Home
Apps

ನೀವಿನ್ನು ''ಗೂಗಲ್‌ ಸ್ನ್ಯಾಪ್ಸೀಡ್'' ಫೋಟೊ ಎಡಿಟಿಂಗ್ ಆಪ್ ಬಳಸುತ್ತಿಲ್ಲವೇ?

By Bhaskar N J

ನೀವು ಸೆರೆಹಿಡಿದ ಫೋಟೋ ನೀವೆಣಿಸಿದಂತೆ ಬರಲಿಲ್ಲ ಎಂದಾದಲ್ಲಿ, ಹತ್ತಾರು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಆ ಚಿತ್ರಗಳನ್ನು ಚೆನ್ನಾಗಿ ಮೂಡುವಂತೆ ಮಾಡಲು ಪ್ರಯತ್ನಿಸುತ್ತಿರಾ. ಇದಕ್ಕಾಗಿಯೇ, ನಿಮ್ಮ ಪೋನಿನಲ್ಲಿ ಅದೆಷ್ಟೋ ಫೋಟೋ ಎಡಿಟಿಂಗ್ ಆಪ್‌ಗಳನ್ನು ಹಾಕಿಕೊಂಡಿರುತ್ತೀರಾ. ಆದರೆ, ಇದುವರೆಗೆ ಜನರ ಮನ್ನಣೆಗಳಿಸಿರುವ ಆಪ್‌ಗಳು ವಿರಳ ಎನ್ನಬಹದು.

ನೀವು ಹೆಚ್ಚಾಗಿ ಲೈಟ್ರೂಮ್, ಫೋಟೋಶಾಪ್ಗಳನ್ನು ಬಳಸುತ್ತಿದ್ದರೆ, ನಾವು ನಿಮಗೆ 'ಗೂಗಲ್ ಸ್ನ್ಯಾಪ್ಸೀಡ್' ಆಪ್‌ನ ಒಂದು ಕಿರು ಪರಿಚಯವನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ನೀವು ಈಗಾಗಲೇ ಲೈಟ್ರೂಮ್ ಅಥವಾ ಫೋಟೋಶಾಪ್ನಂತಹ ಆಪ್‌ಳನ್ನು ಬಳಸಿಲ್ಲವೆಂದಾದರೆ, ಈ ಆಪ್ ಸ್ವಲ್ಪ ಭಾರೀ ಎಂದೆನಿಸಬಹುದು. ಆದರೂ, ಇದರ ಫೀಚರ್ಸ್ ಅನ್ನು ನೀವು ತಿಳಿಯಬೇಕು.

ನೀವಿನ್ನು ''ಗೂಗಲ್‌ ಸ್ನ್ಯಾಪ್ಸೀಡ್'' ಫೋಟೊ ಎಡಿಟಿಂಗ್ ಆಪ್ ಬಳಸುತ್ತಿಲ್ಲವೇ?

ಗೂಗಲ್ ಸ್ನ್ಯಾಪ್ಸೀಡ್‌ನಲ್ಲಿ ಯಾವುದೇ ಫೋಟೋವನ್ನು ಎಡಿಟ್ ಮಾಡಲು ಬೇಕಾದ ಸಾಧನಗಳು ಸಾಕಷ್ಟಿವೆ. ಫೋಟೋವಿನ ಟೋನ್ ಸರಿಮಾಡುವುದರಿಂದ ಹಿಡಿದು, ಫೋಟೋವನ್ನು ನಿರ್ದಿಷ್ಟ ರೀತಿಯಲ್ಲಿ ಎಡಿಟ್ ಮಾಡುವ ಅವಕಾಶವನ್ನು ಈ ಗೂಗಲ್ ಸ್ನ್ಯಾಪ್ಸೀಡ್ ನೀಡುತ್ತದೆ. ಹಾಗಾಗರೆ, ಗೂಗಲ್ ಸ್ನ್ಯಾಪ್ಸೀಡ್ ಅನ್ನು ಹೇಗೆ ಬಳಸುವುದು ಎಂಬುದನ್ನು ಮುಂದೆ ತಿಳಿಯಿರಿ.

ಏನಿದು ಗೂಗಲ್ ಸ್ನ್ಯಾಪ್ಸೀಡ್?

