ಚಿನ್ನದ ವ್ಯಾಪಾರಿಗಳಿಗೆ ಶಾಕ್!..ಆನ್‌ಲೈನ್‌ನಲ್ಲಿ ಚಿನ್ನ ಮಾರಾಟ ಶುರುಮಾಡಿದ ಪೇಟಿಎಂ!!

Written By:

ಭಾರತದ ನಂಬರ್‌ ಒನ್ ಆನ್‌ಲೈನ್ ಪೇಮೆಂಟ್ ಜಾಲತಾಣ ಪೇಟಿಎಂ ಇದೀಗ ಆನ್‌ಲೈನ್‌ನಲ್ಲಿ ಚಿನ್ನ ಮಾರಲು ತಯಾರಾಗಿದೆ. ಡಿಜಿಟಲ್ ಗೋಲ್ಡ್ ಎಂಬ ಹೊಸ ಆಯ್ಕೆಯನ್ನು ಪೇಟಿಎಂ ಬಿಡುಗಡೆ ಮಾಡಿದ್ದು, ಚಿನ್ನದ ವ್ಯಾಪಾರದಲ್ಲಿ ಬಹುದೊಡ್ಡ ಬದಲಾವಣೆಯಾಗುವ ನಿರೀಕ್ಷೆ ಇದೆ.!!

ಭಾರತದಲ್ಲಿ ಚಿನ್ನಕ್ಕೆ ಬಹಳಷ್ಟು ಬೇಡಿಕೆ ಇದ್ದು, ಅಂತರಾಷ್ಟ್ರೀಯ ದರದಲ್ಲಿ ಚಿನ್ನ ಮಾರಾಟ ಮಾಡುವುದಾಗಿ ಪೇಟಿಎಂ ಹೇಳಿಕೊಂಡಿದೆ. ಡಿಜಿಟಲ್ ಗೋಲ್ಡ್ ಮೂಲಕ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿನ್ನವನ್ನು ಮಾರುಕಟ್ಟೆಯ ದರದಲ್ಲಿಯೇ ನೀಡುವುದು ಪೇಟಿಎಂ ಉದ್ದೇಶ ಎಂದು ಪೇಟಿಎಂ ಹೇಳಿದೆ!!

ಚಿನ್ನದ ವ್ಯಾಪಾರಿಗಳಿಗೆ ಶಾಕ್!..ಆನ್‌ಲೈನ್‌ ಚಿನ್ನ ಮಾರಾಟ ಶುರುಮಾಡಿದ ಪೇಟಿಎಂ!

ಹಾಗಾದರೆ, ಪೇಟಿಎಂ ಮೂಲಕ ಚಿನ್ನ ಖರೀದಿಸಬೇಕೆ? ಪೇಟಿಎಂ ಮೂಲಕ ಚಿನ್ನ ಖರೀದಿಸಿದರೆ ಆಗುವ ಲಾಭಗಳು ಯಾವುವು? ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸಲು ಪೇಟಿಎಂ ನೀಡಿದ ಕಾರಣಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
24K 999.9ಗುಣಮಟ್ಟದ ಚಿನ್ನ ಮಾರಾಟ!!

24K 999.9ಗುಣಮಟ್ಟದ ಚಿನ್ನ ಮಾರಾಟ!!

ಆನ್‌ಲೈನ್ ಮೂಲಕ 24K ಕ್ಯಾರಟ್ ಗುಣಮಟ್ಟದ ಚಿನ್ನವನ್ನು ಪೇಟಿಎಂ ಮಾರಾಟ ಮಾಡುತ್ತಿದ್ದು, ಬೇರೆ ಬೇರೆ ಅಂಗಡಿಗಳಿಂದ ಚಿನ್ನದಲ್ಲಿ ಮೋಸಹೋಗುವ ಸಾಧ್ಯತೆ ಇರುವುದರಿಂದ ಪೇಟಿಎಂ ಈ ಬಗ್ಗೆ ಸ್ವ ದೃಢೀಕರಣ ನೀಡಿದೆ.!!

ಆನ್‌ಟೈಮ್ ಡೆಲಿವರಿ.!!

ಆನ್‌ಟೈಮ್ ಡೆಲಿವರಿ.!!

ಪೇಟಿಎಂ ಮೂಲಕ ಚಿನ್ನ ಖರೀದಿಸಿದರೆ ಸರಿಯಾದ ಸಮಯಕ್ಕೆ ಡೆಲಿವರಿ ನಿಡುವುದಾಗಿ ಪೇಟಿಎಂ ತಿಳಿಸಿದೆ. 100% ಸೆಕ್ಯೂರ್ ಆಗಿ ಚಿನ್ನ ನಿಮ್ಮ ಬಳಿಗೆ ಬಂದು ಸೇರಲಿದೆ ಎಂದು ಪೇಟಿಎಂ ಹೇಳಿದೆ.

ಅಂತರಾಷ್ಟ್ರೀಯ ದರ!!

ಅಂತರಾಷ್ಟ್ರೀಯ ದರ!!

ಮೊದಲೇ ಹೇಳಿದಂತೆ ಪೇಟಿಎಂ ಅಂತರಾಷ್ಟ್ರೀಯ ದರದಲ್ಲಿ ಚಿನ್ನಮಾರಾಟ ಮಾಡುತ್ತಿದೆ. ಅಂತರಾಷ್ಟ್ರೀಯ ದರ ಬದಲಾವಣೆಯಂಯೆ ಪ್ರತಿದಿನವೂ ಪೇಟಿಎಂನಲ್ಲಿ ಚಿನ್ನದ ದರ ಬದಲಾಗುತ್ತಿರುತ್ತದೆ.!!

ಸೆಕ್ಯೂರ್ ಸ್ಟೋರೇಜ್!!

ಸೆಕ್ಯೂರ್ ಸ್ಟೋರೇಜ್!!

ಗುಣಮಟ್ಟದ ಚಿನ್ನವನ್ನು ಪೇಟಿಎಂ ಅಂತ್ಯಂತ ಸುರಕ್ಷತೆಯಿಂದ ಸಂಗ್ರಹಿಸುವುದಾಗಿ ಹೇಳಿಕೊಂಡಿದೆ.! ಚಿನ್ನದ ಸಂಗ್ರಹದಲ್ಲಿ ಸ್ವಲ್ಪವೂ ಏರುಪೇರಾಗುವುದಿಲ್ಲ ಎಂದು ಹೇಳಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 Reasones to Buy Digital gold. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot