Home
Apps

ಬಿಟ್ಟು ಬಿಡ್ತಿವಾ..! ಭಾರತೀಯರನ್ನು ಕೆಣಕಿದ 'ಚೀನಿ' ಆಪ್.. ಕ್ಷಣಾರ್ಧದಲ್ಲೇ Play Store​ನಿಂದ ಗೇಟ್‌ಪಾಸ್‌.. ಯಾಕೆ ಗೊತ್ತಾ?

ಚೀನಾದ (China) ಆಪ್‌ನಿಂದ ಭಾರೀ ಎಡವಟ್ಟು..! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಿದ ಚೀನಾ. ಹೌದು, ಚೀನಿ ಆಪ್‌ ಒಂದು ಭಾರತದ ನಕ್ಷೆಯನ್ನು ತಪ್ಪಾಗಿ ಬಿಂಬಿಸಿತ್ತು. ಇದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿತ್ತು. ಕೂಡಲೇ ಗೂಗಲ್‌ಗೆ (Google) ಕೇಂದ್ರ ಖಡಕ್ ಸೂಚನೆ ರವಾನಿಸಿತ್ತು. ಈ ಆದೇಶ ಹೋದ ಕ್ಷಣಾರ್ಧದಲ್ಲೇ ಗೂಗಲ್, ಆ ಚೀನಿ ಆಪ್‌ (Chinese app) ಅನ್ನು ಪ್ಲೇಸ್ಟೋರ್​ನಿಂದಲೇ ಕಿತ್ತೆಸೆದಿದೆ. ಅದು ಯಾವ ಆಪ್? ಏನಿದು ಪ್ರಕರಣ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಹೌದು, ಚೀನಾದ ಜನಪ್ರಿಯ ಆಪ್ ಭಾರತೀಯರ ಕಂಗೆಣ್ಣಿಗೆ ಗುರಿಯಾಗಿತ್ತು. ನಮ್ಮ ದೇಶದ ನಕ್ಷೆಯನ್ನೇ (India map) ತಪ್ಪಾಗಿ ಬಿಂಬಿಸಿತ್ತು. ಈ ಬಗ್ಗೆ ದೂರು ಬಂದ ಕೂಡಲೇ ಕೇಂದ್ರ ಸರ್ಕಾರವು (Government of India) ಆ ಚೀನಿ ಆಪ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ವಿಶೇಷವೆಂದರೆ, ಆ ಚೀನಿ ಆಪ್‌ ​ಅನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆದು ಹಾಕುವಂತೆ ಗೂಗಲ್​ಗೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಕಾರ್ಯಪ್ರವೃತ್ತಗೊಂಡ ಗೂಗಲ್ ಸಂಸ್ಥೆಯು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಚೀನಿ ಅಪ್ಲಿಕೇಶನ್‌ ಅನ್ನು ಡಿಲೀಟ್ (Google Removed Chinese app) ಮಾಡಿದೆ.

ಭಾರತದ ನಕ್ಷೆ ತಪ್ಪಾಗಿ ಚಿತ್ರೀಕರಣ; Play Store​ನಿಂದ ಚೀನಿ ಆಪ್‌ಗೆ ಗೇಟ್‌ಪಾಸ್!

ಭಾರತದ ಭೂಪಟದಿಂದ ಲಕ್ಷದ್ವೀಪ ಕಣ್ಮರೆ

ಈ ಪ್ರಕರಣದ ಬಗ್ಗೆ ತಿಳಿಯಲು ಕುತೂಹಲ ಉಂಟಾಗುವುದು ಸಾಮಾನ್ಯ. ಈ ಪ್ರಕರಣದ ಬಗ್ಗೆ ಹೇಳುವುದಾದರೆ, ಚೀನಾದ 'ಅಬ್ಲೋ' ಆಪ್‌ ಈ ಶಿಕ್ಷೆಗೆ ಗುರಿಯಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ತಪ್ಪಾಗಿ ಚಿತ್ರಿಸಲಾಗಿದೆ. ಅಲ್ಲದೆ, ಭಾರತದ ಭೂಪಟದಿಂದ ಲಕ್ಷದ್ವೀಪವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಕಂಡುಬಂದಿತ್ತು. ಭಾರತದ ನಕ್ಷೆಯನ್ನು ವಿರೂಪಗೊಳಿಸಿದ ಆರೋಪದ ಮೇರೆಗೆ ಕೇಂದ್ರ (Central Government) ಈ ಕ್ರಮ ಕೈಗೊಂಡಿದೆ.

