Subscribe to Gizbot

ಏರ್ಟೆಲ್ ನಿಂದ ನೂತನ ಏರ್ಟೆಲ್ ಟಿವಿ ಆಪ್, ನೀಡಲಿದೆ ಜೂನ್ 2018 ರ ವರೆಗೆ ಉಚಿತ ಸಬ್ಸ್ಕ್ರಿಪ್ಶನ್!

Posted By: Tejaswini P G

ಭಾರತದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರತಿ ಏರ್ಟೆಲ್ ಇಂದು ತನ್ನ ಏರ್ಟೆಲ್ ಟಿವಿ ಆಪ್ ನ ಹೊಸ ಆವೃತ್ತಿಯೊಂದನ್ನು ಲಾಂಚ್ ಮಾಡಿದ್ದು, ಈ ಆಪ್ 29 HD ಚ್ಯಾನಲ್ಗಳನ್ನು ಒಳಗೊಂಡಂತೆ 300 ಲೈವ್ ಚ್ಯಾನಲ್ಗಳನ್ನು, 6000ಕ್ಕೂ ಅಧಿಕ ಮೂವಿ ಮತ್ತು ಖ್ಯಾತ ಶೋಗಳನ್ನಲ್ಲದೆ ಸಾಕಷ್ಟು ಪ್ರಾದೇಶಿಕ ಕಾರ್ಯಕ್ರಮಗಳನ್ನೂ ಒಳಗೊಂಡಿದೆ.

ಏರ್ಟೆಲ್ ನಿಂದ ನೂತನ ಏರ್ಟೆಲ್ ಟಿವಿ ಆಪ್!!

ಏರ್ಟೆಲ್ ಸಂಸ್ಥೆಯು ತನ್ನ ಏರ್ಟೆಲ್ ಟಿವಿ ಆಪ್ ನ ಹೊಸ ಆವೃತ್ತಿಯನ್ನು ಸಾಕಷ್ಟು ವೈವಿಧ್ಯಮಯವಾದ ಕಾರ್ಯಕ್ರಮಗಳು ಮತ್ತು ಹೊಸ ಯೂಸರ್ ಇಂಟರ್ಫೇಸ್ನೊಂದಿಗೆ ಲಾಂಚ್ ಮಾಡಿರುವುದಾಗಿ ತಿಳಿಸಿದೆ.ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಉತ್ತಮ ಮನರಂಜನೆಯನ್ನು ನೀಡುವ ಗುರಿಯೊಂದಿಗೆ ಈ OTT ಆಪ್ ಅನ್ನು ವಿನ್ಯಾಸಗೊಳಿಸಲಾಗಿದೆಯಂತೆ.

ಇದರೊಂದಿಗೆ ಏರ್ಟೆಲ್ ನೀಡುತ್ತಿರುವ ಸಿಹಿ ಸುದ್ದಿ ಏನೆಂದರೆ ಏರ್ಟೆಲ್ ಟಿವಿ ಯ ಸಂಪೂರ್ಣ ಕಂಟೆಂಟ್ ಕ್ಯಾಟಲಾಗ್ ಏರ್ಟೆಲ್ ನ ಪ್ರೀಪೇಯ್ಡ್ ತ್ತು ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಜೂನ್ 2018ರ ವರೆಗೆ ಉಚಿತವಾಗಿ ಲಭ್ಯವಿರುತ್ತದೆ. ಗ್ರಾಹಕರು ಈ ಏರ್ಟೆಲ್ ಟಿವಿ ಆಪ್ ಅನ್ನು ತಮ್ಮ ಸ್ಮಾರ್ಟ್ಫೋನ್ ನಲ್ಲಿ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವ ಮೂಲಕ ನಿರಂತರ ಮನರಂಜನೆಯನ್ನು ಅನುಭವಿಸಬಹುದು!

ಏರ್ಟೆಲ್ ಟಿವಿ ಆಪ್ ಆಂಡ್ರಾಯ್ಡ್ ಮತ್ತು iOS ಎರಡರಲ್ಲೂ ಲಭ್ಯವಿದೆ.

