ಚಿರಾಗ್: ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಮೊಬೈಲ್‌ ಅಪ್ಲಿಕೇಶನ್‌

By Suneel
|

ಆತನಿಗೆ ಕೇವಲ 14 ಅಥವಾ 15 ವರ್ಷ ಅಷ್ಟೇ. ನಗರದ ಟೀ ಶಾಪ್ ಒಂದರಲ್ಲಿ ಸಪ್ಲೇಯರ್‌. ಅಯ್ಯೋ ಅಲ್ಲಾ ಟೀ ಲೋಟಗಳನ್ನು ತೊಳೆಯೋದು. ಅಲ್ಲೊಂದು ಪೆಟ್ರೋಲ್ ಬ್ಯಾಂಕ್‌ನಲ್ಲಿ ಆ ಪುಟ್ಟ ಹುಡುಗ ವಾಹನಗಳಿಗೆ ಪೆಟ್ರೋಲ್‌ ಹಾಕುವ ಕೆಲಸ ಮಾಡುತ್ತಿದ್ದಾನೆ. ಓದೋಕೆ ಹೋಗಿದ್ರೆ ಈಗ ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿಗೆ ಹೋಗಬೇಕಿತ್ತು. ಬಡತನದ ಬೇಗೆ ಇಂದ ಬಂದನೋ ಅಥವಾ ಮನೆಯವರ ಸಾಲ ತೀರಿಸುವ ಸಲುವಾಗಿಯೋ ಅಥವಾ ಶೋಷಣೆಗೆ ಒಳಗಾಗಿದ್ದಾನೋ ಯಾರಿಗೂ ತಿಳಿಯದು. ಆದ್ರೆ ಅವನನ್ನೂ ಎರಡು ನಿಮಿಷ ಮಾತನಾಡಿಸಿದ್ರೆ ತಾನೆ ಎಲ್ಲಾ ತಿಳಿಯೋದು.

ಚಿರಾಗ್: ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಮೊಬೈಲ್‌ ಅಪ್ಲಿಕೇಶನ್‌

ಹೌದು, ಇಂತಹ ಎಷ್ಟೋ ಮಕ್ಕಳು ತಮ್ಮ ಶಿಕ್ಷಣ ಹಕ್ಕನ್ನು ಪಡೆಯಲು ಸಾಧ್ಯವಾಗದೇ ಎಲ್ಲಾ ಕ್ಷೇತ್ರಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎಲ್ಲರಿಗೂ ಮನಸುಂಟು. ಆ ಹುಡುಗ ಕೆಲಸ ಬಿಟ್ಟು ಓದಲು ಹೋಗುವ ಹಾಗೆ ಏನಾದ್ರು ಮಾಡಲೇ ಬೇಕು ಅಂತಾ. ಆದ್ರೆ ಅವನನ್ನು ಮಾತನಾಡಿಸುವಾಗ ಮಾಲೀಕ ನಮ್ ಜೊತೆ ಜಗಳ ಮಾಡಿದ್ರೆ, ಇನ್ನೇನೋ ಎಚ್ಚು ಕಡಿಮೆ ಆದ್ರೆ ಅನ್ನೋ ಭಯ. ಹೋಗ್ಲಿ ಬಿಡಿ ಇನ್ನುಮುಂದೆ ಈ ರೀತಿ ಭಯ ಪಡುವ ಅವಶ್ಯಕತೆ ಇಲ್ಲ.

ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಸಲುವಾಗಿ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು "ಚಿರಾಗ್ (CHIRAG)" ಎಂಬ ಆಪ್‌ ಅನ್ನು ಅಭಿವೃದ್ದಿಪಡಿಸಲಾಗಿದೆ. ಅಂದಹಾಗೆ ಈ ಆಪ್‌ ಅನ್ನು ಅಭಿವೃದ್ದಿಪಡಿಸಿರುವುದು ಮಹಾರಾಷ್ಟ್ರ ಸರ್ಕಾರ.

