ಇದೊಂದು 'ಆಪ್' ನಿಮ್ಮ ಫೋನಿನಲ್ಲಿದ್ರೆ 'ಟ್ರಾಫಿಕ್ ಪೊಲೀಸರ' ಆಟ ನಡೆಯಲ್ಲ!

|

ಕೇಂದ್ರ ಸರ್ಕಾರ ರೂಪಿಸಿರುವ ಅಧಿಕೃತ 'ಡಿಜಿ ಲಾಕರ್' ಅಥವಾ 'ಎಂ ಪರಿವಾಹನ್' ಆಪ್‌ಗಳಲ್ಲಿ ಯಾವುದೇ ಒಂದು ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಯಾವ ಟ್ರಾಫಿಕ್ ಪೊಲೀಸರು ಕೂಡ ನಿಮಗೆ ಕಿರಿಕಿರಿ ನೀಡಲು ಸಾಧ್ಯವೇ ಇಲ್ಲ.! ಏಕೆಂದರೆ, ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದಂತೆ, ನೋಂದಣಿ ಪ್ರಮಾಣ ಪತ್ರ (ಆರ್ಸಿ), ಚಾಲನಾ ಪರವಾನಗಿ (ಡಿಎಲ್), ವಿಮೆ, ಫಿಟ್ನೆಸ್ ಪ್ರಮಾಣಪತ್ರ (ಎಫ್ಸಿ), ಪರ್ವಿುಟ್, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್(ಎಲೆಕ್ಟ್ರಾನಿಕ್) ಮಾದರಿಯಲ್ಲಿ ಸಲ್ಲಿಸಬಹುದಾಗಿದೆ.

ಮಾರ್ಗಸೂಚಿ ರೂಪಿಸಿದೆ.

ಸುತ್ತೋಲೆ ಮೂಲಕ ಸ್ಪಷ್ಟ ಸೂಚನೆ ರವಾನಿಸಿರುವ ಸಚಿವಾಲಯ, ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಹಲವು ಮಾರ್ಗಸೂಚಿ ರೂಪಿಸಿದೆ. ಈ ನಿಯಮವನ್ನು ಪಾಲಿಸಲು ಆಯಾ ರಾಜ್ಯದ ಸಾರಿಗೆ ಮತ್ತು ಸಂಚಾರ ಪೊಲೀಸ್ ಪ್ರವರ್ತನ (ಎನ್ಫೋರ್ಸ್ವೆುಂಟ್) ವಿಭಾಗಕ್ಕೆ ಸೂಚಿಸಿದೆ. ಇದರಿಂದ ಸಾರ್ವಜನಿಕರು ಮೊಬೈಲ್‌ನಲ್ಲೇ ನೋಂದಣಿ ಪ್ರಮಾಣ ಪತ್ರ (ಆರ್ಸಿ), ಚಾಲನಾ ಪರವಾನಗಿ (ಡಿಎಲ್), ವಿಮೆ, ಫಿಟ್ನೆಸ್ ಪ್ರಮಾಣಪತ್ರ (ಎಫ್ಸಿ), ಪರ್ವಿುಟ್, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬಹುದಾಗಿದೆ.

ದಾಖಲೆಗಳು ಅಧಿಕೃತ

ಡಿಜಿಲಾಕರ್ ಮತ್ತು ಸಾರಿಗೆ ಸಚಿವಾಲಯದ ಎಂಪರಿವಾಹನ್ ಎಂಬ ಎರಡು ಆಪ್‌ಗಳಲ್ಲಿ ಡಿಜಿಟಲ್ ದಾಖಲೆಗಳು ಅಧಿಕೃತ ಎಂದು ಸರ್ಕಾರ ತಿಳಿಸಿದೆ. ವಾಹನ ಚಾಲಕರು ಫೋನಿನಲ್ಲಿ ಯಾವುದಾದರೂ ಒಂದು ಆಪ್ ಡೌನ್ಲೋಡ್ ಮಾಡಿಕೊಂಡು ಎಲ್ಲ ಡಿಜಿಟಲ್ ದಾಖಲೆ ಪಡೆಯಬಹುದಾಗಿದೆ. ಕೋಟಿ ಸಂಖ್ಯೆಯಲ್ಲಿ ವಾಹನಗಳು ಮತ್ತು ವಾಹನ ಸವಾರರು ಈ ಡಿಜಿ ಲಾಕರ್ ಆಪ್ ಲಾಭವನ್ನು ಪಡೆಯಬಹುದಾಗಿದ್ದು, ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು ಅದರ ಸಾಫ್ಟ್ ಕಾಪಿಯನ್ನು ತೋರಿಸಬಹುದು. ಹಾಗಾದರೆ, ಏನಿದು 'ಡಿಜಿ ಲಾಕರ್'? ಮತ್ತು ಇದನ್ನು ಬಳಸುವುದು ಹೇಗೆ? ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಡಿಜಿಲಾಕರ್?

'ಡಿಜಿ ಲಾಕರ್' ಎಂಬುದು ದಾಖಲೆಗಳು ಮತ್ತು ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ಸರ್ಕಾರದ ಅಧಿಕೃತ ವ್ಯವಸ್ಥೆಯಾಗಿದೆ. ಇದಕ್ಕಾಗಿ 'ಡಿಜಿ ಲಾಕರ್' ಎಂಬ ಆಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸರ್ಕಾರದಿಂದ ಒದಗಿಸಿರುವ ಉಚಿತ ಸೇವೆಯಾಗಿದ್ದು, ಈ ಆಪ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯತೆ ಇಲ್ಲ. ಸ್ಮಾರ್ಟ್‌ಫೋನ್‌ ಹೊಂದಿರುವ ಯಾವ ಭಾರತೀಯ ವ್ಯಕ್ತಿಯಾದರೂ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದು

ಇಲ್ಲಿ ಎಲ್ಲವೂ ಡಿಜಿಟಲ್

'ಡಿಜಿ ಲಾಕರ್' ಆಪ್‌ನಲ್ಲಿ ನಿಮ್ಮ ವಾಹನದ ಮತ್ತು ಚಾಲನೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಅಂದರೆ, ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಈ 'ಡಿಜಿ ಲಾಕರ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ವಾಹನದ ಮತ್ತು ಚಾಲನೆಯ ದಾಖಲೆಗಳನ್ನು ಅದರಲ್ಲಿ ಸೇವ್ ಮಾಡಿಕೊಳ್ಳಬಹುದು. ಇದರಿಂದ ವಾಹನ ಸವಾರರು ಯಾವುದೇ ಓರಿಜಿನಲ್ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ. ಇವುಗಳನ್ನು ಸಂಚಾರಿ ಪೊಲೀಸರು ಅಧಿಕೃತ ದಾಖಲೆಗಳೆಂದು ಪರಿಗಣಿಸುತ್ತಾರೆ.

ಸಂಚಾರ ಸುಗಮ!

ವಾಹನ ಸವಾರರು ಈ 'ಡಿಜಿ ಲಾಕರ್' ವ್ಯವಸ್ಥೆಯ ಲಾಭವನ್ನು ಹೆಚ್ಚಾಗಿ ಪಡೆಯಬಹುದಾಗಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು, ದಾಖಲೆಗಳ ಸಾಫ್ಟ್ ಕಾಪಿಯನ್ನು (ಡಿಜಿಟಲ್ ರೂಪ) ತೋರಿಸುವ ಮೂಲಕ ಈ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಸಂಚಾರಿ ಪೊಲೀಸರು ಆಪ್‌ನಲ್ಲಿರುವ ದಾಖಲೆಗಳನ್ನು ಪರೀಕ್ಷಿಸಿದ ನಂತರ ಸಂಚಾರವನ್ನು ಸುಗಮಗೊಳಿಸುತ್ತಾರೆ. ನಕಲಿ ದಾಖಲೆಗಳನ್ನು ತೋರಿಸಿದರೆ ಕ್ಷಣಾರ್ಧದಲ್ಲಿ ಕಂಡುಹಿಡಿಯುತ್ತಾರೆ.

ಆಪ್‌ ಡೌನ್‌ಲೋಡ್ ಮಾಡಿ

ಈ 'ಡಿಜಿ ಲಾಕರ್' ಆಪ್‌ನ ಸೇವೆಯನ್ನು ಬಳಸಲು ನೀವು ಪ್ಲೇಸ್ಟೋರಿನಿಂದ 'ಡಿಜಿ ಲಾಕರ್' ಆಪ್ ಅನ್ನು ಡೌನ್‌ಲೋಡ್ ಮಾಡಿ ಸ್ಮಾರ್ಟ್‌ಫೋನಿನಲ್ಲಿ ಇನ್ಸ್‌ಸ್ಟಾಲ್ ಮಾಕೊಳ್ಳಿ. ನಂತರ 'ಡಿಜಿ ಲಾಕರ್' ಆಪ್ ತೆರೆದು ನಿಮ್ಮ ಮೊಬೈಲ್‌ ಸಂಖ್ಯೆ ಬಳಸಿ ಲಾಗ್ ಇನ್‌ ಆಗಬಹುದು. ನೀವು 'ಡಿಜಿ ಲಾಕರ್' ಆಪ್‌ಗೆ ಲಾಗಿನ್ ಆದ ನಂತರ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ತದನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್ ಮಾಡಬಹುದು.

ದಾಖಲೆ ಸ್ಟೋರ್ ಮಾಡುವುದು ಹೇಗೆ?

