2G-3G-4G ಮಾತ್ರವಲ್ಲ..! ಇದರ ಮಧ್ಯ ಇನ್ನೂ ಇದೇ...!
ದೇಶದಲ್ಲಿ ವೇಗದ ನೆಟ್ ವರ್ಕ್ ಸೇವೆಯೂ ದೊರೆಯುತ್ತಿದ್ದು, 4ಜಿ ಬಳಕೆಯಲ್ಲಿ ಭಾರತವೇ ಮುಂದಿದೆ. ನೆಟ್ ವರ್ಕ್ ಜಾಲದಲ್ಲಿ ಹಿಂದಿದ್ದರೂ ಸಹ, ಡೇಟಾ ಬಳಕೆಯ ಪ್ರಮಾಣದಲ್ಲಿ ಮುಂದಿದೆ ಎನ್ನಲಾಗಿದೆ. ಇದಲ್ಲದೇ ದೇಶದಲ್ಲಿ ವೇಗದ ನೆಟ್ ವರ್ಕ್ ಸೇವೆಯ ಬೇಡಿಕೆಯೂ ಹೆಚ್ಚಾಗಿದ್ದು, ಹಿನ್ನಲೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ವೇಗದ ಡೇಟಾ ಸೇವೆಯನ್ನು ನೀಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ನೀವು ಈಗಾಗಲೇ ಕೇಳಿರುವ 2G, 3G, 4G ನೆಟ್ ವರ್ಕ್ ಗಳೆಂದರೇನು..? ಅವುಗಳಿಗೆ ಇರುವ ವ್ಯತ್ಯಾಸಗಾಳವುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಈ ನೆಟ್ ವರ್ಕ್ ಗಳಲ್ಲಿ ಯಾವ ಸೇವೆಯನ್ನು ಪಡೆಯಬಹುದಾಗಿತ್ತು ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.
2G ಡೇಟಾ:
1991ರಲ್ಲಿ ದೇಶದಲ್ಲಿ 2ಜಿ ಸೇವೆಯನ್ನು ಆರಂಭಿಸಲಾಯಿತು. ಇದು ಡಿಜಿಟಲ್ ಮಾದರಿಯಲ್ಲಿ ಸಂಕೇತಗಳನ್ನು ಪರಿವರ್ತಿಸಲು ಶಕ್ತವಾಗಿತ್ತು. ಇದು ಮೊದಲ ಬಾರಿಗೆ ಫೋನ್ ಕಾಲ್ ಮಾಡುವುದಲ್ಲದೇ ಮೊದಲ ಬಾರಿಗೆ ಡೇಟಾ ಸೇವೆಯನ್ನು ನೀಡಲು ಶಕ್ತವಾಗಿತ್ತು.
2.5G ಡೇಟಾ:
ಇದು 2ಜಿ ಸೇವೆಯ ನಂತರದ ಸ್ಟೆಪ್ ಆಗಿದ್ದು, ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ಹೊಸ ಸೇವೆಗಳು ಲಭ್ಯವಾಗಿತ್ತು. ಇದು 3ಜಿ ಸೇವೆಯ ಕೆಳಗಿನ ಹಂತವಾಗಿದ್ದು, ಇದದರಲ್ಲಿ 30-40 KBPS ವೇಗದ ಇಂಟರ್ನೆಟ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿತ್ತು.
ಇದರಲ್ಲಿ GPRS ಮತ್ತು EDGE ಎಂಬ ಎರಡು ಸೇವೆಗಳನ್ನು ನೀಡಲಾಯಿತು. ಇದರಲ್ಲಿ EDGE 100-120 Kbps ವೇಗದ ಸೇವೆಯೂ ಬಳಕೆದಾರರಿಗೆ ಲಭ್ಯವಿತ್ತು.
3G:
ಇದು 2004 ಮತ್ತು 2007ರ ನಡುವಿನ ಅವಧಿಯಲ್ಲಿ ಪ್ರಚಲಿತಕ್ಕೆ ಬಂದಿತು. ಇದು 2 Mbps ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿತ್ತು. ಅಲ್ಲದೇ ವೀಡಿಯೊ ಕಾಲ್ ಮಾಡುವಂತಹ ಆಯ್ಕೆಯನ್ನು 3Gಯಲ್ಲಿ ಪಡೆಯಬಹುದಾಗಿತ್ತು.
H:
ಇದು 3ಜಿ ನಂತರದ ಸೇವೆಯಾಗಿದ್ದು, ಇದು 3ಜಿ ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿತ್ತು. ಅಲ್ಲದೇ ಬಳಕೆದಾರರಿಗೆ ಹೆಚ್ಚಿನ ವೇಗದ ಡೇಟಾವನ್ನು ನೀಡಿತ್ತು.
H+:
ಇದು 4ಜಿ ಎಂದು ನಾಮಕರಣವಾಗ ಬೇಕಿದ್ದ ನೆಟ್ ವರ್ಕ್ ಆದರೂ ಸಹ ಅಂತರಾಷ್ಟ್ರಿಯಾ ಗುಣಮಟ್ಟವನ್ನು ತಲುಪಲು ಸಾಧ್ಯವಾಗಿರದ ಕಾರಣದಿಂದಾಗಿ H+ ಎಂದು ನಾಮಕರಣಗೊಂಡಿತ್ತು,
4G:
ಇದು ಸದ್ಯ ಬಳಕೆಯಲ್ಲಿರುವ ನೆಟ್ ವರ್ಕ್ ಆಗಿದ್ದು, ವೇಗದ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದ್ದು, 15Mbpsವೇಗದಲ್ಲಿ ಡೇಟಾವನ್ನು ಬಳಕೆದಾರಿಗೆ ನೀಡಲಿದ್ದು, ಇದರಲ್ಲಿ ಬೇರೆ ಬೇರ ಮಾದರಿಯ ಆಯ್ಕೆಗಳು ಬಳಕೆದಾರಿಗೆ ದೊರೆಯಲಿದೆ.
a) LTE:
ಇದು 15Mbps ವೇಗದ ಡೇಟಾವನ್ನು ಬಳಕೆದಾರರಿಗೆ ನೀಡಲಿದ್ದು, ಇದು ಹೆಚ್ಚು ವೇಗದ ಸೇವೆಯನ್ನು ಬಳಕೆದಾರರಿಗೆ ನೀಡಲಿದೆ. ಹೆಚ್ಚಿನ ಕಂಪನಿಗಳು ಇದೇ ಮಾದರಿಯ ಸೇವೆಯನ್ನು ನೀಡುತ್ತಿದೆ.
B) WiMax:
ಇದು 1Gbps ವೇಗದಲ್ಲಿ ಡೇಟಾ ಸೇವೆಯನ್ನು ಸೇವೆಯನ್ನು ನೀಡಲಿದ್ದು, ಹೋಮ್ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಶಕ್ತವಾಗಿದೆ. ಬಳಕೆದಾರರಿಗೆ ವೇಗದ ಸೇವೆಯನ್ನು ನೀಡಲಿದೆ. 5G ವೇಗದಲ್ಲಿ ನೀಡುವ ಹೊಸ ಸೇವೆಗೆ ಅಡಿಪಾಯ ಹಾಕಲಿದೆ.


Click it and Unblock the Notifications