ಚಿರಾಗ್: ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಮೊಬೈಲ್‌ ಅಪ್ಲಿಕೇಶನ್‌

ಮಹಾರಾಷ್ಟ್ರ ರಾಜ್ಯದ ಯಾವುದೇ ಸ್ಥಳದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದಲ್ಲಿ, ಮಕ್ಕಳು ಶೋಷಣೆಗೆ ಒಳಗಾಗಿದ್ದಲ್ಲಿ, ಈ ಬಗ್ಗೆ ಮಾಹಿತಿಯನ್ನು ಆಪ್‌ ಓಪನ್‌ ಮಾಡಿ ನೀಡಿದರೆ ಆಯಿತು. ಈ ಮಾಹಿತಿ ನಂತರ ಪೊಲೀಸ್‌ ಠಾಣೆ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಗಳಿಗೆ ರವಾನೆ ಆಗುತ್ತದೆ. ಮುಂದಿನ ಕ್ರಮವಾಗಿ ಮಕ್ಕಳನ್ನು ರಕ್ಷಿಸಲು ಅಧಿಕಾರಿಗಳು ಮತ್ತು ಪೊಲೀಸರು ಧಾವಿಸುತ್ತಾರೆ.

ಚಿರಾಗ್: ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಮೊಬೈಲ್‌ ಅಪ್ಲಿಕೇಶನ್‌

ದೂರು ನೀಡಲು ಹೆದರದಿರಿ
ಅಂದಹಾಗೆ ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯವಾಗುತ್ತಿರುವ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದಂತೆ. ಚಿರಾಗ್‌ ಆಪ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿದ ತಕ್ಷಣವೇ ಮಾಹಿತಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಗಳಿಗೆ ರವಾನೆ ಆಗುತ್ತದೆ.

ಚಿರಾಗ್: ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಮೊಬೈಲ್‌ ಅಪ್ಲಿಕೇಶನ್‌

ಆಪ್‌ ಕಾರ್ಯನಿರ್ವಹಣೆ ಹೇಗೆ?
ಚಿರಾಗ್ ಆಪ್‌ ಜಿಪಿಆರ್‌ಎಸ್‌ ತಂತ್ರಜ್ಞಾನ ಆಧಾರಿತವಾಗಿದ್ದು, ದೂರು ನೀಡಿದ ಮಾಹಿತಿಯ ಅನುಗುಣವಾಗಿ ಸ್ಥಳವನ್ನು ಪತ್ತೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತದೆ. ಕಳೆದು ಹೋದ ಮಕ್ಕಳನ್ನು ಪತ್ತೆ ಹಚ್ಚಲು, ಮಕ್ಕಳ ಹಕ್ಕುಗಳ ರಕ್ಷಣೆಗೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಈ ಮೊಬೈಲ್‌ ಅಪ್ಲಿಕೇಶನ್ ನೆರವಾಗಲಿದೆ.

ಚಿರಾಗ್: ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಮೊಬೈಲ್‌ ಅಪ್ಲಿಕೇಶನ್‌

ಚಿರಾಗ್ ಆಪ್‌
ಚಿರಾಗ್‌ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಬಹುದಾಗಿದ್ದು, ಈ ಆಪ್‌ ಈಗಾಗಲೇ 5,000 ಇನ್‌ಸ್ಟಾಲ್‌ ಆಗಿದೆ. ಈ ಆಪ್‌ ಅನ್ನು ಪ್ರತಿಯೊಬ್ಬರು ಇನ್‌ಸ್ಟಾಲ್‌ ಮಾಡಿಕೊಂಡಿದ್ದಲ್ಲಿ ಮಕ್ಕಳನ್ನು ರಕ್ಷಿಸಲು ಸಹಾಯವಾಗುತ್ತದೆ. ಆಪ್‌ ಕರ್ನಾಟಕದಲ್ಲಿ ಸೇವೆಗೆ ಲಭ್ಯವಿಲ್ಲ ನೆನಪಿರಲಿ. ಆದರೆ ಎಲ್ಲಾ ರಾಜ್ಯಗಳು ಇಂತಹದೊಂದು ಉತ್ತಮ ಆಪ್‌ ಇದ್ದರೆ ಇನ್ನೂ ಉತ್ತಮ.

'CDM' ಮಷಿನ್ ಬಳಸಿ ಹಣ ಡೆಪಾಸಿಟ್ ಮಾಡುವುದು ಹೇಗೆ? ಸೂಚನೆಗಳು..!

Best Mobiles in India

Read more about:
English summary
Chirag, app for Child helpline and protect to Child Rights. To know more about this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X