ಕೆಲವು ಐಫೋನ್‌ಗಳಲ್ಲಿ ವಾಟ್ಸ್ಆಪ್ ಇನ್ನು ಕಾರ್ಯನಿರ್ವಹಿಸುವುದಿಲ್ಲ!
ವಾಟ್ಸ್ ಆಪ್ ಕಳೆದ ವರ್ಷ ಪ್ರಕಟಿಸಿರುವಂತೆ ಐಓಎಸ್6 ನಲ್ಲಿ ತನ್ನ ಬೆಂಬಲವನ್ನು ನಿಲ್ಲಿಸುವುದಾಗಿ ತಿಳಿಸಿದ್ದು. ನಂತರ ಈ ವರ್ಷದ ಜನವರಿಯಲ್ಲಿ ಐಓಎಸ್ 7 ನಲ್ಲೂ ತನ್ನ ಬೆಂಬಲ ಹಿಂಪೆಯುವುದಾಗಿ ಹೇಳಿತ್ತು.ಒಂದು ವೇಲೆ ನೀವು ಐಓಎಸ್ ಬಳಕೆದಾರರಾಗಿದ್ದು ಇದುವರೆಗೂ ಈ ಪ್ರಕಟಣೆಯನ್ನು ಗಮನಿಸದೇ ಇದ್ದಲ್ಲಿ ಮತ್ತು ಹಳೆಯ ಐಓಎಸ್ ನಲ್ಲೇ ನೀವಿದ್ದಲ್ಲಿ ಖಂಡಿತ ಈಗ ಬದಲಾವಣೆಯ ಅಗತ್ಯವಿದೆ.
ವಾಟ್ಸ್ ಆಪ್ ಡೆವಲಪರ್ ಗಳು ಆಪ್ ನ್ನು ಐಓಎಸ್ ಗಾಗಿ ಅಪ್ ಡೇಟ್ ಮಾಡಿದ್ದು ವಾಟ್ಸ್ ಆಪ್ ವರ್ಷನ್ 2.18.90 ಆಗಿದೆ.ಈ ಹೊಸ ಅಪ್ ಡೇಟ್ ಹಲವು ನೂತನ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಮತ್ತು ಇದು ಐಫೋನ್ 4 ಸೇರಿದಂತೆ ಯಾವುದೇ ಡಿವೈಸ್ ಗಳು ಐಓಎಸ್ 7ನಲ್ಲಿ ರನ್ ಆಗುತ್ತಿದ್ದರೆ ಅದರಲ್ಲಿ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ.

ಐಫೋನ್ 4 ಐಓಎಸ್ 8 ಅಪ್ ಡೇಟ್ ನ್ನು ಪಡೆಯುವ ಫೋನ್ ಗಳ ಪಟ್ಟಿಯಿಂದಲೂ ಹಿಂತೆಯಲಾಗಿದೆ.ವಾಟ್ಸ್ ಆಪ್ ಕೆಲವು ಐಫೋನ್ ಗಳಿಗೆ ಮಾತ್ರ ಬೆಂಬಲ ನೀಡುತ್ತದೆ. ಐಫೋನ್ 5 , ಐಫೋನ್ 5ಎಸ್ ಮತ್ತು ಐಫೋನ್ 4ಎಸ್ ಗಳು ನೂತನ ಐಓಎಸ್ ಗೆ ಫೆಬ್ರವರಿ 1,2020 ರ ಒಳಗೆ ಅಪ್ ಡೇಟ್ ಆಗದೇ ಇದಲ್ಲಿ ಇವುಗಳಲ್ಲೂ ಬೆಂಬಲವನ್ನು ನಿಲ್ಲಿಸಲಾಗುತ್ತದೆ.
ವಾಟ್ಸ್ ಆಪ್ ಹೇಳುವ ಪ್ರಕಾರ ಐಓಎಸ್ 7 ನಲ್ಲಿ ರನ್ ಆಗುತ್ತಿರುವ ಕೆಲವು ಡಿವೈಸ್ ಗಲು ಫೆಬ್ರವರಿ1, 2020 ರ ವರೆಗೆ ಬೆಂಬಲವನ್ನು ಪಡೆಯುತ್ತವೆ, ಆದರೆ ಅದಕ್ಕೂ ಮುನ್ನ ಅವುಗಳು ಅಪ್ ಡೇಟ್ ಆಗಬೇಕಾಗುತ್ತದೆ. ಆದರೆ, ಕಂಪೆನಿಯು ಈಗಾಗಲೇ ಐಓಎಸ್ 7 ನಲ್ಲಿ ಡೆವಲಪ್ ಮೆಂಟ್ ನ್ನು ನಿಲ್ಲಿಸಿರುವುದರಿಂದಾಗಿ ಕೆಲವು ವೈಶಿಷ್ಟ್ಯತೆಗಳು ಯಾವುದೇ ಸಮಯದಲ್ಲಾದರೂ ಕೂಡ ಕೆಲಸ ಮಾಡದೇ ಇರುವ ಸಾಧ್ಯತೆಗಳಿರುತ್ತದೆ.
ಒಟ್ಟಾರೆ ಐಫೋನ್ 4 ಬಳಕೆದಾರರು ವಾಟ್ಸ್ ಆಪ್ ಗೆ ಅಂತಿಮವಾಗಿ ಗುಡ್ ಬಾಯ್ ಹೇಳುವ ಸಮಯ ಬಂದಾಗಿದೆ. ತಮ್ಮ ಫೋನ್ ನಲ್ಲಿ ವಾಟ್ಸ್ ಆಪ್ ಬಳಕೆ ಮಾಡಬೇಕು ಎಂದು ಇಚ್ಛೆ ಹೊಂದಿರುವ ಬಳಕೆದಾರರು ತಮ್ಮ ಐಫೋನ್ 4ಎಸ್ ಮತ್ತು ಅದಕ್ಕಿಂತ ಮೇಲಿನ ಐಓಎಸ್ 7 ಒಳಗಿನ ಮಾಡೆಲ್ ನ ಫೋನ್ ಗಳು ತಮ್ಮ ಓಎಸ್ ವರ್ಷನ್ ನ್ನು ನೂತನ ಐಓಎಸ್ ಗೆ ಅಪ್ ಡೇಟ್ ಮಾಡಿಕೊಳ್ಳಲೇ ಬೇಕು.
ವಾಟ್ಸ್ ಆಪ್ ನೂತನ ಓಎಸ್ ವರ್ಷನ್ ನಲ್ಲಿ ಕೆಲಸ ಮಾಡುವುದಕ್ಕೆ ಉತ್ಸುಕವಾಗಿದೆ. ಹಳೆಯ ಓಎಸ್ ನಲ್ಲಿ ಕೆಲಸ ಮಾಡುವುದಕ್ಕಿಂತ ಹೊಸ ವರ್ಷನ್ ನಲ್ಲಿ ಕೆಲಸ ಮಾಡುವುದು ಕಂಪೆನಿಗೂ ಕೂಡ ಕಂಪ್ಯಾಟೇಬಲ್ ಆಗಿರುತ್ತದೆ. ಇದೇ ಕಾರಣಕ್ಕೆ ವಾಟ್ಸ್ ಆಪ್ ಕಂಪೆನಿಯು ಆಂಡ್ರಾಯ್ ವರ್ಷನ್ 2.3.3 ಗಿಂತ ಹಳೆಯದ್ದರಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯದ್ದು, ಐಫೋನ್ 3GS/iOS 6 ಮತ್ತು ನೋಕಿಯಾ Symbian ಎಸ್6ಯಲ್ಲಿ ವಾಟ್ಸ್ ಆಪ್ ಕೆಲಸ ಮಾಡುವುದಿಲ್ಲ..
ಆಂಡ್ರಾಯ್ಡ್ ಬಳಕೆದಾರರ ಬಳಿ ಈಗಾಗಲೇ ಇರುವ ಕೆಲವು ವೈಶಿಷ್ಟ್ಯತೆಗಳನ್ನು ಐಓಎಸ್ ಬಳಕೆದಾರರಿಗೆ ತರುವ ನಿಟ್ಟಿನಲ್ಲಿ ವಾಟ್ಸ್ ಆಪ್ ಹೊಸ ಅಪ್ ಡೇಟ್ ನ್ನು ಐಓಎಸ್ ನಲ್ಲಿ ಮಾಡುತ್ತಿದೆ. ಇನ್ನು ಮುಂದೆ ಐಓಎಸ್ ಬಳಕೆದಾರರು ಕೂಡ ಅನುಮಾನಾಸ್ಪದ ಲಿಂಕ್ ಗಳನ್ನು ಗುರುತಿಸುವಿಕೆಯಂತ ವೈಶಿಷ್ಟ್ಯೆತೆಯನ್ನು ಪಡೆಯಲಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಡುವಿಕೆಯ ವಿರುದ್ಧ ಸಮರ ಸಾರಿರುವ ವಾಟ್ಸ್ ಆಪ್ ಇತ್ತೀಚೆಗಷ್ಟೇ ಈ ವೈಶಿಷ್ಟ್ಯತೆಯನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಕರುಣಿಸಿದೆ.
ಈ ಅನುಮಾನಾಸ್ಪದ ಲಿಂಕ್ ವೈಶಿಷ್ಟ್ಯತೆಯ ಆಧಾರದಲ್ಲಿ ವಾಟ್ಸ್ ಆಪ್ ಸ್ಥಳೀಯವಾಗಿ ಮೆಸೇಜ್ ನ್ನು ಅನುಮಾನಾಸ್ಪದ ಮೆಸೇಜ್ ಹೌದೋ ಅಲ್ಲವೋ ಎಂಬುದನ್ನು ಗುರುತಿಸುತ್ತದೆ. ಯಾವುದೇ ಅನಗತ್ಯ ಮತ್ತು ಗುಮಾನಿ ಹುಟ್ಟಿಸುವ ಅಂಶ ಆ ಲಿಂಕ್ ನಲ್ಲಿ ಇದ್ದರೆ ವಾಟ್ಸ್ ಆಪ್ ಅದನ್ನು ಸಸ್ಪೀಷಿಯಸ್ ಲಿಂಕ್ ಎಂದು ಮಾರ್ಕ್ ಮಾಡುತ್ತದೆ. ಇದಿಷ್ಟೇ ಅಲ್ಲದೆ ವಾಟ್ಸ್ ಆಪ್ ನೋಟಿಫಿಕೇಷನ್ ಎಕ್ಸ್ ಟೆಷನ್ ಸಪೋರ್ಟ್ ವೈಶಿಷ್ಟ್ಯತೆಯನ್ನು ಐಓಎಸ್ ಬಳಕೆದಾರಿಗೆ ಬಿಡುಗಡೆ ಮಾಡುತ್ತಿದೆ. ಈ ವೈಶಿಷ್ಟ್ಯತೆಯ ಮೂಲಕ ಇಮೇಜ್ ಮತ್ತು ಜಿಐಎಫ್ ಪ್ರೀವ್ಯೂವನ್ನು ನೋಟಿಫಿಕೇಷನ್ ನಲ್ಲೇ ಲಭ್ಯವಾಗಿಸುತ್ತದೆ. ಎಲ್ಲಾ ಅರ್ಹ ಬಳಕೆದಾರರಿಗೆ ತಲುಪಲು ಕೆಲವು ವಾರಗಳಾಗುವ ಸಾಧ್ಯತೆ ಇದೆ. ಯಾಕೆಂದರೆ ಬಿಡುಗಡೆಯ ಸಮಯ ಕೆಲವು ವಾರಗಳಾಗುವ ಸಾಧ್ಯತೆ ಇದೆ.


Click it and Unblock the Notifications








