ನಮೋ ಆಪ್‌ನಲ್ಲಿ ಮಾಹಿತಿಗೆ ಕನ್ನ ಹಾಕಲಾಗಿದೆಯೇ?..ಸರ್ಕಾರ ಹೇಳಿದ್ದೇನು ಗೊತ್ತಾ?
ಆಪ್‌ನಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಆಪ್ ಕೇಳುವುದೇ ಇಲ್ಲ. ಇನ್ನು ಆಪ್‌ನಲ್ಲಿ ಬಳಕೆದಾರರನ್ನು ಅತಿಥಿ ಎಂದು ಪರಿಗಣಿಸಲಾಗುವುದರಿಂದ ನಿರ್ದಿಷ್ಟ ಅನುಮತಿಗಳು ಮಾತ್ರ ಬೇಕಾಗುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.!!
ಹ್ಯಾಕರ್‌ವೊಬ್ಬರು ಆರೋಪ ಮಾಡಿದಂತೆ ನರೇಂದ್ರ ಮೋದಿ ಅವರ ನಮೋ ಆಪ್‌ನಲ್ಲಿ ಸಂಗ್ರಹವಾಗಿರುವ ಬಳಕೆದಾರರ ಹೆಸರು, ಇ-ಮೇಲ್ ವಿಳಾಸ, ಫೋಟೊ ಮುಂತಾದ ಮಾಹಿತಿಯನ್ನು ಅವರ ಅನುಮತಿ ಇಲ್ಲದೆಯೇ ಬೇರೊಂದು ಸಂಸ್ಥೆಗೆ ನೀಡಿ ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.!!
ನಮೋ ಆಪ್ ಬಗ್ಗೆ ಫ್ರೆಂಚ್ ಟ್ವಿಟರ್ ಬಳಕೆದಾರ ಬಹಿರಂಗಪಡಿಸಿರುವ ಮಾಹಿತಿ ಅವರೇ ತಮ್ಮ ಫೋನ್‌ನಲ್ಲಿ ಸಲ್ಲಿಸಿದ ಮಾಹಿತಿಯಾಗಿದೆ ಅಷ್ಟೆ. ಹಾಗಾಗಿ ಇದು ಸೋರಿಕೆಯಾಗುವುದಿಲ್ಲ. ಟ್ವಿಟರ್ ಬಳಕೆದಾರ ನೀಡಿದ ಮಾಹಿತಿ ಮಾತ್ರ ಅವರಿಗೆ ದೊರೆಯಲಿದ್ದು, ಬೇರೆ ಮಾಹಿತಿ ಅವರಿಗೆ ಯಾವುದೇ ಕಾರಣಕ್ಕೂ ದೊರಕುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.!!

ನಮೋ ಆಪ್ ಮೂಲಕ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಸುದ್ದಿಗಳು ಸುಳ್ಳು. ನಮೋ ಆಪ್ ಬಹಳ ವಿಶಿಷ್ಟವಾಗಿದ್ದು, ಆಪ್‌ನಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಆಪ್ ಕೇಳುವುದೇ ಇಲ್ಲ. ಇನ್ನು ಆಪ್‌ನಲ್ಲಿ ಬಳಕೆದಾರರನ್ನು ಅತಿಥಿ ಎಂದು ಪರಿಗಣಿಸಲಾಗುವುದರಿಂದ ನಿರ್ದಿಷ್ಟ ಅನುಮತಿಗಳು ಮಾತ್ರ ಬೇಕಾಗುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.!!
ಬಳಕೆದಾರರು ತಮ್ಮ ಇ-ಮೇಲ್ ವಿಳಾಸ ಮತ್ತು ಹುಟ್ಟಿದ ದಿನಾಂಕ ಕೊಟ್ಟರೆ ಅಂಥವರಿಗೆ ಪ್ರಧಾನಿಯಿಂದ ಹುಟ್ಟುಹಬ್ಬದ ಶುಭಾಶಯ ಬರುವಂತಹ ಹಾಗೂ ಸೆಲ್ಫಿ ಅಭಿಯಾನದಲ್ಲಿ ಭಾಗವಹಿಸುವವರ ಫೋಟೊ ಗ್ಯಾಲರಿಗೆ ಪ್ರವೇಶಿಸಲು ಅನುಮತಿ ನೀಡುವಂತಹ ವ್ಯವಸ್ಥೆ ಮಾತ್ರ ಇದೆ. ಅನುಮತಿಗೆ ಯಾವುದೇ ನಿಬಂಧನೆ ಇಲ್ಲ ಎಂದು ಸರ್ಕಾರ ತಿಳಿಸಿದೆ.!!

ಪ್ರಧಾನಿಗೆ ಸಂಬಂಧಿಸಿ ಎಲ್ಲ ಮಾಹಿತಿಯೂ ಈ ನಮೋ ಆಪ್‌ನಲ್ಲಿ ಲಭ್ಯವಿದ್ದು, ಅವರ ಕಾರ್ಯಗಳ ಬಗ್ಗೆ ಆಪ್‌ನಲ್ಲಿ ಮಾಹಿತಿ ನೀಡಲಾಗಿದೆ. ಜನರ ಜತೆ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಆಪ್ ಬಳಸುತ್ತಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಜನರ ಪ್ರತಿಕ್ರಿಯೆಯನ್ನು ಆಪ್ ಮೂಲಕವೇ ಅವರು ಪಡೆಯುತ್ತಾರೆ.!!

ಓದಿರಿ: ಮೊಬೈಲ್ ಜಗತ್ತನೇ ಹೆದರಿಸಿರುವ 'ಶಿಯೋಮಿ' ಸ್ಮಾರ್ಟ್‌ಫೋನ್ ನಾಳೆ ಬಿಡುಗಡೆ!!


Click it and Unblock the Notifications




