Home
Apps

ಈ ಜನಪ್ರಿಯ ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

100 ದಶಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಆಗಿರುವಂತಹ ಜನಪ್ರಿಯ ಕ್ಯಾಮ್‌ಸ್ಕ್ಯಾನರ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಕ್ಯಾಮ್‌ಸ್ಕಾನರ್ ತನ್ನ ಆಪ್ ಮೂಲಕ ಮಾಲ್‌ವೇರ್ ಅನ್ನು ಸಾಗಿಸುತ್ತಿದೆ ಎಂದು ಕ್ಯಾಸ್ಪರ್ಸ್ಕಿ ಲ್ಯಾಬ್‌ನ ಭದ್ರತಾ ಸಂಶೋಧಕರು ಎಚ್ಚರಿಕೆ ನೀಡಿದ ನಂತರ ಗೂಗಲ್ ಈ ಕ್ರಮ ತೆಗೆದುಕೊಂಡಿದೆ. ಹಾಗಾಗಿ, ನೀವು ಕೂಡ ಕ್ಯಾಮ್‌ಸ್ಕ್ಯಾನರ್ ಎಂಬ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ ಈಗಲೇ ಅನ್‌ಇನ್‌ಸ್ಟಾಲ್ ಮಾಡುವುದು ಒಳಿತು.

ಈ ಜನಪ್ರಿಯ ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

ಹೌದು, ಕ್ಯಾಮ್‌ಸ್ಕ್ಯಾನರ್ ಎಂಬುದು ಜನಪ್ರಿಯ ಫೋಟೋ-ಸ್ಕ್ಯಾನಿಂಗ್ ಅಪ್ಲಿಕೇಶನ್ ಆಗಿದ್ದು ಅದು ಬಳಕೆದಾರರಿಗೆ ಪಿಡಿಎಫ್ ರಚಿಸಲು ಅನುಮತಿಸುತ್ತದೆ ಮತ್ತು ಒಸಿಆರ್ ಸಾಮರ್ಥ್ಯಗಳನ್ನು ಹೊಂದಿದೆ. ಆದರೆ, ಸ್ಮಾರ್ಟ್‌ಪೋನ್‌ಗಳಲ್ಲಿ ಮಾಲ್‌ವೇರ್ ವಿತರಿಸುವ ಅಪ್ಲಿಕೇಶನ್ ಆಗಿ ಕ್ಯಾಮ್‌ಸ್ಕ್ಯಾನರ್ ಇತ್ತೀಚೆಗೆ ಕಂಡುಬಂದಿದೆ. ಆಪ್‌ನಲ್ಲಿ ನುಸುಳಿಕೊಂಡಿರುವ ಸಮಸ್ಯೆಯೊಂದು ಬಳಕೆದಾರರಿಗೆ ತಿಳಿಯದೆಯೇ ಅವರ ಡೇಟಾ ಕದಿಯುತ್ತಿದ್ದು, ರಹಸ್ಯವಾಗಿ ಹ್ಯಾಕರ್‌ಗಳಿಗೆ ಕಳುಹಿಸುತ್ತಿದೆ ಎಂದು ತಿಳಿದುಬಂದಿದೆ.

ಕ್ಯಾಸ್ಪರ್ಸ್ಕಿ ಲ್ಯಾಬ್‌ನಿಂದ 'ಟ್ರೋಜನ್-ಡ್ರಾಪ್ಪರ್.ಆಂಡ್ರಾಯ್ಡ್ ಓಎಸ್.ನೆಕ್ರೋ.ಎನ್' ಎಂದು ಗುರುತಿಸಲಾದ ಮಾಲ್‌ವೇರ್ ಅನ್ನು ಅಪ್ಲಿಕೇಶನ್ ಹೊಂದಿರುವುದು ಕಂಡುಬಂದಿದೆ. ಕೆಲವು ಚೀನೀ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಲಾದ ಕೆಲವು ಅಪ್ಲಿಕೇಶನ್‌ಗಳಲ್ಲಿ ಈ ನಿರ್ದಿಷ್ಟ ಮಾಲ್‌ವೇರ್ ಅನ್ನು ಗುರುತಿಸಲಾಗಿದೆ. ಕ್ಯಾಮ್‌ಸ್ಕಾನರ್ ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಮಾತ್ರ ಮಾಲ್‌ವೇರ್ ಕಂಡುಬಂದಿದ್ದು, ಐಒಎಸ್ ಆವೃತ್ತಿಯು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗುವುದಿಲ್ಲ ಎಂದು ಹೇಳಲಾಗಿದೆ.

ಈ ಜನಪ್ರಿಯ ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

ಗೂಗಲ್ ಪ್ಲೇ ಸ್ಟೋರ್ ಅನ್ನು ಸಾಮಾನ್ಯವಾಗಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸುರಕ್ಷಿತ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಇತ್ತೀಚಿನ ಘಟನೆಗಳು ಇದು ನೂರು ಪ್ರತಿಶತ ಸುರಕ್ಷಿತವಲ್ಲ ಎಂದು ಸಾಬೀತುಪಡಿಸಿದೆ.ಸಮಸ್ಯೆಯೆಂದರೆ, ಗೂಗಲ್‌ನಂತಹ ಪ್ರಬಲ ಕಂಪನಿಯು ಸಹ ಲಕ್ಷಾಂತರ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಸಂಶೋಧಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನು ಗೂಗಲ್ ಕಂಪೆನಿಯ ಅಸಮರ್ಥತೆ ಎಂದು ಟೆಕ್ ತಜ್ಞರು ಹೇಳಿದ್ದಾರೆ.

ಕ್ಯಾಮ್‌ಸ್ಕಾನರ್ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವುದರಿಂದ ಮಾಲ್‌ವೇರ್-ಚಾಲಿತ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್ ಬಳಕೆದಾರರಿಂದ ದೂರವಿರಿಸಲು ಗೂಗಲ್ ಕಂಪೆನಿಯ ಅಸಮರ್ಥತೆ ಕಾಣುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿಯು ಹಲವಾರು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಆದಾಗ್ಯೂ, ಭದ್ರತಾ ಸಂಶೋಧನಾ ಸಂಸ್ಥೆಗಳು ಗೂಗಲ್ ಅಸಮರ್ಥತೆ ಹೈಲೈಟ್ ಮಾಡುತ್ತಿವೆ. ಇತ್ತೀಚೆಗೆ ಏಜೆಂಟ್ ಸ್ಮಿತ್ ಮಾಲ್‌ವೇರ್ 25 ಮಿಲಿಯನ್ ಆಂಡ್ರಾಯ್ಡ್ ಸಾಧನಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅವು ತೋರಿಸಿವೆ.

Best Mobiles in India

English summary
CamScanner, an app downloaded by more than 100 million people, has been removed by Google.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+