ಮೊಬೈಲ್‌ನಲ್ಲಿ ನೀರುಕುಡಿದಂಗೆ 'ಫೋಟೋಗ್ರಫಿ' ಮಾಡಲು ಇಲ್ಲಿವೆ ಬೆಸ್ಟ್ ಆಪ್ಸ್!!

|

ಹಿಂದೆಲ್ಲಾ ಲಕ್ಷಾಂತರ ರೂಪಾಯಿ ಹಣ ನೀಡಿ ಖರೀದಿಸಿದ ಕ್ಯಾಮೆರಾ ಇದ್ದರಷ್ಟೆ ಫೋಟೋಗ್ರಫಿ ಕಲಿಯಬಹುದು ಎಂಬಮಾತಿತ್ತು. ಆದರೆ, ಈಗ ಒಂದು ಸ್ಮಾರ್ಟ್‌ಫೋನ್ ಹಾಗೂ ಪೋಟೊಗಳನ್ನು ನಮಗೆ ಬೇಕಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಲು ಕೆಲವೊಂದಿಷ್ಟು ಆಪ್‌ಗಳಿದ್ದರೆ ಸಾಕು ಅವರು ಕೂಡ ಫೋಟೋಗ್ರಫಿಯನ್ನು ನೀರುಕುಡಿದಂಗೆ ಕಲಿಯಬಹುದು.

ಈಗ ನೋಡಿ, ದಿನಗಳು ಕಳೆದಂತೆ ಸ್ಮಾರ್ಟ್‌ಫೋನಿನ ಕ್ಯಾಮೆರಾಗಳಿಗಾಗಿ ಹೊಸ ಹೊಸ ಆಪ್ ಗಳು ಹೊರಬರುತ್ತಲೇ ಇವೆ. ಈ ಆಪ್‌ಗಳಲ್ಲಿ ಆಶ್ಚರ್ಯ ಹುಟ್ಟಿಸುವಷ್ಟು ಚೆನ್ನಾಗಿ ಫೋಟೋಗಳನ್ನು ಚಿತ್ರಿಸಬಹುದಾದ ತಂತ್ರಜ್ಞಾನಗಳು ಬರುತ್ತಿವೆ. ಮೊಬೈಲ್ ಫೋನು ಬಳಸಿ ಫೋಟೋ ತೆಗೆಯುವ ಪ್ರಯಾಸವನ್ನು ಸಾಕಷ್ಟು ಕಡಿಮೆ ಮಾಡಿ ಖುಷಿ ನೀಡುತ್ತಿವೆ.!

ಮೊಬೈಲ್‌ನಲ್ಲಿ ನೀರುಕುಡಿದಂಗೆ 'ಫೋಟೋಗ್ರಫಿ' ಮಾಡಲು ಇಲ್ಲಿವೆ ಬೆಸ್ಟ್ ಆಪ್ಸ್!!

ಸೊಟ್ಟದಾಗಿ ತೆಗೆದ ಅಥವಾ ಲೈಟ್ ಸರಿ ಇಲ್ಲದಿರುವಾಗ ಫೋಟೋ ತೆಗೆದಿದ್ದರೂ ಫೋಟೋಗಳನ್ನು ಸರಿ ಮಾಡಿಕೊಡಬಲ್ಲ ಈ ಆಪ್‌ಗಳು ನಿಮ್ಮ ಫೋಟೋವನ್ನು ಅಪೂರ್ವ ಕಲಾಕೃತಿಯಂತೆ ಪರಿವರ್ತಿಸುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ನೀವು ತೆಗೆದ ಫೋಟೋಗಳನ್ನು ಉತ್ತಮಪಡಿಸಲು ಇರುವ ಕೆಲವು ಆಪ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯಿರಿ.

