ಏರ್‌ಟೆಲ್, ಜಿಯೋ, ವೊಡಾಫೋನ್: ತಿಂಗಳಿಗೆ 500 ರೂ. ಒಳಗಿನ ಬೆಸ್ಟ್ ಪೋಸ್ಟ್ ಪೇಯ್ಡ್ ಪ್ಲಾನ್!!
ವೊಡಾಫೋನ್, ಜಿಯೋ ಮತ್ತು ಏರ್ ಟೆಲ್ ನಡುವೆ ಯಾವಾಗಲೂ ಸ್ಪರ್ಧೆ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲು ಯಾವಾಗಲೂ ಈ ಟೆಲಿಕಾಂ ಕಂಪೆನಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ನಾವಿಲ್ಲಿ 500 ರುಪಾಯಿ ಒಳಗೆ ಬೆಸ್ಟ್ ಪೋಸ್ಟ್ ಪೇಯ್ಡ್ ಪ್ಲಾನ್ ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹ್ಯಾವ್ ಎ ಲುಕ್.

ಜಿಯೋ ರುಪಾಯಿ 199 ಪೋಸ್ಟ್ ಪೇಯ್ಡ್ ಪ್ಲಾನ್
ಜಿಯೋದ ತಿಂಗಳ ಪ್ಲಾನ್ ಸ್ಟಾರ್ಟ್ ಆಗುವುದು ರುಪಾಯಿ 199+ ಜಿಎಸ್ ಟಿ/ ತಿಂಗಳು. ಈ ಪ್ಲಾನ್ ಗೆ ಬಳಕೆದಾರರು ಸಬ್ ಸ್ಕ್ರೈಬ್ ಮಾಡಿಕೊಂಡರೆ ಅನಿಯಮಿತ ವಾಯ್ಸ್ ಕರೆಗಳು( ಸ್ಥಳೀಯ, ಎಸ್ ಟಿಡಿ ಮತ್ತು ರೋಮಿಂಗ್) ಮತ್ತು 100 ಎಸ್ಎಂಎಸ್/ಪ್ರತಿದಿನ ಉಚಿತವಾಗಿರುತ್ತದೆ. ಡಾಟಾ ಕ್ಯಾರಿ ಫಾರ್ವರ್ಡ್ ಬಗ್ಗೆ ಜಿಯೋ ಯಾವುದೇ ವಿಚಾರವನ್ನೂ ನಮೂದಿಸಿಲ್ಲ.
ಇದಕ್ಕಿಂತಲೂ ಹೆಚ್ಚಾಗಿ ಪ್ರೀ ಆಕ್ಟಿವೇಟೆಡ್ ಐಎಸ್ ಡಿ ಕರೆಗಳು ( ಅಂತರಾಷ್ಟ್ರೀಯ ಕರೆಗಳು) 50 ಪೈಸೆ/ ನಿಮಿಷದಿಂದ ಆರಂಭವಾಗುತ್ತದೆ. ಪ್ರೀಪೇಯ್ಡ್ ಪ್ಲಾನ್ ನಂತೆಯೇ ರುಪಾಯಿ 199 ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿಯೂ ಕೂಡ ಜಿಯೋ ಆಪ್ ಗಳಾದ ಜಿಯೋ ಟಿವಿ ಮತ್ತು ಜಿಯೋ ಮ್ಯೂಸಿಕ್ ಗೆ ಉಚಿತವಾಗಿ ಆಕ್ಸಿಸ್ ಮಾಡುವುದಕ್ಕೆ ಇದು ಬೆಂಬಲವನ್ನು ನೀಡುತ್ತದೆ.
ವೊಡಾಫೋನ್ ರೂಪಾಯಿ 299 ಪೋಸ್ಟ್ ಪೇಯ್ಡ್ ಪ್ಲಾನ್
ವೊಡಾಫೋನ್ ರುಪಾಯಿ 299 ಪ್ಲಾನ್ ಆಫ್ ಲೈನ್ ಪ್ಲಾನ್ ಆಗಿದ್ದು ಸದ್ಯ ನೀವು ಹತ್ತಿರದ ವಡಾಫೋನ್ ಗ್ಯಾಲರಿಗೆ ತೆರಳಿ ಹಾಕಿಸಿಕೊಳ್ಳಬೇಕಾಗುತ್ತದೆ.ಕೆಲವು ಸೆಲೆಕ್ಟೆಡ್ ಬಳಕೆದಾರರಿಗೆ ಅಧಿಕೃತ ವಡಾಫೋನ್ ಆಪ್ ಮೂಲಕ ಲಭ್ಯವಿರುತ್ತದೆ. ಇದರ ಲಾಭಗಳ ಬಗ್ಗೆ ಹೇಳುವುದಾದರೆ, ಇದು 20ಜಿಬಿ ಡಾಟಾವನ್ನು ಉಚಿತವಾಗಿ ನಿಗದಿತ ಅವಧಿಗೆ ನೀಡಲಾಗುತ್ತದೆ ಅದಕ್ಕೆ ಡಾಟಾ ರೋಲ್ ಓವರ್ ಸಪೋರ್ಟ್ 200ಜಿಬಿ ಆಗಿದೆ.ಆದರೆ ವಡಾಫೋನ್ ರುಪಾಯಿ 299 ಪ್ಲಾನ್ ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗಳಲ್ಲಿ ಉಚಿತ ಸದಸ್ಯತ್ವವನ್ನು ಪಡೆಯಲು ಅವಕಾಶ ನೀಡುವುದಿಲ್ಲ.ಇದರಲ್ಲಿ ಅನಿಯಮಿತ ಸ್ಥಳೀಯ, ಎಸ್ ಟಿಡಿ, ರೋಮಿಂಗ್ ಮತ್ತು 100ಎಸ್ ಎಂಎಸ್ ಪ್ರತಿದಿನ ಉಚಿತವಾಗಿ ಇರುತ್ತದೆ.
