Home
Apps

ಸಿಹಿಸುದ್ದಿ! ಜಸ್ಟ್ 10 ನಿಮಿಷಕ್ಕೆ ಬರುತ್ತೆ ಆಂಬುಲೆನ್ಸ್; ಹೊಸ ಸೇವೆ ಪ್ರಾರಂಭಿಸಿದ Blinkit.. ಶುಲ್ಕ ಎಷ್ಟು?

ಭಾರತೀಯರಿಗೆ ಬ್ಲಿಂಕಿಟ್‌ ಸಿಹಿಸುದ್ದಿ ನೀಡಿದೆ. ಕೇವಲ 10 ನಿಮಿಷಕ್ಕೆ ನಿಮ್ಮ ಮನೆ ಮುಂದೆ ಬಂದು ನಿಲ್ಲುತ್ತೆ ಆಂಬ್ಯುಲೆನ್ಸ್. ಅದೂ ಸಹ ಕಡಿಮೆ ಶುಲ್ಕದಲ್ಲಿ..! ಹೌದು, ಬ್ಲಿಂಕಿಟ್ (Blinkit) ಗುರುಗ್ರಾಮ್‌ನಲ್ಲಿ 10 ನಿಮಿಷಗಳಲ್ಲಿ ಆಂಬುಲೆನ್ಸ್ ಸೇವೆ ಒದಗಿಸುವ ಹೊಸ ಸೇವೆಯನ್ನು (Blinkit Ambulance Service Launched) ಪ್ರಾರಂಭಿಸಿದೆ. ಈ ಸೇವೆಯು ಜೀವ ಉಳಿಸುವ ಸಲಕರಣೆಗಳನ್ನು ಹೊಂದಿದೆ. ಹಾಗೆಯೇ, ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ತುರ್ತು ಚಿಕಿತ್ಸೆಗಾಗಿ ಈ ಹೊಸ ಸೇವೆಯನ್ನು ಆರಂಭಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಜೊಮ್ಯಾಟೊ (Zomato) ಅಂಗಸಂಸ್ಥೆಯಾದ ಬ್ಲಿಂಕಿಟ್ ಕೇವಲ 10 ನಿಮಿಷಗಳ ಆಂಬುಲೆನ್ಸ್ ವಿತರಣಾ ಸೇವೆಯನ್ನು ಶುರು ಮಾಡಿದೆ. ಈಗ ಓಲಾ ಆಟೋ, ಉಬರ್ ಟ್ಯಾಕ್ಸಿಯಂತೆ, ಸಾರ್ವಜನಿಕರು ತಮ್ಮ ತುರ್ತು ಅಗತ್ಯಗಳಿಗಾಗಿ ಮೊಬೈಲ್ ಫೋನ್ ಮೂಲಕ ಆಂಬುಲೆನ್ಸ್ ವಾಹನಗಳನ್ನು ಸೆಕೆಂಡುಗಳಲ್ಲಿ ಬುಕ್ ಮಾಡಬಹುದು. ಈ ಹೊಸ ಸೇವೆಯನ್ನು ಬ್ಲಿಂಕಿಟ್ ಕಂಪನಿಯು ಬ್ಲಿಂಕಿಟ್ ಆಂಬುಲೆನ್ಸ್ ಸೇವೆ (Blinkit Ambulance Service) ಹೆಸರಿನಲ್ಲಿ ಪರಿಚಯಿಸಿದೆ.

Blinkit: 10 ನಿಮಿಷಗಳ ಆಂಬುಲೆನ್ಸ್ ಸೇವೆ ಪ್ರಾರಂಭ; ಶುಲ್ಕ ಎಷ್ಟು?

ಗುರುಗಾಂವ್​ನಲ್ಲಿ ಮೊದಲ ಪ್ರಯೋಗ

ಬ್ಲಿಂಕಿಟ್​ ಆಪ್ ದಿನಸಿ ಸಾಮಗ್ರಿಗಳು, ಪ್ರಿಂಟೌಟ್ಸ್ ಹೀಗೆ ಹತ್ತು ಹಲವು ಸೇವೆಗಳನ್ನು ನೀಡುತ್ತಿದೆ. ಇದೀಗ, ಈ ಹೊಸದೊಂದು ಸೇವೆಯನ್ನು ನೀಡಲು ಸಿದ್ಧವಾಗಿದೆ. ಗುರುಗಾಂವ್​ನಲ್ಲಿ ಮೊದಲ ಪ್ರಯೋಗ ಮಾಡಲು ಬ್ಲಿಂಕಿಟ್​ ಸಿದ್ಧತೆ ನಡೆಸಿದೆ. ಅದುವೇ ಆಂಬುಲೆನ್ಸ್ ಸೇವೆ. ಜಸ್ಟ್ 10 ನಿಮಿಷದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಆಂಬುಲೆನ್ಸ್ ಸೇವೆ ನೀಡಲು ಬ್ಲಿಂಕಿಟ್​ ಸಜ್ಜಾಗಿದೆ.

