ತೇಜ್‌ನಲ್ಲಿ ಕಾಸು ಬರ್ತಿಲ್ವಾ: ಭೀಮ್ ಆಪ್ ಬಳಸಿ ಭರ್ಜರಿ ಕ್ಯಾಷ್ ಬ್ಯಾಕ್ ಪಡೆಯಿರಿ..!
ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್ ಪೇಮೆಂಟ್ ಆಪ್ ಗಳ ಹಾವಳಿಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ದಿನಕ್ಕೊಂದು ಹೊಸ ಆಪ್ ಗಳು ಕಾರ್ಯಚರಣೆಯನ್ನು ಆರಂಭಿಸುತ್ತಿವೆ. ಇದೇ ಮಾದರಿಯಲ್ಲಿ ಸರಕಾರಿ ಸ್ವಾಮ್ಯದ ಭೀಮ್ ಆಪ್ ಸಹ ಬಳಕೆದಾರರನ್ನು ಆಕರ್ಷಿಸಲು ಹೊಸ ಮಾದರಿಯ ಸೇವೆಯೊಂದನ್ನು ಪರಿಚಯಿಸಲು ಮುಂದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದ ಗೂಗಲ್ ಒಡೆತನ ತೇಜ್ ಆಪ್. ಬಳಕೆದಾರರಿಗೆ ಆಕರ್ಷಕ ನಗದು ಬಹುಮಾನವನ್ನು ನೀಡಿತ್ತು. ಇದರಿಂದಾಗಿ ಬಳಕೆದಾರರೆ ಹೆಚ್ಚಿನ ಲಾಭಕ್ಕಾಗಿ ತೇಜ್ ಬಳಕೆಗೆ ಮುಂದಾಗಿದ್ದರರು. ಭೀಮ್ ಆಪ್ ಇದೇ ಕಾರ್ಯಚರಣೆಯನ್ನು ಕಾಪಿ ಮಾಡಲು ಮುಂದಾಗಿದೆ.

900 ಕೋಟಿ ಬಹುಮಾನ:
ಭೀಮ್ ಆಪ್ ತನ್ನ ಬಳಕೆದಾರನ್ನು ಹೆಚ್ಚಿನ ಪ್ರಮಾಣದ ವ್ಯವಹಾರವನ್ನು ನಡೆಸುವಂತೆ ಪ್ರರೇಪಿಸುವ ಸಲುವಾಗಿ ರೂ.900 ಕೋಟಿಯನ್ನು ಬಹುಮಾನಕ್ಕೆ ಮೀಸಲು ಇರಿಸಿದೆ ಎನ್ನಲಾಗಿದೆ. ವಿವಿಧ ಮಾದರಿಯ ಕ್ಯಾಷ್ ಬ್ಯಾಕ್ ಇದರಲ್ಲಿದೆ.

ಏ.14 ರಿಂದ:
ಇಂದಿನಿಂದ ಯಾರು ಭೀಮ್ ಆಪ್ ನಲ್ಲಿ ನಗದು ವರ್ಗಾವಣೆ ಮತ್ತ ಹೊಸದಾಗಿ ಈ ಆಪ್ ಅನ್ನು ಬಳಕೆ ಮಾಡಲು ಮುಂದಾಗುವರೊ ಅಂತಹವರಿಗೆ ಕ್ಯಾಷ್ ಬ್ಯಾಕ್ -ಇನ್ಸೆಂಟಿವ್‌ಗಳನ್ನು ನೀಡಲಿದೆ ಎನ್ನಲಾಗಿದೆ.

ವರ್ತಕರಿಗೂ ಲಾಭ:
ಬೇರೆ ಆಪ್ ಗಳು ಕೇವಲ ಬಳಕೆದಾರರಿಗೆ ಮಾತ್ರವೇ ಹೆಚ್ಚಿನ ಲಾಭವನ್ನು ಮಾಡಿಕೊಟ್ಟರೆ ಭೀಮ್ ಆಪ್ ಅನ್ನು ಬಳಸುವ ವರ್ತಕರಿಗೆ ಕ್ಯಾಷ್ ಬ್ಯಾಕ್ ಹಾಗೂ ಇನ್ಸೆಂಟಿವ್‌ಗಳು ಸಿಗಲಿವೆ ಎನ್ನಲಾಗಿದೆ.


ಖಾಸಗಿ ಆಪ್ ಗಳಿಗೆ ಸೆಡ್ಡು:
ಮಾರುಕಟ್ಟೆಯಲ್ಲಿರುವ ಫೋನ್‌ಪೇ, ಗೂಗಲ್ ತೇಜ್ ಮತ್ತು ಪೇಟಿಎಂ ಮಾದರಿಯಲ್ಲಿ ಈಗ ಸರಕಾರ ಕೂಡ ಕ್ಯಾಚ್ ಬ್ಯಾಕ್ ನೀಡಲು ಮುಂದಾಗಿದೆ. ಈ ಮೂಲಕ ಖಾಸಗಿ ಆಪ್ ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.


Click it and Unblock the Notifications