ಫೋಟೋ ಸ್ಕ್ಯಾನ್ (Google PhotoScan)

ಫೋಟೋ ಸ್ಕ್ಯಾನ್ (Google PhotoScan)

ನಿಮ್ಮಲ್ಲಿ ಇರುವ ಹಳೆಯ ಫೋಟೋಗಳನ್ನು ಸಹ ಡಿಜಿಟಲ್ ಫಾರ್ಮ್ಯಾಟಿಗೆ ಕನ್ವರ್ಟ್ ಮಾಡಿದ ತರುವಾಯ ಫೈಲನ್ನು ಸರಿಯಾಗಿ ಬ್ಯಾಕಪ್ ಮಾಡಿಟ್ಟು ಕೊಳ್ಳಬಹುದಾದ ಈ ಆಪ್ ಕೂಡ ಫೋಟೋಗ್ರಫಿಗೆ ಬೆಸ್ಟ್ ಆಪ್. ಡಿಜಿಟಲ್ ಕ್ಯಾಮೆರಾಗಳು ಬರುವ ತನಕ ಪ್ರಿಂಟ್ ತೆಗೆಸಿಟ್ಟ ಫೋಟೋಗಳನ್ನೆಲ್ಲ ಈ ಆಪ್ ಬಳಸಿ ನಿಮ್ಮ ಡಿಜಿಟಲ್ ಆಲ್ಬಮ್‌ಗಳಿಗೆ ಹಾಕಿಟ್ಟುಕೊಳ್ಳಬಹುದು.

ಕ್ಯಾಮೆರಾ ಎಫ್5 ಲೈಟ್ (Camera FV-5 Lite)

ಕ್ಯಾಮೆರಾ ಎಫ್5 ಲೈಟ್ (Camera FV-5 Lite)

ಈ ಅಪ್ಲಿಕೇಶನ್ ಅನ್ನು ಪ್ರೊಫೆಷನಲ್ ಫೋಟೋಗ್ರಾಫರ್ ಗಳಿಗಾಗಿ ಡಿಸೈನ್ ಮಾಡಲಾಗಿದೆ. ಇದರಲ್ಲಿ ಎರಡು ಆವೃತ್ತಿಗಳು ಇದ್ದು "camera FV-5 Lite" ಮತ್ತು "Camera FV-5 Pro", "camera FV-5 Lite" ಆವೃತ್ತಿಯು ಉಚಿತವಾಗಿ ದೊರೆಯುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಶಟರ್ ಸ್ಪೀಡ್, ವೈಟ್ ಬ್ಯಾಲೆನ್ಸ್ ಸರಿಪಡಿಸಿಕೊಳ್ಳುವಂತಹ ಪ್ರಮುಖ ವೈಶಿಷ್ಟ್ಯಗಳಿವೆ.

ಸ್ನ್ಯಾಪ್‌ಸ್ಪೀಡ್ (Snapseed)

ಸ್ನ್ಯಾಪ್‌ಸ್ಪೀಡ್ (Snapseed)

ಒಂದು ಕಾಲದಲ್ಲಿ ಫೋಟೋಶಾಪ್ ಬಳಸಿ ಮಾಡುತ್ತಿದ್ದ ಬಹುಪಾಲು ಕೆಲಸಗಳನ್ನು ಗೂಗಲ್ ಹೊರತಂದಿರುವ ಈ ಆಪ್ ಬಳಸಿ ಮಾಡಿಬಿಡಬಹುದಾಗಿದೆ. ಸ್ಮಾರ್ಟ್ ಫೋನಿನಲ್ಲಿಯೇ ಫೋಟೋಗಳನ್ನು ಬದಲಾಯಿಸಿಬಿಡಬಹುದಾದ ಈ ಆಪ್‌ ಉಚಿತವಾಗಿ ಆಂಡ್ರಾಯ್ಡ್ ಹಾಗು ಐಓಎಸ್ ಬಳಕೆದಾರರಿಗೆ ಲಭ್ಯವಿದೆ.

ಕ್ಯಾಮೆರಾ ಎಮ್‌ಎಕ್ಸ್ (Camera MX)

ಕ್ಯಾಮೆರಾ ಎಮ್‌ಎಕ್ಸ್ (Camera MX)

