Home
Apps

ಒಂದೇ ತಿಂಗಳಿನಲ್ಲಿ ದಾಖಲೆಯ ಲಕ್ಷ ಕೋಟಿ ರೂ. ಮೀರಿದ ಭಿಮ್​ ಆಪ್ ಪಾವತಿ!

ಎರಡು ಬ್ಯಾಂಕ್ ಖಾತೆಗಳ ನಡುವೆ ಆನ್‌ಲೈನ್ ಮೂಲಕ ಸುಲಭವಾಗಿ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ ಸೌಲಭ್ಯ ಹೊಂದಿರುವ ಸರ್ಕಾರದ 'ಭೀಮ್ ಆಪ್'​ ಮೂಲಕ ನಡೆಸಲಾಗುವ ಯುಪಿಐ ಹಣ ವರ್ಗಾವಣೆ ಪ್ರಮಾಣ ಡಿಸೆಂಬರ್​ನಲ್ಲಿ ಭಾರೀ ಹೆಚ್ಚಾಗಿದೆ. ಕಳೆದ ವರ್ಷ ನವೆಂಬರ್​ನಲ್ಲಿ 524.94 ಮಿಲಿಯನ್ ಹಣ ವರ್ಗಾವಣೆ ನಡೆದಿದ್ದರೆ, ಇದೇ ಡಿಸೆಂಬರ್ 102,594.82 ಕೋಟಿ ರೂಪಾಯಿಯ 620.17 ಮಿಲಿಯನ್​ ವರ್ಗಾವಣೆ ನಡೆದಿದ್ದು ದಾಖಲೆಯೆನಿಸಿದೆ.

ನವೆಂಬರ್​ನಲ್ಲಿ ನಡೆದ ಹಣ ವರ್ಗಾವಣೆ ಮೌಲ್ಯದ ಪ್ರಮಾಣ 82,232.21 ಕೋಟಿ ರೂಪಾಯಿಯಷ್ಟಿತ್ತು. ಅದಕ್ಕೆ ಹೋಲಿಸಿದರೆ ಡಿಸೆಂಬರ್​ನಲ್ಲಿ ಶೇ.18ರಷ್ಟು ಹೆಚ್ಚು ವಹಿವಾಟು ನಡೆದಿದೆ ಎಂದು ನ್ಯಾಷನಲ್​ ಪೇಮೆಂಟ್​ ಕಾರ್ಪೋರೇಶನ್​ (ಎನ್​ಪಿಸಿಐ) ಮಂಗಳವಾರ ಹೇಳಿದೆ. ನವೆಂಬರ್​ನಲ್ಲಿ ಮೊದಲ ಬಾರಿಗೆ 500 ಮಿಲಿಯನ್ ಹಣ ವರ್ಗಾವಣೆ ನಡೆಸಿದ್ದ ಭೀಮ್ ಆಪ್, ಡಿಸೆಂಬರ್ ತಿಂಗಳಿನಲ್ಲಿ ಅದಕ್ಕಿಂತಲೂ ಹೆಚ್ಚು 620.17 ಮಿಲಿಯನ್​ ವರ್ಗಾವಣೆ ನಡೆಸಿದೆ.

ಒಂದೇ ತಿಂಗಳಿನಲ್ಲಿ ದಾಖಲೆಯ ಲಕ್ಷ ಕೋಟಿ ರೂ. ಮೀರಿದ ಭಿಮ್​ ಆಪ್ ಪಾವತಿ!

