ಟೀನಾದಲ್ಲಿ ಕಾಣಿಸಿಕೊಂಡಿದೆ ನೀಲಿ ಬಣ್ಣದ ಶಿಯೋಮಿ ರೆಡ್ಮಿ ನೋಟ್ 5 ಪ್ರೊ!
ರೆಡ್ಮಿ ನೋಟ್5 ಪ್ರೊ ಶೀಘ್ರದಲ್ಲಿ ಕಂಪನಿಯ ತವರಿನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.!!
ಕ್ಸಿಯೊಮಿ ರೆಡ್ಮಿ ನೋಟ್ 5 ಪ್ರೊ ಸ್ಮಾರ್ಟ್‍ಫೋನ್ ಅನ್ನು ಭಾರತದ ಮೊದಲ ಸ್ಮಾರ್ಟ್‍ಫೋನ್ ಎಂದು ಘೋಷಿಸಿದ್ದು ಫೆಬ್ರವರಿ 14 ರಂದು ರೆಡ್ಮಿ ನೋಟ್ 5 ಸ್ಮಾರ್ಟ್‍ಫೋನಿನ ಬಿಡುಗಡೆಯ ಸಂದರ್ಭದಲ್ಲಿ. ರೆಡ್ಮಿ ನೋಟ್ 5 ಚೀನಾದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮೊನಿಕರ್ ರೆಡ್ಮಿ 5 ಪ್ಲಸ್ ನೊಂದಿಗೆ ಲಭ್ಯವಿದೆ. ರೆಡ್ಮಿ ನೋಟ್ 5 ಪ್ರೊ ಶೀಘ್ರದಲ್ಲಿ ಕಂಪನಿಯ ತವರಿನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಇದೇ ಸಂದರ್ಭದಲ್ಲಿ ಕ್ಸಿಯೊಮಿ ರೆಡ್ಮಿ ನೋಟ್ 5 ಪ್ರೊ ಚೀನಾದಲ್ಲಿ ಟೆನಾ ಪ್ರಮಾಣ ಪತ್ರವನ್ನು ಪಡೆಯುವ ಸಂದರ್ಭದಲ್ಲಿ ಕಣ್ಣಿಗೆ ಬಿದ್ದಿತು. ಮೂರು ವಿಧಗಳಲ್ಲಿ ಬರುವ ಈ ಸ್ಮಾರ್ಟ್‍ಫೋನ್ ಎಮ್‍ಇಸಿ7ಎಸ್, ಎಮ್‍ಇಟಿ7ಎಸ್ ಮತ್ತು ಎಮ್‍ಇಇ7ಎಸ್ ಎನ್ನುವ ಮೊಡೆಲ್ ಸಂಖ್ಯೆ ಹೊಂದಿದೆ. ಇದಿಷ್ಟೇ ಅಲ್ಲಾ ರೆಡ್ಮಿ ನೋಟ್ 5 ರ ಚಿತ್ರವನ್ನು ಕೂಡ ಟೆನಾ ಪ್ರಮಾಣಪತ್ರದ ಡಾಟಾಬೇಸ್ ಪ್ರಕಟಿಸಿದೆ.

ಕ್ಸಿಯೊಮಿ ರೆಡ್ಮಿ ನೋಟ್ 5 ಪ್ರೊ ಮೊದಲ ಗುರುತುಗಳು
ಮೊದಲಿನ ಧಾಟಿಯನ್ನು ನೋಡಿದರೆ, ರೆಡ್ಮಿ ನೋಟ್ 5 ಪ್ರೊ ಚೀನಾ ಮಾರುಕಟ್ಟೆಯಲ್ಲಿ ರೆಡ್ಮಿ ನೋಟ್ 5 ಆಗಿ ಬಿಡುಗಡೆಯಾಗುವ ಮಾತು ಕೇಳಿ ಬರುತ್ತಿತ್ತು. ಆದರೆ ಅದು ಸುಳ್ಳೆಂದಾಯಿತು. ಕಳೆದ ವರ್ಷದ ರೆಡ್ಮಿ 5 ಮತ್ತು 5 ಪ್ಲಸ್ ರ ಘೋಷಣೆಯ ನಂತರ ರೆಡ್ಮಿ 5 ಪ್ಲಸ್ ಗೆ ರೆಡ್ಮಿ ನೋಟ್ 5 ಎಂದು ಕರೆಯುವುದೆಂದಾಗಿ ಅಂದಾಜಿಸಲಾಗಿದೆ.
