Home
Apps

ನಿಮ್ಮ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುವುದು ಹೇಗೆ? ಏನು ಮಾಡಬೇಕು, ಏನು ಮಾಡಬಾರದು?

By Sushma Charhra

ನಿಮ್ಮ ಸ್ಮಾರ್ಟ್ ಪೋನ್ ನಿಮ್ಮಿಂದ ಬೇರ್ಪಡಿಸಲಾಗದ ಒಂದು ವಸ್ತುವಾಗಿದ್ದು, ನಿಮಗೆ ಅದನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ ಅಲ್ವಾ? ಬೇರೆ ಎಲ್ಲದಕ್ಕಿಂತ ಹೆಚ್ಚು ನೀವದನ್ನು ಪ್ರೀತಿಸುತ್ತೀರಿ ಅಲ್ವಾ? ಆದಷ್ಟು ಹೆಚ್ಚು ದಿನ ನಿಮ್ಮ ಸ್ಮಾರ್ಟ್ ಫೋನ್ ಹೊಸತರಂತೆಯೇ ಕಂಗೊಳಿಸುತ್ತಿರಬೇಕು ಎಂದು ಹೆಚ್ಚಿನವರು ಜೋಪಾನ ಮಾಡುತ್ತಾರೆ. ಆದರೆ ನೀವೆಷ್ಟೇ ಕಷ್ಟಪಟ್ಟು ಪ್ರಯತ್ನಿಸುತ್ತಿರಿ. ಅದ್ಹೇಗೋ ಸ್ಮಾರ್ಟ್ ಫೋನ್ ನಲ್ಲಿ ಕಲೆಗಳಾಗಿ ಬಿಡುತ್ತವೆ. ಕೊಳೆಯಾಗಿ ಬಿಡುತ್ತೆ. ಕ್ಲೀನ್ ಇರುವುದಿಲ್ಲ. ಖಂಡಿತ ಇದು ನಿಮ್ಮ ಹೃದಯಕ್ಕೆ ಘಾಸಿಯುಂಟು ಮಾಡುವ ವಿಷಯವೇ ಆಗಿರುತ್ತೆ. ಯಾರೂ ಕೂಡ ತಮ್ಮ ಫೋನ್ ಕೊಳೆಯಾಗಿರುವುದನ್ನು ಬಯಸುವುದಿಲ್ಲ.

ನಿಮ್ಮ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುವುದು ಹೇಗೆ? ಏನು ಮಾಡಬೇಕು, ಏನು ಮಾಡಬಾರದು?


ಆದರೆ ಹೀಗಾಯ್ತಲ್ಲ ಎಂದು ಕೊರಗುವ ಬದಲು ಕೆಲವು ಮೂಲಭೂತ ವಿಚಾರಗಳನ್ನು ನಿಮ್ಮ ಸ್ಮಾರ್ಟ್ ಫೋನ್ ಬಗ್ಗೆ ನೀವು ತಿಳಿದಿರುವುದು ಉತ್ತಮ.ನಿಮ್ಮ ಸ್ಮಾರ್ಟ್ ಫೋನ್ ನ್ನು ಕ್ಲೀನ್ ಮಾಡುವುದೊಂದು ರಾಕೆಟ್ ಸೈನ್ಸ್ ಏನು ಅಲ್ಲ. ಬದಲಾಗಿ ಒಂದು ಸಿಂಪಲ್ ವಿಷಯ ಅಷ್ಟೇ. ಅದಕ್ಕೊಂದಿಷ್ಟು ತಾಳ್ಮೆ ಬೇಕು. ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುವ ನೀವು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ಬಗ್ಗೆ ಒಂದಷ್ಟು ಸರಳ ವಿಚಾರಗಳು ಇಲ್ಲಿವೆ ನೋಡಿ..

ಏನು ಮಾಡಬೇಕು?

1. ನಿಮ್ಮ ಫೋನಿನ ಪವರ್ ಆಫ್ ಮಾಡಿ, ಬ್ಯಾಟರಿ ಅನ್ನು ರಿಮೂವ್ ಮಾಡಿ ಇಡಿ. ಒಂದು ವೇಳೆ ನಿಮ್ಮ ಫೋನಿನದ್ದು ರಿಮೂವೇಬಲ್ ಬ್ಯಾಟರಿ ಅಲ್ಲದೇ ಇದ್ರೆ ಜಸ್ಟ್ ಸ್ವಿಚ್ ಆಫ್ ಮಾಡಿ ಇಡಿ.