ಈ 'ಅಬ್ಲೋ' ಆಪ್‌ನ ಮೂಲವು ಚೀನಾ ದೇಶಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿತ್ತು. ಇದನ್ನು 10,000ಕ್ಕಿಂತ ಹೆಚ್ಚು ಬಾರಿ ಡೌನ್‌ಲೋಡ್ ಸಹ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೇ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಭಾರತೀಯ ಸರ್ವೇಕ್ಷಣಾ ಇಲಾಖೆಯು ಈ ಚೀನಿ ಆಪ್‌ ವಿರುದ್ಧ ಕ್ರಮ ಕೈಗೊಂಡಿದೆ.

ನಕ್ಷೆ ತಪ್ಪಾಗಿ ಚಿತ್ರಿಸುವುದು ಶಿಕ್ಷಾರ್ಹ ಅಪರಾಧ!

ಈ ಸಂಬಂಧ ನೋಟಿಸ್‌ ನೀಡಲಾಗಿದೆ. ಇದರಲ್ಲಿ ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 1990 ಅನ್ನು ಉಲ್ಲೇಖಿಸಲಾಗಿದೆ. ಈ ಕಾಯ್ದೆಯ ಪ್ರಕಾರ, ಭಾರತದ ನಕ್ಷೆಯನ್ನು ತಪ್ಪಾಗಿ ಪ್ರತಿನಿಧಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 79(3)(b) ಕೂಡ ಈ ಪ್ರಕರಣಕ್ಕೆ ಅನ್ವಯವಾಗಿದೆ. ಇದರ ಅಡಿಯಲ್ಲಿ ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವ ಇಂತಹ ವಿಚಾರಗಳನ್ನು ಕೇಂದ್ರ ಸರ್ಕಾರವು (Modi Government) ಆನ್‌ಲೈನ್ ವೇದಿಕೆಯಿಂದ ಡಿಲೀಟ್ ಮಾಡುತ್ತದೆ. ಅದರಂತೆ, ಚೀನಾದ 'ಅಬ್ಲೋ' ಆಪ್‌ ಶಿಕ್ಷೆಗೆ ಗುರಿಯಾಗಿದೆ.

ಚೀನಾದ 'ಅಬ್ಲೋ' ಆಪ್‌ ಬಗ್ಗೆ ಮಾಹಿತಿ

ಚೀನಾ ಪ್ರಸ್ತುತ ಟೆಕ್ನಾಲಜಿಯಲ್ಲಿ ಮುಂದಿದೆ. ಸಾಕಷ್ಟು ಆಪ್‌ಗಳು ಬಳಕೆಯಲ್ಲಿವೆ. 'ಅಬ್ಲೋ' ಆಪ್‌ ಸಹ ಚೀನಾ ಮೂಲದ್ದಾಗಿದೆ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತನ್ನ ಬಗ್ಗೆ ವಿವರಗಳನ್ನು ನೀಡಿದೆ. ಅದರಂತೆ, ಅಬ್ಲೋ ಆಪ್ ಸಾಂಸ್ಕೃತಿಕ ವಿನಿಮಯ, ಭಾಷಾ ಕಲಿಕೆ, ಪ್ರಯಾಣ ಮಾರ್ಗದರ್ಶಿ ಮತ್ತು ವ್ಯವಹಾರ ಅಭಿವೃದ್ಧಿಗಾಗಿ ಬಳಸಬಹುದಾದ ಅಪ್ಲಿಕೇಶನ್ ಆಗಿದೆ. ಇದು ಭಾರತದ ದೇಶದ ನಕ್ಷೆಯನ್ನೇ ತಪ್ಪಾಗಿ ಚಿತ್ರಿಸಿದೆ.

119 ಚೀನಿ ಆಪ್​ಗಳ ಮೇಲೆ ಕ್ರಮ

ಚೀನಿ ಆಪ್‌ಗಳ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಇದೇ ಮೊದಲೇನಲ್ಲ. ಕಳೆದ ಫೆಬ್ರವರಿ (2025) ತಿಂಗಳಲ್ಲಿ 119 ಚೀನಿ ಆಪ್‌ಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಇದಕ್ಕೂ ಮೊದಲು 2020 ಜೂನ್ 20 ರಂದು, ಭದ್ರತಾ ಕಾಳಜಿಯಿಂದಾಗಿ ಬರೋಬ್ಬರಿ 100 ಚೀನಿ ಆಪ್‌ಗಳನ್ನು ನಿಷೇಧಿಸಿದೆ. ಆಪಲ್‌ನ ಆಪ್ ಸ್ಟೋರ್‌ನಿಂದ 'ಅಬ್ಲೋ' ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗಿದೆ. ಪ್ರಸ್ತುತ ಗೂಗಲ್​ ಸ್ಟೋರ್​ನಲ್ಲಿ ಈ ಚೀನಿ ಆಪ್‌ ಕಾಣುತ್ತಿಲ್ಲ.

Best Mobiles in India

English summary
Central Government Directs Google To Remove Chinese Ablo App For Displaying Wrong Map of India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+