Home
Apps

Budget App: ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣು; ಈ ಆಪ್‌ನಲ್ಲಿ ಸಿಗುತ್ತೆ ಎಲ್ಲಾ ಮಾಹಿತಿ; ಈ ರೀತಿ ಡೌನ್‌ಲೋಡ್ ಮಾಡಿ

Budget App: ಕೇಂದ್ರ ಬಜೆಟ್‌ಗೆ ಕ್ಷಣಗಣನೆ. ಮೋದಿ ಬಜೆಟ್‌ ಮೇಲೆ ದೇಶದ ಜನರ ಕಣ್ಣು. ಹೌದು, ಈ ಬಾರಿಯ ಬಜೆಟ್‌ಗಾಗಿ ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಸತತ 8ನೇ ಬಾರಿ ಬಜೆಟ್ 2025 (Budget 2025) ಮಂಡಿಸಲಿದ್ದಾರೆ. ಆರ್ಥಿಕ ಬೆಳವಣಿಗೆ, ಡಾಲರ್ ಎದುರು ರೂಪಾಯಿ ಕುಸಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ, ಕೇಂದ್ರ ಬಜೆಟ್‌ ಮಂಡಿಸಲಾಗುತ್ತಿದೆ. ಈ ಆಯವ್ಯಯ ಮೇಲೆ ದೇಶದ ಕಣ್ಣು ನೆಟ್ಟಿದೆ.

ಕೇಂದ್ರ ಬಜೆಟ್ ಸಂದರ್ಭದಲ್ಲಿ ಏಕಕಾಲಕ್ಕೆ ಹಲವು ವಿಷಯಗಳ ಬಗ್ಗೆ ಹೊಸ ಘೋಷಣೆಗಳು ಹೊರಬೀಳುತ್ತವೆ. ಕೆಲವೊಮ್ಮೆ ಎಲ್ಲಾ ಮಾಹಿತಿಯನ್ನು ಒಟ್ಟಿಗೆ ತಿಳಿದುಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ಹೀಗಾಗಿ, ಜನರ ಕಷ್ಟ ಕಡಿಮೆ ಮಾಡಲು ಸರ್ಕಾರ ಬಜೆಟ್ ಆಪ್ (Budget App) ಬಿಡುಗಡೆ ಮಾಡಿದೆ. ಬಜೆಟ್ ಸಂದರ್ಭದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಈ ಮೊಬೈಲ್ ಆಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನೀವು ಸುಲಭವಾಗಿ ಓದಬಹುದು. ಈ ಡೌನ್‌ಲೋಡ್ ಮಾಡುವುದು ಹೇಗೆ? ಅಂತ ತಿಳಿಯಲು ಮುಂದೆ ಓದಿ.

Budget App: ಈ ಆಪ್‌ನಲ್ಲಿ ಬಜೆಟ್‌ನ ಸಂಪೂರ್ಣ ಮಾಹಿತಿ ಸಿಗುತ್ತೆ; ಯಾವುದು?

'ಯೂನಿಯನ್ ಬಜೆಟ್ ಆಪ್' ಬಗ್ಗೆ ಮಾಹಿತಿ

ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 (Budget 2025) ಬಜೆಟ್ ಮಂಡಿಸಲಿದ್ದಾರೆ. ನೀವು ಬಜೆಟ್ ಭಾಷಣದಿಂದ ಮುಖ್ಯಾಂಶಗಳವರೆಗೆ, ಈ ಸರ್ಕಾರಿ ಅಪ್ಲಿಕೇಶನ್‌ನಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಈ 'ಯೂನಿಯನ್ ಬಜೆಟ್ ಆಪ್‌' ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಅನ್ನು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (NIC - ರಾಷ್ಟ್ರೀಯ ಮಾಹಿತಿ ಕೇಂದ್ರ) ಅಭಿವೃದ್ಧಿಪಡಿಸಿದೆ. ಕಳೆದ ವರ್ಷ ಈ ಆಪ್ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿತ್ತು.

ಕೇಂದ್ರ ಬಜೆಟ್ ಅಪ್ಲಿಕೇಶನ್ ಹೇಗೆ ಉಪಯುಕ್ತ?