ಈ ಲಾಂಚ್ ಕುರಿತು ಮಾತನಾಡಿದ ಸಮೀರ್ ಬಾರ್ತಾ, ಸಿಇಓ-ವಿಂಕ್ ಇವರು" ಉತ್ತಮ ವೈವಿಧ್ಯಮಯ ಕಂಟೆಂಟ್ ಮತ್ತು ಶ್ರೇಷ್ಠ ಯೂಸರ್ ಇಂಟರ್ಫೇಸ್ ಹೊಂದಿರುವ ಏರ್ಟೆಲ್ ಟಿವಿ ಆಪ್ ನ ನೂತನ ಆವೃತ್ತಿಯನ್ನು ಜನರಿಗೆ ನೀಡಲು ನಾವು ಬಹಳ ಉತ್ಸುಕರಾಗಿದ್ದೇವೆ. ಗ್ರಾಹಕರ ಬೇಕು ಬೇಡಗಳನ್ನು ತಿಳಿದು ಅದರ ಅನುಸಾರವಾಗಿ ಈ ಆಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಭಾರತದ ಜನತೆಯ ಅಗತ್ಯಗಳಿಗೆ ತಕ್ಕಂತೆ ಈ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಬಳಕೆದಾರರಿಗೆ ವೈವಿಧ್ಯಮಯ ಮತ್ತು ಆಸಕ್ತಿದಾಯಕ ಕಂಟೆಂಟ್ಗಳನ್ನು ಈ ಮೂಲಕ ನೀಡುವ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.

ಸಧ್ಯಕ್ಕೆ ಏರ್ಟೆಲ್ ಟಿವಿ ಎರೋಸ್ ನೌ,ಸೋನಿಲೈವ್,HOOQ ಮೊದಲಾದ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

ಏರ್ಟೆಲ್ ಟಿವಿ ಯ ಪೋರ್ಟ್ಫೋಲಿಯೋ ನಲ್ಲಿ 300ಕ್ಕೂ ಅಧಿಕ ಲೈವ್ ಚ್ಯಾನಲ್ಗಳಿದ್ದು, ಝೀ,ಸೋನಿ,NDTV,ಜೆಮಿನಿ, ಸನ್ ಟಿವಿ ಮೊದಲಾದ ಸಂಸ್ಥೆಗಳು ನೀಡುವ ಜನರಲ್ ಎಂಟರ್ಟೈನ್ಮೆಂಟ್,ಮೂವಿ,ನ್ಯೂಸ್, ಇನ್ಫೋಟೈನ್ಮೆಂಟ್ ಪ್ರಕಾರಗಳ ಚ್ಯಾನಲ್ಗಳನ್ನು ಹೊಂದಿದೆ.

100 ದಶಲಕ್ಷ ಡೌನ್‌ಲೋಡ್ ಕಂಡ ಭಾರತದ ಮೊದಲ ಆಪ್ ಪೇಟಿಎಂ!!

ಅಷ್ಟೇ ಅಲ್ಲದೆ, ಗ್ರಾಹಕರು 6000 ಕ್ಕೂ ಅಧಿಕ ಹಾಲಿವುಡ್, ಬಾಲಿವುಡ್ ಮತ್ತು ಭಾರತದ ಪ್ರಾದೇಶಿಕ ಚಲನಚಿತ್ರಗಳನ್ನು ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಟಿವಿ ಶೋಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ

ಏರ್ಟೆಲ್ ಟಿವಿ ಆಪ್ ಈಗ ಗ್ರಾಹಕರಿಗೆ ಇಂಗ್ಲಿಷ್,ಹಿಂದಿ, ಪಂಜಾಬಿ, ಬೆಂಗಾಲಿ,ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠೀ, ಭೋಜ್ಪುರೀ, ಅಸ್ಸಾಮೀಸ್, ಒಡಿಯಾ, ಉರ್ದು ಹಾಗು ಫ್ರೆಂಚ್ ನಂತಹ 15 ವಿಭಿನ್ನ ಭಾಷೆಗಳ ಕಂಟೆಂಟ್ ಅನ್ನು ನೀಡುತ್ತಿದೆ.

English summary
The OTT app is designed to deliver the best-in-class entertainment experience to customers in India’s fast-growing smartphone market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot