ಟ್ರೂ ಕಾಲರ್, ವಿ-ಚಾಟ್ ಸೇರಿ 42 ಚೀನಾ ಆಪ್‌ಗಳನ್ನು ಡಿಲೀಟ್ ಮಾಡಿ!!..ಗುಪ್ತಚರ ಬ್ಯೂರೋ ಹೇಳಿದ್ದು!!

ಚೀನಾ ಅಭಿವೃದ್ಧಿಪಡಿಸಿರುವ 42 ಆಪ್​ಗಳು ಬೇಹುಗಾರಿಕೆ, ದತ್ತಾಂಶ ಕಳವು ತಂತ್ರ ಜ್ಞಾನ ಹೊಂದಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಬ್ಯೂರೋ ಎಚ್ಚರಿಸಿದೆ.

|

ಚೀನಾ ಅಭಿವೃದ್ಧಿಪಡಿಸಿರುವ 42 ಆಪ್​ಗಳು ಬೇಹುಗಾರಿಕೆ, ದತ್ತಾಂಶ ಕಳವು ತಂತ್ರ ಜ್ಞಾನ ಹೊಂದಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಬ್ಯೂರೋ ಎಚ್ಚರಿಸಿದೆ. ಈ ಸಂಬಂಧ ಗುಪ್ತಚರ ಇಲಾಖೆ ಸೈನಿಕರಿಗೆ ಎಚ್ಚರಿಕೆ ನೀಡಿದ್ದು, ಚೀನಾ ಅಭಿವೃದ್ಧಿಪಡಿಸಿರುವ ಆಪ್​ಗಳನ್ನು ಮೊಬೈಲ್​ಗಳಿಂದ ತೆಗೆದು ಹಾಕುವಂತೆ ಸೂಚಿಸಿದೆ.!!

ಆಪ್ ನಿರ್ವಹಣೆ ಮಾಡುವವರು ಬಳಕೆದಾರರ ಮಾಹಿತಿ ಕದ್ದು ಹಣಕ್ಕೆ ಮಾರುವ ಅಥವಾ ಅದನ್ನು ಚೀನಾ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಕೆಲಸ ಮಾಡಬಹುದು ಎಂದು ಸೈಬರ್ ತಜ್ಞರು ಹೇಳಿದ್ದು, ಹಾಗಾದರೆ, ಆ 42 ಚೀನಾ ಆಪ್‌ಗಳಲ್ಲಿ ಪ್ರಮುಖವಾಗಿರುವ ಆಪ್‌ಗಳು ಯಾವುವು? ಹೇಗೆ ಮಾಹಿತಿ ಕದಿಯುತ್ತಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ರಕ್ಷಣಾ ಮಾಹಿತಿಗೆ ಕನ್ನ!!

ರಕ್ಷಣಾ ಮಾಹಿತಿಗೆ ಕನ್ನ!!

ಭಾರತವನ್ನು ಹಣಿಯಲು ಹಲವು ದಾರಿಗಳನ್ನು ಹುಡುಕುತ್ತಿರುವ ಚೀನಾ ಇದೀಗ, ಮೊಬೈಲ್ ಆಪ್​ಗಳ ಸಹಾಯದಿಂದ ಭಾರತದ ರಕ್ಷಣಾ ಮಾಹಿತಿಗೆ ಕನ್ನ ಹಾಕಲು ಯತ್ನಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಆಪ್​ಗಳ ಮೂಲಕ ಭದ್ರತಾ ಸಿಬ್ಬಂದಿಯ ಸ್ಮಾರ್ಟ್​ಫೋನ್​ಗಳನ್ನು ಬ್ರೇಕ್ ಮಾಡಿ ದತ್ತಾಂಶ ಕದಿಯುವ ಕುತಂತ್ರವನ್ನು ಚೀನಾ ನಡೆಸಿದೆ ಎಂದು ಸೈಬರ್ ತಜ್ಞರು ಹೇಳಿದ್ದಾರೆ

ಆಪ್‌ಗಳು ವಯಕ್ತಿಕ ಮಾಹಿತಿ ಖದಿಯುತ್ತಿವೆ.!!

ಆಪ್‌ಗಳು ವಯಕ್ತಿಕ ಮಾಹಿತಿ ಖದಿಯುತ್ತಿವೆ.!!