ನಮ್ಮ ಪ್ರಕಾರ ರೆಡ್ಮಿ ನೋಟ್ 5 ಪ್ರೊ ಭಾರತದ ಮೊದಲ ಸ್ಮಾರ್ಟ್‍ಫೋನ್ ಏಕೆಂದರೆ ಮೊದಲ ಬಾರಿಗೆ ಕ್ಸಿಯೊಮಿ ಪ್ರೊ ಮೊಡೆಲ್ ಅನ್ನು ಸ್ವದೇಶ ಮಾರುಕಟ್ಟೆಯ ಬದಲು ವಿದೇಶದಲ್ಲಿ ಘೋಷಿಸಿದೆ. ಇದು ಕ್ಸಿಯೊಮಿ ಮಾರುಕಟ್ಟೆಯ ನಾಯಕನೆಂದು ತೋರಿಸುವುದಷ್ಟೇ ಅಲ್ಲಾ ಭಾರತದ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಕ್ಸಿಯೊಮಿ ರೆಡ್ಮಿ ನೋಟ್ 5 ಪ್ರೊ ಫೀಚರ್ಸ್ ನೋಡೊಣ. ಡಿಸ್ಪ್ಲೆ 5.99 ಇಂಚಿನ ಎಫ್‍ಎಚ್‍ಡಿ+ ಆಸ್ಪೆಕ್ಟ್ ರೇಶಿಯೊ 18:9 ನೊಂದಿಗೆ , ರೆಡ್ಮಿ ನೋಟ್ 5 ರ ಹಾಗೆ. ಒಳಗಡೆ ಶಕ್ತಿಯುತವಾದ ಸ್ನಾಪ್‍ಡ್ರಾಗನ್ 636 ಎಸ್‍ಒಸಿ ಹೊಂದಿದೆ. ಅಷ್ಟೇ ಅಲ್ಲಾ 4 ಜಿಬಿ ರಾಮ್ ಅಥವಾ 6 ಜಿಬಿ ರಾಮ್ ಮತ್ತು 64ಜಿಬಿ ಸ್ಟೋರೆಜ್ ಸ್ಪೇಸ್ ಹೊಂದಿದೆ.
ಈ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿನ ಮಧ್ಯಮ ದರ್ಜೆಯನ್ನು ನೋಡಿದರೆ ಒಳ್ಳೆಯ ಕ್ಯಾಮೆರಾ ಕ್ಷಮತೆ ಹೊಂದಿದೆ. ಇದರಲ್ಲಿ ಡುಯಲ್ ಕ್ಯಾಮೆರಾ ವಿದೆ. ರೇರ್ 12 ಎಮ್‍ಪಿ ಮತ್ತು 5 ಎಮ್‍ಪಿ ಸೆನ್ಸರ್‍ಗಳನ್ನು ಹೊಂದಿದ್ದು, ಮುಂದೆ 20 ಎಮ್‍ಪಿ ಸೆಲ್ಫಿ ಕ್ಯಾಮೆರಾ ಆರ್ಟಿಫಿಷಲ್ ಇಂಟೆಲಿಜೆನ್ಸಿ ಮತ್ತು ಬ್ಯೂಟಿಫೈ ಸಾಫ್ಟ್‍ವೇರ್ ಒಪ್ಟಿಮೈಜೇಷನ್ ನೊಂದಿಗೆ ಬರುತ್ತದೆ. ತನ್ನ ಮೊದಲ ಮಾರಾಟವಾದ ಸ್ವಲ್ಪ ಸಮಯದಲ್ಲಿಯೇ ರೆಡ್ಮಿ ನೋಟ್ 5 ಪ್ರೊ ಎಮ್‍ಐಯುಐ 9.2 ನೈಟ್ಲಿ ಅಪಡೇಟ್ ಪಡೆಯಿತು ಇದರಿಂದ ಫೇಸ್ ಅನ್ಲೊಕ್ ಫೀಚರ್ ಕೂಡ ಒಳಗೊಂಡಿತು.
ಮೂಲ: ಗಿಜ್ಮೊಚೈನಾ


Click it and Unblock the Notifications