ಆಪ್‌ ಡೌನ್‌ಲೋಡ್ ಮಾಡಿದ ನಂತರ 12 ಅಂಕಿ ಆಧಾರ್ ನಂಬರ್ ಬಳಕೆ ಬಳಕೆ ಮಾಡಿ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ರಚಿಸಿ. ಬಳಿಕ ಇಶ್ಯೂಡ್ ಡಾಕ್ಯೂಮೆಂಟ್ಸ್ ಸರ್ಚ್ ಮಾಡಿ ರಿಜಿಸ್ಟ್ರೇಶನ್ ಲೈಸನ್ಸ್ ಅಥವಾ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಆಯ್ಕೆ ಮಾಡಿ. ಚಾಸೀ ನಂಬರ್, ರಿಜಿಸ್ಟ್ರೇಷನ್ ನಂಬರ್/ಲೈಸನ್ಸ್ ಇತರೆ ನಂಬರ್‌ಗಳನ್ನು ನಮೂದಿಸಿ. ಈ ಮೂಲಕ ಶಾಶ್ವತವಾಗಿ ಇಶ್ಯೂಡ್ ಡಾಕ್ಯೂಮೆಂಟ್ಸ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು. ಇವುಗಳು 'ಡಿಜಿ ಲಾಕರ್' ಆಪ್‌ನಲ್ಲಿ ಶಾಶ್ವತವಾಗಿ ಉಳಿದುಕೊಂಡಿರುತ್ತವೆ.

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

'ಡಿಜಿ ಲಾಕರ್' ಆಪ್‌ ನಿಮ್ಮ ಬಳಿ ಇದ್ದರೆ ನೀವು ಬೇರೆ ಯಾರದ್ದರೂ ವಾಹನವನ್ನು ಓಡಿಸುತ್ತಿರುವ ಸಂದರ್ಭದಲ್ಲೂ ಕೂಡ ಚಿಂತೆ ಇರುವುದಿಲ್ಲ.ಏಕೆಂದರೆ, ಸಂಚಾರಿ ಪೊಲೀಸರು ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಮಾಲೀಕರ ಡಾಕ್ಯುಮೆಂಟ್ ಸಂಖ್ಯೆಯನ್ನು ತಿಳಿಸಿದರೂ ಸಾಕು ನಿಮ್ಮನ್ನು ಅವರು ಪರೀಕ್ಷಿಸಿ ಬಿಡುತ್ತಾರೆ. ಆದರೆ, ವಾಹನದ ಮಾಲೀಕರು ಡಿಜಿ ಲಾಕರ್ ಬಳಕೆ ಮಾಡಿಕೊಳ್ಳುತ್ತಿರಬೇಕು. ಇಲ್ಲದಿದ್ದರೆ ಆ ವಾಹನದ ಒರಿಜಿನಲ್ ಡಾಕ್ಯುಮೆಂಟ್ ನಿಮ್ಮ ಬಳಿಯಲ್ಲೇ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಆಪ್‌ನ ಇತರೆ ಉಪಯೋಗಗಳೇನು?

'ಡಿಜಿ ಲಾಕರ್' ಆಪ್ ಬಳಕೆಯಿಂದಾಗಿ ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದೆ. ಜೊತೆಗೆ ಈ 'ಡಿಜಿ ಲಾಕರ್' ಆಪ್‌ನಲ್ಲಿ ದಾಖಲೆಗಳು ಸೇವೆ ಆಗಿರುವುದರಿಂದ ಒರಿಜಿನಲ್ ದಾಖಲೆಗಳು ಕಳೆದುಹೋಗುವ ಭಯವಿಲ್ಲ. ಇದಲ್ಲದೇ ಇ-ಆಧಾರ್ ಕೂಡ ಈ ಡಿಜಿಲಾಕರ್​ ಆಪ್‌ನನಲ್ಲೇ ಸಿಗಲಿದೆ. ಹೀಗಾಗಿ ಈ ಆಪ್ ಬಳಕೆ ಸಾಕಷ್ಟು ಸಹಾಯವನ್ನು ಮಾಡುತ್ತದೆ. ನೀವು ಈ ಡಿಜಿಟಲ್ ದಾಖಲೆಗಳನ್ನು ಭಾರತದೆಲ್ಲೆಡೆ ಉಪಯೋಗ ಮಾಡಬಹುದಾಗಿರುವುದರಿಂದ, ಈ ಆಪ್‌ ನಿಮ್ಮ ಮೊಬೈಲ್‌ನಲ್ಲಿದರೆ ಸಂಚಾರಿ ಪೊಲೀಸರ ಕಿರಿಕಿರಿ ನಿಮಗಿರುವುದಿಲ್ಲ.

Best Mobiles in India

English summary
Driving licences and vehicle registration certificates can be produced through mobile apps such as DigiLocker and mParivahan. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X