ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಲ್ಲರೂ ಮಾಡುತ್ತಿದ್ದಾರೆ ಈ ತಪ್ಪುಗಳನ್ನು!!

|

ಆಂಡ್ರಾಯ್ಡ್ ಯುಗದಲ್ಲಿ ಸೋಶಿಯಲ್ ಮೀಡಿಯಾ, ಶಾಪಿಂಗ್, ಮೊಬೈಲ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್, ಮೆಸೇಜಿಂಗ್ ಹೀಗೆ ಪ್ರತಿಯೊಂದು ಸೇವೆಗಳಿಗೂ ನೂರಾರು ಆಪ್‌ಗಳಿವೆ. ಜೀವನವನ್ನು ಸರಳಗೊಳಿಸುವ ಈ ಆಪ್‌ ಸೇವೆಗಳನ್ನು ಎಲ್ಲರೂ ಪಡೆಯುತ್ತಿರುವುದು ನಿಜವಾದರೂ ಸಹ ಆ ಆಪ್‌ಗಳಿಂದ ಮೋಸ ಹೋಗುತ್ತಿರುವುದನ್ನು ತಿಳಿಯುವುದಿಲ್ಲ!

ಹೌದು, ನಾವು ಈಗ ಹಿಂದೆಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುತ್ತೇವೆ ಎಂದು ಶೇ.50ರಷ್ಟು ಬಳಕೆದಾರರು ಒಪ್ಪುತ್ತಾರೆ. ಆದರೆ, ಗ್ರಾಹಕರು ಆಪ್‌ಗಳನ್ನು ಬಳಸುವಾಗ ಸುರಕ್ಷತೆ ಹಾಗೂ ಖಾಸಗಿತನಕ್ಕೆ ಸಂಬಂಧಿಸಿದ ದುಷ್ಪರಿಣಾಮದ ಸಾಧ್ಯತೆಗಳನ್ನು ಬಹುಪಾಲು ಉಪೇಕ್ಷಿಸುತ್ತಾರೆ ಎಂದು ನಾರ್ಟನ್ ಎಂಬ ಮೊಬೈಲ್ ಸರ್ವೆಯೊಂದು ಹೇಳಿದೆ.!!

ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಲ್ಲರೂ ಮಾಡುತ್ತಿದ್ದಾರೆ ಈ ತಪ್ಪುಗಳನ್ನು!!

ಭಾರತೀಯರು ಆನ್‌ಲೈನ್ ಶಾಪಿಂಗ್ ಬಗ್ಗೆ ಯಾವ ಮನಸ್ಥಿತಿ ಹೊಂದಿದ್ದಾರೆ?, ಭಾರತೀಯರು ಸರಾಸರಿ ಎಷ್ಟು ಆಪ್‌ಗಳನ್ನು ಬಳಕೆ ಮಾಡುತ್ತಾರೆ?, ಭಾರತೀಯರು ಆರಿಸಿಕೊಳ್ಳುವ ಆಪ್‌ಗಳು ಯಾವುವು? ಆಪ್ ಡೌನ್‌ಲೋಡ್ ಮಾಡುವಾಗ ಭಾರತೀಯರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಸರ್ವೆ ವಿಸ್ತಾರವಾಗಿ ಹೇಳಿದೆ. ಹಾಗಾದರೆ, ಏನಿದು ಕುತೋಹಲ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಪ್‌ ಲೋಕದಲ್ಲಿ ಯಾವುವು ಮೊದಲು?

ಆಪ್‌ ಲೋಕದಲ್ಲಿ ಯಾವುವು ಮೊದಲು?

ನಮ್ಮ ಶಾಪಿಂಗ್ ಹಾಗೂ ಹಣಪಾವತಿಯ ಅಭ್ಯಾಸಗಳಲ್ಲಿ ಮೊಬೈಲ್ ಸಾಧನಗಳ ಪಾತ್ರ ದಿನೇದಿನೇ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಹಾಗಾಗಿಯೇ ಆಪ್‌ಗಳ ಲೋಕದಲ್ಲಿ ಸೋಶಿಯಲ್ ನೆಟ್‌ವರ್ಕ್ (ಶೇ.86) ಮೆಸೇಜಿಂಗ್ (ಶೇ.78) , ಇ-ಕಾಮರ್ಸ್ (ಶೇ.76), ಮೊಬೈಲ್ ಬ್ಯಾಂಕಿಂಗ್ (ಶೇ.67) ಹಾಗೂ ಮೊಬೈಲ್ ವ್ಯಾಲೆಟ್‌ಗಳು (ಶೇ. 62) ಅತ್ಯಂತ ಜನಪ್ರಿಯವಾಗುತ್ತಿವೆ.!!

ಶೇ.68ರಷ್ಟು ಜನರಿಗೆ ಆನ್‌ಲೈನ್ ಶಾಪಿಂಗ್‌ ಭೀತಿ!!

ಶೇ.68ರಷ್ಟು ಜನರಿಗೆ ಆನ್‌ಲೈನ್ ಶಾಪಿಂಗ್‌ ಭೀತಿ!!

ಶೇ 68ರಷ್ಟು ಜನರು ಆನ್‌ಲೈನ್ ಶಾಪಿಂಗ್‌ನ ಸುರಕ್ಷತಾ ಭೀತಿಗಳ ಬಗ್ಗೆ ಚಿಂತಿಸುತ್ತಾರೆ, ಹಾಗೂ ಶೇ. 42ರಷ್ಟು ಬಳಕೆದಾರರು ಆನ್‌ಲೈನ್ ಶಾಪಿಂಗ್‌ಗಾಗಿ ತಮ್ಮ ಸಾಧನಗಳನ್ನು ಬಳಸಿದ್ದರಿಂದ ಸುರಕ್ಷತಾ ಸಮಸ್ಯೆ, ಅಪಾಯ ಅಥವಾ ತೊಂದರೆಯನ್ನು ಎದುರಿಸಿರುವುದಾಗಿ ಹೇಳುತ್ತಾರೆ. ಹೀಗಿದ್ದರೂ, ಕೇವಲ 26 ಪ್ರತಿಶತ ಆನ್‌ಲೈನ್ ಶಾಪಿಂಗ್ ಗ್ರಾಹಕರು ಮಾತ್ರ ಅಪಾಯ ಹೆಚ್ಚುತ್ತಿದೆ ಎಂದು ಭಾವಿಸುತ್ತಾರೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ದತ್ತಾಂಶ ಸಂಗ್ರಹಿಸುವ ಸಾಧ್ಯತೆ ಒಪ್ಪುತ್ತಾರೆ.!!

ದತ್ತಾಂಶ ಸಂಗ್ರಹಿಸುವ ಸಾಧ್ಯತೆ ಒಪ್ಪುತ್ತಾರೆ.!!

ಪ್ರತಿ ಮೂರರಲ್ಲಿ ಒಬ್ಬ ಗ್ರಾಹಕರು ತಾವು ಬಳಸುವ ಆಪ್‌ಗಳು ತಮ್ಮ ಬಗ್ಗೆ ದತ್ತಾಂಶ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಒಪ್ಪುತ್ತಾರೆ. ಆದಾಗ್ಯೂ ಐದರಲ್ಲೊಬ್ಬ ಗ್ರಾಹಕರು ಯಾವುದೇ ಆಪ್ ಅನ್ನು ವಿಶ್ವಾಸಾರ್ಹತೆಯ ಬಗ್ಗೆ ಯೋಚಿಸದೆ ಡೌನ್‌ಲೋಡ್ ಮಾಡುತ್ತೇವೆ ಎಂದು ಒಪ್ಪಿಕೊಳ್ಳುತ್ತಾರೆ.ವಿಪರ್ಯಾಸವೆಂದರೆ ಶೇ. 50ರಷ್ಟು ಭಾರೀ ಸಂಖ್ಯೆಯ ಗ್ರಾಹಕರು ಆನ್‌ಲೈನ್ ಅಪಾಯದ ಸಾಧ್ಯತೆ ಕಡಿಮೆಯಾಗುತ್ತಿದೆ ಎಂದು ನಂಬುತ್ತಾರೆ.

