ಅಮೂಲ್ಯ ಸಮಯ ಉಳಿಸಲು ಇಲ್ಲಿವೆ ಬೆಸ್ಟ್‌ ಆಪ್‌ಗಳು..!

By Gizbot Bureau
|

ಆಧುನಿಕ ಜೀವನದ ಪ್ರಭಾವದಿಂದ ನಿಮ್ಮ ಅಮೂಲ್ಯ ಸಮಯಕ್ಕೆ ಅನೇಕ ಅಡೆತಡೆಗಳು ಬರುತ್ತಿವೆ. ಮೇಲ್‌ಗಳಲ್ಲಿ ಕಾಣುವ ಜಂಕ್ ಮೇಲ್‌ಗಳನ್ನು ಸಂಘಟಿತವಾಗಿ ಸಂರಚಿಸಲು ಕಷ್ಟ ಪಡುತ್ತಿರುತ್ತೀರಾ..? ಸಿಗದ ಪಾರ್ಕಿಂಗ್‌ ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿದ್ದೀರಾ..? ಈ ಎಲ್ಲಾ ಕಷ್ಟಗಳನ್ನು ಪರಿಹರಿಸಲು ನಿಮಗೆ ಸ್ಮಾರ್ಟ್‌ ಆಯ್ಕೆಗಳಿದ್ದು, ನಿಮ್ಮ ಅಮೂಲ್ಯ ಸಮಯವನ್ನು ಉಳಿಸುವ ಕೆಲವು ಆಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಪೇಪರ್‌ಕರ್ಮ

ಪೇಪರ್‌ಕರ್ಮ

ಐಒಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್‌ಗಳಿಗೆ ಲಭ್ಯವಿರುವ ಈ ಉಚಿತ ಅಪ್ಲಿಕೇಶನ್ ಪ್ರತಿದಿನ ನಿಮ್ಮ ಮೇಲ್‌ಗೆ ಬರುವ ಜಂಕ್ ಮೇಲ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ. ಜಂಕ್ ಮೇಲ್ ಕಳುಹಿಸುವವರಿಗೆ ಅವರ ಮೇಲಿಂಗ್ ಪಟ್ಟಿಯಿಂದ ನಿಮ್ಮನ್ನು ಹೊರತೆಗೆಯಲು ಆಪ್‌ ವಿನಂತಿ ಕಳುಹಿಸುತ್ತದೆ. ನಿಖರ ಫಲಿತಾಂಶಕ್ಕಾಗಿ ಕೆಲವು ವಾರ ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮ ಮೇಲ್‌ಬಾಕ್ಸ್‌ನಲ್ಲಿ ನಿಷ್ಪ್ರಯೋಜಕ ಮತ್ತು ವ್ಯರ್ಥವಾದ ಮೇಲ್‌ ಪ್ರಮಾಣ ಕಡಿಮೆ ಮಾಡಲು ಇದು ಯೋಗ್ಯವಾದ ಆಪ್‌.

ಪಾರ್ಕ್‌ಮೀ

ಪಾರ್ಕ್‌ಮೀ

ನೀವು ಎಲ್ಲೇ ಇರಿ, ಪಾರ್ಕಿಂಗ್ ಸ್ಥಳವನ್ನು ಹುಡುಕುವುದಕ್ಕೆ ನಿಮಗೆ ಸಮಯ ಹಿಡಿಯುತ್ತದೆ. ಆದರೆ, ಪಾರ್ಕ್‌ಮೀ ಅಪ್ಲಿಕೇಶನ್ ಮೂಲಕ ನಿಮಗೆ ಹತ್ತಿರದಲ್ಲಿ ಲಭ್ಯವಿರುವ ಗ್ಯಾರೇಜ್ ಮತ್ತು ಪಾರ್ಕಿಂಗ್‌ ಸ್ಥಳವನ್ನು ಮ್ಯಾಪ್‌ನಲ್ಲಿ ತೋರಿಸುತ್ತದೆ. ನಿಮ್ಮ ಹುಡುಕಾಟವನ್ನು ಇನ್ನು ಸುಲಭವಾಗಿಸಲು ಗ್ಯಾರೇಜ್ ಅಥವಾ ಪಾರ್ಕಿಂಗ್‌ ಸ್ಥಳಗಳನ್ನು ಅಗ್ಗ ಅಥವಾ ಹತ್ತಿರದ ಸ್ಥಳಗಳ ಮೂಲಕ ಫಿಲ್ಟರ್ ಮಾಡಬಹುದು.