ಫಲಾನುಭವಿ ಬ್ಯಾಂಕ್​ ಖಾತೆಯ ವಿವರ ಅಗತ್ಯವಿಲ್ಲದೆ ಎರಡು ಬ್ಯಾಂಕ್ ಖಾತೆಗಳ ನಡುವೆ ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡಬಹುದಾದ ಈ ಭೀಮ್ ಆಪ್ ಈಗ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಹಣ ವರ್ಗಾವಣೆ ಆಪ್ ಆಗಿದೆ. 2016ರ ಡಿಸೆಂಬರ್​ 30ರಂದು ಪ್ರಧಾನಿ ಮೋದಿಯವರು ಈ ಆಪ್ ಅನ್ನು ಉದ್ಘಾಟನೆ ಮಾಡಿದ ನಂತರ ನಂತರ ಯುಪಿಐ ಬಳಕೆಯಲ್ಲಿ ಗಣನೀಯ ಮಟ್ಟದ ಏರಿಕೆಯಾಗಿದೆ. ಹಾಗಾದರೆ, ಏನಿದು ಭೀಮ್ ಆಪ್?, ಆಪ್ ಬಳಕೆ ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಭೀಮ್ ಆಪ್

ಏನಿದು ಭೀಮ್ ಆಪ್

ಭೀಮ್ ಆಪ್ ಸ್ಮಾರ್ಟ್‌ಫೋನ್‌ ಮತ್ತು ಸಾಮಾನ್ಯ ಫೋನ್‌ಗಳ ಮೂಲಕ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ ಸೌಲಭ್ಯ ಹೊಂದಿದ್ದು, ಅಂತರ್ಜಾಲವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದ್ದು, ಭೀಮ್ ಆಪ್ 9 ಭಾಷೆಗಳಲ್ಲಿ ಲಭ್ಯವಿದೆ. ಈ ಆಪ್ ಮೂಲಕ ಹಣ ರವಾನಿಸಲು ಆಧಾರ್ ಸಂಖ್ಯೆ ಕೂಡ ಬಳಸಬಹುದು. ಆದರೆ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಪರ್ಕ ಹೊಂದಿರಬೇಕು.

ಹಣ ರವಾನೆ ಹೇಗೆ?

ಹಣ ರವಾನೆ ಹೇಗೆ?

ಭೀಮ್ ಆಪ್ ಮೂಲಕ ಕೇವಲ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಹಣ ರವಾನೆ ಮಾಡಬಹುದು. ಇದು ಬಹಳ ಸುಲಭವಾದ ಹಣ ವರ್ಗಾವಣ ಮಾಡುವ ವ್ಯವಸ್ಥೆಯಾಗಿದೆ. ಇನ್ನು ವರ್ಚುವಲ್ ಪೇಮೆಂಟ್ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಮೂಲಕ ಕೂಡ ಹಣ ವರ್ಗಾವಯಿಸಬಹುದು. VPA, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಮೂಲಕ ಹಣ ಹೇಗೆ ಕಳುಹಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

1. ಮೊಬೈಲ್ ನಂಬರ್ ಮೂಲಕ

1. ಮೊಬೈಲ್ ನಂಬರ್ ಮೂಲಕ

* ಭೀಮ್ ಆಪ್ ತೆರೆದ ನಂತರ ಸೆಂಡ್ ಮನಿ ಆಪ್ಷನ್ ಆಯ್ಕೆ ಮಾಡಿ ವಿನಂತಿ ಕಳುಹಿಸಿ.
* ಮೊಬೈಲ್ ನಂಬರ್ ನಮೂದಿಸಿ
* ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ ಕ್ಲಿಕ್ ಮಾಡಿ
* ಹಣ ವರ್ಗಾವಣೆಗಾಗಿ ಮೊತ್ತ ಮತ್ತು ರಿಮಾರ್ಕ್ ಕಾಲಂ ಭರ್ತಿ ಮಾಡಿ (PAY)ಪೇ ಮೇಲೆ ಕ್ಲಿಕ್ ಮಾಡಿ
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* ವ್ಯವಹಾರ ಯಶಸ್ವಿಯಾದ ನಂತರ ಸೂಚನೆ/ಸಂದೇಶ ಪಡೆಯುವಿರಿ

