ವಾಟ್ಸಆಪ್ ಬಣ್ಣಕ್ಕೆ ಮರುಳಾಗಬೇಡಿ!!..ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ.!!

ನಕಲಿ ವೆಬ್‌ಸೈಟ್‌ಗಳನ್ನು ತೆರೆದು ಆ ಸೈಟ್‌ ಲಿಂಕ್ ಅನ್ನು ಅಂತರ್ಜಾಲ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸಿ ಲಿಂಕ್ ಕ್ಲಿಕ್ಕಿಸಿದ ಜನರನ್ನು ಮೋಸಗೊಳಿಸುವವರು ಹಲವರು ಇದ್ದಾರೆ.!!

|

ತಂತ್ರಜ್ಞಾನ ಮುಂದುವರಿದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುವವರೆ ಹೆಚ್ಚಾಗುತ್ತಿದ್ದಾರೆ. ನಕಲಿ ವೆಬ್‌ಸೈಟ್‌ಗಳನ್ನು ತೆರೆದು ಆ ಸೈಟ್‌ ಲಿಂಕ್ ಅನ್ನು ಅಂತರ್ಜಾಲ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸಿ ಲಿಂಕ್ ಕ್ಲಿಕ್ಕಿಸಿದ ಜನರನ್ನು ಮೋಸಗೊಳಿಸುವವರು ಹಲವರು ಇದ್ದಾರೆ.!!

ಹಾಗಾಗಿ, ನಿಮಗೆ ಯಾವುದೇ ಲಿಂಕ್‌ಗಳು ಬಂದರೂ ಸಹ ಸರಿಯಾಗಿ ಪರಿಶೀಲಿಸದೆ ಅವನ್ನು ಕ್ಲಿಕ್‌ ಮಾಡಲು ಹೋಗಬೇಡಿ. ಲಿಂಕ್‌ ಅನ್ನು ಕ್ಲಿಕ್ಕಿಸಿದರೆ ನೀವು ಮಾತ್ರ ಹಳ್ಳಕ್ಕೆ ಬೀಳುವುದಿಲ್ಲ. ನಿಮ್ಮ ಹತ್ತಿರದವರು ಸಹ ಬೀಳುತ್ತಾರೆ. ಹಾಗಾಗಿ, ಇಂತಹ ನಕಲಿ ವೆಬ್‌ಸೈಟ್‌ಗಳ ಕಾಲದಲ್ಲಿ ಮಾಲ್‌ವೇರ್‌- ಆಡ್‌ವೇರ್‌ಗಳ ಬಗ್ಗೆ ಎಷ್ಟು ಎಚ್ಚರದಿಂದಿದ್ದರೂ ಅದು ಕಡಿಮೆಯೇ.!!

ವಾಟ್ಸಆಪ್ ಬಣ್ಣಕ್ಕೆ ಮರುಳಾಗಬೇಡಿ!!..ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ.!!

ಈ ಮಾತು ಬಂದಿದ್ದು ಇಷ್ಟಕ್ಕೆ, ನೆನ್ನೆಯಷ್ಟೇ ವೆಬ್‌ ವರ್ಷನ್‌ನಲ್ಲಿ ಬಣ್ಣದ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಗುರಿಯಾಗಿಸಿಕೊಂಡು ವಾಟ್ಸಆಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಬಣ್ಣದ(ಮೋಸದ) ಜಾಲಕ್ಕೆ ಬೀಳಿಸುವ ಪ್ರಯತ್ನಗಳು ನಡೆಯುತ್ತಿವೆ. ಕೊಂಚವೂ ಸಂದೇಹ ಬರದಹಾಗೆ ಇವರು ಮಾಡುವ ಕೆಲಸಕ್ಕೆ ಎಲ್ಲರೂ ಸುಸ್ತು ಹೊಡೆದಿದ್ದಾರೆ.!!

ವಾಟ್ಸಆಪ್ ಬಣ್ಣಕ್ಕೆ ಮರುಳಾಗಬೇಡಿ!!..ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ.!!

ವೆಬ್‌ ಡಾಟ್, ವಾಟ್ಸಆಪ್.ಕಾಮ್ ನಂತಹ ಹಲವು ಲಿಂಕ್‌ಗಳಲ್ಲಿ ವಾಟ್ಸ್‌ಆಪ್‌ನ ಹೊಸ ಬಣ್ಣಗಳನ್ನು ನಾನು ಮೆಚ್ಚಿಕೊಂಡಿದ್ದೇನೆನೀವು ಟ್ರೈ ಮಾಡಿ ಎನ್ನುವ ಲಿಂಕ್‌ಗಳು ಆಗಲೇ ಎಲ್ಲೆಡೇ ಹರಿದಾಡಿವೆ. ಆದರೆ, ಈ ಲಿಂಕ್‌ಗಳು ಎಲ್ಲವೂ ನಕಲಿ ವೆಬ್‌ಸೈಟ್‌ಗಳದ್ದಾಗಿವೆ.! ಇವುಗಳು ಯುಆರ್ಎಲ್‌ ಲಿಂಕ್‌ ಅನ್ನು ಆಡ್‌ವೇರ್‌ಗೆ ಕನೆಕ್ಟ್ ಮಾಡುತ್ತವೆ.!!

ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರವಿರಲಿ. ಈ ಯುಆರ್‌ಎಲ್ ಲಿಂಕ್‌ ಆಡ್‌ವೇರ್‌ಗೆ ಕನೆಕ್ಟ್ ಆಗಿ, ಆಡ್‌ವೇರ್‌ ಆಪ್‌ಗಳು ನಿಮ್ಮ ಡಿವೈಸ್‌ಗೆ ಇನ್ಸ್ಟಾಲ್ ಆಗುತ್ತವೆ. ಹಾಗಾಗಿ, ವಾಟ್ಸ್ಆಪ್ ವೆಬ್‌ ವರ್ಷನ್‌ನ ಅಧಿಕೃತ ಲಿಂಕ್‌ web.whatsapp.com ಬಳಕೆ ಮಾಡಿ.!!

Best Mobiles in India

English summary
Phishing remains one of the easiest points on entry for malware. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X