ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ನಕಲಿ ಅಂಗಡಿಗಳು..! ಗ್ರಾಹಕರಿಗೆ ಕಿರಿಕಿರಿ..!

By Gizbot Bureau
|

ಹೊಸ ವರ್ಷದ ಮುನ್ನಾದಿನ, ನೋಯ್ಡಾದ ಸೆಕ್ಟರ್ 143ರ ಒಂದು ಸೊಸೈಟಿಯ ನಿವಾಸಿ 11 ವರ್ಷದ ಸೈಶಾ ಬ್ಲ್ಯಾಕ್ ಫಾರೆಸ್ಟ್ ಕೇಕ್ ಸವಿಯಲು ಬಯಸಿದ್ದರು. ಆಗ, ಸ್ವಿಗ್ಗಿಯಲ್ಲಿ ಹತ್ತಿರದ ಕೇಕ್ ಅಂಗಡಿಯಿಂದ ಕೇಕ್‌ ಆರ್ಡರ್‌ ಮಾಡಿ, ಕೇಕ್‌ ಬರುವಿಕೆಗೆ ಕಾಯುತ್ತಿದ್ದರು. ಆದರೆ, ಅರ್ಧ ಘಂಟೆಯ ನಂತರ, ಸ್ವಿಗ್ಗಿ ಕಾರ್ಯನಿರ್ವಾಹಕರಿಂದ ಕ್ಷಮೆಯಾಚನೆಯ ಕರೆ ಬಂದಿತು, ತನಗೆ ನಿರ್ದೇಶಿಸಿದ ನಕ್ಷೆಯಲ್ಲಿ ಅಂತಹ ಯಾವುದೇ ಅಂಗಡಿಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸಿಬ್ಬಂದಿ ಹೇಳಿದರು. ಇದಲ್ಲದೇ ಆ ಸಿಬ್ಬಂದಿ, ಕನಿಷ್ಠ 4-5 ಸವಾರರು ಕೇಕ್ ಅಂಗಡಿಯನ್ನು ಹುಡುಕಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ, ಆರ್ಡರ್ ರದ್ದುಗೊಳಿಸುವಂತೆ ಕುಟುಂಬಕ್ಕೆ ಹೇಳಿದ್ದಾರೆ.

ಆರ್ಡರ್‌

ಅದೇ ಕುಟುಂಬವು ಎರಡು ತಿಂಗಳ ಹಿಂದೆ ಸ್ವಿಗ್ಗಿಯಿಂದ ಅನುಭವಿಸಿದ ತೊಂದರೆಯನ್ನು ಹಂಚಿಕೊಂಡಿದೆ. ಊಟದ ಆರ್ಡರ್‌ ಅವರ ಆಘಾತಕ್ಕೆ ಕಾರಣವಾಗಿತ್ತು. ರೈಡರ್ ರೆಸ್ಟೋರೆಂಟ್ ಪಕ್ಕದಲ್ಲಿಯೇ ನಿಂತಿದ್ದಾರೆ ಎಂದು ಹೇಳಿದ್ದರು, ನಂತರ, ರೆಸ್ಟೋರೆಂಟ್‌ ಕಾರ್ಯನಿರ್ವಹಿಸುತ್ತಿಲ್ಲ, ಆರ್ಡರ್‌ ರದ್ದುಗೊಳಿಸುವಂತೆ ಕುಟುಂಬಕ್ಕೆ ಕೇಳಿಕೊಂಡಿದ್ದರು. ಈ ಎರಡು ಪ್ರಕರಣಗಳನ್ನು ಗಮನಿಸಿದಾಗ ಒಂದು ಪ್ರಶ್ನೆ ಮೂಡುವುದಂತೂ ಸಹಜ. ರೆಸ್ಟೋರೆಂಟ್‌ಗಖು ಮುಚ್ಚಿದ್ದರೆ, ಆಹಾರ ವಿತರಣಾ ವೇದಿಕೆಯಲ್ಲಿ ಆರ್ಡರ್ ಮಾಡಲು ಹೇಗೆ ಸಾಧ್ಯ..? ರೈಡರ್‌ನಿಗೆ ಯಾವುದೇ ಕೇಕ್ ಅಂಗಡಿ ಕಾಣದಿದ್ದರೆ, ಆರ್ಡರ್‌ಗಳನ್ನು ಹೇಗೆ ಯಶಸ್ವಿಯಾಗಿ ತೆಗೆದುಕೊಳ್ಳಲಾಗುತ್ತಿದೆ..? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ನಿರಾಶದಾಯಕ ಪ್ರತ್ಯುತ್ತರ