2. ಖಾತೆ ಸಂಖ್ಯೆ ಮತ್ತು IFSC ಮೂಲಕ

2. ಖಾತೆ ಸಂಖ್ಯೆ ಮತ್ತು IFSC ಮೂಲಕ

* ಭೀಮ್ ಆಪ್ ತೆರೆದ ನಂತರ ಸೆಂಡ್ ಮನಿ ಆಪ್ಷನ್ ಆಯ್ಕೆ ಮಾಡಿ ವಿನಂತಿ ಕಳುಹಿಸಿ.
* ಖಾತೆ ಸಂಖ್ಯೆ ಮತ್ತು IFSC ಮೂಲಕ ಹಣ ರವಾನೆಗಾಗಿ ಬಲಗಡೆ ಮೂಲೆಯಲ್ಲಿರುವ ಆಪ್ಷನ್ ಆಯ್ಕೆ ಮಾಡಿ
* ಖಾತೆ ಸಂಖ್ಯೆ ಮತ್ತು IFSC ಕೋಡ್ ನಮೂದಿಸಿದ ನಂತರ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ
* ಹಣ ವರ್ಗಾವಣೆಗಾಗಿ ಮೊತ್ತ ಮತ್ತು ರಿಮಾರ್ಕ್ ಕಾಲಂ ಭರ್ತಿ ಮಾಡಿ (PAY)ಪೇ ಮೇಲೆ ಕ್ಲಿಕ್ ಮಾಡಿ
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* ವ್ಯವಹಾರ ಯಶಸ್ವಿಯಾದ ಬಳಿಕ ಸೂಚನೆ/ಸಂದೇಶ ಪಡೆಯುವಿರಿ

3. ವರ್ಚುವಲ್ ಪೇಮೆಂಟ್ ಅಡ್ರೆಸ್(VPA)

3. ವರ್ಚುವಲ್ ಪೇಮೆಂಟ್ ಅಡ್ರೆಸ್(VPA)

* ಸ್ಮಾರ್ಟ್ಫೋನ್ ನಲ್ಲಿ ಭೀಮ್ ಆಪ್ ತೆರೆದು ಲಾಗಿನ್ ಆಗಿರಿ
* ಸೆಂಡ್ ಮನಿ ಆಪ್ಷನ್ ಆಯ್ಕೆ ಮಾಡಿ ವಿನಂತಿ ಕಳುಹಿಸಿ.
* ವರ್ಚುವಲ್ ಪೇಮೆಂಟ್ ಅಡ್ರೆಸ್(VPA) ನಮೂದಿಸಿ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸಿ ಕ್ಲಿಕ್ ಮಾಡಿ
* ಹಣ ವರ್ಗಾವಣೆಗಾಗಿ ಮೊತ್ತ ಮತ್ತು ರಿಮಾರ್ಕ್ ಕಾಲಂ ಭರ್ತಿ ಮಾಡಿ (PAY)ಪೇ ಮೇಲೆ ಕ್ಲಿಕ್ ಮಾಡಿ
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* VPA ವಿಳಾಸ ಸರಿಯಾಗಿರಬೇಕು. ಯಾವಾಗ ಬೇಕಾದರೂ ಇದನ್ನು ಆಯ್ಕೆ ಮತ್ತು ಬದಲಾವಣೆ ಮಾಡಬಹುದು.
* ಯುಪಿಐ ಪಿನ್ ಎಂಟ್ರಿ ಪುಟದಲ್ಲಿ ವ್ಯವಹಾರದ ವಿವರಗಳನ್ನು ಪರಿಶೀಲಿಸಿ
* ವ್ಯವಹಾರ ಯಶಸ್ವಿಯಾದ ನಂತರ ಸೂಚನೆ/ಸಂದೇಶ ಪಡೆಯುವಿರಿ

Best Mobiles in India

English summary
620.17 million UPI transactions worth ₹102,594.82 crore were conducted in December, as compared to 524.94 million transactions valued at ₹82,232.21 crore in November—an 18% increase in transaction volume. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+