ಗೆಟ್‌ಹ್ಯೂಮನ್‌

ಗೆಟ್‌ಹ್ಯೂಮನ್‌

ಗೆಟ್‌ಹ್ಯೂಮನ್ ಅಪ್ಲಿಕೇಶನ್‌ನಲ್ಲಿರುವ ಸಾವಿರಾರು ಕಂಪನಿಗಳ ಸಂಖ್ಯೆಯಲ್ಲಿ ಅಗತ್ಯವಾದ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಹೋಲ್ಡ್‌ ಸಮಯವನ್ನು ಪರಿಶೀಲಿಸಿ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ. ಬಳಿಕ ಗೆಟ್‌ಹ್ಯೂಮನ್ ಗ್ರಾಹಕ ಸೇವಾ ಪ್ರತಿನಿಧಿಯೊಂದಿಗೆ ಮರಳಿ ಕರೆ ಮಾಡುತ್ತದೆ. ಕಾಲ್‌ ಸೆಂಟರ್‌ ಮುಚ್ಚಿದ್ದರೆ, ಅದು ಮತ್ತೆ ತೆರೆದಾಗ ನೀವು ರಿಮೈಂಡರ್‌ ಸ್ವೀಕರಿಸಬಹುದಾಗಿದೆ, ಹೆಚ್ಚುವರಿಯಾಗಿ, ನೀವು ಕರೆ ಮಾಡಲು ಉತ್ತಮ ಸಮಯ ಮತ್ತು ಪ್ರಸ್ತುತ ಹಾಗೂ ಸರಾಸರಿ ಕಾಯುವ ಸಮಯವನ್ನು ಇಲ್ಲಿ ವೀಕ್ಷಿಸಬಹುದು.

ಕಾಲ್‌ ಕಂಟ್ರೋಲ್‌ / ಹಿಯಾ

ಕಾಲ್‌ ಕಂಟ್ರೋಲ್‌ / ಹಿಯಾ

ಟೆಲಿಮಾರ್ಕೆಟರ್‌ಗಳಿಂದ ಒಳಬರುವ ಕರೆಗಳನ್ನು ಗುರುತಿಸುವ ಅಪ್ಲಿಕೇಶನ್‌ಗಳಿದ್ದು, ಅನಾಮಧೇಯ ಕರೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತವೆ. ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ, ಕಾಲ್ ಕಂಟ್ರೋಲ್‌ ಆಪ್‌ ಮೂಲಕ ನೀವು ಅನುಪಯುಕ್ತ ಹಾಗೂ ಸ್ಪ್ಯಾಮ್‌ ಕರೆಗಳನ್ನು ನಿರ್ಬಂಧಿಸಬಹುದು. ಇದರ ಜೊತೆ ಹಿಯಾ ಆಪ್‌ ಕೂಡ ಇದ್ದು, ಇದರ ಮೂಲಕ ಟೆಲಿಮಾರ್ಕೆಟರ್‌ ಕರೆಗಳನ್ನು ಕಂಡುಹಿಡಿದು, ನಿಮಗೆ ಸ್ಪ್ಯಾಮ್‌ ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ಐಎಫ್‌ಟಿಟಿಟಿ

ಐಎಫ್‌ಟಿಟಿಟಿ

ನಿಮ್ಮ ಇನ್‌ಸ್ಟಾಗ್ರಾಂ ಬ್ಯಾಕಪ್, ನಿಮ್ಮ ನೆಚ್ಚಿನ ಚಿಲ್ಲರೆ ವ್ಯಾಪಾರಿಗಳಲ್ಲಿನ ವಸ್ತುಗಳ ಬೆಲೆ ಪತ್ತೆಹಚ್ಚುವುದು ಮತ್ತು ನೀವು ಕಚೇರಿಯಿಂದ ಹೊರಡುವಾಗ ನಿಮ್ಮ ಸೈಲೆಂಟ್‌ ಮೋಡ್‌ ತೆಗೆಯುವುದು ಹಾಗೂ ಇನ್ನಿತರ ಸಣ್ಣ ಕಾರ್ಯಗಳನ್ನು ಇಫ್ ದಿಸ್ ದೆನ್‌ ದಟ್ (ಐಎಫ್‌ಟಿಟಿ) ಆಪ್‌ನೊಂದಿಗೆ ಸುಲಭವಾಗಿ ಸ್ವಯಂಚಾಲಿತಗೊಳಿಸಬಹುದು. IFTTT ಎನ್ನುವುದು ಮೆಟಾ ಆಪ್‌ ಆಗಿದ್ದು, ನೀವು ಮಿನಿ-ಪ್ರೋಗ್ರಾಮ್‌ಗಳ ಮೂಲಕ ಬಳಸುವ ಆಪ್‌ಗಳು ಮತ್ತು ಗ್ಯಾಜೆಟ್‌ಗಳನ್ನು ಸಂಪರ್ಕಿಸುತ್ತದೆ.

Best Mobiles in India

Read more about:
English summary
Check Out These Apps To Help Save Time

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X