ಇನ್ಮುಂದೆ ವಾಟ್ಸ್ಆಪ್ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡಿದರೂ ಜೈಲು!!

|

ವಾಟ್ಸ್ಆಪ್‌ನಲ್ಲಿ ಬರುವ ಯಾವುದೇ ಮಾಹಿತಿ ನಂಬಲರ್ಹವೇ ಅಥವಾ ಸುಳ್ಳುಸುದ್ದಿಯೇ ಎಂದು ಅರಿತುಕೊಳ್ಳುವಷ್ಟು ವ್ಯವಧಾನ ಇಲ್ಲದವರಿಗೂ ಕೂಡ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಕೆಲ ವಾಟ್ಸ್ಆಪ್ ಬಳಕೆದಾರರು ತಾನೇ ಮೊದಲು ಮಾಹಿತಿ ಹಂಚಿಕೊಳ್ಳಬೇಕು ಎಂಬ ತುಡಿತದಲ್ಲಿ ಸುಳ್ಳುಸುದ್ದಿಗಳನ್ನು ಮತ್ತು ವೈಯಕ್ತಿಕ ಧಕ್ಕೆ ತರುವಂತಹ ಸಂದೇಶಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಹೌದು, ದೇಶದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ವಾಟ್ಸ್ಆಪ್ ಮುಖಾಂತರ ಮಾಹಿತಿಯೊಂದು ಜಗತ್ತನ್ನು ತಲುಪಲು ಕೆಲವೇ ಕ್ಷಣಗಳು ಸಾಕಾಗುತ್ತಿದ್ದು, ವಾಟ್ಸ್ಆಪ್ ಮೂಲಕ ನಂಬಲರ್ಹವಲ್ಲದ ಅಥವಾ ಸುಳ್ಳುಸುದ್ದಿಯೇ ಬಹುಬೇಕ ಜನರನ್ನು ತಲುಪುತ್ತಿದೆ. ಕೆಲ ವಾಟ್ಸ್ಆಪ್ ಬಳಕೆದಾರರು ತಾನೇ ಮೊದಲು ಮಾಹಿತಿ ಹಂಚಿಕೊಳ್ಳಬೇಕು ಎಂಬ ತುಡಿತದಲ್ಲಿ ಸುಳ್ಳುಸುದ್ದಿಗಳನ್ನು ಸಹ ಫಾರ್‌ವರ್ಡ್‌ ಮಾಡುತ್ತಿರುವುದನ್ನು ಕಂಡುಬಂದಿದ್ದು, ಅವರ ಮೇಲೂ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಮುಂದೆ ವಾಟ್ಸ್ಆಪ್ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡಿದರೂ ಜೈಲು!!

ವಾಟ್ಸ್ಆಪ್ ಬಳಕೆದಾರರು ಕಣ್ಣುಮಚ್ಚಿ ಸುಳ್ಳುಸುದ್ದಿಗಳನ್ನು ನಂಬಿ ಅದನ್ನು ಫಾರ್‌ವರ್ಡ್ ಮಾಡುವ ಬದಲು ಅರೆಕ್ಷಣ ಯೋಚಿಸಬೇಕಿದೆ. ಇಲಾಖೆಗೆ ವಾಟ್ಸ್ಆಪ್‌ನಲ್ಲಿ ವೈಯಕ್ತಿಕ ಧಕ್ಕೆಯಂತಹ ಯಾವುದೇ ದೂರು ಬಂದರೂ ಸುಳ್ಳುಸುದ್ದಿಗಳನ್ನು ಹುಟ್ಟಿ ಹಾಕಿದವರ ಜೊತೆಗೆ ಅದನ್ನು ಫಾರ್ವರ್ಡ್ ಮಾಡಿದವರ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ಇನ್ಮುಂದೆ ವಾಟ್ಸ್ಆಪ್ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವುದು ಸೇರಿದಂತೆ ಈ ಕೆಳಗಿನ 6 ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಿ.

ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ.

ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ.

ವಾಟ್ಸ್ಆಪ್‌ಗಾಗಿ ದೇಶದಲ್ಲಿ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಆದರೆ, ಇನ್ಫರ್ಮೇಷನ್ ಟೆಕ್ನಾಲಜಿ ಆಕ್ಟ್-200 ದ ಪ್ರಕಾರ ಈ ಕೆಳಗೆ ತಿಳಿಸಿರುವ ಯಾವುದೇ ಕೃತ್ಯದಲ್ಲಿ ವಾಟ್ಸ್ ಆಪ್ ಬಳಕೆದಾರ ತೊಡಗಿದ್ದರೆ ಅಂತಹವರನ್ನು ಅರೆಸ್ಟ್ ಮಾಡುವುದಕ್ಕೆ ಪೋಲೀಸರಿಗೆ ಅವಕಾಶವಿರುತ್ತದೆ. ಇದಕ್ಕೆ ವಾಟ್ಸ್ಆಪ್ ಕೂಡ ಸಹಕರಿಸುತ್ತದೆ ಎಂಬುದು ನಿಮಗೆ ತಿಳಿದಿರಲಿ.

ಅಗತ್ಯತೆ ಬಿದ್ದರೆ ನಿಮ್ಮೆಲ್ಲಾ ಮಾಹಿತಿ!

ಅಗತ್ಯತೆ ಬಿದ್ದರೆ ನಿಮ್ಮೆಲ್ಲಾ ಮಾಹಿತಿ!

ಪ್ರತಿ ಬಳಕೆದಾರರ ಮೆಟಾ ಡಾಟಾವನ್ನು ಕಂಪೆನಿಯು ಕಲೆಕ್ಟ್ ಮಾಡುತ್ತದೆ ಮತ್ತು ಇದನ್ನು ಕಾನೂನು ಅಗತ್ಯತೆ ಬಿದ್ದಾಗ ಕಾನೂನಿಗೆ ತೋರಿಸಲು ಕೂಡ ವಾಟ್ಸ್ ಆಪ್ ಮುಂದಾಗುತ್ತದೆ. ನಿಮ್ಮ ಹೆಸರು, ಐಪಿ ಅಡ್ರೆಸ್, ಮೊಬೈಲ್ ನಂಬರ್, ಸ್ಥಳ, ಮೊಬೈಲ್ ನೆಟ್‌ವರ್ಕ್, ಮೊಬೈಲ್ ಹ್ಯಾಂಡ್ ಸೆಟ್ ಟೈಪ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ವಾಟ್ಸ್ಆಪ್ ಪೊಲೀಸರಿಗೆ ನೀಡುತ್ತದೆ.

ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿಲ್ಲ

ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿಲ್ಲ

ವಾಟ್ಸ್ಆಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಅಥವಾ ಹಿಂಸಾಚಾರ, ಗಲಭೆಗೆ ಕಾರಣವಾಗುವ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಅಥವಾ ವದಂತಿಗಳನ್ನು ಹರಡುವಂತಿಲ್ಲ. ಮತ್ತು ವಾಟ್ಸ್ಆಪ್ ಗ್ರೂಪ್ ನಲ್ಲಿ ಗ್ರೂಪಿನ ಯಾವುದೇ ಸದಸ್ಯ ಬೇಜವಾಬ್ದಾರಿಯುತವಾಗಿ ವರ್ತಿಸಿದರೆ ಗ್ರೂಪ್ ಅಡ್ಮಿನ್ ಅನ್ನು ಬಂಧಿಸಬಹುದು ಎಂಬುದನ್ನು ನೀವು ತಿಳಿದಿದ್ದರೆ ಒಳಿತು.

ವೇಶ್ಯಾವಾಟಿಕೆ ಮತ್ತು ದೌರ್ಜನ್ಯಕ್ಕೆ ಅವಕಾಶವಿಲ್ಲ

ವೇಶ್ಯಾವಾಟಿಕೆ ಮತ್ತು ದೌರ್ಜನ್ಯಕ್ಕೆ ಅವಕಾಶವಿಲ್ಲ

ವಾಟ್ಸ್ ಆಪ್ ನಲ್ಲಿ ಯಾವುದೇ ರೀತಿಯ ದೇಹದ ವ್ಯಾಪಾರ ಮತ್ತು ವೇಶ್ಯಾವಾಟಿಕೆಯನ್ನು ಉತ್ತೇಜಿಸುವ ಕೆಲಸ ಮಾಡುವಂತಿಲ್ಲ.ಮಾರ್ಫಿಡ್ ಮಾಡಿರುವ ಯಾವುದೇ ಪ್ರಮುಖ ವ್ಯಕ್ತಿಯ ಫೋಟೋವನ್ನು ವಾಟ್ಸ್ಆಪ್ ನಲ್ಲಿ ಹಂಚುವಂತಿಲ್ಲ. ವಾಟ್ಸ್ಆಪ್ ನಲ್ಲಿ ಮಹಿಳಾ ದೌರ್ಜನ್ಯ ನಡೆಸುವಂತಿಲ್ಲ. ಹೀಗೆ ಮಾಡಿದರೆ ನೇರವಾಗಿ ನಿಮ್ಮನ್ನು ಪೊಲೀಸರು ಬಂಧಿಸಬಹುದು.

ದ್ವೇಷ ಪೂರಿತ ಸಂದೇಶಕ್ಕೆ ಬೆಲೆ ತೆರಬೇಕು!

ದ್ವೇಷ ಪೂರಿತ ಸಂದೇಶಕ್ಕೆ ಬೆಲೆ ತೆರಬೇಕು!

ಅವಮಾನ ಮಾಡುವ ಉದ್ದೇಶದಿಂದ ಯಾವುದೇ ಧರ್ಮ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ದ್ವೇಷ ಪೂರಿತ ಸಂದೇಶಗಳನ್ನು ಕಳುಹಿಸುವಂತಿಲ್ಲ. ಜನರ ಭಾವನೆಗಳನ್ನು ಕೆರಳಿಸುವಂತಹ ಅಕ್ರಮವಾಗಿ ಚಿತ್ರಿಸಿದ ಯಾವುದೇ ಜನರ ವೀಡಿಯೋವನ್ನು ಹಂಚುವಂತಿಲ್ಲ. ಇತರರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಂಟೆಂಟ್ ಅನ್ನು ಯಾರೂ ಶೇರ್ ಕೂಡ ಮಾಡುವಂತಿಲ್ಲ.

ಫೇಕ್ ಅಕೌಂಟ್ ತೆರೆಯುವಂತಿಲ್ಲ!

ಫೇಕ್ ಅಕೌಂಟ್ ತೆರೆಯುವಂತಿಲ್ಲ!

ಬೇರೆ ಯಾವುದೋ ವ್ಯಕ್ತಿಯ ಹೆಸರಿನಲ್ಲಿ ವಾಟ್ಸ್ಆಪ್ ಅಕೌಂಟ್ ಅನ್ನು ತೆರೆದು ಬಳಸುವಂತಿಲ್ಲ. ವಾಟ್ಸ್ ಆಪ್ ಮೂಲಕ ಬ್ಯಾನ್ ಆಗಿರುವ ಯಾವುದೇ ವಸ್ತು ಅಥವಾ ಔಷಧವನ್ನು ಪ್ರಮೋಟ್ ಮಾಡುವುದು ಅಥವಾ ಮಾರಾಟ ಮಾಡುವಂತಿಲ್ಲ. ಇತರರ ಹೆಸರನ್ನು ಲಾಭಕ್ಕಾದರೂ ಉಪಯೋಗಿಸಿಕೊಂಡರೂ ಸಹ ಅದನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಲಾಗುತ್ತದೆ.

Best Mobiles in India

English summary
I’ll not say anything about the people forward them blindly. They are the educated illiterate who can be targeted and made fool easily. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X