ನಿರಾಶದಾಯಕ ಪ್ರತ್ಯುತ್ತರ

ಕುಟುಂಬವು ಸ್ವಿಗ್ಗಿಗೆ ಇಮೇಲ್ ಮೂಲಕ ದೂರನ್ನು ಸಹ ಸಲ್ಲಿಸಿತು. ಆದರೆ, ಸ್ವಿಗ್ಗಿಯಿಂದ ಕ್ಷಮೆಯಾಚನೆಯ ಜೊತೆ ಭವಿಷ್ಯದಲ್ಲಿ ಅದ್ಭುತ ಆರ್ಡರ್‌ ಅನುಭವಗಳ ಬಗ್ಗೆ ಭರವಸೆ ನೀಡುತ್ತೇವೆ ಎಂಬ ಪ್ರತ್ಯುತ್ತರ ಬಂದಿತ್ತು. ಈ ಸಮಸ್ಯೆ ಕೇವಲ ಸ್ವಿಗ್ಗಿಯಲ್ಲಷ್ಟೇ ಅಲ್ಲ. ಜೊಮ್ಯಾಟೋ ಗ್ರಾಹಕರಿಗೂ ಈ ಬಿಸಿ ತಟ್ಟಿದೆ. ಹೌದು, ಯುವ ದಂಪತಿಗಳು ಇತ್ತೀಚೆಗೆ ಖಾನ್ ಮಾರುಕಟ್ಟೆಯಲ್ಲಿ ಊಟಕ್ಕಾಗಿ ಜೊಮ್ಯಾಟೊದಲ್ಲಿ ರೆಸ್ಟೋರೆಂಟ್ ಹುಡುಕುತ್ತಿದ್ದರು. ಸ್ಥಳ ತಲುಪಿದ ನಂತರ, ಅವರಿಗೆ ನೆರೆಯ ಅಂಗಡಿ-ಮಾಲೀಕರು ನೀಡಿದ ರೆಸ್ಟೋರೆಂಟ್ ಸ್ವಲ್ಪ ಸಮಯದ ಹಿಂದೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂಬ ಉತ್ತರ ನಿರಾಶೆಯನ್ನುಂಟು ಮಾಡಿತ್ತು.

ಸ್ವಿಗ್ಗಿ ಗ್ರಾಹಕರಿಗೆ ವಿಶಾಲವಾದ ರೆಸ್ಟೋರೆಂಟ್‌ಗಳನ್ನು ನೀಡುತ್ತದೆ. ಮತ್ತು ಅವುಗಳನ್ನು ಬೋರ್ಡಿಂಗ್ ಮಾಡುವಾಗ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುತ್ತದೆ. ಸ್ಥಗಿತವಾದ ಅಥವಾ ನಮ್ಮ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದ ರೆಸ್ಟೋರೆಂಟ್‌ಗಳನ್ನು ಗುರುತಿಸಲು ಮತ್ತು ಪಟ್ಟಿಮಾಡಲು ಮೀಸಲಾದ ತಂಡವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತದೆ. ರೆಸ್ಟೋರೆಂಟ್‌ಗಳ ಗುಣಮಟ್ಟದ ಸಮಸ್ಯೆ ಅಥವಾ ಸ್ಥಗಿತಕ್ಕೆ ಸಂಬಂಧಿಸಿದಂತೆ ಗ್ರಾಹಕರು ಫ್ಲ್ಯಾಗ್ ಮಾಡಿದ ಕೊರತೆಗಳನ್ನು ತನಿಖೆ ನಡೆಸಿ, ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಎಐ ಅಳವಡಿಕೆ

