LTE Vs VoLTE: ಯಾವುದು ಉತ್ತಮ ತಂತ್ರಜ್ಞಾನ?

By Tejaswini P G
|

ತಮ್ಮ ಮೊಬೈಲ್ ನೆಟ್ವರ್ಕ್ ನ ಕಾರ್ಯಕ್ಷಮತೆ ಕುರಿತು ಜಗತ್ತಿನ ಉದ್ದಗಲಕ್ಕೂ ಜನರು ಯಾವಾಗ ಸಮಾಧಾನ ವ್ಯಕ್ತಪಡಿಸುತ್ತಾರೋ, ಅಂದು ಆ ಕ್ಷೇತ್ರದ ಪ್ರಗತಿ ನಿಲ್ಲುತ್ತದೆ. ಆದರೆ ಅದು ಎಂದಿಗೂ ಹಾಗಾಗುವುದಿಲ್ಲ. ಆ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಪ್ರತಿದಿನವೂ ಹೊಸ ಹೊಸ ಸೋಶೋಧನೆಗಳು ನಡೆಯುತ್ತಿದ್ದು LTE ನೆಟ್ವರ್ಕ್, VoLTE ಸರ್ವೀಸ್ ಮೊದಲಾದ ಆವಿಷ್ಕಾರಗಳು ಸಾಧ್ಯವಾಗಿದೆ.

ಆದರೆ ಪ್ರತಿ ದಿನವೂ LTE ಮತ್ತು VoLTE ಗಳ ಕುರಿತು ಹಲವು ಮಾಹಿತಿಗಳು ಬರುವದರ ಜೊತೆಗೆ ಅನೇಕಾನೇಕ ಜಾರ್ಗನ್ ಗಳ ಬಳಕೆಯಿಂದಾಗಿ ಜನ ಸಾಮನ್ಯರಿಗೆ ಇವುಗಳ ಕುರಿತು ಅರಿವು ಹೆಚ್ಚುವುದಕ್ಕಿಂತ ಗೊಂದಲವೇ ಜಾಸ್ತಿಯಾಗಿದೆ. ಜನಸಾಮನ್ಯರಿಗೆ LTE ಮತ್ತು VoLTE ಗಳ ಕುರಿತು ಸವಿಸ್ತಾರ ಮಾಹಿತಿ ನೀಡುವ ಸಲುವಾಗಿ , ಅವುಗಳ ಸಾಮರ್ಥ್ಯ ಮತ್ತು ಕೊರತೆಗಳ ಬಗ್ಗೆ ತಿಳಿಸುವ ಸಲುವಾಗಿ ನಾವು ಈ ಲೇಖನವನ್ನು ಸಿದ್ಧಪಡಿಸಿದ್ದೇವೆ.

LTE Vs VoLTE: ಯಾವುದು ಉತ್ತಮ ತಂತ್ರಜ್ಞಾನ?

LTE ಮತ್ತು VoLTE ಗಳ ಬಗ್ಗೆ ತಿಳಿಯುವ ಮೊದಲು ಮೊಬೈಲ್ ನೆಟ್ವರ್ಕ್ಗಳ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಫೋರ್ತ್ ಜನರೇಶನ್ ಅಥವಾ 4G ITU(ಇಂಟರ್ನ್ಯಾನಶನಲ್ ಟೆಲೆಕಮ್ಯುನಿಕೇಶನ್ ಯುನಿಟ್) ತಯಾರಿಸಿರುವ ಪ್ರಮಾಣಿತ ಪ್ರೋಟೋಕಾಲ್ ಗಳ ಒಂದು ಸೆಟ್ ಆಗಿದೆ. ಇದರ ಅನುಸಾರ ಮೊಬೈಲ್ ನೆಟ್ವರ್ಕ್ ಪ್ರೊವೈಡರ್ಗಳು ತಮ್ಮ ಬಳಕೆದಾರರಿಗೆ ಚಲಿಸುತ್ತಿರುವಾಗ ಕನಿಷ್ಠ 100Mbps ಡೌನ್ಲೋಡ್ ಸ್ಪೀಡ್ ಮತ್ತು ಒಂದೆಡೆ ಸ್ಥಾಯಿಯಾಗಿರುವಾಗ 1Gbps ಡೌನ್ಲೋಡ್ ಸ್ಪೀಡ್ ನೀಡಬೇಕು.

1.LTE

LTE ಅಂದರೆ ಲಾಂಗ್-ಟರ್ಮ್ ಇವೊಲ್ಯೂಶನ್ ಎಂದು ಅರ್ಥ. ಇದು ಭಾರತದಲ್ಲಿ ಸಾಕಷ್ಟು ಚಾಲ್ತಿಯಲ್ಲಿದ್ದು, ಕಳೆದ ವರ್ಷಗಳ CDMA ಮತ್ತು GSM ಸ್ಟ್ಯಾಂಡರ್ಡ್ಗಳಿಗಿಂತ ಇದು ಒಂದು ಹೆಜ್ಜೆ ಮುಂದಿದೆ. ಡೇಟಾ ವರ್ಗಾವಣೆಗೆ LTE ವೇಗವಾದ ಮತ್ತು ಹೆಚ್ಚು ಚಾಲ್ತಿಯಲ್ಲಿರುವ ಪ್ಲ್ಯಾಟ್ಫಾರ್ಮ್ ಆಗಿದೆ. LTE ಅಂದಾಜು 100Mbps ಡೌನ್ಲೋಡ್ ಸ್ಪೀಡ್ ಮತ್ತು 50Mbps ಅಪ್ಲೋಡ್ ಸ್ಪೀಡ್ ನೀಡುವ ಸಾಮರ್ಥ್ಯ ಹೊಂದಿದೆ.

