Home
Apps

ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಆಡಬಹುದಾದ ಬೆಸ್ಟ್ ಗೇಮ್ ಗಳು

By Srinidhi

ಇಂದಿನ ದಿನದಲ್ಲಿ ಯುವ ಸಮೂಹವು ಸಾಕಷ್ಟು ಸಮಯ ಸ್ಮಾರ್ಟ್ ಫೋನಿನಲ್ಲಿಯೇ ಕಳೆಯುತ್ತಿದ್ದಾರೆ. ಅದಕ್ಕಾಗಿ ಅನೇಕ ಗೇಮ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಆಡುವುದನ್ನು ಶುರು ಮಾಡಿದ್ದಾರೆ. ಇದೇ ಹಿನ್ನಲೆಯಲ್ಲಿ ಸ್ಮಾರ್ಟ ಫೋನ್ ಖರೀದಿಸುವ ಸಂದರ್ಭದಲ್ಲಿಯೇ ಹೆಚ್ಚಿನ ವೇಗದ ಪ್ರೋಸೆಸರ್ ಮತ್ತು RAM ಇರುವ ಸ್ಮಾರ್ಟ್ ಫೋನ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಆಡಬಹುದಾದ ಬೆಸ್ಟ್ ಗೇಮ್ ಗಳು

ಈ ಹಿನ್ನಲೆಯಲ್ಲಿ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಬೆಸ್ಟ್ ಗೇಮ್ ಆಪ್ ಗಳನ್ನು ಪರಿಚಯಿಸುವ ಪ್ರಯತ್ನವು ಇದಾಗಿದೆ. ಈ ಆಪ್ ಗಳು 2018ರಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವುದಲ್ಲದೇ, ಅನೇಕ ಮಂದಿ ಡೌನ್ ಲೋಡ್ ಮಾಡಿಕೊಂಡು ಆಡುತ್ತಿರುವ ಗೇಮ್ ಗಳಾಗಿದೆ. ಈ ಕೆಳಗಿನವುಗಳನ್ನು ನೀವು ಸಹ ಒಮ್ಮೆಯಾದರೂ ಆಡಿದರೆ ಚೆಂದ.

ಅಸ್ಫಾಲ್ಟ್ 8:

ಅಸ್ಫಾಲ್ಟ್ 8:

ಇದೊಂದು ರೇಸಿಂಗ್ ಗೇಮ್ ಆಗಿದ್ದು, ಉತ್ತಮ ಗುಣಮಟ್ಟದ ಗ್ರಾಫಿಕ್ಸ್ ಅನ್ನು ಒಳಗೊಂಡಿರುವುದಲ್ಲದೇ, ಆಟ ಆಡಲು ಉತ್ತಮವಾದ ಆಯ್ಕೆಗಳನ್ನು ಹೊಂದಿದೆ. ರಿಯಲ್ ರೇಸಿಂಗ್ ಅನುಭವನ್ನು ನೀಡುವ ಈ ಗೇಮ್ ಅನ್ನು ಅನೇಕ ಮಂದಿ ಆಡುತ್ತಿದ್ದಾರೆ. ರೇಸಿಂಗ್ ಇಷ್ಟ ಪಡುವವರಿಗೆ ಇದು ಬೆಸ್ಟ್.

ಕ್ರಿಟಿಕಲ್ ಒಪಸ್:

ಕ್ರಿಟಿಕಲ್ ಒಪಸ್:

ಇದೊಂದು ಶೂಟಿಂಗ್ ಗೇಮ್ ಆಗಿದ್ದು, ಹೆಚ್ಚು ವೇಗದ ಪ್ರೋಸೆಸರ್ ಮತ್ತು RAM ಹೊಂದಿರುವವರು ಆಡಬಹುದಾಗಿದೆ. ಶೂಟಿಂಗ್ ಗೇಮ್ ಗಳಲ್ಲಿ ಟ್ರೆಂಡ್ ಹುಟ್ಟಿಹಾಕಿರುವ ಗೇಮ್ ಇದಾಗಿದ್ದು, ಇದರಲ್ಲಿ ಬಳಕೆದಾರರಿಗೆ ಉತ್ತಮ ಗ್ರಾಫಿಕ್ಸ್ ಅನುಭವನ್ನು ನೀಡುವ ಸಲುವಾಗಿ ರಿಯಲ್ ಆಗಿರುವ ಲೋಕೇಷನ್ ಗಳನ್ನು ಕಾಣಬಹುದಾಗಿದೆ.

ಕ್ಲಾಷ್ ರಾಯಲೆ:

ಕ್ಲಾಷ್ ರಾಯಲೆ:

ಕ್ಲಾಷ್ ಆಫ್ ಕ್ಲಾನ್ಸ್ ಆಡಿದವರಿಗೆ ಹೆಚ್ಚು ಸಲುಭವಾಗುವ ಆಪ್ ಇದಾಗಿದ್ದು, ಬಳಕೆದಾರರಿಗೆ ಉತ್ತಮವಾದ ಫಿಲ್ ಕೊಡುವ ಗೇಮ್ ಇದ್ದಾಗಿದ್ದು, ಒಂದು ಮಾದರಿಯಲ್ಲಿ ಯುದ್ದದ ವಾತವರಣವನ್ನು ಸೃಷ್ಟಿಸಿ, ಗೆಲ್ಲಲು ಪ್ಲಾನ್ ಮಾಡುವ ರೀತಿಯಲ್ಲಿ ತಲೆ ಓಡಿಸಲು ಇದು ಸಹಾಯ ಮಾಡಲಿದೆ.

ಹಾರ್ಟ್ ಸ್ಟೋನ್: ಹಿರೋಸ್ ಆಫ್ ವಾರ್ ಕ್ರಾಫ್ಟ್:

ಹಾರ್ಟ್ ಸ್ಟೋನ್: ಹಿರೋಸ್ ಆಫ್ ವಾರ್ ಕ್ರಾಫ್ಟ್:

ಇದೊಂದು ಉಚಿತವಾದ ಆಂಡ್ರಾಯ್ಡ್ ಗೇಮ್ ಆಗಿದ್ದು, ಡೆಕ್ ಗಳನ್ನು ಬಿಲ್ಡ್ ಮಾಡುವ ಗೇಮ್ ಆಗಿದೆ. ಬಳಕೆದಾರರಿಗೆ ಇದು ಟೈಮ್ ಪಾಸ್ ಮಾಡುವ ಸಲುವಾಗಿ ಆಡಲು ಹೇಳಿ ಮಾಡಿಸಿದಂತೆ ಇದೆ. ಇದನ್ನು ಮೊಬೈಲ್ ಮತ್ತು ಪಿಸಿ ಎರಡರಲ್ಲೂ ಆಡುವ ಅವಕಾಶವನ್ನು ಮಾಡಿಕೊಡಲಾಗಿದೆ.

HQ ತರೈವಾ:

HQ ತರೈವಾ:

ಇದೊಂದು ಪ್ರಶ್ನೇ ಮತ್ತು ಉತ್ತರದ ಗೇಮ್ ಆಗಿದ್ದು, ಬಳಕೆದಾರರಿಗೆ ಉತ್ತಮವಾದ ಪ್ರಶ್ನೆಗಳನ್ನು ಕೇಳುವುದಲ್ಲದೇ ಬುದ್ದಿಮತ್ತೆಯನ್ನು ಹೆಚ್ಚು ಮಾಡಲು ಇದು ಸಹಾಯವನ್ನು ಮಾಡಲಿದೆ. ಇದು ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದೊಂದು ಬೆಸ್ಟ್ ಗೇಮ್ ಎನ್ನಬಹುದು.

Best Mobiles in India

English summary
best timepass game for android 2018. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+