ಯೂನಿಯನ್ ಬಜೆಟ್ ಅಪ್ಲಿಕೇಶನ್ ಲಿಖಿತ ರೂಪದಲ್ಲಿ ಬಜೆಟ್ ಸಂಬಂಧಿತ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪ್ರಸ್ತುತಪಡಿಸುತ್ತದೆ. ಜುಲೈ 23 ರಂದು ಮಂಡಿಸಲಿರುವ ಬಜೆಟ್‌ಗೂ ಮುನ್ನ ನಿಮ್ಮ ಫೋನ್‌ನಲ್ಲಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡರೆ, ಫೆಬ್ರವರಿ 1 ರಂದು ಮಂಡಿಸಲಾದ ಮಧ್ಯಂತರ ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ತಿಳಿಯಬಹುದು (ಓದಬಹುದು). ಬಜೆಟ್ ಸಂಬಂಧಿತ ಮಾಹಿತಿಯು ಅಪ್ಲಿಕೇಶನ್‌ನಲ್ಲಿ PDF ಸ್ವರೂಪದಲ್ಲಿ ಲಭ್ಯವಿದೆ.

ಎಷ್ಟು ಭಾಷೆಗಳಲ್ಲಿ ಆಪ್ ಬಳಸಬಹುದು?

ಯೂನಿಯನ್ ಬಜೆಟ್ ಆಪ್ ಅನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಳಸುವ ಸೌಲಭ್ಯವಿದೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನೀವು ಭಾಷೆಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಎಲ್ಲಾ ದಾಖಲೆಗಳನ್ನು ಓದಬಹುದು. ಈ ಅಪ್ಲಿಕೇಶನ್ ಅನ್ನು ನ್ಯಾಷನಲ್ ಇನ್‌ಫರ್‌ಮ್ಯಾಟಿಕ್ಸ್ ಸೆಂಟರ್ ಅಭಿವೃದ್ಧಿಪಡಿಸಿದೆ.

Budget App: ಈ ಆಪ್‌ನಲ್ಲಿ ಬಜೆಟ್‌ನ ಸಂಪೂರ್ಣ ಮಾಹಿತಿ ಸಿಗುತ್ತೆ; ಯಾವುದು?

ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಬಹುದು

ಈ ಆಪ್‌ನಲ್ಲಿ ನಿಮಗೆ ದಾಖಲೆಗಳನ್ನು ಡೌನ್‌ಲೋಡ್ ಮಾಡುವ ಅವಕಾಶವನ್ನು (ಸೌಲಭ್ಯ) ಸಹ ಕಲ್ಪಿಸಲಾಗಿದೆ. ಬಜೆಟ್‌ಗೆ ಸಂಬಂಧಿಸಿದ ಯಾವುದೇ ಡಾಕ್ಯುಮೆಂಟ್ ಅನ್ನು ನೀವು ಓದಿದಾಗ, ಅದನ್ನು ಡೌನ್‌ಲೋಡ್ ಮಾಡುವ ಆಯ್ಕೆಯು ಅದರ ಮೇಲೆಯೇ ಗೋಚರಿಸುತ್ತದೆ. ಕೆಳಗೆ ಬಾಣದ ಐಕಾನ್ ಕ್ಲಿಕ್ ಮಾಡುವ ಮೂಲಕ, ಬಜೆಟ್ ಡಾಕ್ಯುಮೆಂಟ್ ಅನ್ನು PDF ರೂಪದಲ್ಲಿ ಫೋನ್‌ಗೆ ಡೌನ್‌ಲೋಡ್ ಮಾಡಲಾಗುತ್ತದೆ.

ಈ ರೀತಿ ಆಪ್‌ ಡೌನ್‌ಲೋಡ್ ಮಾಡಬಹುದು

ನೀವು ಆಂಡ್ರಾಯ್ಡ್‌ (android) ಮತ್ತು ಐಫೋನ್ (iPhone) ಬಳಕೆದಾರರಾಗಿದ್ದರೆ ಗೂಗಲ್‌ ಪ್ಲೇ ಸ್ಟೋರ್‌ (Google Play Store) ಮತ್ತು ಆಪ್‌ ಸ್ಟೋರ್ (App Store) ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಈ ಮೊಬೈಲ್ ಆಪ್‌ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿರುತ್ತದೆ. ನೀವು http://indiabudget.gov.in ಗೆ ಭೇಟಿ ನೀಡುವ ಮೂಲಕ ಇದನ್ನು ಬಜೆಟ್ ಆಪ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಆಪ್‌ನಲ್ಲಿ ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ಪಡೆಯಬಹುದು. ಇದನ್ನು ನೀವೇ ಓದಬಹುದು ಮತ್ತು ಇತರರಿಗೆ ಸುಲಭವಾಗಿ ವಿವರಿಸಬಹುದು.

Best Mobiles in India

English summary
Budget App: full information is provides in this Budget App: know how to download
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+