ಎಐ ಅಳವಡಿಕೆ

ಪ್ರಮುಖ ಆಹಾರ ವಿತರಣಾ ವೇದಿಕೆಗಳು ವೇಗವಾಗಿ ಬದಲಾಗುತ್ತಿರುವ ಗ್ರಾಹಕರ ನಡವಳಿಕೆಯನ್ನು ಉತ್ತಮವಾಗಿ ತಿಳಿಯಲು, ದೋಷಗಳನ್ನು ಕಡಿಮೆ ಮಾಡಲು ಮತ್ತು ಗ್ರಾಹಕರ ಅನುಭವಗಳನ್ನು ಹೆಚ್ಚಿಸಲು AI ಅನ್ನು ದೊಡ್ಡ ರೀತಿಯಲ್ಲಿ ಸ್ವೀಕರಿಸುವುದಾಗಿ ಹೇಳಿಕೊಳ್ಳುತ್ತಿವೆ.

4 ಬಿಲಿಯನ್ ಡಾಲರ್‌ ಮಾರುಕಟ್ಟೆ..?

4 ಬಿಲಿಯನ್ ಡಾಲರ್‌ ಮಾರುಕಟ್ಟೆ..?

ಬೆಂಗಳೂರು ಮೂಲದ ಸಂಶೋಧನಾ ಸಂಸ್ಥೆ ರೆಡ್‌ಸೀರ್ ಪ್ರಕಾರ, 2020 ರ ವೇಳೆಗೆ ಭಾರತೀಯ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯು 4 ಬಿಲಿಯನ್ ಡಾಲರ್‌ ತಲುಪುವ ನಿರೀಕ್ಷೆಯಿದೆ ಮತ್ತು ವಿತರಣಾ ದಕ್ಷತೆಗಾಗಿ ಟೆರಾಬೈಟ್‌ಗಳ ಡೇಟಾವನ್ನು ನಿಭಾಯಿಸಲು ಮತ್ತು ಹತೋಟಿಗೆ ತರಲು, ಸ್ವಿಗ್ಗಿ ಮತ್ತು ಜೊಮ್ಯಟೋ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆಯ (ಎಂಎಲ್) ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ.

ಶೇ.16ಕ್ಕಿಂತ ಹೆಚ್ಚಿನ ಮಾರುಕಟ್ಟೆ

ಶೇ.16ಕ್ಕಿಂತ ಹೆಚ್ಚಿನ ಮಾರುಕಟ್ಟೆ

ಬಿಸಿನೆಸ್ ಕನ್ಸಲ್ಟೆನ್ಸಿ ಸಂಸ್ಥೆ ಮಾರ್ಕೆಟ್ ರಿಸರ್ಚ್ ಫ್ಯೂಚರ್‌ನ ಮತ್ತೊಂದು ವರದಿ ಪ್ರಕಾರ, 2023ರ ವೇಳೆಗೆ ಭಾರತದಲ್ಲಿ ಆನ್‌ಲೈನ್ ಫುಡ್ ಆರ್ಡರ್ ಮಾಡುವ ಮಾರುಕಟ್ಟೆ ವಾರ್ಷಿಕ ಶೇ.16ಕ್ಕಿಂತ ಹೆಚ್ಚಾಗಲಿದ್ದು, 17.02 ಬಿಲಿಯನ್ ಡಾಲರ್‌ ವ್ಯವಹಾರ ತಲುಪುವ ಸಾಧ್ಯತೆಯಿದೆ. ಆಹಾರ ವಿತರಣಾ ವೇದಿಕೆಗಳು ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರದ ಕಲಿಕೆ ಮೇಲೆ ಹೆಚ್ಚು ಹೂಡಿಕೆ ಮಾಡಿವೆ. ಆದರೆ, ವಾಸ್ತವದಲ್ಲಿ ಸ್ವಚ್ಛ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಕೊರತೆ ಕಾಣುತ್ತದೆ.