ಮೊದಲ ಹಂತದಲ್ಲಿ ರಸ್ತೆಗಿಳಿದ ಐದು ಆಂಬುಲೆನ್ಸ್​

ಬ್ಲಿಂಕಿಟ್​ನ ಸಿಇಒನ ಅಲ್ಬಿಂದರ್​ ಧಿನ್ಸಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ನಗರದಲ್ಲಿ ಐದು ಆಂಬುಲೆನ್ಸ್​ಗುರುವಾರದಿಂದ ಸೇವೆ ಪ್ರಾರಂಭ ಮಾಡಲಿವೆ ಎಂದು ತಿಳಿಸಿದ್ದಾರೆ. ಆಂಬುಲೆನ್ಸ್ ಕೊರೆತೆಗಳನ್ನು ಹಾಗೂ ಆಗುತ್ತಿರುವ ಸಮಸ್ಯೆಗಳನ್ನು ನೀಗಿಸಲು ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಆದಷ್ಟು ಬೇಗ ಸಾರ್ವಜನಿಕರಿಗೆ ಈ ತುರ್ತು ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ನಾವು ಕೆಲಸ ಶುರು ಮಾಡಿದ್ದೇವೆ. ಇದರ ಮೊದಲ ಹಂತವಾಗಿ ಗುರುವಾರದಿಂದ ಐದು ಆಂಬುಲೆನ್ಸ್​ಗಳು ಸೇವೆ ನೀಡಲು ರಸ್ತೆಗಿಳಿದೆ ಎಂದು ಹೇಳಿದ್ದಾರೆ.

ಲಾಭದ ಉದ್ದೇಶದಿಂದ ಈ ಸೇವೆ ಆರಂಭಿಸಿಲ್ಲ

ಬ್ಲಿಂಕಿಟ್ ಆಂಬುಲೆನ್ಸ್ ಸೇವೆಯನ್ನು ಯಾವುದೇ ಲಾಭದ ಉದ್ದೇಶದಿಂದ ಕೈಗೆತ್ತಿಕೊಂಡಿಲ್ಲ. ಇದನ್ನು ನಗರದ ಮತ್ತಷ್ಟು ಭಾಗಗಳಲ್ಲಿ ಹಾಗೂ ಉಳಿದ ನಗರಗಳಲ್ಲಿಯೂ ವಿಸ್ತರಿಸುವ ಉದ್ದೇಶ ನಮ್ಮದಿದೆ ಎಂದು ತಿಳಿಸಿದ್ದಾರೆ. ನಮ್ಮ ಆಂಬುಲೆನ್ಸ್​ಗಳು ಪ್ರಮುಖವಾಗಿ ಅಗತ್ಯವಿರುವ ಜೀವ ಉಳಿಸುವ ಉಪಕರಣಗಳನ್ನು ಹೊಂದಿವೆ. ಆಕ್ಸಿಜನ್ ಸಿಲಿಂಡರ್, ಎಇಡಿ, ಸ್ಟ್ರೇಚರ್, ಮಾನಿಟರ್, ಸಕ್ಷನ್ ಮಷಿನ್ ಮತ್ತು ಅಗತ್ಯವಿರುವ ತುರ್ತು ಔಷಧಿ ಹಾಗೂ ಇಂಜಕ್ಷನ್​ ಹೊಂದಿರುತ್ತವೆ. ಪ್ರತಿಯೊಂದು ಆಂಬುಲೆನ್ಸ್ ಅನುಭವಿ ಹಾಗೂ ಪರಿಣಿತ ಚಾಲಕರನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

Blinkit: 10 ನಿಮಿಷಗಳ ಆಂಬುಲೆನ್ಸ್ ಸೇವೆ ಪ್ರಾರಂಭ; ಶುಲ್ಕ ಎಷ್ಟು?

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈ ಸೇವೆಯನ್ನು ನೀಡಲಾಗುವುದು. ದೀರ್ಘಕಾಲದವರೆಗೆ ಇರುವಂತಹ ಸಮಸ್ಯೆಯನ್ನು ದೂರ ಮಾಡಲು ಈ ಸೇವೆಯನ್ನು ತಂದಿದ್ದೇವೆ. ಇದು ತುಂಬಾ ಪ್ರಮುಖವಾದ ಸೇವೆ. ಹಾಗೆಯೇ ನಮಗೆ ಹೊಸದಾಗಿರುವ ಸೇವೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ದೊಡ್ಡ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವ ಉದ್ದೇಶವಿದೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಬ್ಲಿಂಕಿಟ್ ಆಂಬುಲೆನ್ಸ್ ಸೇವೆಗೆ ಶುಲ್ಕ ಎಷ್ಟು?

ವರದಿಯ ಪ್ರಕಾರ, ಬ್ಲಿಂಕಿಟ್ ಆಂಬುಲೆನ್ಸ್ ಸೇವೆಗೆ 2,000 ರೂ. ಶುಲ್ಕ ವಿಧಿಸಲಾಗುತ್ತದೆ. ಆಂಬುಲೆನ್ಸ್ ಅನ್ನು ಬುಕ್ ಮಾಡಲು, ಸಾರ್ವಜನಿಕರು ಬ್ಲಿಂಕಿಟ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಬೇಕು. ಮತ್ತು ಅದರಿಂದ ಬುಕ್‌ ಮಾಡಬೇಕು.

Best Mobiles in India

English summary
Blinkit launched 10 minute ambulance service: know price and what facilities will be available.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+