2. ನೀವು ನಿಮ್ಮ ಸ್ಮಾರ್ಟ್ ಫೋನ್ ಕ್ಲೀನ್ ಮಾಡುವಾಗ ನಿಂತುಕೊಂಡಿರಬೇಡಿ. ನೀವು ಅದನ್ನು ಕೆಳಗೆ ಬೀಳಿಸಿಕೊಂಡು ಒಡೆದು ಹಾಕಿಕೊಳ್ಳುವ ಸಾಧ್ಯತೆಗಳಿರುತ್ತೆ. ಹಾಗಾಗಿ ಒಂದು ಖುರ್ಚಿಯ ಮೇಲೆ ಕುಳಿತುಕೊಳ್ಳಿ ಮತ್ತು ಟೇಬಲ್ ಮೇಲಿಟ್ಟು ಸ್ವಚ್ಛಗೊಳಿಸುವ ಕೆಲಸ ಮಾಡಿ.ಕ್ಲೀನ್ ಮಾಡಲು ಬೇಕಾಗಿರುವ ಎಲ್ಲಾ ಸಾಮಗ್ರಿಗಳನ್ನು ತಯಾರಿ ಮಾಡಿಟ್ಟುಕೊಳ್ಳಿ

3. ಯಾವುದಾದರೂ ಪ್ರೊಟೆಕ್ಟೀವ್ ಕವರ್ ಅಥವಾ ಕೇಸ್ ಬಳಸುತ್ತಿದ್ದರೆ ಅದನ್ನು ರಿಮೂವ್ ಮಾಡಿ

4. ಒಣಗಿದ ಕಾಟನ್ ಬಟ್ಟೆಯಿಂದ ನಿಧಾನವಾಗಿ ಸ್ಕ್ರೀನಿನ ಮೇಲ್ಬಾಗವನ್ನು ಸ್ವಚ್ಛಗೊಳಿಸಿ. ಒಂದು ವೇಳೆ ಅಗತ್ಯವಿದ್ದರೆ ಮಾತ್ರ ಸ್ವಲ್ಪ ಒತ್ತಡ ಹಾಕಿ, ಆದರೆ ತುಂಬಾ ಗಟ್ಟಿಯಾಗಿ ಒತ್ತಬೇಡಿ.

5. ಅಗತ್ಯವಿದ್ದರೆ ಕ್ಲೀನಿಂಗ್ ಲಿಕ್ವಿಡ್ ಬಳಸಿದ ಬಟ್ಟೆಯನ್ನು ಬಳಸಿ. ಯಾವುದೇ ಕಾರಣಕ್ಕೂ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸಲು ಬಳಸಬೇಡಿ.

6. ಫೋನಿನ ಸೈಡ್ ಕಾರ್ನರ್ ನ ಕೊಳೆ ತೆಗೆಯಲು ಮೃದುವಾದ ಬ್ರೆಷ್ ಗಳನ್ನು ಬಳಕೆ ಮಾಡಿ

7. ಫೋನಿನ ಬ್ಯಾಕ್ ಸೈಡ್ ಮತ್ತು ಬದಿಯ ಭಾಗವನ್ನು ಕ್ಲೀನ್ ಮಾಡಲು ಕ್ಲೀನಿಂಗ್ ಲಿಕ್ವಿಡ್ ಬಳಸಿದ ಬಟ್ಟೆಯನ್ನೇ ಬಳಕೆ ಮಾಡಿ.

8. ಚಾರ್ಜಿಂಗ್ ಪೋರ್ಟ್, ಸ್ಪೀಕರ್ಸ್ ಮತ್ತು ಆಡಿಯೋ ಪೋರ್ಟ್ ಗಳನ್ನು ಸ್ವಚ್ಛಗೊಳಿಸಲು ಬಾಯಿಯಿಂದಲೇ ಗಾಳಿ ಊದಿ ಇಲ್ಲವೇ ಮೃದುವಾದ ಸಣ್ಣ ಬ್ಲೋವರ್ ಬಳಕೆ ಮಾಡಿ.

9. ಮುಂಭಾಗದ ಮತ್ತು ಹಿಂಭಾಗದ ಕ್ಯಾಮರಾವನ್ನು ಕ್ಲೀನಿಂಗ್ ಲಿಕ್ವಿಡ್ ಬಳಸಿದ ಬಟ್ಟೆಯಿಂದ ಸ್ವಚ್ಛಗೊಳಿಸಿ ಆದರೆ ಕೂಡಲೇ ಒಣ ಬಟ್ಟೆಯಿಂದ ಒರೆಸಿಬಿಡಿ

10. ಒಮ್ಮೆ ಸಂಪೂರ್ಣ ಕ್ಲೀನಿಂಗ್ ಕಾರ್ಯಕ್ರಮ ಮುಗಿದ ನಂತರವೇ ನಿಮ್ಮ ಫೋನನ್ನು ಸ್ವಿಚ್ ಆನ್ ಮಾಡಿ. ಫೋನ್ ಸಂಪೂರ್ಣವಾಗಿ ಒಣಗಿದೆ ಎಂಬುದು ಖಾತ್ರಿಯಿರಲಿ.

...

ಏನನ್ನು ಮಾಡಬಾರದು

1. ಒದ್ದೆ ಬಟ್ಟೆಯನ್ನು ಬಳಸಬೇಡಿ. ಡ್ಯಾಂಪ್ ಅಥವಾ ಒಣಗಿದ ಬಟ್ಟೆಯನ್ನೇ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸಲು ಬಳಕೆ ಮಾಡಿ

2. ಯಾವುದೇ ಲಿಕ್ವಿಡ್ ನ್ನು ನೇರವಾಗಿ ಫೋನಿನ ಸ್ಕ್ರೀನ್ ಮೇಲೆ ಸ್ಪ್ರೇ ಮಾಡಬೇಡಿ. ಇದು ನಿಮ್ಮ ಫೋನನ್ನು ಸಂಪೂರ್ಣವಾಗಿ ಹಾಳು ಮಾಡುವ ಸಾಧ್ಯತೆ ಇರುತ್ತೆ.

3. ಯಾವುದೇ ಕಾರಣಕ್ಕೂ ನಿಂತುಕೊಂಡಾಗ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸಲು ಮುಂದಾಗಬೇಡಿ. ಇದು ಒಂದು ವೇಳೆ ನಿಮ್ಮ ಕೈಯಿಂದ ಜಾರಿ ಫೋನ್ ಕೆಳಗೆ ಬಿದ್ದು ಒಡೆದು ಹೋಗುವ ಸಾಧ್ಯತೆ ಇರುತ್ತೆ.

4. ಪೋರ್ಟ್ಸ್ ಮತ್ತು ಜಾಕ್ ಗಳನ್ನು ಸ್ವಚ್ಛಗೊಳಿಸಲು ಯಾವುದೇ ದ್ರವ ಪದಾರ್ಥಗಳನ್ನು ಬಳಕೆ ಮಾಡಬೇಡಿ. ಮತ್ತೆ ಸರಿಪಡಿಸಲಾಗದಂತೆ ಇದು ನಿಮ್ಮ ಫೋನನ್ನು ಹಾಳು ಮಾಡಬಹುದು.

5. ಯಾವುದೇ ಚೂಪಾದ ಮತ್ತು ಹರಿತವಾದ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬೇಡಿ. ಉದಾಹರಣೆಗೆ ಸ್ಯಾರಿ ಪಿನ್ಸ್, ಹೇರ್ ಪಿನ್ಸ್ ಇತ್ಯಾದಿ

6. ನೀವೇ ಕೈಯಾರೆ ತಯಾರಿಸಿದ ಯಾವುದೇ ರೀತಿಯ ಕೆಮಿಕಲ್ ಗಳನ್ನು ನಿಮ್ಮ ಫೋನಿನ ಸ್ವಚ್ಛತೆಗೆ ಬಳಕೆ ಮಾಡಬೇಡಿ. ಕಂಪೆನಿಯವರೇ ತಯಾರಿಸಿರುವ ಲಿಕ್ವಿಡ್ ಗಳನ್ನು ಬಳಕೆ ಮಾಡಿದರೆ ಒಳಿತು.

ಈ ಸಾಮಾನ್ಯ ಮಾಹಿತಿಗಳನ್ನು ಯಾವಾಗಲೂ ನೀವು ನಿಮ್ಮ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುವಾಗ ನೆನಪಿನಲ್ಲಿ ಇಟ್ಟುಕೊಂಡಿರುವುದು ಸೂಕ್ತ.

Best Mobiles in India

English summary
AS your smartphone has become an inseparable part of you and you cherish it more than anything. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+