ಈ ಅಪ್ಲಿಕೇಶನ್ ಫೋಟೋ ರೆಸೊಲ್ಯೂಷನ್ ನ ಮೇಲೆ ಸಂಪೂರ್ಣ ಹಿಡಿತವನ್ನು ನೀಡುತ್ತದೆ. ಇದರಲ್ಲಿ ಅನಿಮೇಟೆಡ್ ಫೋಟೋ ಮತ್ತು ವಿಡಿಯೋಗಳನ್ನು ರಚಿಸಿ ಅವುಗಳಿಗೆ ಎಫೆಕ್ಟ್, ಫಿಲ್ಟರ್, ಫ್ರೇಮ್ ಗಳನ್ನೂ ಬಹಳ ಸುಲಭವಾಗಿ ಹಾಕಬಹುದು. ಈ ಅಪ್ಲಿಕೇಶನ್ ನ ಪ್ರಮುಖ ವೈಶಿಷ್ಟ್ಯಗಳು ನಿಮ್ಮ ಫೋಟೋಗ್ರಫಿಗೆ ಸಹಾಯಕವಾಗುತ್ತವೆ.

ಸ್ಟೋರಿ ಬೋರ್ಡ್ (Storyboard)

ಸ್ಟೋರಿ ಬೋರ್ಡ್ (Storyboard)

ಗೂಗಲ್ ಹೊರತಂದಿರುವ ಕೆಲವು ಹೊಸ ಫೋಟೋಗ್ರಫಿ ಆಪ್‌ಗಳಲ್ಲಿ ಒಂದಾದ ಸ್ಟೋರಿ ಬೋರ್ಡ್ ಯಾವುದಾದರೂ ಕಾರ್ಯಕ್ರಮದಲ್ಲಿ ಅಥವ ಪ್ರವಾಸದಲ್ಲಿ ನೀವು ತೆಗೆದಿಟ್ಟ ವೀಡಿಯೋ ಒಂದನ್ನು ಕಾರ್ಟೂನ್ ಕಥಾನಕದಂತೆ ಮಾಡಿಕೊಡಬಲ್ಲದು.

ಸೆಲ್ಫಿ ಸಿಸಿಮೊ (Selfissimo)

ಸೆಲ್ಫಿ ಸಿಸಿಮೊ (Selfissimo)

ಆಪಲ್ ಬಳಕೆದಾರರಿಗೆ ಚಿರಪರಿಚಿತವಾಗಿರುರುವ ಫೋಟೋ ಬೂತ್ ಅಪ್ಲಿ ಕೇಶನ್‌ಗೆ ಹತ್ತಿರವಾದ ಬಳಕೆ ಇರುವ ಆಪ್ ಈ ಸೆಲ್ಫಿ ಸಿಸಿಮೊ! ಗೂಗಲ್ ಸಂಶೋಧಕರ ತಂಡವೊಂದು ರೂಪಿಸಿರುವ ಆಪ್. ಸ್ವಿಚ್ ಆನ್ ಮಾಡುತ್ತಿದ್ದಂತೆ ಎದುರಿಗೆ ಕುಳಿತ ನಿಮ್ಮ ವಿವಿಧ ಭಂಗಿಗಳನ್ನು ರೆಕಾರ್ಡ್ ಮಾಡುತ್ತ ನಿಮ್ಮ ಫೋಟೋ ತೆಗೆಯುತ್ತ ಹೋಗುತ್ತದೆ.

ಈ ಭವಿಷ್ಯದ ಗ್ಯಾಜೆಟ್‌ಗಳು ವಾಸ್ತವದಲ್ಲಿವೆ ಎಂಬುದನ್ನು ನೀವು ನಂಬುವುದಿಲ್ಲ!!

ಈ ಭವಿಷ್ಯದ ಗ್ಯಾಜೆಟ್‌ಗಳು ವಾಸ್ತವದಲ್ಲಿವೆ ಎಂಬುದನ್ನು ನೀವು ನಂಬುವುದಿಲ್ಲ!!

ಪ್ರತಿದಿನವೂ ತಂತ್ರಜ್ಞಾನ ಪ್ರಪಂಚ ಭಾರೀ ಬದಲಾವಣೆಗಳು ಆಗುತ್ತಿರುತ್ತವೆ. ಆದರೆ, ತಂತ್ರಜ್ಞಾನ ಪ್ರಪಂಚದಲ್ಲಿ ಆದ ಇತ್ತೀಚಿನ ಬದಲಾವಣೆಗಳು ಯಾವುವು ಎಂಬ ಮಾಹಿತಿ ಮಾತ್ರ ಸರಿಯಾಗಿ ನಮಗೆ ಸಿಗುತ್ತಿರುವುದಿಲ್ಲ. ಏಕೆಂದರೆ, ಪ್ರತಿದಿನವೂ ಹುಟ್ಟಿಕೊಳ್ಳುವ ಹೊಸದೊಂದು ತಂತ್ರಜ್ಞಾನ ಮುನ್ನಲೆಗೆ ಬರಲು ಹತ್ತಾರು ವರ್ಷಗಳೇ ಬೇಕಾಗಬಹುದು.

