Home
Apps

ಇಲ್ಲಿ ಕೇಳಿ! ಜಸ್ಟ್ 10 ನಿಮಿಷ.. ನಿಮ್ಮ ‌ಮನೆ ಬಾಗಿಲಿಗೇ ಬರುತ್ತೆ ಫೋನ್; 10,000 ಡಿಸ್ಕೌಂಟ್

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌ ಒಂದು ಬಂದಿದೆ. ಕೇವಲ 10 ನಿಮಿಷಗಳಲ್ಲಿ ಸ್ಯಾಮ್‌ಸಂಗ್ ಮೊಬೈಲ್‌ ನಿಮ್ಮ ಮನೆ ಬಾಗಿಲಿಗೆ ಬರುತ್ತೆ. ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25) ಸರಣಿಯು ಇಂದಿನಿಂದ (ಫೆಬ್ರವರಿ 7) ಭಾರತದಲ್ಲಿ ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಬಿಗ್‌ಬಾಸ್ಕೆಟ್ (BigBasket) ಕೇವಲ 10 ನಿಮಿಷಗಳಲ್ಲಿ ಈ ಸರಣಿಯ ಫೋನ್‌ಗಳನ್ನು ನಿಮ್ಮ ಮನೆಗೆ ತಲುಪಿಸಲಿದೆ. ಜೊತೆಗೆ ತನ್ನ ಗ್ರಾಹಕರಿಗೆ 9 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟಾಟಾ ಗ್ರೂಪ್ (Tata Group) ಒಡೆತನದ ಬಿಗ್‌ಬಾಸ್ಕೆಟ್ ತನ್ನ ತ್ವರಿತ ಕಾಮರ್ಸ್ ಸೇವೆ ಬಿಗ್‌ಬಾಸ್ಕೆಟ್ ನೌ ಮೂಲಕ ಗ್ರಾಹಕರಿಗೆ 10 ನಿಮಿಷಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ತಲುಪಿಸಲಿದೆ. ಆದರೆ, ಈ ಸೇವೆ ಯಾವ ಪ್ರದೇಶಗಳು ಅಥವಾ ನಗರಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿಲ್ಲ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಬಳಕೆದಾರರಿಗೆ ಕೆಲವು ಆಫರ್ ಘೋಷಿಸಿದೆ. ಈ ದಿನಸಿ ವಿತರಣಾ ಅಪ್ಲಿಕೇಶನ್ ಆಸಕ್ತ ಖರೀದಿದಾರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ, 9 ತಿಂಗಳ ಇಎಂಐ ಆಯ್ಕೆಯನ್ನು ಸಹ ನೀಡುತ್ತದೆ.

ಇಲ್ಲಿ ಕೇಳಿ! ಜಸ್ಟ್ 10 ನಿಮಿಷ.. ನಿಮ್ಮ ‌ಮನೆ ಬಾಗಿಲಿಗೇ ಬರುತ್ತೆ Samsung ಫೋನ್!

10 ನಿಮಿಷಗಳ ಸೇವೆ ಇದೇ ಮೊದಲಲ್ಲ!

ಬಿಗ್‌ಬಾಸ್ಕೆಟ್ 10 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ಗಳ ವಿತರಣೆ ಸೌಲಭ್ಯವನ್ನು ಪರಿಚಯಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಂಗಳೂರು, ದೆಹಲಿ ಮತ್ತು ಮುಂಬೈನ ಗ್ರಾಹಕರಿಗೆ ಆಪಲ್‌ನ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಅನ್ನು ತಲುಪಿಸಿತ್ತು. ಇದಕ್ಕಾಗಿ ಕ್ರೋಮಾ ಎಲೆಕ್ಟ್ರಾನಿಕ್ಸ್ (ಟಾಟಾ ಗ್ರೂಪ್‌) ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ 10 ನಿಮಿಷಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು ಫೋನ್‌ಗಳನ್ನು ವಿತರಣೆ ಮಾಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಬೆಲೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು 70,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಕಂಪನಿಯು (ಟಾಟಾ ಗ್ರೂಪ್) ತನ್ನ ಗ್ರಾಹಕರಿಗೆ ರಿಯಾಯಿತಿಗಳನ್ನು ನೀಡಬಹುದು ಎಂದು ಹೇಳಲಾಗಿದೆ. ಇನ್ನೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯಲ್ಲಿ ಮೂರು ಫೋನ್‌ಗಳನ್ನು ಪರಿಚಯಿಸಲಾಗಿದೆ. ಅವುಗಳೇ, Samsung Galaxy S25, Samsung Galaxy S25 Plus ಮತ್ತು Samsung Galaxy S25 Ultra ಸ್ಮಾರ್ಟ್‌ಫೋನ್‌ಗಳು.

ಇಲ್ಲಿ ಕೇಳಿ! ಜಸ್ಟ್ 10 ನಿಮಿಷ.. ನಿಮ್ಮ ‌ಮನೆ ಬಾಗಿಲಿಗೇ ಬರುತ್ತೆ Samsung ಫೋನ್!

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆ

  • 12GB RAM + 256GB ಸ್ಟೋರೇಜ್ ಬೆಲೆ = 80,999 ರೂ.
  • 12GB RAM + 512GB ಸ್ಟೋರೇಜ್ ಬೆಲೆ = 92,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಬೆಲೆ

  • 12GB RAM + 256GB ಸ್ಟೋರೇಜ್ ಬೆಲೆ = 99,999 ರೂ.
  • 12GB RAM + 512GB ಸ್ಟೋರೇಜ್ ಬೆಲೆ = 1,11,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ

  • 12GB RAM + 256GB ಸ್ಟೋರೇಜ್ ಬೆಲೆ = 1,29,999 ರೂ.
  • 12GB RAM + 512GB ಸ್ಟೋರೇಜ್ ಬೆಲೆ = 1,41,999 ರೂ.
  • 12GB RAM + 1TB ಸ್ಟೋರೇಜ್ ಬೆಲೆ = 1,65,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನ್ ಐಸಿಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಸ್ಮಾರ್ಟ್‌ಫೋನ್ ಸಿಲ್ವರ್ ಶ್ಯಾಡೋ ಮತ್ತು ಬ್ಲೂಬ್ಲಾಕ್, ಕೋರಲ್ರೆಡ್ ಮತ್ತು ಪಿಂಕ್‌ಗೋಲ್ಡ್ ಸೇರಿದಂತೆ ನೇವಿ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಟೈಟಾನಿಯಂ ಸಿಲ್ವರ್‌ಬ್ಲೂ, ಟೈಟಾನಿಯಂ ಬ್ಲಾಕ್, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಮಾರಾಟವಾಗಲಿದೆ.

Best Mobiles in India

English summary
BigBasket to deliver Samsung Galaxy S25 series Smartphones in 10 minutes: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+