ಏನಿದು ಗೂಗಲ್ ಸ್ನ್ಯಾಪ್ಸೀಡ್?

ಗೂಗಲ್ ಸ್ನ್ಯಾಪ್ಸೀಡ್ ಬಳಸಿ ಫೋಟೋಗಳನ್ನು ಯಾವುದೇ ರೀತಿಯಲ್ಲಿ ಪರಿಷ್ಕರಿಸಬಹುದಾಗಿದೆ. ಈ ಆಪ್ ಫೋಟೋ ಅನ್ನು ನಿರ್ದಿಷ್ಟ ರೀತಿಯಲ್ಲಿ ಎಡಿಟ್ ಮಾಡುವ ಅವಕಾಶವನ್ನು ನೀಡುತ್ತದೆ.ಈ ಆಪ್ ಬಳಸಿ ಫೋಟೋವಿನ ಟೋನ್ ಸರಿಮಾಡುವುದರಿಂದ ಹಿಡಿದು, ಬಣ್ಣ, ಭ್ರೈಟ್ನೆಸ್, ಕಾಂಟ್ರಾಸ್ಟ್ ವೈಟ್ ಬ್ಯಾಲೆನ್ಸ್ ಹೀಗೆಅನೇಕ ಬದಲಾವಣೆಗಳನ್ನು ಮಾಡಬಹುದಾಗಿದೆ.

ಸ್ನ್ಯಾಪ್ಸೀಡ್ ನ ಸಾಧನಗಳು ಯಾವುವು?

ಸ್ನ್ಯಾಪ್ಸೀಡ್ ನ ಸಾಧನಗಳು ಯಾವುವು?

ಗೂಗಲ್ ಸ್ನ್ಯಾಪ್ಸೀಡ್ ನಲ್ಲಿ ಫೋಟೋವನ್ನು ಪರಿಷ್ಕರಿಸಲು ಮತ್ತು ಬಣ್ಣ, ಭ್ರೈಟ್ನೆಸ್, ಕಾಂಟ್ರಾಸ್ಟ್ ಮೊದಲಾದ ಅಂಶಗಳಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಲು ಬೇಕಾದ ಸಾಧನಗಳು ಸಾಕಷ್ಟಿವೆ. ಸ್ನ್ಯಾಪ್ಸೀಡ್‌ನಲ್ಲಿ 12 ವಿಭಿನ್ನ ಸಾಧನಗಳಿದ್ದು ಉಪಯೋಗಿಸಲು ಈ ಆಪ್ ಬಹಳ ಸರಳವಾಗಿವೆ. ಇನ್ಸೈಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ, ಸ್ನ್ಯಾಪ್ಸೀಡ್ ಟ್ಯುಟೋರಿಯಲ್‌ಗಳಿವೆ.

13 ವಿಭಿನ್ನ ಫಿಲ್ಟರ್‌‌ಗಳು!

13 ವಿಭಿನ್ನ ಫಿಲ್ಟರ್‌‌ಗಳು!

ಗೂಗಲ್ ಸ್ನ್ಯಾಪ್ಸೀಡ್ ನಲ್ಲಿ ಒಟ್ಟು 13 ವಿಭಿನ್ನ ಫಿಲ್ಟರ್‌ಗಳು ಇವೆ. ಲೆನ್ಸ್ ಬ್ಲರ್ಸ್, ಬ್ಲ್ಯಾಕ್ ಆಂಡ್ ವೈಟ್ ಮೊದಲಾದ ಫಿಲ್ಟರ್ಗಳು ಇಲ್ಲಿವೆ. ಸೆಟ್ಟಿಂಗ್ ಗಳನ್ನು ಬಳಸಿ ಅಥವ ಸ್ಲೈಡರ್ ಬಾರ್ ಬಳಸಿ ಫಿಲ್ಟರ್ಗೆ ಬೇಕಾದ ವ್ಯತ್ಯಾಸಗಳನ್ನು ಮಾಡಬಹುದು. ಪರದೆ ಕೆಳಗೆ ನಿಮಗೆ ಲಭ್ಯವಿರುವ ಎಲ್ಲಾ ಫಿಲ್ಟರ್‌ಗಳಲ್ಲಿ ನಿಮಗೆ ಬೇಕಾದ ಫಿಲ್ಟರ್ ಅನ್ನು ಆಯ್ಕೆಮಾಡಬಹುದು.

ಬೇಕಾದಂತೆ ಪರಿಷ್ಕರಿಸಿಸಬಹುದು!

ಬೇಕಾದಂತೆ ಪರಿಷ್ಕರಿಸಿಸಬಹುದು!

ನೀವು ಯಾವ ಸಾಧನವನ್ನು ಬಳಸಲು ಬಯಸುತ್ತೀರೋ, ಆ ಸಾಧನದ ಮೇಲೆ ಕ್ಲಿಕ್ ಮಾಡಿ ನಿಮ್ಮ ಫೋಟೋವನ್ನು ಬೇಕಾದಂತೆ ಪರಿಷ್ಕರಿಸಿ. ಬೇಕಾದ ಬದಲಾವಣೆಗಳನ್ನು ಮಾಡಿದ ನಂತರ ಆ ಬದಲಾವಣೆಗಳನ್ನು ಸೇವ್ ಮಾಡಬಹುದು. ಫೋಟೋಗೆ ಮಾಡಿದ ಬದಲಾವಣೆಗಳು ನಿಮಗೆ ಇಷ್ಟವಾಗಿಲ್ಲವೆಂದಾದರೆ ಆ ಬದಲಾವಣೆಗಳನ್ನು ರದ್ದುಗೊಳಿಸಬಹುದು.

ಸ್ನ್ಯಾಪ್ಸೀಡ್ ಬಳಸುವುದು ಹೇಗೆ? ಹಂತ 1

ಸ್ನ್ಯಾಪ್ಸೀಡ್ ಬಳಸುವುದು ಹೇಗೆ? ಹಂತ 1

ನೀವು ಎಡಿಟ್ ಮಾಡಬಯಸುವ ಫೋಟೋ ಅನ್ನು ಅಯ್ಕೆ ಮಾಡಿ ಮತ್ತು ಆಪ್ ನಲ್ಲಿ ತೆರೆಯಿರಿ. ನಂತರ ಫೋಟೋ ಲಂಬವಾಗಿ ಅಥವ ಅಡ್ಡಲಾಗಿ ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಿ. ಫೋಟೋದಲ್ಲಿ ಬೇಡವಾದ ಭಾಗಗಳಿದ್ದಲ್ಲಿ "ಕ್ರಾಪ್" ಆಯ್ಕೆ ಬಳಸಿ ಅದನ್ನು ತೆಗೆಯಿರಿ. ನಂತರ ನಿಮ್ಮ ಕ್ರಿಯೆಟಿವಿಟಿಗೆ ತಕ್ಕಂತೆ ಚಿತ್ರಗಳನ್ನು ಎಡಿಟ್ ಮಾಡಿ.

ಸ್ನ್ಯಾಪ್ಸೀಡ್ ಬಳಸುವುದು ಹೇಗೆ? ಹಂತ 2

ಸ್ನ್ಯಾಪ್ಸೀಡ್ ಬಳಸುವುದು ಹೇಗೆ? ಹಂತ 2

"ಕ್ರಾಪ್" ಆಯ್ಕೆ ಬಳಸಿದ ನಂತರ ಚಿತ್ರದ ಭ್ರೈಟ್ನೆಸ್, ಕಾಂಟ್ರಾಸ್ಟ್, ಶಾರ್ಪ್ನೆಸ್, ಸ್ಯಾಚುರೇಶನ್ ಮೊದಲಾದವುಗಳನ್ನು ನಿವು ಬೇಕಾದಂತೆ ಹೊಂದಿಸಿಕೊಳ್ಳಿ ಈಗ ಚಿತ್ರಕ್ಕೆ ಟೋನಲ್ ಕಾಂಟ್ರಾಸ್ಟ್, ವಿಂಟೇಜ್ ಇಫೆಕ್ಟ್, ವಿನ್ನೆಟ್ ಇಫೆಕ್ಟ್ ಮೊದಲಾದ ಇಫೆಕ್ಟ್ಗಳನ್ನು ಹಾಕಬಹುದು. ನಂತರ ಆ ಫೋಟೋ ಅನ್ನು ಸೇವ್ ಮಾಡಿಡಿ.

Best Mobiles in India

English summary
Best Photo Editor learn how to add filters to your photos and apply basic editing such as brightness contrast crop images and much more.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+