ಅದರಲ್ಲಿಯೂ ಭಾರತಕ್ಕೆ ಆ ತಂತ್ರಜ್ಞಾನ ಕಾಲಿಡಲು ಇನ್ನು ಹೆಚ್ಚಿನ ಸಮಯ ಬೇಕು ಎಂದರೆ ತಪ್ಪಾಗಲಾರದು. ಹಾಗಾಗಿ, ನಾವು ನಿಮಗೆ ಇತ್ತೀಚಿಗೆ ನಡೆದಿರುವ ತಂತ್ರಜ್ಞಾನ ಪ್ರಪಂಚದ ಅಪ್‌ಡೇಟ್‌ಗಳನ್ನು ತಿಳಿಸಿಕೊಡುತ್ತೇವೆ. ಅಂದರೆ, ವಿಶ್ವದಲ್ಲಿ ಇತ್ತೀಚಿಗೆ ಯಶಸ್ವಿಯಾಗಿ ಅಭಿವೃದ್ದಿಯಾಗಿರುವ ತಂತ್ರಜ್ಞಾನಗಳು ಯಾವುವು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ವಾಸ್ತವದಲ್ಲಿ ಈ ರೀತಿಯ ತಂತ್ರಜ್ಞಾನವನ್ನು ಹೊಂದಿರುವ ಅದ್ಭುತ ಗ್ಯಾಡ್ಜೆಟ್‍ಗಳು ಇವೆಯೇ ಎಂಬುವಷ್ಟು ಈ ಯಶಸ್ವಿ ತಂತ್ರಜ್ಞಾನಗಳು ನಿಮ್ಮನ್ನು ಅಚ್ಚರಿಗೆ ದೂಡುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಇತ್ತೀಚಿಗೆ ಯಶಸ್ವಿಯಾಗಿ ಅಭಿವೃದ್ದಿಯಾಗಿರುವ ವಿಶ್ಮಯ ತಂತ್ರಜ್ಞಾನಗಳು ಯಾವುವು? ಗ್ಯಾಜೆಟ್ ಲೋಕದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಪ್ರೊಜೆಕ್ಷನ್ ಬ್ರಾಸ್‌ಲೆಟ್!!

ಪ್ರೊಜೆಕ್ಷನ್ ಬ್ರಾಸ್‌ಲೆಟ್!!

ಡಿಜಿಟಲ್ ಯುಗದ ಭವಿಷ್ಯದ ತಂತ್ರಜ್ಞಾನವಾದ ಹ್ಯಾಂಡ್ ಪ್ರೊಜೆಕ್ಷನ್ ಬ್ರಾಸ್‌ಲೆಟ್ ಅಭಿವೃದ್ಧಿಯ ಹಂತದಲ್ಲಿರುವ ಒಂದು ಅದ್ಭುತವಾದ ತಂತ್ರಜ್ಞಾನವಾಗಿದೆ. ನಿಮ್ಮ ಕೈಯಲ್ಲಿ ಪರದೆಯೊಂದನ್ನು ರಚಿಸಲು ಅನುವು ಮಾಡಿಕೊಡುವ ಈ ಬ್ರಾಸ್‌ಲೆಟ್ ನಿಮ್ಮ ಸ್ಮಾರ್ಟ್‌ಫೋನ್‌ ಆಗಿರಲಿದೆ. ಇದು ಇನ್ನೇನು ಕೆಲವೇ ದಿವಸಗಳಲ್ಲಿ ನಿಮ್ಮ ಕೈ ಸೇರಲಿದೆ.

ಲೂನಾ ತಲೆದಿಂಬು!

ಲೂನಾ ತಲೆದಿಂಬು!

