ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇರಲೇ ಬೇಕಾದ ಆಪ್ ಗಳು....!
ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಮೂಲಕವೇ ಸಾಕಷ್ಟು ವ್ಯವಹಾರಗಳು ನಡೆಯುತ್ತಿವೆ, ಬ್ಯಾಂಕಿಗ್, ಮೊಬೈಲ್ ವ್ಯಾಲೆಟ್ ಸೇರಿದಂತೆ ಪೇಮೆಂಟ್ ಸೇವೆಯೂ ಮೊಬೈಲ್ ನಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಹೆಚ್ಚು ಸೆಕ್ಯೂರ್ ಮಾಡಿಕೊಳ್ಳುವುದು ಮುಖ್ಯ, ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಸೆಕ್ಯೂರ್ ಮಾಡುವುದು ಅವಶ್ಯಕ.

ಇದಕ್ಕಾಗಿಯೇ ಗೂಗಲ್ ಪೇ ಸ್ಟೋರಿನಲ್ಲಿ ಸಾಕಷ್ಟು ಆಪ್ ಗಳು ಲಭ್ಯವಿದ್ದು, ಈ ಆಪ್ ಗಳು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸೆಕ್ಯೂರ್ ಮಾಡುವುದಲ್ಲದೇ, ವೈರಸ್ ದಾಳಿಯಿಂದ ತಡೆಯುತ್ತದೆ. ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಇತರರು ಬಳಕೆ ಮಾಡಿಕೊಳ್ಳದ ಹಾಗೇ ಮಾಡಲು ಹಲವು ಆಯ್ಕೆಗಳನ್ನು ನೀಡುತ್ತವೆ. ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾದ ಆಪ್ ಗಳ ಕುರಿತ ಮಾಹಿತಿಯೂ ಮುಂದಿನಂತೆ ಇದೆ.

ಅವಿಸ್ತಾ ಮೊಬೈಲ್ ಸೆಕ್ಯೂರಿಟಿ:
ಸ್ಮಾರ್ಟ್ ಫೋನ್ ಸೆಕ್ಯೂರಿಟಿ ವಿಭಾಗದಲ್ಲಿ ಅವಿಸ್ತಾ ಉತ್ತಮ ಹೆಸರನ್ನು ಪಡೆದುಕೊಂಡಿದೆ. ಇದು ಇಂಟರ್ನೆಟ್ ಬ್ರೌಸಿಂಗ್ ಅನ್ನು ಸುಲಭ ಮತ್ತು ಸೆಕ್ಯೂರ್ ಮಾಡಲಿದೆ. ಅಲ್ಲದೇ ವೈರಸ್ ದಾಳಿಗೆ ಸ್ಮಾರ್ಟ್ ಫೋನ್ ಅನ್ನು ಸೆಕ್ಯೂರ್ ಮಾಡಲಿದೆ. ಸ್ಮಾರ್ಟ್ ಫೋನ್ ಬಳಕೆಯನ್ನು ಸುಲಭವನ್ನು ಮಾಡಲು ಇದು ಸಹಾಯ ಮಾಡಲಿದೆ.

ಮೆಕ್ ಫಿ ಮೊಬೈಲ್ ಆಂಟಿ ವೈರಸ್:
ಇದರೊಂದಿಗೆ ಮೆಕ್ ಫಿ ಸಹ ಆಂಟಿ ವೈರಸ್ ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಇದೇ ಮಾದರಿಯಲ್ಲಿ ಸ್ಮಾರ್ಟ್ ಫೋನ್ ಅನ್ನು ಸೆಕ್ಯೂರ್ ಆಗಿ ಮಾಡುವ ಸಲುವಾಗಿ ಮೈಕ್ ಫಿ ಸಹ ಆಪ್ ವೊಂದನ್ನು ಲಾಂಚ್ ಮಾಡಿದ್ದು, ಮೆಕ್ ಫಿ ಮೊಬೈಲ್ ಆಂಟಿ ವೈರಸ್ ಹೆಚ್ಚು ಸುರಕ್ಷಿತವಾದ ಆಪ್ ಆಗಿದೆ.

ಕ್ಯಾಸ್ಪರ್ಕಿ ಮೊಬೈಲ್ ಆಂಟಿ ವೈರಸ್:
ಕ್ಯಾಸ್ಪರ್ಕಿ ಈಗಾಗಲೇ ಜಾಗತಿಕವಾಗಿ ಸಾಕಷ್ಟು ಖ್ಯಾತಿಯನ್ನು ಆಂಟಿ ವೈರಸ್ ವಿಭಾಗದಲ್ಲಿ ಪಡೆದುಕೊಂಡಿದೆ ಎನ್ನಲಾಗಿದೆ. ಕ್ಯಾಸ್ಪರ್ಕಿ ಮೊಬೈಲ್ ಆಂಟಿ ವೈರಸ್ ಆಪ್ ಮೊಬೈಲ್ ಸೆಕ್ಯೂರಿಟಿ ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಅಲ್ಲದೇ ಇದರಲ್ಲಿ ಉತ್ತಮವಾದ ಪವರ್ ಬುಸ್ಟರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಸೊಪೊಸ್ ಫ್ರಿ ಅಂಟಿ ವೈರಸ್:
ಸೊಪೊಸ್ ಫ್ರಿ ಅಂಟಿ ವೈರಸ್ ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸ್ಮಾರ್ಟ್ ಫೋನ್ ಅನ್ನು ವೈರಸ್ ದಾಳಿಯಿಂದ ಸುರಕ್ಷಿತವಾಗಿಸುವ ಸಲುವಾಗಿ ಅನೇಕ ಆಯ್ಕೆಗಳನ್ನು ಹೊಂದಿದ್ದು, ಬಳಕೆದಾರರಿಗೆ ಸುರಕ್ಷಿತ ಬ್ರೌಸಿಂಗ್ ಅನ್ನು ನಡೆಸಲು ಅನುಕೂಲವನ್ನು ಮಾಡಲಿದೆ.

ನೊಟ್ರಾನ್ ಸೆಕ್ಯೂರಿಟಿ:
ಮೊಬೈಲ್ ಸೆಕ್ಯೂರಿಟಿಗಾಗಿಯೇ ವಿಶೇಷವಾಗಿ ನೋಟ್ರಾನ್ ಸೆಕ್ಯೂರಿಟಿ ಆಪ್ ಸ್ಮಾರ್ಟ್ ಫೋನ್ ಅನ್ನು ಸುರಕ್ಷಿತವಾಗಿಸುವುದರೊಂದಿಗೆ ವೇಗವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಲ್ಲದೇ ಈಗಾಗಲೇ ಮೊಬೈಲ್ ನಲ್ಲಿರುವ ವೈರಸ್ ಅನ್ನು ತೆಗೆದು ಹಾಕಲು ಇದು ಸಹಾಯವನ್ನು ಮಾಡಲಿದೆ.


Click it and Unblock the Notifications








