ನೀವು ಬಿಎಸ್ಎನ್ಎಲ್ ಬಳಸುತ್ತಿದ್ದರೆ ಇನ್ಮುಂದೆ ಅಮೆಜಾನ್ ಪ್ರೈಮ್ ಉಚಿತ

|

ಭಾರತ್ ಸಂಚಾರ್ ನಿಗಮ್ ಗ್ರಾಹಕರಿಗೆ ಉಚಿತವಾಗಿ 999 ರುಪಾಯಿ ಬೆಲೆಬಾಳುವ ವಾರ್ಷಿಕ ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯುವ ಸದವಕಾಶವನ್ನು ಬಿಎಸ್ಎನ್ಎಲ್ ಒದಗಿಸಿಕೊಡುತ್ತಿದೆ. ಹೌದು ಬಿಎಸ್ಎಲ್ ನ ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು.

ನೀವು ಬಿಎಸ್ಎನ್ಎಲ್ ಬಳಸುತ್ತಿದ್ದರೆ ಇನ್ಮುಂದೆ ಅಮೆಜಾನ್ ಪ್ರೈಮ್ ಉಚಿತ

ದೇಶಾದ್ಯಂತ ಇರುವ ಬಿಎಸ್ಎನ್ಎಲ್ ಗ್ರಾಹಕರು ಪೋಸ್ಟ್ ಪೇಡ್ ನವರಾದರೆ 399 ರುಪಾಯಿ ರೀಚಾರ್ಜ್ ಮತ್ತು 745 ರುಪಾಯಿ ಬ್ರಾಡ್ ಬ್ಯಾಂಡ್ ಲ್ಯಾಂಡ್ ಲೈನ್ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ ಒಂದು ವರ್ಷ ಅವಧಿಯ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ.

ಟೆಲಿಕಾಂ ಆಪರೇಟರ್ ಗಳ ನಡುವಿನ ಸ್ಪರ್ಧೆಗೆ ಸಾಕ್ಷಿ:

ಟೆಲಿಕಾಂ ಆಪರೇಟರ್ ಗಳ ನಡುವಿನ ಸ್ಪರ್ಧೆಗೆ ಸಾಕ್ಷಿ:

ಈಗಾಗಲೇ ವಡಾಫೋನ್ ಮತ್ತು ಭಾರತೀ ಏರ್ ಟೆಲ್ ಈ ಉಚಿತ ಅಮೇಜಾನ್ ಪ್ರೈಮ್ ಸದಸ್ಯತ್ವದ ಆಫರ್ ನ್ನು ದೇಶಾದ್ಯಂತ ತನ್ನ ಗ್ರಾಹಕರಿಗೆ ನೀಡಿದೆ. ಇದೀಗ ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಟೆಲಿಕಾಂ ಆಪರೇಟರ್ ಗಳ ನಡುವಿನ ಸ್ಪರ್ಧೆಯ ವಿಚಾರವು ಮತ್ತೊಮ್ಮೆ ಈ ಮೂಲಕ ಸಾಬೀತಾಗುತ್ತಿದೆ.

ಅಮೇಜಾನ್ ಪ್ರೈಮ್ ವೀಡಿಯೋಗೆ ಹೆಚ್ಚಿನ ಅವಕಾಶ:

ಅಮೇಜಾನ್ ಪ್ರೈಮ್ ವೀಡಿಯೋಗೆ ಹೆಚ್ಚಿನ ಅವಕಾಶ:

ಅಮೇಜಾನ್ ಪ್ರೈಮ್ ವೀಡಿಯೋದ ಡೈರೆಕ್ಟರ್ ಮತ್ತು ಮುಖ್ಯಸ್ಥರಾಗಿರುವ ಗೌರವ್ ಗಾಂಧಿಯವರು ಹೇಳುವಂತೆ ಗ್ರಾಹಕರಿಂದ ಅಮೇಜಾನ್ ಪ್ರೈಮ್ ವೀಡಿಯೋಗೆ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿದೆ.ಇದೀಗ ಬಿಎಸ್ಎನ್ಎಲ್ ಜೊತೆಗೆ ಕೈಜೋಡಿಸಿರುವುದರ ಕಾರಣದಿಂದಾಗಿ ಇನ್ನಷ್ಟು ಬಳಕೆದಾರರನ್ನು ತಲುಪಲು ಸಾಧ್ಯವಾಗಲಿದ್ದು ಬಳಕೆದಾರರು ತಮ್ಮ ನೆಚ್ಚಿನ ವೀಡಿಯೋಗಳನ್ನು ಮೊಬೈಲ್ ನಲ್ಲೇ ಅಥವಾ ಟಿವಿ ಮುಖೇನ ನೋಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆಬ್ ಸೈಟ್ ಮೂಲಕ ಆಕ್ಟಿವೇಷನ್ ಗೆ ಅವಕಾಶ:

ವೆಬ್ ಸೈಟ್ ಮೂಲಕ ಆಕ್ಟಿವೇಷನ್ ಗೆ ಅವಕಾಶ:

ಬಿಎಸ್ಎನ್ ಎಲ್ ವೆಬ್ ಸೈಟ್ ಮೂಲಕ ವಾರ್ಷಿಕ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಆಕ್ಟಿವೇಟ್ ಮಾಡಬಹುದು. ಪ್ರೈಮ್ ವೀಡಿಯೋ ಆಪ್ ನ್ನು ಬೆಂಬಲಿಸುವ ಡಿವೈಸ್ ಗಳಲ್ಲಿ ಡೌನ್ ಲೋಡ್ ಮಾಡಿದ ನಂತರ ಪ್ರೈಮ್ ವೀಡಿಯೋಗಳಿಗೆ ಆಕ್ಸಿಸ್ ಲಭ್ಯವಾಗಲಿದೆ.

ಬಿಎಸ್ಎನ್ಎಲ್ ಗ್ರಾಹಕರಿಗೆ ಹಬ್ಬದ ಉಡುಗೊರೆ:

ಬಿಎಸ್ಎನ್ಎಲ್ ಗ್ರಾಹಕರಿಗೆ ಹಬ್ಬದ ಉಡುಗೊರೆ:

ಒಟ್ಟಾರೆ ಇಷ್ಟು ದಿನ ಅಮೇಜಾನ್ ಪ್ರೈಮ್ ಸದಸ್ಯತ್ವ ವಡಾಫೋನ್ ಮತ್ತು ಏರ್ ಟೆಲ್ ಗ್ರಾಹಕರು ಮಾತ್ರ ಉಚಿತವಾಗಿ ಪಡೆಯಬಹುದಿತ್ತು. ಆದರೆ ಇನ್ನು ಮುಂದೆ ಬಿಎಸ್ಎನ್ಎಲ್ ಗ್ರಾಹಕರಿಗೂ ಕೂಡ ಈ ಸೌಲಭ್ಯ ದೊರೆಯುತ್ತಿದೆ. ಹಾಗಾಗಿ ಹೆಚ್ಚಿನ ಅಮೇಜಾನ್ ಶಾಪಿಂಗ್ ಗೆ ಇದು ನೆರವು ನೀಡಲಿದೆ. ಹಬ್ಬದ ಸೀಸನ್ ಗೆ ಬಂದಿರುವ ಈ ಆಫರ್ ನಿಜಕ್ಕೂ ಅಮೇಜಾನ್ ಮತ್ತು ಬಿಎಸ್ಎನ್ಎಲ್ ಎರಡನ್ನೂ ಇಷ್ಟ ಪಡುವ ಗ್ರಾಹಕರಿಗೆ ಬಂಪರ್ ಆಫರ್ ಎಂದೇ ಹೇಳಬಹುದು.

ಡಿಜಿಟಲ್‌ ಎಕೋಸಿಸ್ಟಮ್‌ಗೆ ಬದಲಾವಣೆ

ಡಿಜಿಟಲ್‌ ಎಕೋಸಿಸ್ಟಮ್‌ಗೆ ಬದಲಾವಣೆ

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಡಿಜಿಟಲ್ ಎಕೋಸಿಸ್ಟಮ್ ಗೆ ಬದಲಾವಣೆ ಹೊಂದುತ್ತಿದ್ದಾರೆ. ಶಾಪಿಂಗ್ ಮತ್ತು ಸ್ಟ್ರೀಮಿಂಗ್ ವಿಚಾರದಲ್ಲಿ ಗ್ರಾಹಕರು ಹೆಚ್ಚೆಚ್ಚು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಅಮೇಜಾನ್ ಜೊತೆಗಿನ ಈ ಕೈಜೋಡಿಸುವಿಕೆಯು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಸೇವೆಯನ್ನು ಮತ್ತು ಉತ್ತಮ ಸೇವೆಯನ್ನು ನಿರೀಕ್ಷೆ ಮಾಡಬಹುದು ಎಂದು ಬಿಎಸ್ಎನ್ಎಲ್ ನ ಚೇರ್ ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅನುಪಮ್ ಶ್ರೀವಾತ್ಸವ್ ತಿಳಿಸಿದ್ದಾರೆ.

Best Mobiles in India

English summary
BSNL inks deal with Amazon; to offer free Prime membership to postpaid, broadband customers. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X