ಮನೆಯೇ ಡಿಜಿಟೈಸ್ ಆಗುತ್ತಿರುವಾದ ನಿಮ್ಮ ಹಾಸಿಗೆ ಮತ್ತು ದಿಂಬು ಡಿಜಿಟೈಸ್ ಆಗಬಾರದೇ? ಯಾಕಿಲ್ಲ. ಲೂನಾ ಸ್ಲೀಪ್ ಕವರ್ ಎಂಬ ಸ್ಮಾರ್ಟ್ ತಲೆದಿಂಬೊಂದು ಅಭಿವೃದ್ದಿಯಾಗಿದೆ. ಈ ತಲೆದಿಂಬು ನಿಮ್ಮ ನೆಮ್ಮದಿ ನಿದ್ರೆಗೆ ಸಹಾಯ ಮಾಡಲಿದೆ. ನಿಮ್ಮ ಹಾಸಿಗೆಯ ಉಷ್ಣಾಂಶವನ್ನು ನಿಯಂತ್ರಿಸುವ ಈ ದಿಂಬಿನಲ್ಲಿ ನಿಮ್ಮ ನಿದ್ದೆಯ ಬಗ್ಗೆ ಸಹ ಮಾಹಿತಿ ಪಡೆಯಬಹುದು.

ಟೊಮ್ಯಾಗೋ! (Tamaggo)

ಟೊಮ್ಯಾಗೋ! (Tamaggo)

ಇಮೇಜ್ ಸೆರೆಹಿಡಿಯುವ ತಂತ್ರಜ್ಞಾನವು ಅದ್ಭುತ ಟ್ಯಾಮಾಗೊದಿಂದ ವೇಗವಾಗಿ ಬೆಳೆಯುತ್ತಿರುವುದನ್ನು ನೀವು ನೋಡಬಹುದಾಗಿದೆ. ನಿಮ್ಮ ಸುತ್ತಮುತ್ತಲಿನ 360 ಡಿಗ್ರಿ ವ್ಯೂ ಅನ್ನು ಸೆರೆಹಿಡಿಯಲು ನಿಮಗೆ ಅನುಮತಿಸುವ ಅನನ್ಯ ಸಾಧನ ಇದಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸಹ ಹೊಂದಿರುವ ಈ ಸಾಧನ ಭವಿಷ್ಯದ ಕ್ಯಾಮೆರಾವಾಗಬಹುದು.

ಡ್ರ್ಯಾಗನ್ ಫ್ಲೈ ಫ್ಯೂಚರ್‌ಫೊನ್ (Dragonfly Futurfon)!!

ಡ್ರ್ಯಾಗನ್ ಫ್ಲೈ ಫ್ಯೂಚರ್‌ಫೊನ್ (Dragonfly Futurfon)!!

ಡ್ರ್ಯಾಗನ್ ಫ್ಲೈ ಫ್ಯೂಚರ್ಫೊನ್ ಭವಿಷ್ಯದ ಸಾಧನದಂತೆ ಕಾಣುತ್ತದೆ. ಕಾರ್ಯಾಚರಣೆಯ ವಿಷಯದಲ್ಲಿ ಇದು ನಂಬಲಾಗದ ರೀತಿಯಲ್ಲಿ ಹೊಂದಿಕೊಳ್ಳುತ್ತದೆ. ಈ ಸ್ಮಾರ್ಟ್‌ಪೋನ್‌ನೊಂದಿಗೆ ನೀವು ಕೀ ಕೀಬೋರ್ಡ್ ಅನ್ನು ಜೋಡಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಡ್ರಾಗನ್‌ ಫ್ಲೈ ನಿರ್ವಹಿಸುವ ಪೂರ್ಣ ಶ್ರೇಣಿಯ ಕಾರ್ಯಗಳು ಟೆಕ್ ಪ್ರೇಮಿಗಳಿಗೆ ಖಷಿ ನೀಡಲಿದೆ.