ಅನುಮತಿ ನೀಡಿದ್ದೇ ತಿಳಿದಿರುವುದಿಲ್ಲ.!!

ಅನುಮತಿ ನೀಡಿದ್ದೇ ತಿಳಿದಿರುವುದಿಲ್ಲ.!!

ಭಾರತದಲ್ಲಿ ಶೇ. 36ರಷ್ಟು ಗ್ರಾಹಕರು ಆಪ್ ಕೇಳಿದ ಅನುಮತಿಗಳಷ್ಟನ್ನೂ ನೀಡುತ್ತಾರೆ. ಇಲ್ಲವೇ ಯಾವ ಅನುಮತಿಗಳನ್ನು ನೀಡಿದ್ದೇವೆ ಎನ್ನುವ ಬಗ್ಗೆ ಅವರೇ ಪೂರ್ತಿಯಾಗಿ ತಿಳಿದುಕೊಂಡಿರುವುದಿಲ್ಲ. ಆಪ್‌ಗಳ ಮನವಿಯನ್ನು ದುಷ್ಪರಿಣಾಮದ ಸಾಧ್ಯತೆಗಳ ಆಧಾರದ ಮೇಲೆ ತಿರಸ್ಕರಿಸುವವರು ಕೇವಲ ಶೇಕಡಾ ಎಂಟರಷ್ಟು ಬಳಕೆದಾರರು ಮಾತ್ರ.

20ಕ್ಕೂ ಹೆಚ್ಚು ಆಪ್‌ಗಳಿರುತ್ತವೆ.!!

20ಕ್ಕೂ ಹೆಚ್ಚು ಆಪ್‌ಗಳಿರುತ್ತವೆ.!!

ನಾರ್ಟನ್ ಮೊಬೈಲ್ ಸರ್ವೆಯ ಫಲಿತಾಂಶಗಳ ಪ್ರಕಾರ, ಹೆಚ್ಚೂ ಕಡಿಮೆ ಶೇ. 50ರಷ್ಟು ಭಾರತೀಯರ ಸ್ಮಾರ್ಟ್‌ಫೋನುಗಳಲ್ಲಿ 20ಕ್ಕೂ ಹೆಚ್ಚು ಆಪ್‌ಗಳಿರುತ್ತವೆ. ಇದರಲ್ಲಿ ಉಚಿತ ಆಪ್‌ಗಳ ಸಂಖ್ಯೆಯೇ ಹೆಚ್ಚಿರುತ್ತದೆ ಎಂದು ವರದಿ ಹೇಳಿದೆ.!!

ಕಾಂಟ್ಯಾಕ್ಟ್ಸ್ ಮತ್ತು ಪ್ರಮೋಶನಲ್ ಹಕ್ಕು.!!

ಕಾಂಟ್ಯಾಕ್ಟ್ಸ್ ಮತ್ತು ಪ್ರಮೋಶನಲ್ ಹಕ್ಕು.!!

ಹೆಚ್ಚು ಕಡಿಮೆ ಇಬ್ಬರಲ್ಲಿ ಒಬ್ಬ ಭಾರತೀಯರು ಕಾಂಟ್ಯಾಕ್ಟ್ಸ್ ಮತ್ತು ಮೊಬೈಲ್ ಡೇಟಾ ಬಳಸುವ ಅನುಮತಿ ನೀಡಿದ್ದಾರೆ. ಶೇ. 50 ಬಳಕೆದಾರರು ಪ್ರಚಾರದ (ಪ್ರಮೋಶನಲ್) ಸಂದೇಶ/ಇಮೇಲ್ ಕಳಿಸಲು ಅನುಮತಿ ನೀಡಿದ್ದಾರೆ.

Best Mobiles in India

English summary
Avoid these 7 Mistakes to Save your Mobile. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X