2G ಮತ್ತು 3G ನೆಟ್ವರ್ಕ್ನಲ್ಲಿ ಬಳಕೆದಾರರು ಕರೆ ಮಾಡುವುದು ಮತ್ತು ಇಂಟರ್ನೆಟ್ ಡೇಟಾ ದ ಬಳಕೆಯನ್ನು ಏಕಕಾಲಕ್ಕೆ ಮಾಡುವುದು ಸಾಧ್ಯವಿಲ್ಲ. ಫೋನ್ ನಿಂದ ಕರೆ ಮಾಡುವಾಗ, ಆ ಫೋನ್ ತನ್ನಿಂತಾನೆ ಮೊದಲಿಗೆ ಡೇಟಾ ಸರ್ವೀಸ್ ಅನ್ನು ನಿಲ್ಲಿಸುತ್ತದೆ. ಆದರೆ LTE ನೆಟ್ವರ್ಕ್ನಲ್ಲಿ ಹೀಗಾಗುವುದಿಲ್ಲ. ಇದರಲ್ಲಿ ಡೇಟಾ ಕನೆಕ್ಶನ್ ತಪ್ಪಿಸದೆಯೇ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. ಆದರೆ ಹೀಗೆ ಮಾಡುವಾಗ ಕರೆಯ ಗುಣಮಟ್ಟ ಸಾಕಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಉತ್ತಮ ಗುಣಮಟ್ಟದ ವಾಯ್ಸ್ ಕರೆ ಬೇಕಾಗಿದ್ದಲ್ಲಿ ಡೇಟಾ ಸರ್ವೀಸ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ.

2. VoLTE

ಗ್ರಾಹಕರಿಗೆ ನೆಟ್ವರ್ಕ್ ಬದಲಾಯಿಸದೆಯೇ ಫೋನ್ ಕರೆಗಳನ್ನು ಮಾಡಲು VoLTE ಫೀಚರ್ ಅನವು ಮಾಡಿಕೊಡುತ್ತದೆ. VoLTE ಎಂದರೆ ವಾಯ್ಸ್ ಓವರ್ LTE. ಸಾಂಪ್ರದಾಯಿಕ ಸರ್ಕ್ಯೂಟ್ ಸ್ವಿಚಿಂಗ್ ನ ಬದಲಿಗೆ ಈ ತಂತ್ರಜ್ಞಾನದಲ್ಲಿ ಡೇಟಾ ಪ್ಯಾಕೆಟ್ಗಳ ಮೂಲಕ ವಾಯ್ಸ್ ಅನ್ನು ರವಾನಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಫೋನ್ ಕರೆಗಳು ಮತ್ತು ಇಂಟರ್ನೆಟ್ ಬಳಕೆಯನ್ನು ಏಕಕಾಲದಲ್ಲಿ ಮಾಡಬಹುದಾಗಿದೆ. ಅಲ್ಲದೆ ಇದರಲ್ಲಿ ಫೋನ್ ಕರೆಗಳ ಗುಣಮಟ್ಟವೂ ಉತ್ತಮವಾಗಿರುತ್ತದೆ.

ನೀವು LTE ನೆಟ್ವರ್ಕ್ಗಳ ಮೂಲಕ ತುಂಬ ಕ್ಷಿಪ್ರವಾಗಿ ಮೂವಿ ಡೌನ್ಲೋಡ್ ಮಾಡಬಹುದು ಅಥವಾ ವೆಬ್ ಪೇಜ್ಗಳನ್ನು ಬ್ರೌಸ್ ಮಾಡಬಹುದು. VoLTE ಫೀಚರ್ ಸಕ್ರಿಯವಾಗಿರುವಾಗ ಇಂಟರ್ನೆಟ್ ಕನೆಕ್ಶನ್ಗೆ ಯಾವದೇ ಧಕ್ಕೆಯಾಗದಂತೆ ಬಳಕೆದಾರರು ಫೋನ್ ಕರೆಗಳನ್ನು ಮಾಡಬಹುದಾಗಿದೆ. 2G ಅಥವಾ 3G ಕನೆಕ್ಶನ್ ಮೂಲಕ ಈ ರೀತಿ ಕರೆ ಮಾಡುವುದು ಸಾಧ್ಯವಿಲ್ಲ.

VoLTE ಫೀಚರ್ ಸಕ್ರಿಯವಾಗಿರುವ ಫೋನ್ ಗೆ ಮತ್ತೊಂದು ಫೋನ್ ನಿಂದ VoLTE ಫೀಚರ್ ಮೂಲಕ ಕರೆ ಮಾಡಲು 1 ಸೆಕೆಂಡ್ ಗಿಂತಲೂ ಕಡಿಮೆ ಸಮಯ ಬೇಕಾಗತ್ತದೆ. ಸಾಂಪ್ರದಾಯಿಕ ನೆಟ್ವರ್ಕ್ಗಳಲ್ಲಿ ಕರೆ ಮಾಡಲು 7 ಸೆಕೆಂಡ್ಗಳು ಬೇಕಾದರೆ 3G ಮತ್ತು LTE ನೆಟ್ವರ್ಕ್ಗಳ ಮಧ್ಯೆ ಕರೆ ಮಾಡಲು 4 ಸೆಕೆಂಡ್ ಗಳು ಬೇಕಾಗುತ್ತದೆ.

Best Mobiles in India

English summary
The features and capabilities of LTE and VoLTE are discussed and compared.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X