ಸೋನಿಕೇಬಲ್! (Sonicable)

ಸೋನಿಕೇಬಲ್! (Sonicable)

ವಿಶ್ವದ ಅತ್ಯಂತ ಸುಧಾರಿತ ಕೇಬಲ್ ಎಂಬ ಹಣೆಪಟ್ಟಿ ಹೊತ್ತು ಸೋನಿಕೇಬಲ್ ಸಾಧನ ಅಭಿವೃದ್ದಿಯಾಗಿದೆ. ಫಾಸ್ಟ್ ಚಾರ್ಜರ್‌ಗಳಿಗಿಂದ ಅರ್ಧದಷ್ಟು ಸಮಯದಲ್ಲಿ ಫೋನ್ ಅನ್ನು ಚಾರ್ಜ್ ಮಾಡುವ ಸಾಮರ್ಥ್ಯ ಈ ಕೇಬಲ್‌ಗೆ ಇದೆಯಂತೆ. ಹಾಗಾಗಿ, ಚಾರ್ಜಿಂಗ್ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವ ದೃಷ್ಟಿಯಿಂದ ಈ ಸಾಧನ ಭವಿಷ್ಯದಲ್ಲಿ ಸಿಗಲಿದೆ.

ಬ್ಯೂಲ್ ಸೌಂಡ್ ಗ್ಲಾಸ್ (Buhel Sound Glasses)

ಬ್ಯೂಲ್ ಸೌಂಡ್ ಗ್ಲಾಸ್ (Buhel Sound Glasses)

ಇನ್ಮುಂದೆ ಕಿವಿಗೆ ಹೆಡ್‌ಪೋನ್ ಅನ್ನು ಇಟ್ಟುಕೊಂಡು ಸಂಗೀತವನ್ನು ಆಲಿಸುವ ಕಷ್ಟ ನಿಮಗಿಲ್ಲ. ಏಕೆಂದರೆ, ಇತ್ತೀಚಿಗೆ ಅಭಿವೃದ್ದಿಯಾಗಿರುವ ಬ್ಯೂಲ್ ಸೌಂಡ್ ಗ್ಲಾಸ್ ನಿಮ್ಮ ಸಂಗೀತ ಅವಶ್ಯಕತೆಯನ್ನು ಸಹ ಪೂರೈಸುತ್ತದೆ. ಬ್ಯೂಲ್ ಸೌಂಡ್ ಗ್ಲಾಸ್ ಸನ್‌ಗ್ಲಾಸ್ ಸಹ ಆಗಿದ್ದು, ಗ್ರಾಸ್‌ನಲ್ಲಿಯೇ ಬ್ಲೂಟೂತ್ ಅನ್ನು ಒಳಗೊಂಡಿರುವುದು ಇದರ ವಿಶೇಷ!

How to Send a WhatsApp Message Without Saving the Contact in Your Phone - GIZBOT KANNADA
ಸ್ವಾಶ್ ಎಕ್ಸ್‌ಪ್ರೆಸ್ (SWASH Express)

ಸ್ವಾಶ್ ಎಕ್ಸ್‌ಪ್ರೆಸ್ (SWASH Express)

ಬಟ್ಟೆ ತೊಳೆದ ನಂತರ ಅದನ್ನು ಒಣಗಿಸುವ ಹಾಗೂ ಐರನ್ ಮಾಡುವ ಕೆಲಸ ನಿಮಗೆ ತಲೆನೊವ್ವಾಗಿರಬಹುದು. ಆದರೆ, ಈ ಸ್ವಾಶ್ ಎಕ್ಸ್‌ಪ್ರೆಸ್ ಕ್ಲಾತಿಂಗ್ ಕೇರ್ ಸಿಸ್ಟಮ್ ನಿಮ್ಮ ಬಟ್ಟೆಯನ್ನು ಒಣಗಿಸಿ ಐರನ್ ಮಾಡಿ ನೀಡುತ್ತದೆ. ಯಾವುದೆ ಬಟ್ಟೆಯನ್ನು ನಿಮಿಷದಲ್ಲಿ ಐರನ್ ಮಾಡುವ ಈ ಡಿವೈಸ್ ಸಹ ಕೃತಕ ಬುದ್ದಿಮತ್ತೆಯಿಂದ ತಯಾರಾಗಿದೆ.

Most Read Articles
Best Mobiles in India

English summary
Photo editing can be difficult to do on Android devices if you don't have the right app so here is our list of the top photo editor apps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more