ಏರ್ ಟೆಲ್ ರುಪಾಯಿ 299 ಪೋಸ್ಟ್ ಪೇಯ್ಡ್ ಪ್ಲಾನ್
ವೊಡಾಫೋನ್ ನ 299 ರುಪಾಯಿ ಪ್ಲಾನಿ ನಂತೆಯೇ ಏರ್ ನಲ್ಲೂ 299 ರುಪಾಯಿಯ ಪೋಸ್ಟ್ ಪ್ಲಾನ್ ಆಫ್ ಲೈನ್ ಏರ್ ಟೆಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.ಆದರೆ ಇದು 5ಜಿಬಿ ಹೈ ಸ್ಪೀಡ್, 4ಜಿ ಡಾಟಾ ಬಿಲ್ಲಿಂಗ್ ಸೈಕಲ್ ವರೆಗೆ ಲಭ್ಯವಿರುತ್ತದೆ ಜೊತೆಗೆ ಅನಿಯಮಿತಿ ವಾಯ್ಸ್ ಕಾಲ್ಸ್ ಮತ್ತು 100 ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಇರುತ್ತದೆ.
ವೊಡಾಫೋನ್ ಮತ್ತು ಏರ್ ಟೆಲ್ 399 ರುಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್
ಎರಡೂ ಪ್ರಮುಖ ಟೆಲಿಕಾಂ ಆಪರೇಟರ್ ಗಳಾಗಿರುವ ಏರ್ ಮತ್ತು ವೊಡಾಫೋನ್ ನಲ್ಲಿ 399 ರುಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ಲಭ್ಯವಿದೆ. ವೊಡಾಫೋನ್ 399 ರುಪಾಯಿ ಪ್ಲಾನ್ ನಲ್ಲಿ 40ಜಿಬಿ 4ಜಿ ಡಾಟಾ ಲಭ್ಯವಿರುತ್ತದೆ ಜೊತೆಗೆ 200ಜಿಬಿ ಡಾಟಾ ರೋಲ್ ಓವರ್ ಬೆಂಬಲವಿದೆ.
ಇದರ ಜೊತೆಗೆ ಏರ್ ಟೆಲ್ ನ 399 ಇನ್ಫಿನಿಟಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ 20ಜಿಬಿ ಡಾಟಾ ಆಫರ್ ಮಾಡಲಾಗಿದೆ.ಆದರೆ ಏರ್ ಟೆಲ್ 399 ಪ್ಲಾನ್ ನಲ್ಲಿ ಡಾಟಾ ರೋಲ್ ಓವರ್ 500ಜಿಬಿ ವರೆಗೆ ಅವಕಾಶವಿರುತ್ತದೆ. ಏರ್ ಟೆಲ್ ಇನ್ಫಿನಿಟಿ ಪ್ಲಾನ್ ಗಳಂತೆ ಇದು ಯಾವುದೇ ರೀತಿಯ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಒಳಗೊಂಡಿರುವುದಿಲ್ಲ.ಆದರೆ ಏರ್ ಟೆಲ್ ಟಿವಿ ಮತ್ತು Wynk ಮ್ಯೂಸಿಕ್ ಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯನ್ನು ಇದು ಒಳಗೊಂಡಿರುತ್ತದೆ. ಎರಡೂ 399 ಪ್ಲಾನ್ ಗಳು ಅನಿಯಮಿತ ಕರೆಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ನೀಡುತ್ತದೆ.
ನೀವು ಯಾಕೆ ಏರ್ ಟೆಲ್ ಮತ್ತು ವೊಡಾಫೋನ್ ನ ರುಪಾಯಿ 499 ಪ್ಲಾನ್ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಪ್ರಶ್ನಿಸುವುದಾದರೆ ಅದಕ್ಕೆ ಉತ್ತರ ಜಿಎಸ್ ಟಿ. ಹೌದು, ಪ್ರತಿ ಪೋಸ್ಟ್ ಪೇಯ್ಡ್ ಪ್ಲಾನ್ ಗಳು ಕೂಡ 18 ಶೇಕಡಾ ಜಿಎಸ್ ಟಿಯನ್ನು ಹೊಂದಿರುತ್ತದೆ. ಆಗ ಈ ಪ್ಲಾನ್ 500 ರುಪಾಯಿ ಮೇಲಿನದ್ದಾಗುತ್ತದೆ. ಹಾಗಾಗಿ ನಾವು ಕೇವಲ 500 ರುಪಾಯಿ ಒಳಗಿನ ಆಫರ್ ನ್ನು ಮಾತ್ರ ಈ ಲೇಖನದಲ್ಲಿ ಹೇಳುತ್ತಿದ್ದೇವೆ. ಬಹುಶ್ಯಃ ನಿಮಗೆ ಈಗ ಆಫರ್ ಗಳನ್ನು ಹೋಲಿಕೆ ಮಾಡಿಕೊಳ್ಳುವುದಕ್ಕೆ ಸುಲಭವಾಗಿದೆ ಎಂದು ಭಾವಿಸಿಕೊಳ್ಳುತ್ತೇವೆ.


Click it and Unblock the Notifications