"ರೆಸ್ಟೋರೆಂಟ್‌ನದ್ದೆ ತಪ್ಪು"

ರೆಸ್ಟೋರೆಂಟ್ ತಾತ್ಕಾಲಿಕ ಅಥವಾ ಶಾಶ್ವತವಾಗಿ ಸ್ಥಗಿತಗೊಳ್ಳುತ್ತಿದ್ದರೆ, ನಾವು ಆನ್‌ಲೈನ್ ಆರ್ಡರ್‌ಗಳನ್ನು ಸ್ವಿಚ್ ಆಫ್ ಮಾಡುತ್ತೇವೆ. ಮತ್ತು ತರುವಾಯ ಅದನ್ನು ಹುಡುಕುವ ಬಳಕೆದಾರರಿಗೆ ತಿಳಿಸಲು ರೆಸ್ಟೋರೆಂಟ್ ಪುಟದಲ್ಲಿ ಟ್ಯಾಗ್ ಹಾಕುತ್ತೇವೆ ಎಂದು ಜೊಮಾಟೊ ವಕ್ತಾರರು ತಿಳಿಸಿದ್ದಾರೆ. ಅಪರೂಪದ ಸಂದರ್ಭಗಳಲ್ಲಿ, ಒಂದು ನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸುವ ಅಥವಾ ಮುಚ್ಚುವ ಬಗ್ಗೆ ರೆಸ್ಟೋರೆಂಟ್ ನಮಗೆ ತಿಳಿಸುವುದಿಲ್ಲ. ಹಾಗೂ ಆರ್ಡರ್‌ಗಳನ್ನು ಪಡೆಯುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

ಎಐ, ಎಂಎಲ್ ಸರ್ಚಿಂಗ್‌ನಲ್ಲೂ ನಕಲಿ

ಎಐ, ಎಂಎಲ್ ಸರ್ಚಿಂಗ್‌ನಲ್ಲೂ ನಕಲಿ

ನಮ್ಮ ಬಳಕೆದಾರರು ನಮ್ಮ ಗಮನಕ್ಕೆ ತಂದಿರುವ ಸಂದರ್ಭಗಳಲ್ಲಿ, ಆರ್ಡರ್‌ಗಳನ್ನು ಪೂರೈಸುವ ಸಾಮರ್ಥ್ಯವಿಲ್ಲದ ಯಾವುದೇ ರೆಸ್ಟೋರೆಂಟ್‌ನ್ನು ತಕ್ಷಣವೇ ಹೊರತೆಗೆಯಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟವರೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ವಿಧಾನವಾಗಿದೆ" ಎಂದು ಕಂಪನಿ ಹೇಳಿದೆ. ಆದರೆ, ಇಂತಹ ಘಟನೆಗಳು ಮಾತ್ರ ಮರುಕಳಿಸುತ್ತಿವೆ. ಆಹಾರ ವಿತರಣಾ ವೇದಿಕೆಗಳಲ್ಲಿ ಅವರ ಎಐ ಮತ್ತು ಎಂಎಲ್ ಮಾದರಿಗಳನ್ನು ಬಳಸುತ್ತಿದ್ದರೂ ನಕಲಿ ಅಂಗಡಿಗಳು ಕಡಿಮೆಯಾಗಿಲ್ಲ.

ವಾವ್‌ ಗ್ರಾಹಕ ಅನುಭವ

ವಾವ್‌ ಗ್ರಾಹಕ ಅನುಭವ

ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಭವಿಷ್ಯದಲ್ಲಿ ರೋಬೋಟ್‌ ಆಧಾರಿತ ಲಾಸ್ಟ್ ಮೈಲಿ ವಿತರಣೆಯ ಗುರಿಯನ್ನು ಹೊಂದಿದ್ದಾರೆ. ಸ್ವಿಗ್ಗಿಯಲ್ಲಿ ಎಂಜಿನಿಯರಿಂಗ್ ಮತ್ತು ಡೇಟಾ ಸೈನ್ಸ್ ಮುಖ್ಯಸ್ಥರಾಗಿರುವ ಡೇಲ್ ವಾಜ್ "ವಾವ್ ಗ್ರಾಹಕ ಅನುಭವ" ನೀಡಲು ತನ್ನ ತ್ರಿ-ಮಾರ್ಗದ ಮಾರುಕಟ್ಟೆಯಲ್ಲಿ ಎಐ ಮತ್ತು ಎಂಎಲ್ ಅನ್ವಯಿಸುತ್ತಿದ್ದಾರೆ.

Most Read Articles
Best Mobiles in India

Read more about:
English summary
Beware Of Fake Food Apps On Zomato And Swiggy

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X