ಆಪ್​ಗಳನ್ನು ಬಳಸುತ್ತಿರುವ ಗ್ರಾಹಕರಿಂದ ವೈಯಕ್ತಿಕ ಹಾಗೂ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ತನ್ನ ಸರ್ವರ್​ನಲ್ಲಿ ಆಪ್ ತಂಡಗಳು ಸಂಗ್ರಹ ಮಾಡಿಕೊಳ್ಳುತ್ತಿವೆ. ಹೀಗೆ ಸಂಗ್ರಹವಾಗುವ ಬಳಕೆದಾರರ ಖಾಸಾಗಿ ಮಾಹಿತಿಗಳನ್ನು ಹಣಕ್ಕೆ ಮಾರಬಹುದು ಅಥವಾ ಚೀನಾ ಅಧಿಕಾರಿಗಳಿಗೆ ನೀಡಬಹುದು ಎಂದು ಗುಪ್ತಚರ ಬ್ಯೂರೋ ಹೇಳಿದೆ.!!

42 ಆಪ್‌ಗಳು ಅಪಾಯಕಾರಿ!!

42 ಆಪ್‌ಗಳು ಅಪಾಯಕಾರಿ!!

ಗುಪ್ತಚರ ಬ್ಯೂರೋ ದೇಶದಲ್ಲಿ ಹೆಚ್ಚು ಬಳಕೆಯಲ್ಲಿರುವ 42 ಚೀನಾ ಆಪ್‌ಗಳು ಅಪಾಯಕಾರಿಯಾದವು ಎಂದು ಗುರುತಿಸಿದೆ.! ಅವುಗಳಲ್ಲಿ ಪ್ರಮುಖವಾದ ವಿ ಚಾಟ್, ಟ್ರೂ ಕಾಲರ್, ವೈಬೊ, ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ ಆಪ್​ಗಳು ದೇಶದ ಭದ್ರತೆಗೆ ಕುತ್ತು ತರುವಂಥದ್ದು ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.!!

ವಾಯುಪಡೆಯಲ್ಲಿ ಬ್ಯಾನ್

ವಾಯುಪಡೆಯಲ್ಲಿ ಬ್ಯಾನ್

ಚೀನಾ ನಿರ್ವಿುತ ಹಲವು ಸ್ಮಾರ್ಟ್​ಫೋನ್ ಹಾಗೂ ನೋಟ್​ಬುಕ್​ಗಳನ್ನು ಬಳಕೆ ಮಾಡದಂತೆ ವಾಯುಪಡೆ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಈ ಸ್ಮಾರ್ಟ್​ಫೋನ್ ಮತ್ತು ನೋಟ್​ಬುಕ್​ಗಳಿಂದ ಚೀನಾದ ಸರ್ವರ್​ಗಳಿಗೆ ದತ್ತಾಂಶ ರವಾನೆಯಾಗುತ್ತಿದೆ ಎಂದು ಐಎಎಫ್ ಶಂಕೆ ವ್ಯಕ್ತಪಡಿಸಿದೆ.!

How to create two accounts in one Telegram app (KANNADA)
ಚೀನಾ ಹ್ಯಾಕರ್ಸ್ ಕುತಂತ್ರ.!!

ಚೀನಾ ಹ್ಯಾಕರ್ಸ್ ಕುತಂತ್ರ.!!

ಇಂತಹ ಎಚ್ಚರಿಕೆಗಳು ಈ ಮೊದಲು ಹೊರಬಿದ್ದಿದ್ದರು ಸಹ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಇತ್ತೀಚೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ್ದ ಸಭೆಯ ಮಾಹಿತಿಯನ್ನು ಚೀನಾ ಹ್ಯಾಕ್ ಮಾಡಿತ್ತು. ಈ ಬೆನ್ನಲ್ಲೇ ಆಪ್ ಗೂಢಚಾರಿಕೆ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ನಿಮ್ಮ ಭವಿಷ್ಯವನ್ನು ತಿಳಿಸುವ ನಿಮ್ಮ ಭವಿಷ್ಯವನ್ನು ತಿಳಿಸುವ "ಕೃತಕ ಬುದ್ಧಿಮತ್ತೆ" ಬಗ್ಗೆ ನಿಮಗೆಷ್ಟು ಗೊತ್ತು?!

Best Mobiles in India

Read more about:
English summary
A fresh advisory issued by the IB warns of possible espionage attempts by China through its popular smartphone apps and devices.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X