ಭಾರತದ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡ ಚೀನಾ..! 43 ಆಪ್‌ಗಳಿಂದ ಬಳಕೆದಾರರ ಮಾಹಿತಿ ಅಕ್ರಮ ವರ್ಗಾವಣೆ

By Gizbot Bureau
|

ದೇಶದ ಭದ್ರತೆಗೆ ಧಕ್ಕೆ ತರುತ್ತವೆ ಎಂದು ಭಾರತ ಸರ್ಕಾರ ಚೀನಾ ಮೂಲದ ಹಲವು ಆಪ್‌ಗಳನ್ನು ನಿಷೇಧಿಸಿದೆ. ಇದುವರೆಗೂ ಭಾರತದ ನಡೆಯನ್ನು ವಿರೋಧಿಸುತ್ತಿದ್ದ ಚೀನಾ ಈಗ ಪರೋಕ್ಷವಾಗಿ ಭಾರತದ ಆರೋಪವನ್ನು ಒಪ್ಪಿಕೊಂಡಿದೆ. ಹೌದು, ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವೇ (ಎಂಐಐಟಿ) ಬಳಕೆದಾರರ ಡೇಟಾವನ್ನು ಕೆಲವು ಆಪ್‌ಗಳು ಅಕ್ರಮವಾಗಿ ವರ್ಗಾವಣೆ ಮಾಡಿವೆ ಎಂದು ಹೇಳಿದೆ.

ಭಾರತದ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡ ಚೀನಾ..!

ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮಾಲೀಕತ್ವದ ವೀಚಾಟ್ ಸೇರಿ 43 ಆಪ್‌ಗಳು ಬಳಕೆದಾರರ ಡೇಟಾವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆ ಆಪ್‌ಗಳ ಮಾತೃ ಕಂಪನಿಗಳಿಗೆ ಚೀನಾ ಸರ್ಕಾರ ನೋಟಿಸ್‌ ನೀಡಿದ್ದು, ಸಮಸ್ಯೆ ಬಗೆಹರಿಸುವಂತೆ ಹೇಳಿವೆ. ಈ ಕ್ರಮದ ಮೂಲಕ ಚೀನಾ ಸರ್ಕಾರ ಖಾಸಗೀತನ ಹಾಗೂ ದತ್ತಾಂಶ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಪ್‌ಗಳು ಅಕ್ರಮವಾಗಿ ಬಳಕೆದಾರರ ಕಾಂಟ್ಯಾಕ್ಟ್‌ ಲಿಸ್ಟ್‌ ಮತ್ತು ಲೋಕೆಷನ್‌ ಮಾಹಿತಿಯನ್ನು ವರ್ಗಾಯಿಸಿವೆ. ಅದಲ್ಲದೇ ಪಾಪ್‌-ಅಪ್‌ ವಿಂಡೋಗಳಿಂದ ಆಪ್‌ಗಳು ಬಳಕೆದಾರರಿಗೆ ಕಿರುಕುಗಳ ನೀಡುತ್ತಿವೆ ಎಂದು ಸಚಿವಾಲಯ ತನ್ನ ಆನ್‌ಲೈನ್‌ ಹೇಳಿಕೆಯಲ್ಲಿ ತಿಳಿಸಿದೆ.

ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಒಡೆತನದ ಇ-ರೀಡಿಂಗ್ ಆಪ್ ಅನ್ನು ಒಳಗೊಂಡಿದೆ. ಅದಲ್ಲದೇ, ಟ್ರಾವೆಲ್ ದೈತ್ಯ ಟ್ರಿಪ್.ಕಾಮ್ ಮತ್ತು ವೀಡಿಯೋ ಸ್ಟ್ರೀಮರ್ ಐಕ್ಯೂಐನಿಂದ ನಿರ್ವಹಿಸಲ್ಪಡುವ ಇತರ ಆಪ್‌ಗಳು ಕೂಡ ಅಕ್ರಮ ಮಾಹಿತಿ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿವೆ.

ಆಪ್‌ಗಳಿಗೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಆಗಸ್ಟ್ 25 ರವರೆಗೆ ಗಡುವನ್ನು ನೀಡಲಾಗಿದೆ. ಇಲ್ಲದಿದ್ದರೆ, ಸಂಬಂಧಿತ ಕಾನೂನು ಹಾಗೂ ನಿಬಂಧನೆಗಳಿಗೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದ ಎಂಐಐಟಿ ಹೇಳಿದೆ. ಆಲಿಬಾಬಾ. ಐಕ್ಯೂಐ ಮತ್ತು ಟೆನ್ಸೆಂಟ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಟ್ರಿಪ್‌.ಕಾಮ್‌ ಪ್ರತಿಕ್ರಿಯಿಸಲು ನಿರಾಕರಿಸಿದೆ.

Best Mobiles in India

Read more about:
English summary
Chinese Apps Like WeChat Transferred Data Illegally Says Chinese IT Ministry

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X