಾಕ್ ಆಂಡ್ರಾಯ್ಡ್ ಲಾಲಿಪಪ್ ಕ್ಯಾಮರಾ ಇದಾಗಿದೆ. ಲಾಲಿಪಪ್ ಓಎಸ್ ಅಸ್ತಿತ್ವಕ್ಕೆ ಬಂದಾಗ ಕ್ಯಾಮರಾ2 ಎಪಿಐ ಅನ್ನು ಇದು ಪ್ರಸ್ತುಪಡಿಸಿತ್ತು.

14 ಸ್ನ್ಯಾಪ್ ಕ್ಯಾಮರಾ ಎಚ್‌ಡಿಆರ್

14 ಸ್ನ್ಯಾಪ್ ಕ್ಯಾಮರಾ ಎಚ್‌ಡಿಆರ್

ಒಂದೇ ಕ್ಲಿಕ್‌ನಲ್ಲಿ ನೀವು ಫೋಟೋವನ್ನು ತೆಗೆಯಬಹುದು ಮತ್ತು ವೀಡಿಯೊ ರೆಕಾರ್ಡ್ ಮಾಡಬಹುದಾಗಿದೆ. ನೀವು ಇದರಲ್ಲಿ ಎರಡು ಬಟನ್‌ಗಳನ್ನು ಬಳಸಿದರೆ ಆಯಿತು ಮತ್ತು ನಿಮಗೆ ಬೇಕಾದ ಕ್ಯಾಮರಾ ಮೋಡ್ ಅನ್ನು ಆರಿಸಿದರೆ ಸಾಕು.

15 ವಿಸ್ಕೊ

15 ವಿಸ್ಕೊ

ಇದೊಂದು ಅದ್ಭುತ ಕ್ಯಾಮರಾ ಅಪ್ಲಿಕೇಶನ್ ಆಗಿದ್ದು ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳನ್ನು ನೀವು ವೃತ್ತಿಪರ ಕ್ಯಾಮರಾ ಆಗಿ ರೂಪಿಸಿಕೊಳ್ಳಬಹುದಾಗಿದೆ.

16 ಓಪನ್ ಕ್ಯಾಮರಾ

16 ಓಪನ್ ಕ್ಯಾಮರಾ

ಇದರಲ್ಲಿ ಸಂಪೂರ್ಣ ಕ್ಯಾಮರಾ ಮಾದರಿಯ ಫೀಚರ್‌ಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದು ಉಚಿತವಾಗಿದ್ದು ಜಾಹೀರಾತು ಮುಕ್ತವಾಗಿದೆ.

17 ಪ್ರೊ ಕ್ಯಾಪ್ಚರ್

17 ಪ್ರೊ ಕ್ಯಾಪ್ಚರ್

ಇದು ಹೆಚ್ಚು ಸುಧಾರಿತ ಫೀಚರ್‌ಗಳನ್ನು ಒಳಗೊಂಡಿದ್ದು, ಕ್ಯಾಮರಾ ಶೂಟಿಂಗ್ ಮೋಡ್‌ಗಳು ಇದರಲ್ಲಿ ನಿಮಗೆ ಬೆಂಬಲವನ್ನು ನೀಡಲಿವೆ.

18 ಲೂಮಿಯಾ ಕ್ಯಾಮರಾ

18 ಲೂಮಿಯಾ ಕ್ಯಾಮರಾ

ಇದು ಪೂರ್ಣ ಫೀಚರ್‌ಗಳನ್ನು ಒಳಗೊಂಡಿದ್ದು ಫೋಟೋಗ್ರಫಿ ಇಷ್ಟಪಡುವವರಿಗೆ ಇದು ಅಚ್ಚುಮೆಚ್ಚಿನ ಅಪ್ಲಿಕೇಶನ್ ಆಗಿದೆ.

19 ಕ್ಯಾಮರಾ ಜೂಮ್ ಎಫ್‌ಎಕ್ಸ್

19 ಕ್ಯಾಮರಾ ಜೂಮ್ ಎಫ್‌ಎಕ್ಸ್

ಕ್ಯಾಮರಾ ಇದು ಬರ್ಸ್ಟ್‌ಮೋಡ್, ರಾ ಕ್ಯಾಪ್ಚರ್, ಎಚ್‌ಡಿಆರ್ ಪ್ರೊ ಮತ್ತು ಇನ್ನಷ್ಟು ಫೀಚರ್‌ಗಳನ್ನು ಇದು ಒಳಗೊಂಡಿದೆ.

20 ವಿಗ್ನೆಟ್

20 ವಿಗ್ನೆಟ್

ಇದು ಸಂಪೂರ್ಣ ಫೀಚರ್ ಉಳ್ಳ ಕ್ಯಾಮರಾ ಅಪ್ಲಿಕೇಶನ್ ಆಗಿದ್ದು ಇದರಲ್ಲಿ ಸಾಕಷ್ಟು ಫ್ರೇಮ್‌ಗಳು ಮತ್ತು ಫಿಲ್ಟರ್‌ಗಳನ್ನು ನೀವು ಕಂಡುಕೊಳ್ಳಬಹುದು.

Best Mobiles in India

English summary
20 of the best photo apps: top editing apps for iOS and Android devices. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+